ಕನ್ನಡ ಸುದ್ದಿ  /  Nation And-world  /  Business News Irctc Passengers To Get Refunds In One Hour Indian Railway Updates India News Uks

ರೈಲ್ವೆ ಪ್ರಯಾಣಿಕರ ಗಮನಕ್ಕೆ; ಐಆರ್‌ಸಿಟಿಸಿಯಲ್ಲಿ ಟಿಕೆಟ್ ಬುಕ್ ಆಗದೇ ಹಣ ಕಟ್ ಆಯಿತಾ, ಚಿಂತೆ ನಿವಾರಿಸುವ ಸುದ್ದಿ ಇದು

ಐಆರ್ಸಿಟಿಸಿಯಲ್ಲಿ ರೈಲು ಟಿಕೆಟ್ ಕಾಯ್ದಿರಿಸುವುದರಿಂದ ಹಣವನ್ನು ಕಡಿತಗೊಳಿಸಬಹುದು ಆದರೆ ಟಿಕೆಟ್ ಕಾಯ್ದಿರಿಸಲಾಗುವುದಿಲ್ಲ, ಇದು ಮರುಪಾವತಿಯಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ. ಆದಾಗ್ಯೂ, ಮರುಪಾವತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಬದಲಾವಣೆಗಳು ನಡೆಯುತ್ತಿವೆ, ಒಂದು ಗಂಟೆಯೊಳಗೆ ತ್ವರಿತ ಪ್ರಕ್ರಿಯೆಯ ಗುರಿಯನ್ನು ಹೊಂದಿದೆ.

ಐಆರ್‌ಸಿಟಿಸಿ ಆಪ್‌ನಲ್ಲಿ ಟಿಕೆಟ್‌ ಬುಕ್ ಮಾಡುವುದನ್ನು ಸಾಂಕೇತಿಕವಾಗಿ ತೋರಿಸುವ ಚಿತ್ರ (ಎಡ ಚಿತ್ರ); ರೈಲು ನಿಲ್ದಾಣದ ಒಂದು ನೋಟ (ಬಲ ಚಿತ್ರ)
ಐಆರ್‌ಸಿಟಿಸಿ ಆಪ್‌ನಲ್ಲಿ ಟಿಕೆಟ್‌ ಬುಕ್ ಮಾಡುವುದನ್ನು ಸಾಂಕೇತಿಕವಾಗಿ ತೋರಿಸುವ ಚಿತ್ರ (ಎಡ ಚಿತ್ರ); ರೈಲು ನಿಲ್ದಾಣದ ಒಂದು ನೋಟ (ಬಲ ಚಿತ್ರ)

ನವದೆಹಲಿ: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ವೆಬ್‌ಸೈಟ್, ಆಪ್‌ನಲ್ಲಿ ಟಿಕೆಟ್ ಬುಕ್‌ ಆಗುವ ಮೊದಲೇ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಯಿತಾ… ಅದು ವಾಪಸ್ ಖಾತೆಗೆ ಬೀಳಲು ಇನ್ನೆಷ್ಟು ದಿನ ಬೇಕಾಗುತ್ತೋ ಎಂದು ಚಿಂತೆ ಮಾಡಬೇಡಿ. ಈ ರೀತಿ ತಾಂತ್ರಿಕ ಸಮಸ್ಯೆ ಎದುರಿಸುವ ರೈಲ್ವೆ ಪ್ರಯಾಣಿಕರಿಗೊಂದು ಶುಭ ಸುದ್ದಿ.

ಐಆರ್‌ಸಿಟಿಸಿಯಲ್ಲಿ ಟಿಕೆಟ್ ಬುಕ್ ಮಾಡಿದಾಗ ಎದುರಾಗುವ ತಾಂತ್ರಿಕ ಸಮಸ್ಯೆಯಿಂದ ಬ್ಯಾಂಕ್ ಖಾತೆಯಿಂದ ಹಣ ಕಟ್ ಆದರೆ, ಆ ಹಣ ವಾಪಸ್‌ ಬ್ಯಾಂಕ್ ಖಾತೆ ಸೇರಲು ದಿನಗಟ್ಟಲೆ ಕಾಯಬೇಕಾಗಿಲ್ಲ. ಇಂಹತ ಪ್ರಯಾಣಿಕರ ಹಣ ಅವರ ಬ್ಯಾಂಕ್ ಖಾತೆಗೆ ಬೇಗನೆ ಸೇರಲಿದೆ. ಈ ಶುಭ ಸುದ್ದಿಯನ್ನು ಐಆರ್‌ಸಿಟಿಸಿ ತಿಳಿಸಿದೆ.

