ಕನ್ನಡ ಸುದ್ದಿ  /  Nation And-world  /  Business News Indian Share Market Closing Bell For 21st March 2024 These Are The Top Gainers Rsm

Closing Bell: ಅಮೆರಿಕ ಕೇಂದ್ರೀಯ ಬ್ಯಾಂಕ್‌ ಬಡ್ಡಿ ದರದಲ್ಲಿ ಸ್ಥಿರತೆ; ಲಾಭದೊಂದಿಗೆ ವಹಿವಾಟು ಮುಗಿಸಿದ ಭಾರತದ ಷೇರುಮಾರುಕಟ್ಟೆ

Closing Bell: ಮೂರು ದಿನಗಳಿಂದ ನೀರಸ ಚಟುವಟಿಕೆಯಿಂದ ಕೂಡಿದ್ದ ಭಾರತದ ಷೇರು ಮಾರುಕಟ್ಟೆ ಇಂದು ಮುಕ್ತಾಯದ ವೇಳೆಗೆ ಲಾಭ ಗಳಿಸಿ ಹೂಡಿಕೆದಾರರ ಮೊಗದಲ್ಲಿ ಸಂತಸ ಉಂಟು ಮಾಡಿದೆ. ಇಂದು ಬಿಪಿಸಿಎಲ್‌, ಟಾಟಾ ಸ್ಟೀಲ್‌ ಹಾಗೂ ಇತರ ಷೇರುಗಳು ಲಾಭ ಕಂಡರೆ ನೆಸ್ಲೆ, ಬ್ರಿಟಾನಿಯಾ ಷೇರುಗಳು ನಷ್ಟ ಅನುಭವಿಸಿವೆ.

ಭಾರತದ ಷೇರು ಮಾರುಕಟ್ಟೆ ಕ್ಲೋಸಿಂಗ್‌ ಬೆಲ್
ಭಾರತದ ಷೇರು ಮಾರುಕಟ್ಟೆ ಕ್ಲೋಸಿಂಗ್‌ ಬೆಲ್

ಬೆಂಗಳೂರು: ಅಮೆರಿಕ ಕೇಂದ್ರಿಯ ಬ್ಯಾಂಕ್‌ ಈ ಬಾರಿ ಬಡ್ಡಿದರದಲ್ಲಿ ಸ್ಥಿರತೆ ಕಾಯ್ದುಕೊಂಡಿರುವುದು ಭಾರತದ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಗುರುವಾರ ಬೆಳಗ್ಗೆ ಧನಾತ್ಮಕ ಆರಂಭ ಕಂಡಿದ್ದ ಭಾರತದ ಷೇರು ಮಾರುಕಟ್ಟೆ ಲಾಭದೊಂದಿಗೆ ಮುಕ್ತಾಯ ಕಂಡಿದೆ.

ಕಳೆದ 3 ದಿನಗಳಿಂದ ಭಾರತದ ಷೇರುಮಾರುಕಟ್ಟೆ ಉತ್ತಮ ಆರಂಭ ಕಂಡಿದ್ದರೂ ಚಂಚಲ ವಹಿವಾಟಿನ ಕಾರಣ ಮುಕ್ತಾಯದ ವೇಳೆಗೆ ನಷ್ಟ ಕಾಣುತ್ತಿತ್ತು. ಇಂದು ಭಾರತದ ಷೇರುಪೇಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ಗಿಫ್ಟ್‌ ನಿಫ್ಟಿಯು 22,082 ರಲ್ಲಿ ವಹಿವಾಟು ಆರಂಭಿಸಿತ್ತು. ಬುಧವಾರ ಮುಕ್ತಾಯದ ವೇಳೆಗೆ 21,839.10 ಕ್ಕೆ ತಲುಪಿ ದಿನದ ವಹಿವಾಟು ಮುಗಿಸಿತ್ತು. ಬಿಎಸ್‌ಇಯ ಎಲ್ಲಾ ವಲಯದ ಸೂಚ್ಯಂಕಗಳಲ್ಲಿ ಇಂದು

