ಆಪಲ್ ಫೋನ್ ಖರೀದಿಸುವಾಸೆಯೇ, ಇಲ್ಲಿದೆ ಖುಷಿ ಸುದ್ದಿ, ಐಫೋನ್‌ ಈಗ ಅಗ್ಗ; 6000 ರೂಪಾಯಿ ತನಕ ದರ ಇಳಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಪಲ್ ಫೋನ್ ಖರೀದಿಸುವಾಸೆಯೇ, ಇಲ್ಲಿದೆ ಖುಷಿ ಸುದ್ದಿ, ಐಫೋನ್‌ ಈಗ ಅಗ್ಗ; 6000 ರೂಪಾಯಿ ತನಕ ದರ ಇಳಿಕೆ

ಆಪಲ್ ಫೋನ್ ಖರೀದಿಸುವಾಸೆಯೇ, ಇಲ್ಲಿದೆ ಖುಷಿ ಸುದ್ದಿ, ಐಫೋನ್‌ ಈಗ ಅಗ್ಗ; 6000 ರೂಪಾಯಿ ತನಕ ದರ ಇಳಿಕೆ

ಐಫೋನ್ ಖರೀದಿಸಬೇಕು ಎಂಬ ಆಸೆ ಬಹಳಷ್ಟು ಜನಕ್ಕೆ. ಹಾಗೆ, ಆಪಲ್ ಫೋನ್ ಖರೀದಿಸುವಾಸೆಯೇ, ಇಲ್ಲಿದೆ ಖುಷಿ ಸುದ್ದಿ ಇಲ್ಲಿದೆ. ಐಫೋನ್‌ ಈಗ ಅಗ್ಗವಾಗಿದ್ದು, 6000 ರೂಪಾಯಿ ತನಕ ದರ ಇಳಿಕೆಯನ್ನು ಕಂಪನಿ ಘೋಷಿಸಿದೆ.

ಆಪಲ್ ಫೋನ್ ಖರೀದಿಸುವಾಸೆಯೇ, ಇಲ್ಲಿದೆ ಖುಷಿ ಸುದ್ದಿ, ಐಫೋನ್‌ ಈಗ ಅಗ್ಗವಾಗಿದ್ದು, 6000 ರೂಪಾಯಿ ತನಕ ದರ ಇಳಿಕೆಯನ್ನು ಕಂಪನಿ ಘೋಷಿಸಿದೆ.
ಆಪಲ್ ಫೋನ್ ಖರೀದಿಸುವಾಸೆಯೇ, ಇಲ್ಲಿದೆ ಖುಷಿ ಸುದ್ದಿ, ಐಫೋನ್‌ ಈಗ ಅಗ್ಗವಾಗಿದ್ದು, 6000 ರೂಪಾಯಿ ತನಕ ದರ ಇಳಿಕೆಯನ್ನು ಕಂಪನಿ ಘೋಷಿಸಿದೆ.

ನವದೆಹಲಿ: ಆಪಲ್ ಫೋನ್ ಖರೀದಿಸಬೇಕು ಎಂದು ಆಸೆ ಪಡುತ್ತಿರುವವರಿಗೆ ಒಂದು ಖುಷಿ ಸುದ್ದಿ. ಆಪಲ್ ಕಂಪನಿ ತನ್ನ ಎಲ್ಲ ಐಫೋನ್‌ಗಳ ಬೆಲೆಗಳನ್ನು ಶೇಕಡಾ 3-4 ರಷ್ಟು ಕಡಿತಗೊಳಿಸಿದೆ. ಪ್ರೊ ಅಥವಾ ಪ್ರೊ ಮ್ಯಾಕ್ಸ್ ಮಾದರಿಯನ್ನು ಖರೀದಿಸಿದರೆ 5100 ರೂಪಾಯಿಯಿಂದ 6000 ರೂಪಾಯಿ ತನಕ ರಿಯಾಯಿತಿ ಪಡೆಯಬಹುದು. ಐಫೋನ್‌ 13, 14 ಮತ್ತು 15 ಸೇರಿ ಎಲ್ಲ ಮಾದರಿಯ ಐಫೋನ್‌ಗಳು ಕನಿಷ್ಠ 300 ರೂಪಾಯಿ ಅಗ್ಗವಾಗಿದ್ದು, ಐಫೋನ್‌ ಎಸ್‌ಇ 2,300 ರೂಪಾಯಿ ಅಗ್ಗವಾಗಿದೆ ಎಂದು ಕಂಪನಿ ತಿಳಿಸಿದೆ.

