Indian rupees: ಭಾರತೀಯ ರೂಪಾಯಿಗಿಂತ ಸೈಕಲ್‌ ರಿಕ್ಷಾ ವಾಸಿ, ಕರೆನ್ಸಿ ಎಕ್ಸ್‌ಚೇಂಜ್‌ ಮುಂದೆ ಕಂಡ ಚಿತ್ರಣ, ರೂಪಾಯಿಗೇನಾಯ್ತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Indian Rupees: ಭಾರತೀಯ ರೂಪಾಯಿಗಿಂತ ಸೈಕಲ್‌ ರಿಕ್ಷಾ ವಾಸಿ, ಕರೆನ್ಸಿ ಎಕ್ಸ್‌ಚೇಂಜ್‌ ಮುಂದೆ ಕಂಡ ಚಿತ್ರಣ, ರೂಪಾಯಿಗೇನಾಯ್ತು

Indian rupees: ಭಾರತೀಯ ರೂಪಾಯಿಗಿಂತ ಸೈಕಲ್‌ ರಿಕ್ಷಾ ವಾಸಿ, ಕರೆನ್ಸಿ ಎಕ್ಸ್‌ಚೇಂಜ್‌ ಮುಂದೆ ಕಂಡ ಚಿತ್ರಣ, ರೂಪಾಯಿಗೇನಾಯ್ತು

Indian rupees declined: ಗುರುವಾರ ಭಾರತದ ರೂಪಾಯಿ ಮೌಲ್ಯ ಗಮನಾರ್ಹವಾಗಿ ಇಳಿಕೆ ಕಂಡಿದೆ. ಇಂದು ಬೆಳಗ್ಗೆ 10.44 ಗಂಟೆಗೆ ಇದರ ಮೌಲ್ಯವು 82.42 ರೂಪಾಯಿಗೆ ಕುಸಿದಿದೆ. ರೂಪಾಯಿ ವೇಗವೂ ಸೈಕಲ್‌ ರಿಕ್ಷಾಕ್ಕಿಂತಲೂ ಕಡಿಮೆಯಾಗಿದೆ ಎಂದು ಮಾರ್ಮಿಕವಾಗಿ ಹೇಳಲಾಗಿದೆ.

ಗುರುವಾರ ಭಾರತದ ರೂಪಾಯಿ ಮೌಲ್ಯ ಗಮನಾರ್ಹ ಪ್ರಮಾಣದಲ್ಲಿ ಕುಸಿತ ದಾಖಲಾಗಿದೆ.
ಗುರುವಾರ ಭಾರತದ ರೂಪಾಯಿ ಮೌಲ್ಯ ಗಮನಾರ್ಹ ಪ್ರಮಾಣದಲ್ಲಿ ಕುಸಿತ ದಾಖಲಾಗಿದೆ. (REUTERS/Anindito Mukherjee)

ಭಾರತದ ರೂಪಾಯಿ ಮೌಲ್ಯವು ಗುರುವಾರ ಕಳೆದ ಮೂರುವಾರದ ಹಿಂದಿನ ಕೆಳಮಟ್ಟಕ್ಕೆ ಕುಸಿದಿದೆ. ಇದೇ ಸಮಯದಲ್ಲಿ ದೆಹಲಿಯ ಕರೆನ್ಸಿ ಎಕ್ಸ್‌ಚೇಂಜ್‌ ಬಳಿ ಸೈಕಲ್‌ ರಿಕ್ಷಾದ ಜತೆಗೆ ಸ್ಟಾಲ್‌ವೊಂದರಲ್ಲಿ "ಸೈಕಲ್‌ ರಿಕ್ಷಾ ಮೂವ್‌ ಫಾಸ್ಟ್‌" ಎಂಬ ಡಿಸ್‌ಪ್ಲೇ ಕಾಣಿಸಿಕೊಂಡಿದೆ. ಅಂದರೆ, ಭಾರತದ ರೂಪಾಯಿ ವೇಗ ತೀರ ಕಡಿಮೆಯಾಗಿದ್ದು, ಇದಕ್ಕಿಂತ ಸೈಕಲ್‌ ರಿಕ್ಷಾ ವೇಗವಾಗಿ ಹೋಗುತ್ತದೆ ಎಂಬ ಅರ್ಥವನ್ನು ಬಿಂಬಿಸಲಾಗಿದೆ.

