ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Fastag: ನೀವಿನ್ನೂ ಫಾಸ್ಟ್ಯಾಗ್‌ಗೆ ಕೆವೈಸಿ ಅಪ್‌ಡೇಟ್‌ ಮಾಡಿಲ್ವಾ, ಜ 31 ಕೊನೇ ದಿನ; ಇಂದೇ ಮಾಡೋದು ಮರಿಬೇಡಿ

Fastag: ನೀವಿನ್ನೂ ಫಾಸ್ಟ್ಯಾಗ್‌ಗೆ ಕೆವೈಸಿ ಅಪ್‌ಡೇಟ್‌ ಮಾಡಿಲ್ವಾ, ಜ 31 ಕೊನೇ ದಿನ; ಇಂದೇ ಮಾಡೋದು ಮರಿಬೇಡಿ

ನೀವು ಸ್ವಂತ ವಾಹನ ಹೊಂದಿದ್ದು, ನಿಮ್ಮ ವಾಹನ ಫಾಸ್ಟ್ಯಾಗ್‌ಗೆ ಇನ್ನೂ ಕೆವೈಸಿ ಅಪ್‌ಡೇಟ್‌ ಮಾಡಿಲ್ಲ ಅಂದ್ರೆ ನಿಮ್ಮ ಫಾಸ್ಟ್ಯಾಗ್‌ ಡಿಆಕ್ಟಿವೇಟ್‌ ಆಗಲಿದೆ. ಫಾಸ್ಟ್ಯಾಗ್‌ಗೆ ಕೆವೈಸಿ ಅಪ್‌ಡೇಟ್‌ ಮಾಡಲು ನಾಳೆಯೇ ಅಂದರೆ ಜ. 31 ಕೊನೆಯ ದಿನ. ಕೆವೈಸಿ ಅಪ್‌ಡೇಟ್‌ ಮಾಡೋದು ಹೇಗೆ, ಏನೆಲ್ಲಾ ದಾಖಲೆಗಳು ಬೇಕು ಎಂಬ ವಿವರ ಇಲ್ಲಿದೆ.

ಫಾಸ್ಟ್ಯಾಗ್‌ ಕೆವೈಸಿ ಅಪ್‌ಡೇಟ್‌
ಫಾಸ್ಟ್ಯಾಗ್‌ ಕೆವೈಸಿ ಅಪ್‌ಡೇಟ್‌

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವವರು ಫಾಸ್ಟ್ಯಾಗ್‌ ಹೊಂದಿರುವುದು ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಿಮ್ಮ ಸ್ವಂತ ವಾಹನವಿದ್ದು, ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಾಗಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಪ್ರಮುಖ ಅಪ್‌ಡೇಟ್‌. ನೀವು ಫಾಸ್ಟ್ಯಾಗ್‌ನಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಿಸಬಾರದು ಅಂದ್ರೆ ಸರಿಯಾದ ಕ್ರಮದಲ್ಲಿ ಕೆವೈಸಿ ಅಪ್‌ಡೇಟ್‌ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜನವರಿ 31ರ ಒಳಗೆ ಕೆವೈಸಿ ಅಪ್‌ಡೇಟ್‌ ಮಾಡದ ಫಾಸ್ಟ್‌ಟ್ಯಾಗ್‌ಗಳನ್ನು ಡಿಆಕ್ಟಿವೇಟ್‌ ಮಾಡಲಾಗುವುದು ಅಥವಾ ಫಾಸ್ಟ್ಯಾಗ್‌ನಲ್ಲಿ ಸಾಕಷ್ಟು ಹಣ ಇದ್ದರೂ ಕೂಡ ಅದನ್ನು ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಲಾಗುವುದು ಎಂದಿದೆ.

ಟ್ರೆಂಡಿಂಗ್​ ಸುದ್ದಿ

ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್‌ ಹೊಂದಿರುವುದು, ಕೆವೈಸಿ ಪರಿಶೀಲನೆ ಮಾಡದೆ ಫಾಸ್ಟ್ಯಾಗ್‌ ವಿತರಣೆ ಮತ್ತು ಉದ್ದೇಶಪೂರ್ವಕವಾಗಿ ವಾಹನದ ವಿಂಡ್‌ಸ್ಕ್ರೀನ್‌ಗಳಲ್ಲಿ ಫಾಸ್ಟ್ಯಾಗ್‌ಗಳನ್ನು ಅಂಟಿಸದೇ ಇರುವುದು ಇಂತಹವನ್ನು ತಡೆಯಲು ಈ ಕ್ರಮವನ್ನು ಅಳವಡಿಸಲಾಗಿದೆ.

ಫಾಸ್ಟ್ಯಾಗ್‌ಗೆ ಕೆವೈಸಿ ಅಪ್‌ಡೇಟ್‌ ಮಾಡಲು ಈ ಕ್ರಮ ಪಾಲಿಸಿ

ಹಂತ 1: ಬ್ಯಾಂಕ್‌ ಲಿಂಕ್‌ ಇರುವ ಫಾಸ್ಟ್ಯಾಗ್‌ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ನಿಮ್ಮ ರಿಜಿಸ್ಟರ್ಡ್‌ ಮೊಬೈಲ್‌ ನಂಬರ್‌ನಿಂದ ಲಾಗಿನ್‌ ಆಗಿ, ನಂತರ ಓಟಿಪಿ ನಮೂದಿಸಿ.

