Opening Bell: ಫೆಡ್ ನೀತಿ ನಿರ್ಧಾರದ ಮೇಲೆ ಗಮನ; ಭಾರತದ ಷೇರುಪೇಟೆ ಉತ್ತಮ ಆರಂಭ ಕಾಣುವ ಸಾಧ್ಯತೆ; ಈ ಷೇರುಗಳನ್ನು ಗಮನಿಸಿ
Stock Market Opening Bell: ಭಾರತದ ಷೇರುಪೇಟೆ ಬುಧವಾರ (ಮಾರ್ಚ್ 20) ಉತ್ತಮ ಆರಂಭ ಕಾಣುವ ಸಾಧ್ಯತೆ ಇದೆ. ಏಷ್ಯಾದ ಮಾರುಕಟ್ಟೆಯಲ್ಲಿ ಧನಾತ್ಮಕ ಸಂಚಲನ ಉಂಟಾಗಿದ್ದು, ಅಮೆರಿಕ ಕೇಂದ್ರಿಯ ಬ್ಯಾಂಕ್ ನೀತಿ ನಿರ್ಧಾರಗಳ ಮೇಲೆ ಜಾಗತಿಕ ಹೂಡಿಕೆದಾರರು ದೃಷ್ಟಿ ನೆಟ್ಟಿದ್ದಾರೆ. ಇಂದು ಯಾವೆಲ್ಲಾ ಕಂಪನಿಯ ಷೇರುಗಳನ್ನು ಗಮನಿಸಬಹುದು ನೋಡಿ.

ಬೆಂಗಳೂರು: ಭಾರತದ ಷೇರುಪೇಟೆಯಲ್ಲಿ ಈ ವಾರ ತಲ್ಲಣ ಹೆಚ್ಚಿದೆ. ಬಹುತೇಕ ನೀರಸ ವಹಿವಾಟು ನಡೆದಿದ್ದು, ಇಂದು (ಮಾರ್ಚ್ 20) ಆರಂಭದಲ್ಲೇ ಧನಾತ್ಮಕ ಸೂಚನೆ ಸಿಕ್ಕಿದೆ. ನಿನ್ನೆ ಕಳೆದ 5 ವಾರಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಭಾರತ ಷೇರು ಮಾರುಕಟ್ಟೆಯು ಹೂಡಿಕೆದಾರರ ಜೇಬು ಖಾಲಿಯಾಗುವಂತೆ ಮಾಡಿತ್ತು. ಇಂದು ಕೊಂಚ ಲಾಭ ಗಳಿಸುವ ಸೂಚನೆ ಕಾಣುತ್ತಿದ್ದು, ಹೂಡಿಕೆದಾರರು ದಿನದ ವಹಿವಾಟಿನ ಮೇಲೆ ಗಮನ ಹರಿಸಿದ್ದಾರೆ.
ಭಾರತದ ಷೇರುಪೇಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ಗಿಫ್ಟ್ ನಿಪ್ಟಿಯು ಇಂದು 21,934 ರಲ್ಲಿ ವಹಿವಾಟು ನಡೆಸುತ್ತಿದೆ. ಮಂಗಳವಾರ (ಮಾರ್ಚ್ 19) ಮುಕ್ತಾಯದ ವೇಳೆಗೆ ನಿಫ್ಟಿ 50ಯು 21,817.45 ಕ್ಕೆ ತಲುಪುವ ಮೂಲಕ ದಿನದ ವಹಿವಾಟು ಮುಗಿಸಿತ್ತು. ನಿನ್ನೆ ಮಾಹಿತಿ ತಂತ್ರಜ್ಞಾನ ಸೂಚ್ಯಂಕವು ಸುಮಾರು ಶೇ 3ರ ಷ್ಟು ಕುಸಿದಿದ್ದು, ಪರಿಣಾಮ ನಿಫ್ಟಿ 50 ಮತ್ತು ಬಿಎಸ್‌ಇ ಸೆನ್ಸೆಕ್ಸ್ ಎರಡೂ ಸುಮಾರು ಶೇ 1 ನಷ್ಟು ಕಳೆದುಕೊಂಡವು.
ಸ್ಮಾಲ್ ಕ್ಯಾಪ್ ಹಾಗೂ ಮಿಡ್ ಕ್ಯಾಪ್ ಸೂಚ್ಯಂಕಗಳು ಮಾರ್ಚ್‌ನಲ್ಲಿ ಕ್ರಮವಾಗಿ ಶೇ 8.7 ಮತ್ತು ಶೇ 5 ರಷ್ಟು ಇಳಿಕೆ ಕಂಡಿದೆ.
ಎಂಎಸ್‌ಸಿಐ ಏಷ್ಯಾ ಎಕ್ಸ್-ಜಪಾನ್ ಸೂಚ್ಯಂಕವು ಶೇ 0.35 ಅನ್ನು ಏರಿಕೆಯಾಗುವ ಮೂಲಕ ಏಷ್ಯನ್ ಮಾರುಕಟ್ಟೆಗಳು ಧನಾತ್ಮಕ ಆರಂಭ ಕಂಡವು. ವಾಲ್‌ಸ್ಟ್ರೀಟ್ ಷೇರುಗಳು ರಾತ್ರೋರಾತ್ರಿ ಲಾಭ ಗಳಿಸುವ ಮೂಲಕ ವಹಿವಾಟು ಮುಗಿಸಿದವು.
ವಿದೇಶಿ ಬಂಡವಾಳ ಹೂಡಿಕೆದಾರರು ಮಂಗಳವಾರ ನಿವ್ವಳ ಆಧಾರದ ಮೇಲೆ 14.21 ಬಿಲಿಯನ್ ರೂಪಾಯಿ (171 ಮಿಲಿಯನ್ ಡಾಲರ್) ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿವ್ವಳ 74.50 ಶತಕೋಟಿ ರೂಪಾಯಿಗಳ ಷೇರುಗಳನ್ನು ಸೇರಿಸಿದ್ದಾರೆ.
ಗಮನಿಸಬಹುದಾದ ಷೇರುಗಳಿವು
* ಅಲ್ಟ್ರಾಟೆಕ್ ಸಿಮೆಂಟ್
* ಅರಬಿಂದೋ ಫಾರ್ಮಾ
* ಐನಾಕ್ಸ್ ಗ್ರೀನ್ ಎನರ್ಜಿ
