Opening Bell: ಫೆಬ್ರವರಿ ತಿಂಗಳಲ್ಲಿ ಲಾಭಕ್ಕಿಂತ ನಷ್ಟ ಕಂಡಿದ್ದೇ ಹೆಚ್ಚು, ಷೇರುಪೇಟೆಗೆ ಇಂದೂ ಮೋಡ ಕವಿದ ವಾತಾವಣ; ಗಮನಿಸಬಹುದಾದ ಷೇರುಗಳಿವು
Opeing Bell: ಫೆಬ್ರವರಿ ತಿಂಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟವೇ ಕಂಡ ಭಾರತದ ಷೇರು ಮಾರುಕಟ್ಟೆ ತಿಂಗಳ ಕೊನೆಯಲ್ಲಿ ಕೂಡಾ ನೀರಸ ಆರಂಭ ಕಾಣುತ್ತಿದೆ. ಯುಪಿಎಲ್, ಶ್ರೀರಾಮ್ ಫೈನಾನ್ಸ್ ಕೋಲ್ ಇಂಡಿಯಾ ಸೇರಿದಂತೆ ಇಂದು ಈ 4 ಷೇರುಗಳ ಮೇಲೆ ಹೂಡಿಕೆದಾರರು ಗಮನ ಕೇಂದ್ರೀಕರಿಸಿದ್ದಾರೆ.

ಬೆಂಗಳೂರು: ಫೆಬ್ರವರಿ ತಿಂಗಳಲ್ಲಿ ಹೇಳಿಕೊಳ್ಳುವಂಥ ಲಾಭ ಕಾಣದ ಭಾರತೀಯ ಷೇರು ಮಾರುಕಟ್ಟೆ ಮಾಸಾಂತ್ಯದಲ್ಲಿ ಕೂಡಾ ನೀರಸ ಆರಂಭಕ್ಕೆ ಮುನ್ನುಡಿ ಬರೆಯುತ್ತಿದೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ ಜೊತೆಗೆ ಸಣ್ಣ ಮತ್ತು ಮಧ್ಯಮ-ಕ್ಯಾಪ್ ಷೇರುಗಳನ್ನು ಇಂದು ಕೇಂದ್ರೀಕರಿಸಲಾಗುತ್ತದೆ.
ಭಾರತದ ಗಿಫ್ಟ್ ನಿಫ್ಟಿ ಇಂದು ಬೆಳಗ್ಗೆ 8:01 ಕ್ಕೆ 21,948 ನಲ್ಲಿ ವಹಿವಾಟು ನಡೆಸುತ್ತಿದೆ, ಎನ್‌ಎಸ್‌ಇ ನಿಫ್ಟಿ 50 ಬುಧವಾರದ ಮುಕ್ತಾಯದ 21,951.15 ರ ಸಮೀಪದಲ್ಲಿ ತೆರೆಯುವ ಸೂಚನೆಯಿದೆ. ಆದರೂ ನಿಫ್ಟಿ ಮತ್ತು ಬಿಎಸ್ಇ ಸೆನ್ಸೆಕ್ಸ್ ಸಾಪ್ತಾಹಿಕ ಕುಸಿತದ ಹಾದಿಯಲ್ಲಿವೆ, ಎರಡು ವಾರಗಳ ಲಾಭದ ನಂತರ ಈ ವಾರ ಸುಮಾರು ಶೇ 1.2% ಕುಸಿದಿದೆ. ಬುಧವಾರ ಮುಕ್ತಾಯದ ವೇಳೆಗೆ ಜಾಗತಿಕ ಮಾರುಕಟ್ಟೆಯ ಮಿಶ್ರ ಸೂಚನೆಗಳ ನಡುವೆ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಶೇ 1ಕ್ಕಿಂದ ಹೆಚ್ಚು ಕುಸಿತ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಹೆವಿ ವೇಯ್ಟ್‌ಗಳಲ್ಲಿ ಮಾರಾಟವು ದುರ್ಬಲ ಆವೇಗವನ್ನು ಹೆಚ್ಚಿಸಿದೆ.
30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 790.34 ಪಾಯಿಂಟ್ ಅಥವಾ 1.08 ಶೇಕಡಾ ಕುಸಿದು 72,304.88 ಕ್ಕೆ ತಲುಪಿದೆ. ನಿಫ್ಟಿ 50 ಸೂಚ್ಯಂಕವು 247.20 ಪಾಯಿಂಟ್‌ಗಳು ಅಥವಾ 1.11 ಶೇಕಡಾ ಇಳಿಕೆಯಾಗಿ 21,951.15 ಕ್ಕೆ ಕೊನೆಗೊಂಡಿತ್ತು. ಬುಧವಾರ ಎಚ್‌ಯುಎಲ್, ಏರ್‌ಟೆಲ್, ಇನ್ಫೋಸಿಸ್ ಮತ್ತು ಟಿಸಿಎಸ್ ಮಾತ್ರ ಲಾಭ ಗಳಿಸಿದವು. ಪವರ್‌ಗ್ರಿಡ್, ಬಜಾಜ್ ಆಟೋ, ಅಪೊಲೊ ಹಾಸ್ಪಿಟಲ್ಸ್, ಐಷರ್ ಮೋಟಾರ್ಸ್, ಇಂಡಸ್‌ಇಂಡ್ ಬ್ಯಾಂಕ್, ಮಾರುತಿ, ವಿಪ್ರೋ, ಬಿಪಿಸಿಎಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್, ಎಂಆಂಡ್ ಎಂ ಮತ್ತು ಯುಪಿಎಲ್ ಶೇ.2ರಿಂದ 4.220ರಷ್ಟು ಕುಸಿತ ಕಂಡವು.
ಏಷ್ಯನ್ ಮಾರುಕಟ್ಟೆ ಕೂಡಾ ನೀರಸ ಆರಂಭ ಕಂಡರೆ ವಾಲ್ ಸ್ಟ್ರೀಟ್ ಷೇರುಗಳು ರಾತ್ರಿಯಿಡೀ ನಷ್ಟ ಅನುಭವಿಸಿವೆ. ವಿದೇಶಿ ಹೂಡಿಕೆದಾರರು ಬುಧವಾರ 18.79 ಶತಕೋಟಿ ರೂಪಾಯಿ (~ $227 ಮಿಲಿಯನ್) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ, ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು 18.27 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಇಂದು ಗಮನಿಸಬಹುದಾದ ಷೇರುಗಳಿವು
* ಯುಪಿಎಲ್, ಶ್ರೀರಾಮ್ ಫೈನಾನ್ಸ್
* ಕೋಲ್ ಇಂಡಿಯಾ
*PB ಫಿನ್‌ಟೆಕ್
*ICICI ಸೆಕ್ಯುರಿಟೀಸ್
