ಜಾಗತಿಕ ವಿದ್ಯಮಾನಗಳ ನಡುವೆ ಅಲ್ಪ ಬದಲಾವಣೆಯೊಂದಿಗೆ ವಹಿವಾಟು ಆರಂಭಿಸಲು ಭಾರತದ ಷೇರು ಮಾರುಕಟ್ಟೆ ಸಜ್ಜು, ಇಂದು ಗಮನಿಸಬಹುದಾದ ಷೇರುಗಳಿವು
Opening Bell: ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಬಹುತೇಕ ನಷ್ಟ ಕಂಡಿದ್ದ ಭಾರತದ ಷೇರು ಮಾರುಕಟ್ಟೆ ಮಂಗಳವಾರ ಕೂಡಾ ಭಾರೀ ಕುಸಿತ ಕಂಡಿದೆ. ಐಟಿ, ಬ್ಯಾಂಕಿಂಗ್ ಷೇರುಗಳು ಕುಸಿತ ಕಂಡಿದ್ದು ಇಂದು ಅಲ್ಪ ಬದಲಾವಣೆಯೊಂದಿಗೆ ವಹಿವಾಟು ಆರಂಭಿಸಲು ಸಿದ್ಧವಾಗಿದೆ. ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸೇರಿದಂತೆ ಇಂದು ಈ ಷೇರುಗಳನ್ನು ಗಮನಿಸಿ.
ಬೆಂಗಳೂರು: ನಿನ್ನೆ ಕುಸಿತ ಕಂಡಿದ್ದ ಭಾರತದ ಷೇರು ಮಾರುಕಟ್ಟೆ ಬುಧವಾರದಂದು ಅಲ್ಪ ಮಟ್ಟದ ಬದಲಾವಣೆಯೊಂದಿಗೆ ಆರಂಭವಾಗುತ್ತಿದೆ. ಗಿಫ್ಟ್ ನಿಫ್ಟಿ ಬೆಳಗ್ಗೆ 8:08 ರಂತೆ 22,046.50 ರಲ್ಲಿ ವಹಿವಾಟು ನಡೆಸುತ್ತಿದೆ, ಇದು ನಿಫ್ಟಿ 50 ಮಂಗಳವಾರದ ಮುಕ್ತಾಯದ 22,004.70 ರ ಸಮೀಪದಲ್ಲಿ ತೆರೆಯುವ ಸಾಧ್ಯತೆ ಇದೆ.
30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 361.64 ಪಾಯಿಂಟ್‌ಗಳು ಅಥವಾ ಶೇಕಡಾ 0.50 ರಷ್ಟು ಕುಸಿದು 72,470.30 ಕ್ಕೆ ತಲುಪಿದೆ. 3 ದಿನಗಳ ಸತತ ರಜೆ ನಂತರ ವಾರದ ಆರಂಭದಲ್ಲಿ ಹೂಡಿಕೆದಾರರು ಗೊಂದಲಕ್ಕೊಳಗಾದ ಕಾರಣ ಎನ್‌ಎಸ್‌ಸಿ ನಿಫ್ಟಿ ದಿನವಿಡೀ ಹಿಂದೆಯೇ ಉಳಿಯಿತು. ಮುಕ್ತಾಯದ ವೇಳೆಗೆ, ಇದು 92.05 ಪಾಯಿಂಟ್ ಅಥವಾ 0.42 ರಷ್ಟು ಕುಸಿದು 22,004.70 ಕ್ಕೆ ತಲುಪಿದೆ. 12 ಬ್ಯಾಂಕಿಂಗ್ ಸ್ಟಾಕ್‌ಗಳನ್ನು ಒಳಗೊಂಡಿರುವ ಬ್ಯಾಂಕಿಂಗ್ ವಲಯವನ್ನು ಟ್ರ್ಯಾಕ್ ಮಾಡುವ ನಿಫ್ಟಿ ಬ್ಯಾಂಕ್ ಸೂಚ್ಯಂಕವು 263.55 ಪಾಯಿಂಟ್‌ಗಳು ಅಥವಾ 0.56 ಶೇಕಡ 46,600.20 ಕ್ಕೆ ಸ್ಥಿರವಾಯಿತು.
ವಿಶಾಲ ಮಾರುಕಟ್ಟೆ ವಲಯದಿಂದ ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ಸ್ಮಾಲ್‌ಕ್ಯಾಪ್ 100 ಸೂಚ್ಯಂಕಗಳು ಕ್ರಮವಾಗಿ ಶೇಕಡಾ 1.05 ಮತ್ತು 0.41 ರಷ್ಟು ಗಳಿಸಿವೆ. ಸೆನ್ಸೆಕ್ಸ್ ವಲಯದಿಂದ ಪವರ್‌ಗ್ರಿಡ್, ಭಾರ್ತಿ ಏರ್‌ಟೆಲ್, ವಿಪ್ರೋ, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಇನ್ಫೋಸಿಸ್ ಹಿನ್ನಡೆ ಗಳಿಸಿದರೆ. ಬಜಾಜ್ ಫೈನಾನ್ಸ್, ಎಲ್ & ಟಿ, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಟಾಟಾ ಮೋಟಾರ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಲಾಭ ಗಳಿಸಿದವು.
ನಿಫ್ಟಿ 50 ಮತ್ತು ಸೆನ್ಸೆಕ್ಸ್ ಎರಡೂ 2024 ರ ಆರ್ಥಿಕ ವರ್ಷದಲ್ಲಿ ಕ್ರಮವಾಗಿ ಸುಮಾರು ಶೇ 27% ಮತ್ತು 23% ಅನ್ನು ಸೇರಿಸುವ ಮೂಲಕ ನಾಲ್ಕನೇ ನೇರ ತ್ರೈಮಾಸಿಕ ಲಾಭಗಳನ್ನು ದಾಖಲಿಸುವ ಹಾದಿಯಲ್ಲಿವೆ. ವಿದೇಶಿ ಬಂಡವಾಳ ಹೂಡಿಕೆದಾರರು ಮಂಗಳವಾರ ನಿವ್ವಳ ಆಧಾರದ ಮೇಲೆ 101.3 ಮಿಲಿಯನ್ ರೂಪಾಯಿ (ಸುಮಾರು $1.2 ಮಿಲಿಯನ್) ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿವ್ವಳ 50.24 ಶತಕೋಟಿ ರೂಪಾಯಿ ಷೇರುಗಳನ್ನು ಖರೀದಿಸಿದರು.
ಇಂದು ಗಮನಿಸಬಹುದಾದ ಷೇರುಗಳಿವು
* ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ
* ಸಿಪ್ಲಾ, ಸನೋಫಿ ಇಂಡಿಯಾ
* ಸೆಂಟ್ರಲ್ ಡಿಪಾಸಿಟರಿ ಸರ್ವಿಸ್
* ಶ್ಯಾಮ್ ಮೆಟಾಲಿಕ್ಸ್ ಅಂಡ್ ಎನರ್ಜಿ