2024-25ನೇ ಆರ್ಥಿಕ ವರ್ಷದ ಆದಾಯ ತೆರಿಗೆ ಸ್ಲ್ಯಾಬ್‌ಗಳು ಯಾವುವು; ಹೊಸ, ಹಳೆ ತೆರಿಗೆ ವಿಧಾನಗಳ ಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  2024-25ನೇ ಆರ್ಥಿಕ ವರ್ಷದ ಆದಾಯ ತೆರಿಗೆ ಸ್ಲ್ಯಾಬ್‌ಗಳು ಯಾವುವು; ಹೊಸ, ಹಳೆ ತೆರಿಗೆ ವಿಧಾನಗಳ ಪೂರ್ಣ ಮಾಹಿತಿ ಇಲ್ಲಿದೆ

2024-25ನೇ ಆರ್ಥಿಕ ವರ್ಷದ ಆದಾಯ ತೆರಿಗೆ ಸ್ಲ್ಯಾಬ್‌ಗಳು ಯಾವುವು; ಹೊಸ, ಹಳೆ ತೆರಿಗೆ ವಿಧಾನಗಳ ಪೂರ್ಣ ಮಾಹಿತಿ ಇಲ್ಲಿದೆ

Income Tax Slabs 2024-25: ಆದಾಯ ತೆರಿಗೆ ಪಾವತಿಯ ಹಳೆ ಮತ್ತ ಹೊಸ ತೆರಿಗೆ ವಿಧಾನದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎಂಬುದನ್ನು ತೆರಿಗೆದಾರರು ಮುಖ್ಯವಾಗಿ ಗಮನಿಸಬೇಕು. 2024-25ನೇ ಸಾಲಿನ ಸ್ಲ್ಯಾಬ್ಸ್ ತಿಳಿಯಿರಿ.

2024-25ನೇ ಸಾಲಿನ ಆದಾಯ ತೆರಿಗೆ ಪಾವತಿಯ ಸ್ಲ್ಯಾಬ್‌ಗಳನ್ನು ತಿಳಿಯಿರಿ
2024-25ನೇ ಸಾಲಿನ ಆದಾಯ ತೆರಿಗೆ ಪಾವತಿಯ ಸ್ಲ್ಯಾಬ್‌ಗಳನ್ನು ತಿಳಿಯಿರಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗಷ್ಟೇ 2024ನೇ ಮಧ್ಯಂತರ ಬಜೆಟ್ (Budget 2024) ಮಂಡಿಸಿದ್ದರು. ಆದರೆ ತಮ್ಮ ಆಯವ್ಯಯದಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗೆ ಪರ್ಯಾಯ ಮಾರ್ಗವನ್ನು ಸೂಚಿಸಿಲ್ಲ. ಒಂದು ವೇಳೆ ನೀವಾದರೂ ಸ್ವಯಂ ಉದ್ಯೋಗ ಅಥವಾ ಸಂಬಳದಾರರು ಆಗಿದ್ದರೆ 2024-25 ನೇ ಸಾಲಿನ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿಯನ್ನು ವಿಧಾನವನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿರುತ್ತದೆ. ಆ ನಿಮ್ಮ ಕುತೂಹಲ ಹಾಗೂ ಅನುಮಾನವನ್ನು ನಿವಾರಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಆದಾಯ ತೆರಿಗೆ ಪಾವತಿಯ ಸ್ಲ್ಯಾಬ್‌ಗಳಲ್ಲಿ ಹಳೆ ಹಾಗೂ ಹೊಸ ವಿಧಾನಗಳಲ್ಲಿ ಯಾವುದೇ ಬದಲಾವಣೆ ಅಥವಾ ಪರ್ಯಾಯ ಮಾರ್ಗಗಳನ್ನು ಸೂಚಿಸಿಲ್ಲ. ಹೀಗಾಗಿ 2024ರ ಲೋಕಸಭೆ ಚುನಾವಣೆ ಮುಗಿದ ಬಳಿಕ ಹೊಸದಾಗಿ ಬರಲಿರುವ ಸರ್ಕಾರ ಪೂರ್ಣ ಪ್ರಮಾಣ ಬಜೆಟ್ ಮಂಡಲಿಸಲಿದೆ. ಆಗ ಹೊಸ ತೆರಿಗೆ ವಿಧಾನವನ್ನು ಸ್ಪಷ್ಟವಾಗಿ ತಿಳಿಸಬಹುದು.

