Closing Bell: ಕುಸಿತದ ಬೆನ್ನಲ್ಲೇ ವೇಗವಾಗಿ ಪುಟಿದೆದ್ದ ಸೆನ್ಸೆಕ್ಸ್; ಈ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಭಾರಿ ಲಾಭ-business news indian share market closing bell for august 20 tuesday stock market sensex nifty 50 gainers jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Closing Bell: ಕುಸಿತದ ಬೆನ್ನಲ್ಲೇ ವೇಗವಾಗಿ ಪುಟಿದೆದ್ದ ಸೆನ್ಸೆಕ್ಸ್; ಈ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಭಾರಿ ಲಾಭ

Closing Bell: ಕುಸಿತದ ಬೆನ್ನಲ್ಲೇ ವೇಗವಾಗಿ ಪುಟಿದೆದ್ದ ಸೆನ್ಸೆಕ್ಸ್; ಈ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಭಾರಿ ಲಾಭ

ಆಗಸ್ಟ್‌ 20ರ ಮಂಗಳವಾರ ಮಾರುಕಟ್ಟೆ ಅವಧಿ ಮುಕ್ತಾಯದ ವೇಳೆಗೆ ನಿಫ್ಟಿ 50 ಜೊತೆಗೆ ಸೆನ್ಸೆಕ್ಸ್ ಕೂಡಾ ಏರುಗತಿಯ ಹಾದಿಗೆ ಮರಳಿದೆ. ಸುಮಾರು 2048 ಷೇರುಗಳು ಲಾಭದತ್ತ ಮುಖ ಮಾಡಿದರೆ, 1391 ಷೇರುಗಳ ಮೌಲ್ಯ ಕೆಳಮುಖ ಮಾಡಿವೆ.

ಕುಸಿತ ಬಳಿಕ ಪುಟಿದೆದ್ದ ಸೆನ್ಸೆಕ್ಸ್; ಈ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಭಾರಿ ಲಾಭ
ಕುಸಿತ ಬಳಿಕ ಪುಟಿದೆದ್ದ ಸೆನ್ಸೆಕ್ಸ್; ಈ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಭಾರಿ ಲಾಭ

ಬೆಂಗಳೂರು : ಭಾರತೀಯ ಷೇರು ಮಾರುಕಟ್ಟೆಯು ಮಂಗಳವಾರ (Stock market today) ಹಸಿರು ಬಣ್ಣದಲ್ಲಿ ದಿನದ ವಹಿವಾಟು ಮುಗಿಸಿದೆ. ಹೂಡಿಕೆದಾರರು ದಿನದ ಅಂತ್ಯಕ್ಕೆ ಲಾಭದ ಖುಷಿ ಅನುಭವಿಸಿದ್ದಾರೆ. ಕಳೆದ ದಿನ ನಿಫ್ಟಿ 50 (Nifty 50) ಏರುಗತಿಯಲ್ಲಿ ವಹಿವಾಟು ಮುಗಿಸಿದ್ದರೆ, ಸೆನ್ಸೆಕ್ಸ್‌ ಹಿಂದೆ ಬಿದ್ದಿತ್ತು. ಇಂದು ಸೆನ್ಸೆಕ್ಸ್‌ ಕೂಡಾ ಪುಟಿದೆದ್ದಿದ್ದು, ಆಗಸ್ಟ್ 20ರಂದು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದವರು ಖುಷಿಪಟ್ಟಿದ್ದಾರೆ. ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸಂವೇದಿ ಸೂಚ್ಯಂಕಗಳಾದ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಅಲ್ಪ ವ್ಯತ್ಯಾಸದೊದಿಗೆ ಅರ್ಧ ಶೇಕಡಾದಷ್ಟು ಏರಿಕೆಯೊಂದಿಗೆ ವಹಿವಾಟು ಮುಗಿಸಿದವು. ಜಾಗತಿಕ ಮಾರುಕಟ್ಟೆಯಲ್ಲಿ ಏರುಗತಿಯ ಸೂಚನೆ ಭಾರತೀಯ ಮಾರುಕಟ್ಟೆ ಮೇಲೂ ಧನಾತ್ಮಕ ಪ್ರಭಾವ ಬೀರಿದವು.

ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 378 ಪಾಯಿಂಟ್ (0.47) ಏರಿಕೆಯೊಂದಿಗೆ 80,802.86 ಅಂಕಗಳಲ್ಲಿ ದಿನದ ವಹಿವಾಟು ನಿಲ್ಲಿಸಿದೆ. ಅತ್ತ ಮಾರುಕಟ್ಟೆ ಅವಧಿ ಮುಕ್ತಾಯದ ವೇಳೆಗೆ ನಿಫ್ಟಿ 50ಯು 126 ಪಾಯಿಂಟ್ (0.51) ಏರಿಕೆ ಕಂಡು 24,698.85ರಲ್ಲಿ ಸ್ಥಿರವಾಗಿ ನಿಂತಿದೆ.

ಸುಮಾರು 2048 ಷೇರುಗಳು ಲಾಭದತ್ತ ಮುಖಮಾಡಿದರೆ, 1391 ಷೇರುಗಳ ಮೌಲ್ಯ ಕೆಳಮುಖ ಮಾಡಿವೆ. ಉಳಿದಂತೆ 81 ಷೇರುಗಳು ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿ ನಿಂತಿವೆ.

ಟಿಸಿಎಸ್, ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಅಶೋಕ್ ಲೇಲ್ಯಾಂಡ್, ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿ, ಪರ್ಸಿಸ್ಟೆಂಟ್ ಸಿಸ್ಟಮ್ಸ್, ಶ್ರೀರಾಮ್ ಫೈನಾನ್ಸ್ ಮತ್ತು ಟ್ರೆಂಟ್ ಸೇರಿದಂತೆ ಸುಮಾರು 300 ಷೇರುಗಳು ಬಿಎಸ್‌ಇಯಲ್ಲಿ ಇಂಟ್ರಾಡೇ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.

ಲಾಭ ಗಳಿಸಿದ ಷೇರುಗಳಿವು

ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಎಚ್‌ಡಿಎಫ್‌ಸಿ ಲೈಫ್, ಬಜಾಜ್ ಫಿನ್‌ಸರ್ವ್, ಶ್ರೀರಾಮ್ ಫೈನಾನ್ಸ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಶೇರುಗಳಲ್ಲಿ ಹೂಡಿಕೆ ಮಾಡಿದವರು ನಿಫ್ಟಿಯಲ್ಲಿ ಭಾರಿ ಲಾಭ ಗಳಿಸಿದರು. ಅತ್ತ ಒಎನ್‌ಜಿಸಿ, ಭಾರ್ತಿ ಏರ್‌ಟೆಲ್, ಅದಾನಿ ಎಂಟರ್‌ಪ್ರೈಸಸ್, ಸಿಪ್ಲಾ ಮತ್ತು ಅಪೊಲೊ ಆಸ್ಪತ್ರೆಗಳ ಷೇರುಗಳು ನಷ್ಟ ಅನುಭವಿಸಿದವು.

ಎಫ್‌ಎಂಸಿಜಿ ಹೊರತುಪಡಿಸಿ, ಬ್ಯಾಂಕ್, ಹೆಲ್ತ್‌ಕೇರ್, ಐಟಿ, ಮೆಟಲ್, ಪವರ್ ಶೇ. 0.5ರಿಂದ 1ರಷ್ಟು ಏರಿಕೆ ಕಂಡವು. ಇತರ ಎಲ್ಲ ವಲಯದ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ದಿನದ ವಹಿವಾಟು ಮುಗಿಸಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 1ರಷ್ಟು ಏರಿಕೆ ಕಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.5 ರಷ್ಟು ಏರಿಕೆ ಕಂಡಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಒಂದು ಶೇಕಡಾ ಏರಿಕೆ ಕಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಅರ್ಧ ಶೇಕಡದಷ್ಟು ಹೆಚ್ಚಾಗಿದೆ. BSEನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ಸೆಷನ್‌ನಲ್ಲಿ ಇದ್ದ ಸುಮಾರು 454.4 ಲಕ್ಷ ಕೋಟಿ ರೂಪಾಯಿಗಳಿಂದ ಸುಮಾರು 456.7 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿವೆ. ಇದರೊಂದಿಗೆ ಹೂಡಿಕೆದಾರರನ್ನು ಒಂದೇ ಅವಧಿಯಲ್ಲಿ 2 ಲಕ್ಷ ಕೋಟಿಗಳಷ್ಟು ಲಾಭ ಪಡೆದಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.