Opening Bell: ಹಣಕಾಸು ವರ್ಷದ ಅಂತಿಮ ದಿನದ ಸೆಷನ್‌ಗೆ ಭಾರತದ ಷೇರು ಮಾರುಕಟ್ಟೆ ಸಿದ್ದತೆ; ಇಂದು ಗಮನಿಸಬಹುದಾದ ಷೇರುಗಳಿವು
Opening Bell: ಭಾರತದ ಷೇರು ಮಾರುಕಟ್ಟೆ ಹಣಕಾಸು ವರ್ಷದ ಅಂತಿಮ ದಿನದ ವಹಿವಾಟಿಗೆ ಸಿದ್ಧವಾಗುತ್ತಿದೆ. ಇಂದು ಕೊಂಚ ಬದಲಾವಣೆಯೊಂದಿಗೆ ಆರಂಭವಾಗಲು ಸಜ್ಜಾಗಿದೆ. ಬಿಹೆಚ್‌ಇಎಲ್, ಆಲ್ಟ್ರಾಟೆಕ್ ಸಿಮೆಂಟ್ ಸೇರಿದಂತೆ ಇಂದು ಗಮನಿಸಬಹುದಾದ ಷೇರುಗಳಿವು.
ಬೆಂಗಳೂರು: 2024 ರ ಹಣಕಾಸು ವರ್ಷದ ಅಂತಿಮ ವಹಿವಾಟಿನ ದಿನದಂದು ಭಾರತೀಯ ಷೇರುಗಳು ಸ್ವಲ್ಪ ಬದಲಾವಣೆಯಿಂದ ತೆರೆಯುವ ಸಾಧ್ಯತೆಯಿದೆ.
ಗಿಫ್ಟ್ ನಿಫ್ಟಿ ಗುರುವಾರ ಬೆಳಗ್ಗೆ 8:04 ಕ್ಕೆ 22,176 ನಲ್ಲಿ ವಹಿವಾಟು ನಡೆಸುತ್ತಿದೆ, ಇದು ಬ್ಲೂ-ಚಿಪ್ ಎನ್‌ಎಸ್‌ಇ ನಿಫ್ಟಿ 50 ಬುಧವಾರದ ಮುಕ್ತಾಯದ 22,123.65 ರ ಸಮೀಪದಲ್ಲಿ ತೆರೆಯುವ ಮುನ್ಸೂಚನೆ ತೋರುತ್ತಿದೆ.
ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಚೇತರಿಸಿಕೊಂಡವು. 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 526.01 ಪಾಯಿಂಟ್‌ಗಳು ಅಥವಾ 0.73 ಶೇಕಡಾ ಏರಿಕೆಯಾಗಿ 72,996.31 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 118.95 ಪಾಯಿಂಟ್‌ಗಳು ಅಥವಾ 0.54 ಶೇ 22,123.65 ರಷ್ಟು ಲಾಭದೊಂದಿಗೆ ದಿನವಿಡೀ ಉತ್ತಮ ಚಟುವಟಿಕೆಯಿಂದ ಕೂಡಿತ್ತು. 12 ಬ್ಯಾಂಕಿಂಗ್ ಸ್ಟಾಕ್‌ಗಳನ್ನು ಒಳಗೊಂಡಿರುವ ಬ್ಯಾಂಕಿಂಗ್ ವಲಯವನ್ನು ಟ್ರ್ಯಾಕ್ ಮಾಡುವ ನಿಫ್ಟಿ ಬ್ಯಾಂಕ್ ಸೂಚ್ಯಂಕವು 185.75 ಪಾಯಿಂಟ್‌ಗಳನ್ನು ಅಥವಾ 0.40 ಶೇಕಡಾವನ್ನು ಸೇರಿಸಿ 46,785.95 ಕ್ಕೆ ಸ್ಥಿರವಾಯಿತು.
ಬುಧವಾರ ಲಾಭ, ನಷ್ಟ ಕಂಡ ಷೇರುಗಳಿವು
ಸೆನ್ಸೆಕ್ಸ್ ವಲಯದಿಂದ ರಿಲಯನ್ಸ್ ಇಂಡಸ್ಟ್ರೀಸ್ ಶೇ.3.50 ರಷ್ಟು ಲಾಭ ಗಳಿಸಿ ಟಾಪ್ ಗೇನರ್ ಆಗಿದೆ. ಮಾರುತಿ, ಬಜಾಜ್ ಫೈನಾನ್ಸ್, ಟೈಟಾನ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಇತರ ಪ್ರಮುಖ ಲಾಭ ಗಳಿಸಿದವು. ಮತ್ತೊಂದೆಡೆ, ವಿಪ್ರೋ, ಎಚ್‌ಸಿಎಲ್ ಟೆಕ್, ನೆಸ್ಲೆ ಇಂಡಿಯಾ, ಟಿಸಿಎಸ್, ಟಾಟಾ ಮೋಟಾರ್ಸ್ ಮತ್ತು ಬಜಾಜ್ ಫಿನ್‌ಸರ್ವ್ ನಷ್ಟ ಅನುಭವಿಸಿವೆ. ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ವಾಲ್ಯೂಮ್ ಟಾಪರ್‌ಗಳಾಗಿವೆ.
ನಿಫ್ಟಿ 50 ಇಲ್ಲಿಯವರೆಗೆ 2024 ರ ಹಣಕಾಸು ವರ್ಷದಲ್ಲಿ 27.44% ಗಳಿಸಿದೆ, 2021 ಹಣಕಾಸಿನ ವರ್ಷದಿಂದ ಉತ್ತಮ ಆರ್ಥಿಕ ವರ್ಷದ ಕಾರ್ಯಕ್ಷಮತೆ ಮತ್ತು 14 ವರ್ಷಗಳಲ್ಲಿ ಎರಡನೇ ಅತ್ಯುತ್ತಮವಾಗಿ ಸಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ಬುಧವಾರ ನಿವ್ವಳ ಆಧಾರದ ಮೇಲೆ 21.70 ಶತಕೋಟಿ ರೂಪಾಯಿ ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿವ್ವಳ 11.98 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದರು.
ಇಂದು ಗಮನಿಸಬಹುದಾದ ಷೇರುಗಳು
* ಬಿಹೆಚ್‌ಇಎಲ್
* ಅಲ್ಟ್ರಾಟೆಕ್ ಸಿಮೆಂಟ್
* ಜೈದುಸ್ ಲೈಫ್‌ಸೈನ್ಸ್
* ಸೈಯೆಂಟ್
