ಕನ್ನಡ ಸುದ್ದಿ  /  Nation And-world  /  Business News Indian Mncs Revenue More At Home Than Abroad Here Is Financial Picture Of Previous Years Rmy

ವಿದೇಶಕ್ಕಿಂತ ಸ್ವದೇಶದಲ್ಲೇ ಭಾರತೀಯ ಬಹುರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚಿನ ಆದಾಯ; ಹಿಂದಿನ ವರ್ಷಗಳ ಆರ್ಥಿಕ ಚಿತ್ರಣ ಇಲ್ಲಿದೆ

Indian MNCs Revenue: 2018ರಲ್ಲಿ ಶೇಕಡಾ 34 ರಷ್ಟು ಆದಾಯ ಗಳಿಸಿದ್ದ ಭಾರತೀಯ ಪ್ರಮುಖ 5 ಎಂಎನ್‌ಸಿ ಕಂಪನಿಗಳು 2023ರ ಆರ್ಥಿಕ ವರ್ಷದಲ್ಲಿ ತಮ್ಮ ತವರಿನಲ್ಲೇ ಆದಾಯವನ್ನು ಶೇಕಡಾ 41.6ಕ್ಕೆ ಹೆಚ್ಚಿಸಿಕೊಂಡಿವೆ.

ಭಾರತೀಯ ಮೂಲದ ಬಹುರಾಷ್ಟ್ರೀಯ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ವಿದೇಶಕ್ಕಿಂತ ಸ್ವದೇಶದಲ್ಲಿ ಹೆಚ್ಚಿನ ಆದಾಯವನ್ನು ಗಳಿಸುತ್ತಿವೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ.
ಭಾರತೀಯ ಮೂಲದ ಬಹುರಾಷ್ಟ್ರೀಯ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ವಿದೇಶಕ್ಕಿಂತ ಸ್ವದೇಶದಲ್ಲಿ ಹೆಚ್ಚಿನ ಆದಾಯವನ್ನು ಗಳಿಸುತ್ತಿವೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ.

ಒಂದೂವರೆ ದಶಕದಿಂದ ಹಿಂದೆ ಭಾರತದ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳಾದ(ಎಂಎನ್‌ಸಿ) ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಹಿಂಡಾಲ್ಕೊ, ಭಾರ್ತಿ ಏರ್‌ಟೆಲ್ ಹಾಗೂ ಮದರ್‌ಸನ್ ಸುಮಿಯಂತಹ ಕಂಪನಿಗಳು ಉತ್ತರ ಅಮೆರಿಕ, ಯುರೋಪ್, ಆಫ್ರಿಕಾ ಹಾಗೂ ದಕ್ಷಿಣ ಏಷ್ಯಾ ದೇಶಗಳಲ್ಲಿನ ಕೆಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಜಾಗತಿಕವಾಗಿ ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಂಡಿದ್ದವು. ಈ ಸ್ವಾಧೀನ ಪ್ರಕ್ರಿಯೆ ಬಳಿಕ ಬಹುತೇಕ ಕಂಪನಿಗಳು ನಿರೀಕ್ಷೆಗೆ ಮೀರಿದ ಆರ್ಥಿಕ ಯಶಸ್ಸನ್ನು ಕಂಡಿದ್ದವು. ಆದರೆ ಕಳೆದ ಐದು ವರ್ಷಗಳಿಂದೀಚೆಗೆ ಈ ಬಹುರಾಷ್ಟ್ರೀಯ ಕಂಪನಿಗಳು ವಿದೇಶಕ್ಕಿಂತ ಭಾರತದಲ್ಲೇ ಹೆಚ್ಚಿನ ಆದಾಯವನ್ನು ಕಾಣುತ್ತಿವೆ. ಜೊತೆಗೆ ಇವರ ವ್ಯಾಪಾರದಲ್ಲಿನ ಕೊಡುಗೆಗಳು ಹಾಗೂ ತೊಡಗಿಸಿಕೊಳ್ಳುವಿಕೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಥಿರವಾಗಿ ಹೆಚ್ಚಾಗುತ್ತಿದೆ.

