India GDP Data: ದೇಶದ ಜಿಡಿಪಿ ಬೆಳವಣಿಗೆ ಜನವರಿ ಮಾರ್ಚ್ ಅವಧಿಯಲ್ಲಿ ಶೇಕಡ 6.1; ತಿಳಿದುಕೊಳ್ಳಬೇಕಾದ 10 ಅಂಶಗಳು
India GDP Data: ಸರ್ಕಾರಿ ದತ್ತಾಂಶ ವರದಿ ಪ್ರಕಾರ, ಜನವರಿಯಿಂದ ಮಾರ್ಚ್‌ವರೆಗಿನ ನಾಲ್ಕನೇ ಹಣಕಾಸು ತ್ರೈಮಾಸಿಕದಲ್ಲಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 6.1 ಪ್ರತಿಶತದಷ್ಟು ಬೆಳವಣಿಗೆ ದಾಖಲಿಸಿದೆ. ಉಳಿದ ವಿವರ ಇಲ್ಲಿದೆ.
ಭಾರತದ ಆರ್ಥಿಕತೆ (India's economy) ಯು ಮಾರ್ಚ್‌ವರೆಗಿನ ಹಣಕಾಸು ವರ್ಷ (Financial Year) ದಲ್ಲಿ ಶೇಕಡಾ 7.2 ರಷ್ಟು ಬೆಳವಣಿಗೆ (GDP) ಯಾಗಿದೆ ಎಂದು ಬುಧವಾರ ಪ್ರಕಟವಾಗಿರುವ ಅಧಿಕೃತ ಅಂಕಿಅಂಶಗಳು ಹೇಳಿವೆ. ಇದು ದೃಢವಾದ ಸೇವಾ ವಲಯ ಮತ್ತು ದೇಶೀಯ ಬಳಕೆಯಿಂದ ಉತ್ತೇಜನಗೊಂಡಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (National Statistical Office) ಬಿಡುಗಡೆ ಮಾಡಿದ ದತ್ತಾಂಶ ವರದಿ ಪ್ರಕಾರ, ಜನವರಿಯಿಂದ ಮಾರ್ಚ್‌ವರೆಗಿನ ನಾಲ್ಕನೇ ಹಣಕಾಸು ತ್ರೈಮಾಸಿಕದಲ್ಲಿ, ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 6.1 ಪ್ರತಿಶತದಷ್ಟು ಬೆಳವಣಿಗೆ ದಾಖಲಿಸಿದೆ.
- ಸ್ಥಿರ ಬೆಲೆ (2011-12) ಜಿಡಿಪಿ ಅಥವಾ ನೈಜ ಜಿಡಿಪಿ ಲೆಕ್ಕಾಚಾರದಂತೆ ಕಳೆದ ಹಣಕಾಸು ವರ್ಷ (2022-23) 160.06 ಲಕ್ಷ ಕೋಟಿ ರೂಪಾಯಿ ಅಂದಾಜಿಸಲಾಗಿದೆ. 2022-23ರ ಹಣಕಾಸು ವರ್ಷದ ಮೊದಲ ಪರಿಷ್ಕೃತ ಅಂದಾಜು 149.26 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. 2022-23ರ ಅವಧಿಯಲ್ಲಿ ನೈಜ ಜಿಡಿಪಿಯ ಬೆಳವಣಿಗೆಯು 2021-22ರಲ್ಲಿ 9.1 ಪ್ರತಿಶತಕ್ಕೆ ಹೋಲಿಸಿದರೆ 7.2 ಶೇಕಡಾ ಎಂದು ಅಂದಾಜಿಸಲಾಗಿದೆ.
- ಸಾಂಕೇತಿಕ ಜಿಡಿಪಿ ಅಥವಾ ಪ್ರಸ್ತುತ ದರದ ಜಿಡಿಪಿ 2022-23ನೇ ಸಾಲಿಗೆ ಅನ್ವಯವಾಗುವಂಥೆ 272.41 ಲಕ್ಷ ಕೋಟಿ ರೂಪಾಯಿ ಅಂದಾಜಿಸಲಾಗಿತ್ತು. ಇದು 2021-22ರ 234.71 ಲಕ್ಷ ಕೋಟಿ ರೂಪಾಯಿ ಮೀರಿದೆ. ಶೇಕಡ 16.1 ಬೆಳವಣಿಗೆ ದರ ದಾಖಲಿಸಿದೆ.