2024ರ ಮಧ್ಯಂತರ ಬಜೆಟ್‌ನಲ್ಲಿ 2024-25ನೇ ತೆರಿಗೆ ಪಾವತಿಗೆ ಹಿಂದಿನ ವಿಧಾನಗಳನ್ನು ಮುಂದುವರಿಸಲು ಕೇಂದ್ರ ಸರ್ಕಾರ ಹೇಳಿದೆ. ಹಿಂದಿ ಆರ್ಥಿಕ ವರ್ಷದ ವಿಧಾನದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಹೀಗಾಗಿ 2024-25ನೇ ಸಾಲಿಗೂ ಆದಾಯ ತೆರಿಗೆ ಸ್ಲ್ಯಾಬ್‌ಗಳು ಹಿಂದಿನ ವರ್ಷದಂತೆಯೇ ಇರಲಿವೆ.

2024-25ನೇ ಸಾಲಿಗೆ ಆದಾಯ ತೆರಿಗೆ ಪಾವತಿಗೆ ಹಳೆಯ ಸ್ಲ್ಯಾಬ್‌ಗಳು

  • 2,50,000 ರೂಪಾಯಿಗೆ ವರೆಗೆ ತೆರಿಗೆ ಇಲ್ಲ
  • 2,50,000 ದಿಂದ 5,00,000 ರೂಪಾಯಿ ವರೆಗೆ ಶೇಕಡಾ 5 ರಷ್ಟು ತೆರಿಗೆ
  • 5,00,000 ದಿಂದ 10,00,000 ರೂಪಾಯಿವರೆಗೆ ಶೇಕಡಾ 20 ರಷ್ಟು ತೆರಿಗೆ
  • 10,00,000 ಮತ್ತು ಅದಕ್ಕಿಂತ ಮೇಲ್ಪಟ್ಟ ಆದಾಯಕ್ಕೆ ಶೇಕಡಾ 30 ರಷ್ಟು ತೆರಿಗೆ

60 ವರ್ಷ ಕೆಳಗಿನ ಎಲ್ಲಾ ತೆರಿಗೆದಾರರಿಗೆ 2024-25ನೇ ಆರ್ಥಿಕ ವರ್ಷದ ಆದಾಯ ಪಾವತಿಗೆ ಈ ಸ್ಲ್ಯಾಬ್‌ಗಳು ಅನ್ವಯಿಸುತ್ತವೆ. ಇವರಲ್ಲಿ 5 ಲಕ್ಷ ರೂಪಾಯಿದೊಳಗಿನ ಒಟ್ಟಾರೆ ವಾರ್ಷಿಕ ಆದಾಯ ಪಡೆಯುವ ಗ್ರಾಹಕರು 12,500 ರೂಪಾಯಿ ಅಥವಾ ಪಾವತಿಸಬೇಕಾದ ನಿಜವಾದ ತೆರಿಗೆ. ಈ ಎರಡರಲ್ಲಿ ಯಾವುದು ಕಡಿಮೆ ಇರುತ್ತದೆಯೋ ಅದನ್ನು ಪಾವತಿಸಬೇಕಾಗುತ್ತದೆ. 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 3 ಲಕ್ಷ ರೂಪಾಯಿವರೆಗೆ ವಿನಾಯಿತಿ ಇರುತ್ತದೆ. ಸೂಪರ್ ಸೀನಿಯರ್ ಅಂದರೆ 80 ವರ್ಷ ಮತ್ತು ಅದಕ್ಕಿಂತ ಮೇಲ್ಪ ಹಿರಿಯ ನಾಗರಿಕರಿಗೆ 5 ಲಕ್ಷ ರೂಪಾಯಿವರೆಗೆ ರಿಯಾಯಿತಿ ಇದೆ. ಅಂದರೆ 5 ಲಕ್ಷ ರೂಪಾಯಿ ವರೆಗೆ ಆದಾಯಕ್ಕೆ ತೆರಿಗೆ ಪಾವತಿಸುವಂತಿಲ್ಲ.

