ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನೆಸ್ಲೆ ಮ್ಯಾಗಿಗೆ ಭಾರತವೇ ಅತಿದೊಡ್ಡ ಮಾರುಕಟ್ಟೆ; ಬ್ಯಾನ್ ಆಗಿದ್ದ ಮ್ಯಾಗಿಯನ್ನು ಒಂದು ವರ್ಷದಲ್ಲಿ ಖರೀದಿಸಿದವರ ಸಂಖ್ಯೆ ಇಷ್ಟು

ನೆಸ್ಲೆ ಮ್ಯಾಗಿಗೆ ಭಾರತವೇ ಅತಿದೊಡ್ಡ ಮಾರುಕಟ್ಟೆ; ಬ್ಯಾನ್ ಆಗಿದ್ದ ಮ್ಯಾಗಿಯನ್ನು ಒಂದು ವರ್ಷದಲ್ಲಿ ಖರೀದಿಸಿದವರ ಸಂಖ್ಯೆ ಇಷ್ಟು

ಎಂಟು ವರ್ಷದೊಳಗೆ ಭಾರತದಲ್ಲಿ 140 ಕ್ಕೂ ಹೆಚ್ಚು ಉತ್ಪನ್ನಗಳನ್ನು ಪರಿಚಯಿಸಿದ ನೆಸ್ಲೆ ಕಂಪನಿಯು 2020ರಿಂದ 2025ರವರೆಗೆ ಭಾರತದಲ್ಲಿ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದೆ. ಅಂದೊಮ್ಮೆ ಬ್ಯಾನ್‌ ಶಿಕ್ಷೆ ಎದುರಿಸಿದ್ದ ಕಂಪನಿಯ ನೆಸ್ಲೆ ಮ್ಯಾಗಿ, ದೇಶದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ಮಾರಾಟ ಕಂಡಿದೆ.

ಬ್ಯಾನ್ ಆಗಿದ್ದ ಮ್ಯಾಗಿಯನ್ನು ಒಂದು ವರ್ಷದಲ್ಲಿ ಖರೀದಿಸಿದವರ ಸಂಖ್ಯೆ ಇಷ್ಟು
ಬ್ಯಾನ್ ಆಗಿದ್ದ ಮ್ಯಾಗಿಯನ್ನು ಒಂದು ವರ್ಷದಲ್ಲಿ ಖರೀದಿಸಿದವರ ಸಂಖ್ಯೆ ಇಷ್ಟು

ಭಾರತದಲ್ಲಿ ಮ್ಯಾಗಿ ಪ್ರಿಯರ ಸಂಖ್ಯೆ ದೊಡ್ಡದು ಎಂಬುದಕ್ಕೆ ಕಂಪನಿಯ ಈ ವರದಿ ಸಾಕ್ಷಿ. ವರ್ಷಗಳ ಹಿಂದೆ ಭಾರತದಲ್ಲಿ ಬ್ಯಾನ್‌ ಆಗಿದ್ದ ಮ್ಯಾಗಿ, ಮತ್ತೆ ಹೊಸ ರೂಪದಲ್ಲಿ ಮರಳಿ ದೇಶದಲ್ಲಿ ನೆಲೆ ಕಾಣುತ್ತಿದೆ. ನೆಸ್ಲೆ ಕಂಪನಿಯ ವಾರ್ಷಿಕ ವರದಿಯ ಪ್ರಕಾರ, 2023-24ರ ಆರ್ಥಿಕ ವರ್ಷದಲ್ಲಿ ನೆಸ್ಲೆಯ ಮ್ಯಾಗಿಗೆ ಭಾರತ ದೇಶವು ಅತಿದೊಡ್ಡ ಮಾರುಕಟ್ಟೆಯಾಗಿದೆ. 2024ರ ಮಾರ್ಚ್ 31ಕ್ಕೆ ಕೊನೆಯಾಗುವಂತೆ 15 ತಿಂಗಳಲ್ಲಿ ನೆಸ್ಲೆ ಇಂಡಿಯಾ 24,275 ಕೋಟಿ ರೂಪಾಯಿ ಮೌಲ್ಯದ ಮ್ಯಾಗಿಯನ್ನು ಭಾರತದಾದ್ಯಂತ ಮಾರಾಟ ಮಾಡಿರುವುದಾಗಿ ವರದಿಯಾಗಿದೆ. ಎರಡಂಕಿ ಬೆಳವಣಿಗೆಯ ದರವನ್ನು ಹೊಂದಿರುವ ಕಂಪನಿಗೆ ಭಾರತವು ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಕಂಪನಿಯ ವರದಿ ಹೇಳಿದೆ.

