ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಭಾಷಣದಲ್ಲಿ ಹೇಳಿದ ಈ 6 ಅಂಶಗಳನ್ನು ಗಮನಿಸಿದ್ರಾ..
ಲೋಕಸಭೆ ಚುನಾವಣಾ ಪೂರ್ವ ಬಜೆಟ್ ಮಂಡನೆಯಾಗಿದೆ. ಫೆ.9ರ ತನಕ ಸಂಸತ್ ಅಧಿವೇಶನ ನಡೆಯಲಿದ್ದು, ಶೀಘ್ರವೇ ಲೋಕಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಭಾಷಣದಲ್ಲಿ ಹೇಳಿದ ಈ 6 ಅಂಶಗಳನ್ನು ಗಮನಿಸಿದಿರಾ..
ಲೋಕಸಭೆ ಚುನಾವಣಾ ಪೂರ್ವ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಭವಿಷ್ಯದ ಭಾರತಕ್ಕಾಗಿ ಅನೇಕ ಮೂಲಸೌಕರ್ಯಗಳ ಯೋಜನೆ, ಉಪಕ್ರಮಗಳನ್ನು ಘೋಷಿಸಿದರು.
ಈ ಸರ್ಕಾರದ ಕೊನೆಯ ಬಜೆಟ್ ಇದಾಗಿದ್ದು, ಶೀಘ್ರದಲ್ಲೇ ಲೋಕಸಭೆ ಚುನಾವಣೆ ನಡೆಯಲಿದೆ. ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಮೂಲಸೌಕರ್ಯ ವೆಚ್ಚಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದು, ಮುಂದೆ ಸರ್ಕಾರದ ಸುವರ್ಣ ಕ್ಷಣಗಳನ್ನು ನೆನಪಿಸಿಕೊಂಡರು.
ಜನರು ತಮ್ಮ ಸ್ವಂತ ಮನೆಗಳನ್ನು ಖರೀದಿಸಲು ಅಥವಾ ನಿರ್ಮಿಸಲು ಅವಕಾಶ ನೀಡುವ ಯೋಜನೆಯನ್ನು ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್, ಹೊಸ ಮೇಲ್ಛಾವಣಿ ಸೌರ ಕಾರ್ಯಕ್ರಮದ ಭಾಗವಾಗಿ ಉಚಿತ ವಿದ್ಯುತ್ ಮತ್ತು ಕೆಲವು ಸರ್ಕಾರಿ ನೌಕರರಿಗೆ ವೈದ್ಯಕೀಯ ರಕ್ಷಣೆಯ ಮಿತಿ ಹೆಚ್ಚಿಸಿರುವುದಾಗಿ ಘೋಷಿಸಿದರು.
ಕೃಷಿ ಮತ್ತು ತೆರಿಗೆ ವಿಚಾರದಲ್ಲಿ ಪರಿಹಾರವಿದೆ ನೋಡಿ
ದೇಶದಲ್ಲಿ ಹಾಲು ಮತ್ತು ಡೈರಿ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಗಳನ್ನು ಘೋಷಿಸಿದ ವಿತ್ತ ಸಚಿವರು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಆದರೆ ಕಡಿಮೆ ಉತ್ಪಾದಕತೆ ಇದೆ ಎಂಬುದರ ಕಡೆಗೆ ಗಮನಸೆಳೆದರು. ಎಣ್ಣೆಕಾಳುಗಳ ಉತ್ಪಾದನೆಗೆ ಆತ್ಮ ನಿರ್ಭರತಾ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಕೃಷಿ ವಲಯದಲ್ಲಿ ಮೌಲ್ಯವರ್ಧನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಹೆಚ್ಚಿಸಲಾಗುವುದು ಎಂದು ಸಚಿವರು ಹೇಳಿದರು.