2024-25ನೇ ಸಾಲಿಗೆ ಆದಾಯ ತೆರಿಗೆ ಪಾವತಿಗೆ ಹೊಸ ಸ್ಲ್ಯಾಬ್‌ಗಳು

  • 3,00,000 ರೂಪಾಯಿ ವರೆಗೆ ತೆರಿಗೆ ಪಾವತಿಸುವಂತಿಲ್ಲ
  • 3,00,000 ದಿಂದ 6,00,000 ರೂಪಾಯಿ ವರೆಗೆ ಶೇಕಡಾ 5 ರಷ್ಟು ತೆರಿಗೆ
  • 6,00,000 ರಿಂದ 9,00,000 ರೂಪಾಯಿ ವರೆಗೆ ಶೇಕಡಾ 10 ರಷ್ಟು ತೆರಿಗೆ
  • 9,00,000 ದಿಂದ 12,00,000 ರೂಪಾಯಿ ವರೆಗೆ ಶೇಕಡಾ 15 ರಷ್ಟು ತೆರಿಗೆ
  • 12,00,000 ದಿಂದ 15,00,000 ರೂಪಾಯಿ ವರೆಗೆ ಶೇಕಡಾ 20 ರಷ್ಟು ತೆರಿಗೆ
  • 15,00,000 ಮತ್ತು ಅದಕ್ಕಿಂತ ಮೇಲ್ಪ ಒಟ್ಟಾರೆ ವಾರ್ಷಿಕ ಆದಾಯಕ್ಕೆ 30 ರಷ್ಟು ತೆರಿಗೆ

ಇದನ್ನೂ ಓದಿ: ಕರ್ನಾಟಕ ಬಜೆಟ್ ಅಧಿವೇಶನ; ಅಭಿವೃದ್ಧಿ ಇಲ್ಲದೆ ಜಿಡಿಪಿ, ಆಯವ್ಯಯ ಗಾತ್ರ ಹೆಚ್ಚಳವಾಗಲು ಸಾಧ್ಯವೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಈ ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ರಿಯಾಯಿತಿಯ ಅರ್ಹತೆಯ ಮಿತಿಯು 7 ಲಕ್ಷ ರೂಪಾಯಿ ಆಗಿದ್ದು, ತೆರಿಗೆದಾರರು 25,000 ರೂಪಾಯಿ ವರೆಗೆ ರಿಯಾಯಿತಿ ಪಡೆಯಲು ಅವಕಾಶ ನೀಡಲಾಗಿದೆ. 7 ಲಕ್ಷ ರೂಪಾಯಿಗಿಂತ ತೆರಿಗೆ ಆದಾಯವನ್ನು ಹೊಂದಿರುವ ವ್ಯಕ್ತಿಗಳಿಗೆ ಕನಿಷ್ಠ ಪರಿಹಾರವೂ ಲಭ್ಯವಿರುತ್ತದೆ. ಮೇಲೆ ತಿಳಿಸಲಾದ ಆದಾಯ ತೆರಿಗೆ ಸ್ಲ್ಯಾಬ್‌ಗಳು ಸಾಮಾನ್ಯ ವ್ಯಕ್ತಿಗಳಿಗೆ ಅನ್ವಯವಾಗುವ ಆಧಾರದಲ್ಲಿ ಹೇಳಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.