ಇದೇ ರೀತಿ ಟಿಕೆಟ್ ಕಾಯ್ದಿರಿಸದೇ ಹಣ ಕಟ್ ಆದರೂ ಅಥವಾ ಟಿಕೆಟ್ ರದ್ದುಗೊಳಿಸಿದ ಬಳಿಕ ಹಣ ಮರುಪಾವತಿ ಕೂಡ ಕ್ಷಿಪ್ರವಾಗಿ ಆಗುವಂತೆ ಮಾಡಲು ಐಆರ್‌ಸಿಟಿಸಿ ಕ್ರಮ ತೆಗೆದುಕೊಂಡಿದೆ.

ಐಆರ್‌ಸಿಟಿಸಿಯಿಂದ ಒಂದೇ ಗಂಟೆಯಲ್ಲಿ ರೀಫಂಡ್

ರೈಲ್ವೆ ಪ್ರಯಾಣಿಕರು ಟಿಕೆಟ್ ರದ್ದುಗೊಳಿಸಿದ ಬಳಿಕ ಮತ್ತು ತಾಂತ್ರಿಕ ದೋಷದಿಂದ ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾದರೆ ಅದರ ರೀಫಂಡ್ ಕ್ಷಿಪ್ರವಾಗಿ ಆಗುವಂತೆ ಮಾಡಲು ಐಆರ್‌ಸಿಟಿಸಿ ಮತ್ತು ಸೆಂಟರ್ ಫಾರ್‌ ರೈಲ್ವೆ ಇನ್‌ಫಾರ್ಮೇಶನ್ ಸಿಸ್ಟಮ್ಸ್ (ಸಿಆರ್‌ಐಎಸ್‌) ಕೆಲಸ ಮಾಡುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮರುಪಾವತಿ ಅವಧಿಯನ್ನು ಕಡಿಮೆ ಮಾಡುವುದು ಇದರ ಉದ್ದೇಶ. ಎಲ್ಲ ಮರುಪಾವತಿಗಳನ್ನೂ ಸಾಧ್ಯವಾದಷ್ಟೂ ಒಂದು ಗಂಟೆಯೊಳಗೆ ಮುಗಿಸುವುದಕ್ಕೆ ಮರುಪಾವತಿ ಪ್ರಕ್ರಿಯೆಗೆ ವೇಗ ನೀಡಲು ಐಆರ್‌ಸಿಟಿಸಿ ಪ್ರಯತ್ನಿಸಿದೆ ಎಂದು ವರದಿ ಹೇಳಿದೆ. ಈ ವರದಿಯನ್ನು ಸ್ವತಂತ್ರವಾಗಿ ಪರಿಶೀಲಿಸುವುದು ಹಿಂದೂಸ್ತಾನ್ ಟೈಮ್ಸ್ ಕನ್ನಡದಿಂದ ಸಾಧ್ಯವಾಗಿಲ್ಲ.

ಮರುಪಾವತಿ ವಿಳಂಬದ ಬಗ್ಗೆ ಹತಾಶರಾಗಿರುವ ಪ್ರಯಾಣಿಕರು

ಮರುಪಾವತಿಗಳು ಕ್ಷಿಪ್ರವಾಗಿ ಆಗದೇ ಇದ್ದಾಗ, ಜನರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಲು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಹೀಗಾಗಿ ವಿಳಂಬ ಮತ್ತು ನಿಧಾನಗತಿಯ ಮರುಪಾವತಿಗೆ ಸಂಬಂಧಿಸಿದ ಪ್ರಯಾಣಿಕರ ದೂರುಗಳು ರೈಲ್ವೆಗೆ ದೊಡ್ಡ ತಲೆನೋವಿನ ಸಮಸ್ಯೆ. ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರಕ್ರಿಯೆ ನಿಧಾನಗತಿಯದ್ದು.

