Cylinder Rate: ಮತ್ತೆ ಸಿಲೆಂಡರ್‌ ದರ ದುಬಾರಿ, ವಾಣಿಜ್ಯ ಬಳಕೆ ಸಿಲೆಂಡರ್‌ ಹೆಚ್ಚಳ, ಗೃಹ ಬಳಕೆ ದರದಲ್ಲಿ ಯಥಾಸ್ಥಿತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cylinder Rate: ಮತ್ತೆ ಸಿಲೆಂಡರ್‌ ದರ ದುಬಾರಿ, ವಾಣಿಜ್ಯ ಬಳಕೆ ಸಿಲೆಂಡರ್‌ ಹೆಚ್ಚಳ, ಗೃಹ ಬಳಕೆ ದರದಲ್ಲಿ ಯಥಾಸ್ಥಿತಿ

Cylinder Rate: ಮತ್ತೆ ಸಿಲೆಂಡರ್‌ ದರ ದುಬಾರಿ, ವಾಣಿಜ್ಯ ಬಳಕೆ ಸಿಲೆಂಡರ್‌ ಹೆಚ್ಚಳ, ಗೃಹ ಬಳಕೆ ದರದಲ್ಲಿ ಯಥಾಸ್ಥಿತಿ

Business News ಭಾರತದಲ್ಲಿ ಸದ್ಯ ಗೃಹ ಬಳಕೆ ಸಿಲೆಂಡರ್‌ ದರ ಏರಿಕೆ ಮಾಡಿಲ್ಲ.ಬದಲಿಗೆ ವಾಣಿಜ್ಯ ಬಳಕೆ ಸಿಲೆಂಡರ್‌ ದರದಲ್ಲಿ ಬದಲಾವಣೆಯಾಗಿದೆ.

ಭಾರತದಲ್ಲಿ ಸೆಪ್ಟಂಬರ್‌ ತಿಂಗಳಲ್ಲಿ ಸಿಲೆಂಡರ್‌ ದರಗಳು ಹೇಗಿರಲಿವೆ.
ಭಾರತದಲ್ಲಿ ಸೆಪ್ಟಂಬರ್‌ ತಿಂಗಳಲ್ಲಿ ಸಿಲೆಂಡರ್‌ ದರಗಳು ಹೇಗಿರಲಿವೆ.

ದೆಹಲಿ: ಭಾರತದಲ್ಲಿ ಸೆಪ್ಟಂಬರ್‌ 1ರಿಂದಲೇ ಸಿಲೆಂಡರ್‌ ಬೆಲೆಯಲ್ಲಿ ಬದಲಾವಣೆ ಆಗಿದೆ. ಕೆಲವು ವರ್ಷದಿಂದ ಪ್ರತಿ ತಿಂಗಳು ದರ ಪರಿಷ್ಕರಣೆ ನಿಯಮದಂತೆ ತೈಲ ಕಂಪೆನಿಗಳು ಸಿಲೆಂಡರ್‌ ದರವನ್ನು ಪರಿಷ್ಕರಣೆ ಮಾಡಿವೆ. ಇದರಲ್ಲಿ ವಾಣಿಜ್ಯ ಬಳಕೆಯ ಸಿಲೆಂಡರ್‌ ದರಗಳಲ್ಲಿ ಏರಿಕೆ ಕಂಡು ಬಂದಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 39ರೂ.ನಷ್ಟು ಹೆಚ್ಚಳ ಮಾಡಿವೆ.ಆದರೆ ಭಾರತದಲ್ಲಿ ಬಹುಪಾಲು ಜನ ಬಳಸುವ ಗೃಹೋಪಯೋಗಿ ಸಿಲೆಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ತೈಲ ಕಂಪೆನಿಗಳು 14.2 ಕೆಜಿ ಗೃಹಬಳಕೆಯ ಗ್ಯಾಸ್​ ಸಿಲಿಂಡರ್​ನ ಬೆಲೆಗಳನ್ನು ಯಥಾ ಸ್ಥಿತಿ ಉಳಿಸಿವೆ. ಇದರಿಂದ ಕೋಟ್ಯಂತರ ಜನ ಒಂದು ತಿಂಗಳವರೆಗೂ ನಿರಾಳವಾಗಿರಬಹುದು.

ದೆಹಲಿಯಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ 39ರೂ.ಗಳಷ್ಟು ಹೆಚ್ಚಾಗಿದೆ. ಇದು ಭಾನುವಾರದಿಂದಲೇ ಜಾರಿಗೆ ಬರಲಿದೆ. ಜುಲೈನಲ್ಲಿ ಪ್ರತಿ ಸಿಲಿಂಡರ್‌ಗೆ 30 ರೂ., ಜೂನ್‌ನಲ್ಲಿ 69.50 ಮತ್ತು ಮೇನಲ್ಲಿ 19 ರೂ. ಹೆಚ್ಚಳ ಮಾಡಲಾಗಿತ್ತು. ಆಗಸ್ಟ್‌ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು ನಿರಂತರವಾಗಿ ವಾಣಿಜ್ಯ ಸಿಲೆಂಡರ್‌ ಬೆಲೆ ಏರಿಕೆ ಕಾಣುತ್ತಲೇ ಇದೆ.

ಇದು ಹಲವು ಉದ್ಯಮಗಳ ಮೇಲೆ ಹೊರೆ ಹೆಚ್ಚಿಸಲಿದೆ. ಅದರಲ್ಲೂ ಎಲ್‌ಪಿಜಿ ಬೆಲೆಗಳಲ್ಲಿನ ಹಠಾತ್ ಹೆಚ್ಚಳವು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಂದ ಹಿಡಿದು ಸಣ್ಣ-ಪ್ರಮಾಣದ ಕೈಗಾರಿಕೆಗಳವರೆಗೆ ವಿವಿಧ ವಲಯಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು.

ಸೆಪ್ಟೆಂಬರ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ 1691.50 ರೂ.ಗೆ ಏರಿಕೆಯಾಗಿದೆ.. ಹೊಸ ದರಗಳ ಪ್ರಕಾರ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ 39 ರೂ. ಈಗ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1691.50 ರೂ. ಮುಂಬೈನಲ್ಲಿ ಇದರ ಬೆಲೆ 1644 ರೂ. ಈ ಮೊದಲು ಈ ಸಿಲಿಂಡರ್ ಮುಂಬೈನಲ್ಲಿ 1605 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ ಈ ಸಿಲಿಂಡರ್ ಬೆಲೆ 1764.50 ರೂ.ನಿಂದ 1802.50 ರೂ.ಗೆ ಏರಿಕೆಯಾಗಿದೆ. ಆದರೆ ಚೆನ್ನೈನಲ್ಲಿ ಈ ಸಿಲಿಂಡರ್ ಈಗ 1855 ರೂ.ಗೆ ಲಭ್ಯವಾಗಲಿದೆ. ಈ ಹಿಂದೆ ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್ 1817 ರೂ.ಗೆ ಮಾರಾಟವಾಗಿತ್ತು.

ಆಗಸ್ಟ್‌ನಲ್ಲಿ ಎಲ್‌ಪಿಜಿ ಗ್ಯಾಸ್‌ನ ಬೆಲೆಯನ್ನು ಹೆಚ್ಚಿಸಲಾಗಿತ್ತು ಆಗ ಕಂಪನಿಗಳು 8.50 ರೂಪಾಯಿ ಏರಿಕೆ ಮಾಡಿದ್ದವು ಆದರೆ ಈ ಬಾರಿ ನೇರವಾಗಿ 39 ರೂಪಾಯಿ ಹೆಚ್ಚಿಸಿವೆ ಎನ್ನುವ ಮಾತುಗಳು ಕೇಳಿ ಬಂದಿದೆ.

ಇನ್ನು ಗೃಹ ಬಳಕೆಯ 14.2 ಕೆಜಿ ಸಿಲೆಂಡರ್‌ ದರವು ಹಿಂದಿನ ತಿಂಗಳಿನಂತೆಯೇ .807.50 ರೂ.ನಷ್ಟೇ ಇರಲಿದೆ. ಲೋಕಸಭಾ ಚುನಾವಣೆಗೂ ಮುನ್ನ ಇಳಿಕೆ ಮಾಡಿದ್ದ ದರವನ್ನು ಏರಿಸಿಲ್ಲ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗೃಹ ಬಳಕೆ ಸಿಲೆಂಡರ್‌ ಬೆಲೆ 1107.50 ರೂ.ಇತ್ತು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.