ಹಳೆಯ ಪ್ರೋ ಮಾದರಿ ಐಫೋನ್‌ಗಳ ಮೇಲಿನ ರಿಯಾಯಿತಿಯನ್ನು ಡೀಲರ್‌ಗಳು, ಮರು ಮಾರಾಟಗಾರರು ತಮ್ಮ ಬಳಿ ಇರುವ ಸ್ಟಾಕ್ ಖಾಲಿ ಮಾಡುವುದಕ್ಕಾಗಿ ನೀಡುತ್ತ ಬರುವುದು ನಡೆದುಬಂದಿದೆ. ಸಾಮಾನ್ಯವಾಗಿ ಹೊಸ ಪ್ರೋ ಮಾದರಿ ಐಫೋನ್‌ಗಳನ್ನು ಮಾರುಕಟ್ಟೆಗೆ ಬಿಟ್ಟ ಬಳಿಕ, ಹಳೆಯ ಪ್ರೋ ಮಾದರಿ ಐಫೋನ್‌ಗಳನ್ನು ಕಂಪನಿ ಮುಂದುವರಿಸುವುದಿಲ್ಲ. ಇದೇ ಮೊದಲ ಸಲ ಆಪಲ್ ತನ್ನ ಪ್ರೋ ಮಾದರಿಯ ಫೋನ್‌ಗಳ ದರ ಇಳಿಕೆ ಮಾಡಿರುವಂಥದ್ದು ಎಂದು ಎಕನಾಮಿಕ್ ಟೈಮ್ಸ್ ಪರಿಣತರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಪ್ರೋ ಮಾದರಿ ಐಫೋನ್‌ಗಳ ದರ ಇಳಿಕೆ ಯಾಕೆ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರ ಬಜೆಟ್‌ ಭಾಷಣದಲ್ಲಿ (ಕೇಂದ್ರ ಬಜೆಟ್ 2024 25) ಮೊಬೈಲ್ ಫೋನ್‌ಗಳ ಮೇಲಿನ ಮೂಲ ಸೀಮಾ ಸುಂಕವನ್ನು ಶೇಕಡ 20 ರಿಂದ ಶೇಕಡ 15ಕ್ಕೆ ಇಳಿಸಿದ್ದರು. ಇದಲ್ಲದೆ, ಮೊಬೈಲ್ ಫೋನ್ ಸರ್ಕ್ಯೂಟ್ ಬೋರ್ಡ್‌ ಅಸೆಂಬ್ಲಿ, ಮೊಬೈಲ್ ಫೋನ್ ಚಾರ್ಜರ್‌ಗಳ ಮೇಲಿನ ಸೀಮಾ ಸುಂಕವನ್ನು ಕಡಿಮೆ ಮಾಡಿದ್ದರು.

ಇದೇ ಕಾರಣಕ್ಕೆ ಆಪಲ್ ಕಂಪನಿ ತನ್ನ ಪ್ರೋ ಮಾದರಿ ಐಫೋನ್‌ಗಳ ದರವನ್ನು ಇಳಿಕೆ ಮಾಡಿದೆ. ಹೀಗಾಗಿ, ಪ್ರೋ ಮಾದರಿ ಐಫೋನ್‌ಗಳ ದರ 6,000 ರೂಪಾಯಿ ತನಕ ಇಳಿಕೆಯಾಗಿದೆ.

ಸ್ಮಾರ್ಟ್‌ಫೋನ್‌ಗಳ ಮೇಲಿನ ತೆರಿಗೆ ಲೆಕ್ಕ

ಪ್ರಸ್ತುತ, ಭಾರತದಲ್ಲಿ ಮಾರಾಟವಾಗುವ ಆಮದು ಮಾಡಿದ ಸ್ಮಾರ್ಟ್‌ಫೋನ್‌ಗಳಿಗೆ ಶೇಕಡ 18 ಜಿಎಸ್‌ಟಿ ಮತ್ತು ಶೇಕಡ 22 ಕಸ್ಟಮ್ಸ್ ಸುಂಕ ವಿಧಿಸಲಾಗುತ್ತಿದೆ. ಹೆಚ್ಚುವರಿ ಶುಲ್ಕ, ಮೂಲ ಕಸ್ಟಮ್ಸ್ ಸುಂಕದ ಶೇಕಡ 10 ರಷ್ಟು ಇರುತ್ತದೆ. ಬಜೆಟ್‌ನ ಪ್ರಕಾರ ತೆರಿಗೆ ಕಡಿತದ ನಂತರ, ಒಟ್ಟು ಕಸ್ಟಮ್ಸ್ ಸುಂಕವು ಶೇಕಡ 16.5 (15 ಪ್ರತಿಶತ ಮೂಲ ತೆರಿಗೆ ಮತ್ತು 1.5 ಪ್ರತಿಶತ ಹೆಚ್ಚುವರಿ ಶುಲ್ಕ) ಆಗಿರುತ್ತದೆ. ಭಾರತದಲ್ಲಿ ತಯಾರಿಸಿದ ಫೋನ್‌ಗಳಾದರೆ, ಕೇವಲ 18 ಪ್ರತಿಶತ GST ಮಾತ್ರ ವಿಧಿಸಲಾಗುತ್ತದೆ.

ಆಪಲ್‌ ಫೋನ್‌ ವಿಷಯಕ್ಕೆ ಬಂದರೆ, ಪ್ರಸ್ತುತ, ಭಾರತದಲ್ಲಿ ಮಾರಾಟವಾಗುವ 99 ಪ್ರತಿಶತ ಮೊಬೈಲ್ ಫೋನ್‌ಗಳನ್ನು ಸ್ಥಳೀಯವಾಗಿ ತಯಾರಿಸಲಾಗುತ್ತದೆ. ಆದರೆ, ಆಯ್ದ ಉನ್ನತ-ಮಟ್ಟದ ಐಫೋನ್‌ ಮಾದರಿಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಅವುಗಳ ಮೇಲೆ ತೆರಿಗೆ ಹೆಚ್ಚು.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.