- ಕಳೆದ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸ್ಥಿರ (2011-12) ದರದ ಜಿಡಿಪಿ 43.62 ಲಕ್ಷ ಕೋಟಿ ರೂಪಾಯಿ ಅಂದಾಜಿಸಿದ್ದು, ಹಿಂದಿನ 2021-22 ನಾಲ್ಕನೇ ತ್ರೈಮಾಸಿಕದ 41.12 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದೆ. ಇದು ಶೇಕಡ 6.1 ಬೆಳವಣಿಗೆ ದರ ಹೊಂದಿದೆ. ಇದೇ ಅವಧಿಯ ಪ್ರಸಕ್ತ ದರದ ಜಿಡಿಪಿ 71.82 ಲಕ್ಷ ಕೋಟಿ ರೂಪಾಯಿ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 65.05 ಲಕ್ಷ ಕೋಟಿ ರೂಪಾಯಿ ಇತ್ತು. ಬೆಳವಣಿಗೆ ದರ ಶೇಕಡ 10.4 ದಾಖಲಾಗಿದೆ.
- ರಾಷ್ಟ್ರೀಯ ಆದಾಯದ ತಾತ್ಕಾಲಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಬೆಂಚ್‌ಮಾರ್ಕ್-ಇಂಡಿಕೇಟರ್ ವಿಧಾನವನ್ನು ಬಳಸಿಕೊಂಡು ಕಂಡುಕೊಳ್ಳಲಾಗಿದೆ. ಅಂದರೆ ಬೆಂಚ್‌ಮಾರ್ಕ್ ವರ್ಷ ಎಂದು ಉಲ್ಲೇಖಿಸಲಾದ ಹಿಂದಿನ ವರ್ಷಕ್ಕೆ ಲಭ್ಯವಿರುವ ಅಂದಾಜುಗಳನ್ನು (ಈ ಸಂದರ್ಭದಲ್ಲಿ 2021-22) ವಲಯಗಳ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುವ ಸಂಬಂಧಿತ ಸೂಚಕಗಳನ್ನು ಬಳಸಿಕೊಂಡು ಹೊರತೆಗೆಯಲಾಗುತ್ತದೆ.
- ಕಳೆದ ಹಣಕಾಸು ವರ್ಷ ಅಂದರೆ 2022-23 ನೇ ವರ್ಷದ ರಾಷ್ಟ್ರೀಯ ಆದಾಯದ ಎರಡನೇ ಮುಂಗಡ ಅಂದಾಜುಗಳನ್ನು (SAE) ಫೆಬ್ರವರಿ 28, 2023 ರಂದು ಬಿಡುಗಡೆ ಮಾಡಲಾಗಿದೆ. ಈ ಅಂದಾಜುಗಳನ್ನು ಈಗ ಆರ್ಥಿಕ ವರ್ಷದಲ್ಲಿ ಸಂಬಂಧಿತ ಸೂಚಕಗಳ ಇತ್ತೀಚಿನ ಮಾಹಿತಿಯನ್ನು ಸೇರಿಸಿ ಪರಿಷ್ಕರಿಸಲಾಗಿದೆ.
- ಜಿಡಿಪಿ ಸಂಕಲನಕ್ಕಾಗಿ ಬಳಸಲಾಗುವ ಒಟ್ಟು ತೆರಿಗೆ ಆದಾಯವು GST ಅಲ್ಲದ ಆದಾಯ ಮತ್ತು ಜಿಎಸ್‌ಟಿ ಆದಾಯವನ್ನು ಒಳಗೊಂಡಿರುತ್ತದೆ. ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (CGA) ಮತ್ತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (CAG) ವೆಬ್‌ಸೈಟ್‌ಗಳಲ್ಲಿ ಇತ್ತೀಚಿನ ಲಭ್ಯವಿರುವ ಮಾಹಿತಿಯನ್ನು ಪ್ರಸ್ತುತ ಬೆಲೆಗಳಲ್ಲಿ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಅಂದಾಜು ಮಾಡಲು ಬಳಸಲಾಗಿದೆ. ಸ್ಥಿರ ಬೆಲೆಗಳಲ್ಲಿ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಕಂಪೈಲ್ ಮಾಡಲು, ತೆರಿಗೆ ವಿಧಿಸಲಾದ ಸರಕುಗಳು ಮತ್ತು ಸೇವೆಗಳ ಪರಿಮಾಣದ ಬೆಳವಣಿಗೆಯನ್ನು ಎಕ್ಸ್‌ಟ್ರಾಪೋಲೇಶನ್ ವಿಧಾನ ಬಳಸಿಕೊಳ್ಳಲಾಗುತ್ತದೆ.