ಬುಕಿಂಗ್ ವಿಫಲವಾಗಿ, ಪ್ರಯಾಣಿಕರ ಖಾತೆಯಿಂದ ಹಣ ಕಡಿತವಾದರೆ ಐಆರ್‌ಸಿಟಿಸಿ ಮಾರನೇ ದಿನ ಅದರ ಮರುಪಾವತಿ ಪ್ರಕ್ರಿಯೆ ಶುರುಮಾಡುತ್ತದೆ. ಅದಾಗಿ, ಆಯಾ ಬ್ಯಾಂಕು ಅಥವಾ ಪಾವತಿ ಸೇವೆಗಳ ಪ್ರಕ್ರಿಯೆಗೆ ಅನುಸರಿಸಿ ಅದು ಹಲವಾರು ದಿನಗಳ ಬಳಿಕ ಪ್ರಯಾಣಿಕರ ಖಾತೆಗೆ ಪುನಃ ಸೇರುತ್ತಿದೆ.

ಆದರೆ, ರೈಲ್ವೆ ಪ್ರಾಧಿಕಾರವು ಈ ಪ್ರಕ್ರಿಯೆಗೆ ವೇಗ ನೀಡಲು ನೋಡುತ್ತಿದೆ. ಮರುಪಾವತಿ ಪ್ರಕ್ರಿಯೆಯನ್ನು ಹೆಚ್ಚು ಕ್ಷಿಪ್ರವಾಗಿ ಮಾಡುವ ಮಾರ್ಗಗಳನ್ನು ಕಂಡುಹಿಡಿಯಲು ತಂಡಗಳಿಗೆ ನಿರ್ದೇಶನ ನೀಡಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಈ ಬದಲಾವಣೆ ನಿರ್ಣಾಯಕ. ಆದಾಗ್ಯೂ, ನೀವು ಟಿಕೆಟ್ ಕಾಯ್ದಿರಿಸಿದಾಗ ಐಆರ್‌ಸಿಟಿಸಿ ಅನುಕೂಲಕರ ಶುಲ್ಕವನ್ನು ವಿಧಿಸುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. ಈ ಶುಲ್ಕವನ್ನು ಅದು ಮರುಪಾವತಿಸುವುದಿಲ್ಲ.

ಯಾವಾಗ ಮತ್ತು ಯಾಕೆ ಮರುಪಾವತಿ ಕೇಳಬೇಕು

ರೈಲ್ವೆ ಟಿಕೆಟ್‌ಗೆ ಸಂಬಂಧಿಸಿ ಮರುಪಾವತಿಗೆ ಕೆಲವು ಷರತ್ತು, ಮಾನದಂಡಗಳಿವೆ. ಮರುಪಾವತಿ ಕೇಳಬಹುದಾದ ಕಾರಣಗಳಿವು

1) ಬುಕಿಂಗ್ ಸಮಸ್ಯೆ ಆಗಿ ಖಾತೆಯಿಂದ ಹಣ ಕಡಿತವಾಗಿದ್ದರೆ

2) ರೈಲು ಸಂಚಾರ ರದ್ದುಗೊಂಡಿದ್ದರೆ

3) ಮುಂಗಡ ಕಾಯ್ದಿರಿಸಿದ ಟಿಕೆಟ್ ವೇಟಿಂಗ್ ಲಿಸ್ಟ್‌ನಲ್ಲೇ ಖಚಿತವಾಗದೇ ಇದ್ದರೆ

4) ನಿಮ್ಮ ರೈಲು ತಡವಾಗಿದ್ದರೆ ಅಥವಾ ಎಸಿ ಕೆಲಸ ಮಾಡದಿರುವಂತಹ ಸಮಸ್ಯೆ ಇದ್ದರೆ ನೀವು ಟಿಕೆಟ್ ರದ್ದು ಮಾಡಿ ಹಣ ವಾಪಸ್ ಕೇಳಬಹುದು.

ಈ ಸಂದರ್ಭಗಳಲ್ಲಿ, ನೀವು ಆನ್‌ಲೈನ್‌ ಅಥವಾ ವೈಯಕ್ತಿಕವಾಗಿ ಟಿಕೆಟ್ ಠೇವಣಿ ರಸೀದಿ (ಟಿಡಿಆರ್) ಮೂಲಕ ಮರುಪಾವತಿಯನ್ನು ಕೇಳಬಹುದು. ಇದರಲ್ಲಿ ಟಿಡಿಆರ್ ಮೂಲಕ ಮರುಪಾವತಿಗೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಲಾಗುತ್ತದೆ ಎಂದು ವರದಿ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point