ಮ್ಯಾಗಿ ನೂಡಲ್ಸ್ ಮತ್ತು ಮ್ಯಾಗಿ ಮಸಾಲಾ-ಎ-ಮ್ಯಾಜಿಕ್‌ನಲ್ಲಿನ ಪರಿಮಾಣದ ಬೆಳವಣಿಗೆ ಸೇರಿದಂತೆ ಹಲವಾರು ಅಂಶಗಳಿಂದಾಗಿ ಕಂಪನಿಯ ಸಿದ್ಧಪಡಿಸಿದ ಉತ್ಪನ್ನಗಳ ವ್ಯಾಪಾರವು ಭಾರತದಲ್ಲಿ ಭಾರಿ ಬೆಳವಣಿಗೆ ಕಂಡಿದೆ ಎಂದು ಬಿಸಿನೆಸ್‌ ಸ್ಟಾಂಡರ್ಸ್ ವರದಿ ಹೇಳಿದೆ. ಅಲ್ಲದೆ ಮ್ಯಾಗಿಯ ಆಕರ್ಷಕ ಬೆಲೆಯೂ ಇದಕ್ಕೆ ಕಾರಣ ಎಂದು ಹೇಳಿದೆ.

ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ 140ಕ್ಕೂ ಹೆಚ್ಚು ಉತ್ಪನ್ನಗಳನ್ನು ಪರಿಚಯಿಸಿರುವ ಕಂಪನಿಯು, 2020ರಿಂದ 2025ರವರೆಗೆ ದೇಶದಾದ್ಯಂತ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದಲ್ಲಿ ವಿವಾದಕ್ಕೆ ಒಳಗಾಗಿದ್ದ ಮ್ಯಾಗಿ, 2015ರ ಜೂನ್ ತಿಂಗಳಲ್ಲಿ ಐದು ತಿಂಗಳ ನಿಷೇಧವನ್ನು ಎದುರಿಸಿತ್ತು. ನೂಡಲ್ಸ್‌ಗೆ ಅನುಮತಿಸಲಾದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಸೀಸವನ್ನು ಈ ಉತ್ಪನ್ನ ಹೊಂದಿದೆ ಎಂಬ ಆರೋಪದ ಮೇಲೆ ಈ ನಿಷೇಧ ಹೇರಲಾಗಿತ್ತು. ಇದರಿಂದಾಗಿ ಕಂಪನಿಯ ಜಾಗತಿಕ ಮಾರುಕಟ್ಟೆಯಲ್ಲೇ ದೊಡ್ಡ ನಷ್ಟ ಅನುಭವಿಸಿತು. ಭಾರತೀಯ ನೂಡಲ್ಸ್ ಮಾರುಕಟ್ಟೆಯಲ್ಲಿ ಮ್ಯಾಗಿಯ 80 ಶೇಕಡ ಪಾರುಪತ್ಯ ಪಾತಾಳಕ್ಕೆ ಕುಸಿಯಿತು. ಕೇವಲ ಒಂದು ತಿಂಗಳಲ್ಲಿ ಈ ಪ್ರಮಾಣ ಶೂನ್ಯಕ್ಕೆ ಇಳಿಯಿತು.

ಇದೀಗ, ನಿಷೇಧದಿಂದ ಹೊರಬಂದು ಬಹುತೇಕ ಒಂದು ದಶಕ ಸಮೀಪಿಸುತ್ತಿದೆ. ಆದರೂ, ಭಾರತದಲ್ಲಿ ಮತ್ತೆ ಸಂಪೂರ್ಣ ಚೇತರಿಸಿಕೊಳ್ಳಲು ಮ್ಯಾಗಿಯಿಂದ ಸಾಧ್ಯವಾಗಿಲ್ಲ. ಹೊಸ ಕಂಪನಿಗಳಿಂದ ಸ್ಪರ್ಧೆ ಹೆಚ್ಚಿದ್ದು, ಭಾರತದಲ್ಲಿ ಒಮ್ಮೆ ಕಳೆದುಕೊಂಡ ನೆಲೆಯನ್ನು ಮತ್ತೆ ಪಡೆಯಲು ಕಂಪನಿ ಇನ್ನೂ ಹೆಣಗಾಡುತ್ತಿದೆ ಎಂದು ಲೇಖನ ತಿಳಿಸಿದೆ.

ಕಿಟ್‌ ಕ್ಯಾಟ್‌ ಸೇಲ್‌ನಲ್ಲೂ ಹೆಚ್ಚಳ

ನೆಸ್ಲೆ ಕಂಪನಿಯ ಜನಪ್ರಿಯ ಚಾಕೊಲೇಟ್ ಉತ್ಪನ್ನವಾಗಿರುವ ಕಿಟ್ ಕ್ಯಾಟ್‌ನ 4.2 ಬಿಲಿಯನ್ ಚಾಕೊಲೆಟ್‌ಗಳನ್ನು ಮಾರಾಟ ಮಾಡಿರುವ ನೆಸ್ಲೆ ಇಂಡಿಯಾ, ಭಾರತವನ್ನು ಜಗತ್ತಿನ ಎರಡನೇ ಅತಿದೊಡ್ಡ ಮಾರುಕಟ್ಟೆಯನ್ನಾಗಿ ಕಂಡುಕೊಂಡಿದೆ.

ವಿಭಾಗ