Opening Bell: ಜಾಗತಿಕ ಮಾರುಕಟ್ಟೆಯ ಪ್ರಭಾವ, ಭಾರತದ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿದ ಉತ್ಸಾಹ
Opening Bell: ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಇಂದು ಭಾರತದ ಷೇರು ಮಾರುಕಟ್ಟೆಯು ಉತ್ತಮ ಆರಂಭದ ಮುನ್ಸೂಚನೆ ತೋರಿದೆ. ವಿಶ್ಲೇಷಕರ ಪ್ರಕಾರ ಇಂದು ಗಮನಿಸಬಹುದಾದ ಷೇರುಗಳ ಬಗ್ಗೆ ಮಾಹಿತಿ ಇಲ್ಲಿದೆ.
Opening Bell: ಅಮೆರಿಕ ಕೇಂದ್ರೀಯ ಬ್ಯಾಂಕ್ ಬಡ್ಡಿದರ ಕಡಿತದ ಬಗ್ಗೆ ಮಾಹಿತಿ ನೀಡಿದ್ದು ಏಷ್ಯನ್ ಸಹವರ್ತಿಗಳು ಲಾಭ ಗಳಿಸುವ ಮೂಲಕ ಭಾರತದ ನಿಫ್ಟಿ 50 ಬುಧವಾರ ಉತ್ತಮ ಆರಂಭದ ಮುನ್ಸೂಚನೆ ತೋರಿಸುತ್ತಿದೆ. ಭಾರತದ ಗಿಫ್ಟ್ ನಿಫ್ಟಿಯು ಇಂದು 21,550 ರಲ್ಲಿ ವಹಿವಾಟು ನಡೆಸುತ್ತಿದೆ.
ಮಂಗಳವಾರ ಮುಕ್ತಾಯದ ವೇಳೆಗೆ ಎನ್ಎಸ್ಇ ನಿಫ್ಟಿ - 21,453, ನಿಫ್ಟಿ ಬ್ಯಾಂಕ್ - 47,774 ಹಾಗೂ ನಿಫ್ಟಿ ಮಿಡ್ಕ್ಯಾಪ್- 45,376 ಏರಿಕೆಯಾಗಿತ್ತು. ನಿನ್ನೆ ದಿವಿಸ್ ಲ್ಯಾಬೊರೇಟರೀಸ್ ಲಿಮಿಟೆಡ್, ಹೀರೋ ಮೋಟೋಕಾರ್ಪ್, ವಿಪ್ರೋ, ಎನ್‌ಟಿಪಿಸಿ ಮತ್ತು ಕೋಟಕ್ ಮಹೀಂದ್ರಾ ಇಂದು ಲಾಭ ಗಳಿಸಿದ್ದರೆ. ಬಜಾಜ್ ಫೈನಾನ್ಸ್ ಮತ್ತು ಇನ್ಫೋಸಿಸ್ ಷೇರುಗಳು ನಷ್ಟ ಅನುಭವಿಸಿದ್ದವು ಇಂಟ್ರಾಡೇ ವಹಿವಾಟಿನಲ್ಲಿ ಏಷಿಯನ್ ಗ್ರ್ಯಾನಿಟೋ ಶೇ.9ರಷ್ಟು ಲಾಭ ಕಂಡಿತ್ತು.
ಷೇರು ಮಾರುಕಟ್ಟೆ ವಿಶ್ಲೇಷಕರು, 2023 ರ ಕೊನೆಯ ವಾರದಲ್ಲಿ ಕೆಲವು ಹೂಡಿಕೆದಾರರು ಲಾಭವನ್ನು ಕಾಯ್ದಿರಿಸುವುದರೊಂದಿಗೆ ಮಾರುಕಟ್ಟೆಯನ್ನು ಕ್ರೋಢೀಕರಿಸುತ್ತಾರೆ ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಆದರೂ ಈಕ್ವಿಟಿಗಳು ವರ್ಷಾಂತ್ಯದಲ್ಲಿ ಸಕಾರಾತ್ಮಕ ಟಿಪ್ಪಣಿ ಮೂಲಕ ಕೊನೆಗೊಳಿಸುವ ನಿರೀಕ್ಷೆಯಿದೆ. ಈ ತಿಂಗಳು ಇದುವರೆಗೂ ಸೂಚ್ಯಂಕಗಳು ಶೇ ಶೇ 6.5 ರಷ್ಟು ಗಳಿಸಿವೆ. ಬಲವಾದ ದೇಶೀಯ ಸ್ಥೂಲ ಆರ್ಥಿಕ ಡೇಟಾ, ವಿದೇಶಿ ಒಳಹರಿವಿನ ಹಿಂತಿರುಗುವಿಕೆ ಮತ್ತು ತೈಲ ಬೆಲೆಗಳಲ್ಲಿನ ಕಡಿತ ಇದಕ್ಕೆ ಕಾರಣವಾಗಿದೆ.
ಕೇಂದ್ರೀಯ ಬ್ಯಾಂಕ್, ಮಾರ್ಚ್‌ನಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸಲು ಪ್ರಾರಂಭಿಸುತ್ತದೆ ಎಂಬ ನಿರೀಕ್ಷೆಯ ಮೇಲೆ ವಾಲ್‌ಸ್ಟ್ರೀಟ್ ಇಕ್ವಿಟಿ ಸತತ ಲಾಭಗಳಿಸುವ ಮೂಲಕ ವಹಿವಾಟು ನಡೆಸಿತ್ತು. ಜಪಾನ್ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳ ಎಂಎಸ್‌ಸಿಐ ಸೂಚ್ಯಂಕವು ಶೇ 0.65 ಏರಿಕೆಯೊಂದಿಗೆ ಬುಧವಾರದಂದು ಹೆಚ್ಚಿನ ಏಷ್ಯಾದ ಷೇರುಗಳು ಏರಿಕೆ ಕಂಡಿದೆ.
ಇಂದು ಗಮನಿಸಬಹುದಾದ ಷೇರುಗಳು
* ಜೀ ಲರ್ನ್
* ಅದಾನಿ ಎನರ್ಜಿ ಸೆಲ್ಯೂಷನ್ಸ್
*ಎಸ್‌ಜೆವಿಎನ್