ಭಾರತದ ಮೂಲಕದ ಅಗ್ರ 5 ಬಹುರಾಷ್ಟ್ರೀಯ ಕಂಪನಿಗಳು 2023ನೇ ಆರ್ಥಿಕ ವರ್ಷದಲ್ಲಿ ಶೇಕಡಾ 41.6 ರಷ್ಟು ಆದಾಯವನ್ನು ಗಳಿಸಿವೆ. ಆದರೆ 2018 ರಲ್ಲಿ ಈ ಪ್ರಮಾಣ ಶೇಕಡಾ 34 2021ರಲ್ಲಿ 34.2 ರಷ್ಟು ಆದಾಯವನ್ನು ಗಳಿಸಿದ್ದವು. ಈ ಐದು ಎಂಎನ್‌ಸಿ ಕಂಪನಿಗಳು 2018 ರಲ್ಲಿ ಒಟ್ಟಾರೆ ಆದಾಯ 2.23 ಟ್ರಿಲಿಯನ್‌ನಿಂದ 2023ರ ವೇಳೆಗೆ 4.33 ಟ್ರಿಲಿಯನ್ ಆದಾಯವನ್ನು ಗಳಿಸಿವೆ. 5 ವರ್ಷಗಳ ಅವಧಿಯಲ್ಲಿ 13.6 ರಷ್ಟು ವಾರ್ಷಿಕ ದರ ವೃದ್ಧಿಯಾಗಿದೆ. ಇದೇ ಅವಧಿಯಲ್ಲಿನ ವಿದೇಶಗಳಲ್ಲಿನ ಬೆಳೆವಣಿಗೆಯನ್ನು ನೋಡುವುದಾದರೆ 2028 ರಲ್ಲಿ 4.33 ಟ್ರಿಲಿಯನ್ ನಿಂದ 2023ರ ಆರ್ಥಿಕ ವರ್ಷಕ್ಕೆ 5.92 ಟ್ರಿಲಿಯನ್ ಆದಾಯವನ್ನು ಕಂಡಿವೆ. ಅಂದರೆ ವಿದೇಶದಲ್ಲಿ ಈ ಕಂಪನಿಗಳ ಆದಾಯ ವೃದ್ಧಿ ಶೇಕಡಾ 6.4 ರಷ್ಟು ಮಾತ್ರ ಇದೆ.

ಯುರೋಪ್‌ನಲ್ಲಿ ಟಾಟಾ ಸ್ಟೀಲ್ ಕಂಪನಿ 2007 ರಲ್ಲಿ ಕೋರಸ್ ಗ್ರೂಪ್ ಸೇರಿದಂತೆ ಹಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡು ಈ ಭಾಗದಲ್ಲಿ ವ್ಯವಹಾರವನ್ನು ವಿಸ್ತರಿಸಿಕೊಂಡಿತ್ತು. 2008 ರಲ್ಲಿ ಶೇ 84.7 ರಷ್ಟು ಲಾಭವನ್ನು ಕಂಡಿತ್ತು. ಆದರೆ ಈ ಪ್ರಮಾಣ 2023ಕ್ಕೆ ಕೇವಲ 43.4ಕ್ಕೆ ಕುಸಿದಿದೆ. ಇತರೆ ಕಂಪನಿಗಳ ಅಂಕಿ ಅಂಶಗಳು ಕೂಡ ಇದೇ ರೀತಿಯಲ್ಲಿವೆ.

ವಿದೇಶದಲ್ಲಿ 2023ರ ಅವಧಿಯಲ್ಲಿ ಶೇಕಡಾ 58.4 ರಷ್ಟು ಕ್ರೋಢೀಕೃತ ಆದಾಯವನ್ನು ಹೊಂದಿವೆ. ಆದರೆ 2018 ರಲ್ಲಿ ಈ ಪ್ರಮಾಣ ಶೇಕಡಾ 66 ರಷ್ಟು ಇತ್ತು ಎಂಬುದು ಗಮನಾರ್ಹ ವಿಷಯವಾಗಿದೆ. 2022 ರಲ್ಲಿ ಶೇಕಡಾ 65.2 ಕ್ಕೆ ಇಳಿಕೆಯಾಗಿದೆ. ಆದರೆ 2023ರ ಏಪ್ರಿಲ್‌ನಿಂದ ಡಿಸೆಂಬರ್‌ನ ಮೂರು ತ್ರೈಮಾಸಿಕಗಳಲ್ಲಿ ಭಾರತದ ಮಾರುಕಟ್ಟೆಗೆ ಹೋಲಿಸಿಕೊಂಡರೆ ಶೇಕಡಾ 11 ರಷ್ಟು ಆದಾಯವನ್ನು ಹೆಚ್ಚಿಸಿಕೊಂಡಿವೆ.

ಭಾರತದ ಬಹುರಾಷ್ಟ್ರೀಯ ಕಂಪನಿಗಳ ವಿದೇಶದ ಆದಾಯ ಇಳಿಕೆಯಾಗಲು ಕೋವಿಡ್‌, ರಷ್ಯಾ ಉಕ್ರೇನ್ ಯುದ್ಧ, ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ಸಮಸ್ಯೆಗಳು ನೇರ ಅಥವಾ ಪರೋಕ್ಷವಾಗಿ ಕಾರಣವಾಗಿರಬಹುದು. ಆದರೆ 2024ರ ಆರ್ಥಿಕ ವರ್ಷದಲ್ಲಿ ಲಾಭವನ್ನು ತಂದುಕೊಡುವ ಎಲ್ಲಾ ರೀತಿಯ ಮುನ್ಸೂಚನೆಗಳಿವೆ. ಇದಕ್ಕೆ ಕಾರಣ 2023ರ ಮೂರು ತ್ರೈಮಾಸಿಗಳಲ್ಲಿನ ನಿರಂತರ ಬೆಳವಣಿಗೆ. 1990ರ ಖಾಸಗೀಕರಣ ಬಳಿಕ ಸಾಕಷ್ಟು ಬಹುರಾಷ್ಟ್ರೀಯ ಕಂಪನಿಗಳ ಭಾರತಕ್ಕೆ ಲಗ್ಗೆಇಟ್ಟಿದ್ದು, ಉದ್ಯೋಗ ಅವಕಾಶವನ್ನು ಹೆಚ್ಚಿಸಿವೆ.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point

ವಿಭಾಗ