ಹಂತ 3: ನಂತರ ಅಲ್ಲಿ ಮೈ ಪ್ರೊಫೈಲ್‌ಗೆ ಹೋಗಿ, ಕೆವೈಸಿ ಮೇಲೆ ಕ್ಲಿಕ್‌ ಮಾಡಿ.

4. ಅಡ್ರೆಸ್‌ ಪ್ರೂಫ್ ಸೇರಿದಂತೆ ಅಗತ್ಯ ವಿವರಗಳನ್ನು ನಮೂದಿಸಿ. ನಂತರ ಸಬ್‌ಮಿಟ್‌ ಕೊಡಿ.

ಹಂತ 5: ಈಗ ನಿಮ್ಮ ಕೆವೈಸಿ ನಮೂದಿಸಿರುವುದು ಪೂರ್ಣಗೊಂಡಿರುತ್ತದೆ. ಕೆವೈಸಿ ಪುಟದಲ್ಲಿ ನಿಮ್ಮ ಅಪ್‌ಡೇಟೆಡ್‌ ಸ್ಟೇಟಸ್‌ ಗಮನಿಸಬಹುದು.

ಫ್ಯಾಸ್ಟ್ಯಾಗ್‌ ಸ್ಟೇಟಸ್‌ ಚೆಕ್‌ ಮಾಡೋದು ಹೇಗೆ?

fastag.ihmcl.com ಈ ವೆಬ್‌ಸೈಟ್‌ಗೆ ಭೇಟಿ ನೀಡಿ.

* ನಂತರ ವೆಬ್‌ಸೈಟ್‌ನ ಬಲಭಾಗದಲ್ಲಿರುವ ಲಾಗಿನ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

* ಡ್ಯಾಶ್‌ಬೋರ್ಡ್‌ನಲ್ಲಿರುವ ಮೈ ಪ್ರೊಫೈಲ್‌ ಸೆಕ್ಷನ್‌ ಮೇಲೆ ಕ್ಲಿಕ್‌ ಮಾಡಿ, ಕೆವೈಸಿ ಸ್ಟೇಟಸ್‌ ಹಾಗೂ ಪ್ರೊಫೈಲ್‌ ವಿವರಗಳನ್ನು ಗಮನಿಸಬಹುದು.

* ಬ್ಯಾಂಕ್‌ ವೆಬ್‌ಸೈಟ್‌ ಮೂಲಕವೂ ಇದನ್ನು ಗಮನಿಸಬಹುದು.

ಫಾಸ್ಟ್ಯಾಗ್‌ ಕೆವೈಸಿಗೆ ಅಗತ್ಯ ದಾಖಲೆಗಳು

* ವಾಹನ ನೋಂದಣಿ ಪ್ರಮಾಣಪತ್ರ

* ಗುರುತಿನ ದಾಖಲೆ

* ವಿಳಾಸ ದಾಖಲೆ

* ಪಾಸ್‌ಪೋರ್ಟ್‌ ಸೈಜ್‌ ಫೋಟೊ

* ಪಾಸ್‌ಪೋರ್ಟ್‌, ವೋಟರ್‌ ಐಡಿ, ಆಧಾರ್‌, ಡ್ರೈವಿಂಗ್‌ ಲೈಸನ್ಸ್‌ ಅಥವಾ ಪಾನ್‌ ಕಾರ್ಡ್‌ನಂತಹ ಐಡಿ ಪ್ರೂಫ್‌ ನೀಡಬೇಕಾಗುತ್ತದೆ.

ನೀವಿನ್ನೂ ಫಾಸ್ಟ್ಯಾಗ್‌ಗೆ ಕೆವೈಸಿ ಅಪ್‌ಡೇಟ್‌ ಮಾಡಿಲ್ವಾ, ಹಾಗಿದ್ರೆ ಇನ್ಯಾಕೆ ತಡ. ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳೊಂದಿಗೆ ನಾಳೆಯೇ ಕೆವೈಸಿ ಸಬ್‌ಮಿಟ್‌ ಮಾಡಿ.

ಇದನ್ನೂ ಓದಿ

FASTag: ಫಾಸ್ಟ್ಯಾಗ್‌ ಬ್ಯಾಲೆನ್ಸ್‌ ಚೆಕ್‌ ಮಾಡುವುದು ಹೇಗೆ, ಪಾವತಿ ವಿಧಾನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಭಾರತದಲ್ಲಿ 2021ರಿಂದ ಫಾಸ್ಟ್ಯಾಗ್‌ ಬಳಕೆ ಜಾರಿಯಲ್ಲಿದೆ. ಆದರೆ ಈಗಲೂ ಹಲವರು ಟೋಲ್‌ ಪ್ಲಾಜಾದ ಬಳಿ ನಗದು ಪಾವತಿ ಮಾಡುವುದನ್ನು ಕಾಣಬಹುದು. ಇದಕ್ಕೆ ಮುಖ್ಯ ಕಾರಣ ಫಾಸ್ಟ್ಯಾಗ್‌ ಬ್ಯಾಲೆನ್ಸ್‌ ಲೋ ಆಗಿರುವುದು. ಹಾಗಾದರೆ ಫಾಸ್ಟ್ಯಾಗ್‌ ಬ್ಯಾಲೆನ್ಸ್‌ ಚೆಕ್‌ ಮಾಡುವುದು ಹೇಗೆ, ಬ್ಯಾಲೆನ್ಸ್‌ ಪಾವತಿ ಮಾಡುವುದು ಹೇಗೆ? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point