Opening Bell: ಜಾಗತಿಕ ತಲ್ಲಣಗಳ ನಡುವೆ ಧನಾತ್ಮಕ ಆರಂಭಕ್ಕೆ ಭಾರತದ ಷೇರುಪೇಟೆ ಸಜ್ಜು; ಈ ಷೇರುಗಳ ಮೇಲೆ ಕಣ್ಣಿಟ್ಟಿರಿ
Share Market Opening Bell March 19: ಭಾರತದ ಷೇರು ಮಾರುಕಟ್ಟೆಯು ಮಂಗಳವಾರ (ಮಾರ್ಚ್ 19) ಕೊಂಚ ಬದಲಾವಣೆ ಕಾಣುವ ಮೂಲಕ ದಿನದ ವಹಿವಾಟು ಆರಂಭಿಸುವ ಸಾಧ್ಯತೆ ಕಾಣುತ್ತಿದೆ. ಅಮೆರಿಕ ಹಾಗೂ ಜಪಾನ್ ಕೇಂದ್ರ ಬ್ಯಾಂಕ್ ನೀತಿ ನಿರ್ಧಾರಗಳ ಮೇಲೆ ಹೂಡಿಕೆದಾರರು ದೃಷ್ಟಿ ನೆಟ್ಟಿದ್ದಾರೆ. ಇಂದು ಗಮನಿಸಬಹುದಾದ ಷೇರುಗಳ ವಿವರ ಇಲ್ಲಿದೆ.
ಬೆಂಗಳೂರು: ಭಾರತದ ಷೇರು ಮಾರುಕಟ್ಟೆಯಲ್ಲಿನ ಬದಲಾವಣೆಗಳು ಜಾಗತಿಕ ಅಂಶಗಳ ಮೇಲೂ ಅವಲಂಬಿತವಾಗಿದೆ. ಇಂದು (ಮಾರ್ಚ್ 19) ತುಲನಾತ್ಮಕ ಬದಲಾವಣೆ ಕಾಣದ ಷೇರುಪೇಟೆಯು ಕೊಂಚ ಏರಿಕೆಯೊಂದಿಗೆ ವಹಿವಾಟು ಆರಂಭಿಸುವ ಸಾಧ್ಯತೆ ಕಾಣುತ್ತಿದೆ. ಜಪಾನ್ ಹಾಗೂ ಅಮರಿಕ ಕೇಂದ್ರ ಬ್ಯಾಂಕ್‌ನ ನೀತಿ ನಿರ್ಧಾರಕ್ಕಾಗಿ ಕಾಯುತ್ತಿರುವ ಏಷ್ಯಾದ ಷೇರು ಮಾರುಕಟ್ಟೆಯು ಇಂದು ನೀರಸ ಆರಂಭ ಕಂಡಿದೆ.
ಭಾರತದ ಷೇರುಪೇಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ಗಿಫ್ಟ್ ನಿಫ್ಟಿಯು 22,057ರಲ್ಲಿ ವಹಿವಾಟು ನಡೆಸುತ್ತಿದೆ. ನಿನ್ನೆ (ಮಾರ್ಚ್ 18) ಮುಕ್ತಾಯದ ವೇಳೆಗೆ ನಿಫ್ಟಿ 50ಯು 22,055.70 ಕ್ಕೆ ತಲುಪುವ ಮೂಲಕ ವಹಿವಾಟು ಮುಗಿಸಿತ್ತು. ನಿನ್ನೆ ನಿಫ್ಟಿ 50 ಮತ್ತು ಬಿಎಸ್‌ಇ ಸೆನ್ಸೆಕ್ಸ್ ಎರಡೂ ಸೋಮವಾರ ಶೇ 0.15 ರಷ್ಟು ಲಾಭ ಗಳಿಸಿದ್ದವು.
ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ನಿಫ್ಟಿ 50 ಮಾರ್ಚ್‌ನಲ್ಲಿ ಇದುವರೆಗಿನ 12 ಸೆಷನ್‌ಗಳಲ್ಲಿ 11 ರಲ್ಲಿ ಇಳಿಕೆ ಕಂಡಿತ್ತು. ಸ್ಮಾಲ್ ಅಂಡ್ ಮಿಡ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 7.6 ಮತ್ತು ಶೇ 3.8 ರಷ್ಟು ಕುಸಿದಿವೆ.
ಜಪಾನ್ ಕೇಂದ್ರ ಬ್ಯಾಂಕ್ ನೀತಿ ನಿರ್ಧಾರ ಪ್ರಕಟಕ್ಕೂ ಮುನ್ನ ಏಷ್ಯಾದ ಮಾರುಕಟ್ಟೆಗಳು ಮಂದ ವಹಿವಾಟು ಆರಂಭಿಸಿವೆ. ಕೇಂದ್ರ ಬ್ಯಾಂಕ್ ಋಣಾತ್ಮಕ ಬಡ್ಡಿದರಗಳ ದೀರ್ಘಾವಧಿಯನ್ನು ಕೊನೆಗೊಳಿಸಬಹುದು ಎಂದು ಅಂದಾಜಿಸಲಾಗಿದೆ.
ಅಮೆರಿಕ ಕೇಂದ್ರೀಯ ಬ್ಯಾಂಕ್ ನೀತಿ ನಿರ್ಧಾರ ಮತ್ತು ಉತ್ತಮ ಇಳುವರಿಯ ಕಾರಣ ವಾಲ್‌ಸ್ಟೀಟ್ ಇಕ್ವಿಟಿಗಳು ನಿನ್ನೆ ರಾತ್ರಿ ಉತ್ತಮ ಗಳಿಕೆ ಕಂಡವು. ಹೂಡಿಕೆದಾರರು ಫೆಡ್ ರಿಸರ್ವ್‌ನ ಬಡ್ಡಿದರದ ಮೇಲೆ ಕಣ್ಣಿಟ್ಟಿದ್ದಾರೆ.
ವಿದೇಶಿ ಬಂಡವಾಳ ಹೂಡಿಕೆದಾರರು ಸೋಮವಾರ ನಿವ್ವಳ ಆಧಾರದ ಮೇಲೆ 20.51 ಶತಕೋಟಿ ರೂಪಾಯಿ (247 ಮಿಲಿಯನ್ ಡಾಲರ್) ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿವ್ವಳ 22.61 ಶತಕೋಟಿ ರೂಪಾಯಿ ಷೇರುಗಳನ್ನು ಖರೀದಿಸಿದರು.
ಇಂದು ಗಮನಿಸಬಹುದಾದ ಷೇರುಗಳು
* ಟಾಟಾ ಕನ್ಸ್‌ಲ್ಟೆನ್ಸಿ ಸರ್ವೀಸ್
* ಟಾಟಾ ಸ್ಟೀಲ್
* ಎಚ್‌ಇ ಇನ್ಫ್ರಾ ಎಂಜಿನಿಯರಿಂಗ್
* ಪರದೀಪ್ ಫಾಸ್ಫೇಟ್ಸ್