ಇದು ಮಧ್ಯಂತರ ಬಜೆಟ್ ಆದ ಕಾರಣ ಸಂಪ್ರದಾಯಕ್ಕೆ ಅನುಗುಣವಾಗಿ, ತೆರಿಗೆಗೆ ಸಂಬಂಧಿಸಿ ಯಾವುದೇ ಬದಲಾವಣೆಗಳನ್ನು ಮಾಡಲು ನಾನು ಪ್ರಸ್ತಾಪಿಸುವುದಿಲ್ಲ. ಆಮದು ಸುಂಕಗಳು ಸೇರಿದಂತೆ ತೆರಿಗೆಗಳು ವಿಶೇಷವಾಗಿ ನೇರ ಮತ್ತು ಪರೋಕ್ಷ ತೆರಿಗೆ ದರಗಳನ್ನು ಉಳಿಸಿಕೊಳ್ಳಲು ಪ್ರಸ್ತಾಪಿಸುತ್ತೇನೆ. ಆದಾಗ್ಯೂ, ಸಾರ್ವಭೌಮ ಸಂಪತ್ತು ಅಥವಾ ಪಿಂಚಣಿ ನಿಧಿಗಳಿಂದ ಮಾಡಿದ ಸ್ಟಾರ್ಟಪ್‌ಗಳು ಮತ್ತು ಹೂಡಿಕೆಗಳಿಗೆ ಕೆಲವು ತೆರಿಗೆ ಪ್ರಯೋಜನಗಳು ಮತ್ತು ಕೆಲವು ಐಎಫ್‌ಎಸ್‌ಸಿ ಘಟಕಗಳ ಕೆಲವು ಆದಾಯದ ಮೇಲಿನ ತೆರಿಗೆ ವಿನಾಯಿತಿ ಮಾರ್ಚ್ 31 2024 ರಂದು ಮುಕ್ತಾಯಗೊಳ್ಳಲಿದೆ. ಇದನ್ನು 2025ರ ಮಾರ್ಚ್ 31ರ ತನಕ ವಿಸ್ತರಿಸಲಾಗುತ್ತದೆ ಎಂದು ವಿತ್ತ ಸಚಿವರು ಹೇಳಿದರು.
ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ 6 ಮುಖ್ಯ ಅಂಶಗಳು
1) ಹಣಕಾಸು ವರ್ಷ 2024ರಲ್ಲಿ ನಿರೀಕ್ಷಿತಕ್ಕಿಂತ ಕಡಿಮೆ ವಿತ್ತೀಯ ಕೊರತೆ ಅಂದರೆ ಜಿಡಿಪಿಯ ಶೇಕಡ 5.8 ರಷ್ಟು ಮತ್ತು ಮುಂದಿನ ವರ್ಷ ಅಂದಾಜು 5.1 ರಷ್ಟು ಇರಲಿದೆ ಎಂದು ವಿತ್ತ ಸಚಿವರು ಹೇಳಿದರು. ಈ ಮೂಲಕ ವಿತ್ತೀಯ ವಿವೇಕವನ್ನು ಪ್ರದರ್ಶಿಸಿದ್ದಾರೆ.
2) ಯಾವುದೇ ಜನಪ್ರಿಯ ಯೋಜನೆ, ಉಪಕ್ರಮಗಳ ಘೋಷಣೆ ಅಥವಾ ದೊಡ್ಡ ಮಟ್ಟದ ಗ್ರಾಮೀಣ ಉಪಕ್ರಮಗಳಿಲ್ಲ. ಆದರೆ ಅವರು ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ಬಡವರಿಗೆ 2 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಿದರು. ಸರ್ಕಾರವು 3 ಕೋಟಿ ಕೈಗೆಟುಕುವ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಸಾಧಿಸಲಿದೆ ಎಂದು ಸೀತಾರಾಮನ್ ಹೇಳಿದರು
3) 2024-25ರಲ್ಲಿ ದೇಶದ ಬಂಡವಾಳ ವೆಚ್ಚವನ್ನು ಶೇ.11 ರಷ್ಟು ಏರಿಕೆ ಮಾಡಿದ್ದು, 11.11 ಲಕ್ಷ ಕೋಟಿ ರೂಪಾಯಿಗೆೆ ಹೆಚ್ಚಿಸಲಾಗಿದೆ. ಇದು ಜಿಡಿಪಿಯ ಶೇ.3.4 ಕ್ಕೆ ಹೆಚ್ಚಿಸಿದಂತಾಗಿದೆ. ಜನರ ನಿಜ ಆದಾಯ ಶೇಕಡ 50 ಹೆಚ್ಚಳವಾಗಿದೆ.
4) ನೇರ ಮತ್ತು ಪರೋಕ್ಷೆ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ರೀತಿ ಆದಾಯ ತೆರಿಗೆ ವ್ಯವಸ್ಥೆಯಲ್ಲೂ ಬದಲಾವಣೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
5) ಸರ್ಕಾರವು 50 ರಷ್ಟು 50 ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ 1 ಲಕ್ಷ ಕೋಟಿ ರೂಪಾಯಿ ಕಾರ್ಪಸ್ ಅನ್ನು ಸ್ಥಾಪಿಸುತ್ತದೆ. ದೀರ್ಘಾವಧಿಯ ಹಣಕಾಸು ಅಥವಾ ದೀರ್ಘಾವಧಿಯ ಹಣಕಾಸು ಅಥವಾ ದೀರ್ಘಾವಧಿ ಮತ್ತು ಕಡಿಮೆ ಅಥವಾ ಶೂನ್ಯ ಬಡ್ಡಿ ದರಗಳೊಂದಿಗೆ ಮರುಹಣಕಾಸು ಹೊಂದಿಸುವ ಗುರಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.