ಗುರುವಾರ ಭಾರತದ ರೂಪಾಯಿ ಮೌಲ್ಯ ಗಮನಾರ್ಹ ಪ್ರಮಾಣದಲ್ಲಿ ಕುಸಿದಿದೆ. ಅಮೆರಿಕದ ಡಾಲರ್‌ ಎದುರು ರೂಪಾಯಿ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದು, 2021ರ ಬಳಿಕ ಅತ್ಯಧಿಕ ಕುಸಿತ ಕಾಣಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಡಾಲರ್‌ ಎದುರು ಭಾರತದ ಕರೆನ್ಸಿ ಮೌಲ್ಯವು ಹಿಂದಿನ ಅವಧಿಯಲ್ಲಿ 82.2250 ರೂಪಾಯಿ ಇತ್ತು. ಇಂದು ಬೆಳಗ್ಗೆ 10.44 ಗಂಟೆಗೆ ಇದರ ಮೌಲ್ಯವು 82.42 ರೂಪಾಯಿಗೆ ಕುಸಿದಿದೆ. ಈ ಮೂಲಕ ಮೂರನೇ ನೇರ ಅವಧಿಯ ನಷ್ಟದತ್ತ ಭಾರತದ ರೂಪಾಯಿ ಸಾಗುತ್ತಿದೆ. "ಇದು ಹೆಚ್ಚಿನ ಜನರು ನಿರೀಕ್ಷಿಸಿದ ಫಲಿತಾಂಶವಲ್ಲ" ಎಂದು ಬ್ಯಾಂಕ್‌ನ ವಿದೇಶಿ ವಿನಿಮಯ ಮಾರಾಟಗಾರರೊಬ್ಬರು ಹೇಳಿದ್ದಾರೆ.

ಅಮೆರಿಕದ ಜೂನ್‌ ತಿಂಗಳ ನೀತಿ ನಿರೂಪಣೆ ಸಭೆಯು ರೂಪಾಯಿ ಮೌಲ್ಯ ಕುಸಿಯಲು ಪ್ರಮುಖ ಕಾರಣವಾಗಿದೆ. ಜೂನ್‌ ತಿಂಗಳ ಸಭೆಯಲ್ಲಿ ಫೆಡರಲ್‌ ರಿಸರ್ವ್‌ನ ಅಧಿಕಾರಿಗಳು ಈ ವರ್ಷ ಹೆಚ್ಚುವರಿ ದರ ಏರಿಕೆಗೆ ಒಲವು ತೋರಿದ ಬಳಿಕ ಏಷ್ಯಾ ಕರೆನ್ಸಿಗಳು ಹೆಣಗಾಡಲು ಆರಂಭಿಸಿವೆ.

ಇದೇ ಸಮಯದಲ್ಲಿ ರೂಪಾಯಿಯ ಒಂದು ವರ್ಷದ ಪ್ರೀಮಿಯಂ 1.3350 ರೂಪಾಯಿಗೆ ಕುಸಿದಿದೆ. ಇದು ಒಂದು ದಶಕದಲ್ಲಿಯೇ ಅತ್ಯಂತ ಕಡಿಮೆಯಾಗಿದೆ. ಒಂದು ವರ್ಷದ ಸೂಚಿತ ಇಳುವರಿಯು ಶೇಕಡ 1.60 ಕುಸಿದಿದೆ.

ಜೂನ್‌ ತಿಂಗಳ ಫೆಡರಲ್‌ ರಿಸರ್ವ್‌ ಸಭೆಯಲ್ಲಿ ಬಡ್ಡಿದರ ಹೆಚ್ಚಳದ ಕುರಿತು ಮೌನವಾಗಿ ಉಳಿದಿರುವುದು ಮತ್ತು ಬಹುತೇಕ ಸದಸ್ಯರು ಹಣಕಾಸು ನೀತಿಯನ್ನು ಬಿಗಿಗೊಳಿಸುವ ನಿರ್ಧಾರ ಹೊಂದಿರುವುದು ಷೇರುಪೇಟೆ, ಕರೆನ್ಸಿ ವಿನಿಮಯ ಕೇಂದ್ರ ಸೇರಿದಂತೆ ಮಾರ್ಕೆಟ್‌ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

ರೂಪಾಯಿ ಎಂದರೇನು?

ಭಾರತೀಯ ರೂಪಾಯಿ ಎನ್ನುವುದು ಭಾರತದ ಕರೆನ್ಸಿ. ಇದೇ ರೀತಿ, ಶ್ರೀಲಾಂಕ, ನೇಪಾಳ, ಪಾಕಿಸ್ತಾನ, ಮಾರಿಷಸ್‌, ಸೆಷೆಲ್ಸ್‌ ಇಂಡೋನೇಷ್ಯಾ ದೇಶಗಳ ನಗದು ವ್ಯವಸ್ಥೆಗೂ ರೂಪಾಯಿ ಎಂದೇ ಹೆಸರು. ಸಂಸ್ಕೃತದ ರುಪ್ಯಕಮ್ರೂಪ್ಯಕಮ್ ಎಂಬ ಪದದಿಂದ ರೂಪಾಯಿ ಪದದ ಉತ್ಪತ್ತಿಯಾಗಿದೆ.

ಡಾಲರ್‌ ಎಂದರೇನು?

ಭಾರತದ ರೂಪಾಯಿಯಂತೆ ಹಲವು ರಾಷ್ಟ್ರಗಳು ಡಾಲರ್‌ ಎಂಬ ಕರೆನ್ಸಿ ಹೊಂದಿವೆ. ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಕೆನಡಾ, ಜಿಂಬಾಬ್ವೆ ದೇಶಗಳು ಡಾಲರ್‌ ಎಂಬ ನಗದು ವ್ಯವಸ್ಥೆ ಹೊಂದಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.