- ಪ್ರಮುಖ ಸಬ್ಸಿಡಿಗಳ ಇತ್ತೀಚಿನ ಮಾಹಿತಿಯನ್ನು ಬಳಸಿಕೊಂಡು ಒಟ್ಟು ಉತ್ಪನ್ನ ಸಬ್ಸಿಡಿಗಳನ್ನು ಸಂಕಲಿಸಲಾಗಿದೆ. ಸಿಜಿಎ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆಹಾರ, ಯೂರಿಯಾ, ಪೆಟ್ರೋಲಿಯಂ ಮತ್ತು ಪೋಷಕಾಂಶ ಆಧಾರಿತ ಸಬ್ಸಿಡಿ ಮತ್ತು 2022-23ಕ್ಕೆ ರಾಜ್ಯವಾರು ಬಿಇ ನಿಬಂಧನೆಯೊಂದಿಗೆ ಸಿಎಜಿ ವೆಬ್‌ಸೈಟ್‌ನಲ್ಲಿ 2023ರ ಮಾರ್ಚ್‌ವರೆಗೆ ಹೆಚ್ಚಿನ ರಾಜ್ಯಗಳು ಸಬ್ಸಿಡಿಗಳ ಮೇಲೆ ಮಾಡಿದ ವೆಚ್ಚ ಲಭ್ಯವಿದೆ.
- ಕೇಂದ್ರ ಮತ್ತು ರಾಜ್ಯಗಳ 2022-23 ರ ಬಜೆಟ್ ದಾಖಲೆಗಳ ವಿವರವಾದ ವಿಶ್ಲೇಷಣೆಯ ಆಧಾರದ ಮೇಲೆ ಆದಾಯ ವೆಚ್ಚಗಳು, ಬಡ್ಡಿ ಪಾವತಿಗಳು, ಸಬ್ಸಿಡಿಗಳು ಇತ್ಯಾದಿಗಳ ಮೇಲಿನ ಮಾಹಿತಿಯನ್ನು ಸರ್ಕಾರದ ಅಂತಿಮ ಬಳಕೆ ವೆಚ್ಚವನ್ನು ಅಂದಾಜಿಸಲು ಬಳಸಲಾಗಿದೆ.
- ಸುಧಾರಿತ ಡೇಟಾ ವ್ಯಾಪ್ತಿ ಮತ್ತು ಮೂಲ ಏಜೆನ್ಸಿಗಳು ಮಾಡಿದ ಇನ್‌ಪುಟ್ ಡೇಟಾದಲ್ಲಿನ ಪರಿಷ್ಕರಣೆಯು ಈ ಅಂದಾಜುಗಳ ನಂತರದ ಪರಿಷ್ಕರಣೆಗಳ ಮೇಲೆ ಬೇರಿಂಗ್ ಅನ್ನು ಹೊಂದಿರುತ್ತದೆ.
- ನಿಗದಿತ ಸಮಯದಲ್ಲಿ ಮೇಲಿನ ಕಾರಣಗಳಿಗಾಗಿ ಪರಿಷ್ಕರಣೆಗಳಿಗೆ ಒಳಗಾಗುವ ಸಾಧ್ಯತೆಯಿದೆ. ಅಂಕಿಅಂಶಗಳನ್ನು ಅರ್ಥೈಸುವಾಗ ಬಳಕೆದಾರರು ಇದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.
ಯಾವ್ಯಾವ ವಲಯ ಎಷ್ಟೆಷ್ಟು ವೃದ್ಧಿ?
ಕೃಷಿ ವಲಯದಲ್ಲಿ ಶೇ. 10.3ರಷ್ಟು ಜಿಡಿಪಿ ವೃದ್ಧಿ, ಗಣಿಗಾರಿಕೆ ವಲಯದಲ್ಲಿ ಶೇ. 16.3ರಷ್ಟು ಜಿಡಿಪಿ ವೃದ್ಧಿ, ನಿರ್ಮಾಣ ವಲಯದಲ್ಲಿ ಶೇ. 10.4ರಷ್ಟು ಜಿಡಿಪಿ ವೃದ್ಧಿ ದಾಖಲಾಗಿದೆ.
2022-23ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ (ಏಪ್ರಿಲ್ನಿಂದ ಜೂನ್ವರೆಗಿನ) ಅವಧಿಯಲ್ಲಿ ಭಾರತದ ಜಿಡಿಪಿ ಬರೋಬ್ಬರಿ ಶೇ. 13.1ರಷ್ಟು ಬೆಳವಣಿಗೆ ಕಂಡಿತ್ತು. ಅದಾದ ನಂತರದ ಮೂರು ಕ್ವಾರ್ಟರ್ಗಳಲ್ಲಿ ಕ್ರಮವಾಗಿ ಶೇ. 6.2, ಶೇ. 4.5 ಮತ್ತು ಶೇ. 6.1ರಷ್ಟು ಜಿಡಿಪಿ ದಾಖಲಿಸಿದೆ.