ಬೆಳವಣಿಗೆ ಕಂಡುಬಂದಿದೆ. ಇಂದು ವಿಪ್ರೋ, ಟೂರೆಂಟ್‌ ಪವರ್‌, ರೈಲ್‌ ವಿಕಾಸ್‌ ನಿಗಮ್‌ ಷೇರುಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು. ಸಂಜೆ ವೇಳೆಗೆ ಷೇರು ಮಾರುಕಟ್ಟೆಯ ಎಲ್ಲಾ ಸೆಷನ್‌ಗಳು ಏರಿಕೆಗೆ ಸಾಕ್ಷಿಯಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ, ಲಾಭದೊಂದಿಗೆ ಅಂತ್ಯ ಕಂಡವು. ಬಿಪಿಸಿಎಲ್, ಟಾಟಾ ಸ್ಟೀಲ್, ಹಿಂಡಾಲ್ಕೊ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಮಾರುಕಟ್ಟೆಯಲ್ಲಿ ನಿಫ್ಟಿಯಲ್ಲಿ ಲಾಭವನ್ನು ಕಂಡರೆ ನೆಸ್ಲೆ, ಬ್ರಿಟಾನಿಯಾ, ಡಾ. ರೆಡ್ಡೀಸ್ ಲ್ಯಾಬ್ಸ್, ಹೀರೋ ಮೊಟೊಕಾರ್ಪ್ ಮತ್ತು ಎಚ್‌ಯುಎಲ್ ಷೇರುಗಳು ನಿಫ್ಟಿಯಲ್ಲಿ

ಕುಸಿತ ಕಂಡಿವೆ. ಮಾರುಕಟ್ಟೆ ಲಾಭದೊಂದಿಗೆ ಆರಂಭವಾಗುತ್ತಿದ್ದಂತೆ ನಿಫ್ಟಿ ಮತ್ತು ಸೆನ್ಸೆಕ್ಸ್‌ನಲ್ಲಿ ಏರಿಕೆ ಕಂಡುಬಂದಿದೆ. ನಿಫ್ಟಿ ಬ್ಯಾಂಕ್ ನಲ್ಲಿ 400ಕ್ಕೂ ಹೆಚ್ಚು ಅಂಕಗಳ ಜಿಗಿತ ಕಂಡುಬಂದಿದೆ. 12 ಬ್ಯಾಂಕಿಂಗ್ ಸ್ಟಾಕ್‌ಗಳನ್ನು ಒಳಗೊಂಡಿರುವ ಬ್ಯಾಂಕಿಂಗ್ ವಲಯವನ್ನು ಟ್ರ್ಯಾಕ್ ಮಾಡುವ ನಿಫ್ಟಿ ಬ್ಯಾಂಕ್ ಸೂಚ್ಯಂಕವು 374 ಪಾಯಿಂಟ್‌ಗಳನ್ನು ಅಥವಾ ಶೇ. 0.81 ಸೇರಿಸಿ 46,684.90 ಕ್ಕೆ ಕೊನೆಗೊಂಡಿತು. ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ಸ್ಮಾಲ್‌ಕ್ಯಾಪ್ 100 ಕ್ರಮವಾಗಿ ಶೇ 2.43 ಮತ್ತು ಶೇ 2.51 ರಷ್ಟು ಹೆಚ್ಚಿವೆ. ಸೆನ್ಸೆಕ್ಸ್ ವಲಯದಿಂದ ಎನ್‌ಪಿಟಿಸಿ, ಪವರ್ ಗ್ರಿಡ್, ಟಾಟಾ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎಲ್ & ಟಿ ಅತಿ ಹೆಚ್ಚು ಲಾಭ ಗಳಿಸಿದವು. ಏರ್‌ಟೆಲ್, ಮಾರುತಿ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಹಿಂದುಳಿದಿದ್ದವು.

ವಿನಿಮಯ ಮಾಹಿತಿಯ ಪ್ರಕಾರ ಬುಧವಾರ 30-ಷೇರುಗಳ ಬಿಎಸ್‌ಇ ಬೆಂಚ್‌ಮಾರ್ಕ್ 89.64 ಪಾಯಿಂಟ್‌ಗಳು ಅಥವಾ ಶೇ 0.12 ರಷ್ಟು ಚೇತರಿಕೆ ಕಂಡು 72,101.69 ಕ್ಕೆ ಸ್ಥಿರವಾಯಿತು. ಎನ್‌ಎಸ್‌ಇ ನಿಫ್ಟಿ 21.65 ಪಾಯಿಂಟ್‌ಗಳು ಅಥವಾ ಶೇ 0.10 ರಷ್ಟು ಏರಿಕೆಯಾಗಿ 21,839.10 ಕ್ಕೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 2,599.19 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

IPL_Entry_Point