ಐಟಿಆರ್ ಫೈಲಿಂಗ್ 2024; ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ರಾ, ಹೊಸ ಪದ್ಧತಿಗೆ ಹೋಗುವುದಾ, ಹಳೆಯದೇ ಸಾಕಾ ಎಂಬ ಸಂದೇಹವೇ, ಈ 6 ಅಂಶ ಗಮನಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಐಟಿಆರ್ ಫೈಲಿಂಗ್ 2024; ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ರಾ, ಹೊಸ ಪದ್ಧತಿಗೆ ಹೋಗುವುದಾ, ಹಳೆಯದೇ ಸಾಕಾ ಎಂಬ ಸಂದೇಹವೇ, ಈ 6 ಅಂಶ ಗಮನಿಸಿ

ಐಟಿಆರ್ ಫೈಲಿಂಗ್ 2024; ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ರಾ, ಹೊಸ ಪದ್ಧತಿಗೆ ಹೋಗುವುದಾ, ಹಳೆಯದೇ ಸಾಕಾ ಎಂಬ ಸಂದೇಹವೇ, ಈ 6 ಅಂಶ ಗಮನಿಸಿ

ಐಟಿಆರ್ ಫೈಲಿಂಗ್ 2024; ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ರಾ, ಗೊಂದಲ ಅನ್ನಿಸ್ತಿದೆಯಾ, ಹೊಸ ಪದ್ಧತಿಗೆ ಹೋಗುವುದಾ, ಹಳೆಯದೇ ಸಾಕಾ ಎಂಬ ಸಂದೇಹವೇ, ಹಾಗಾದರೆ ಈ 6 ಅಂಶ ಗಮನಿಸಿ. ಇದರಲ್ಲಿದೆ ಚಿಂತನೆ ಮಾಡಿ ತೆಗೆದುಕೊಳ್ಳಲು ನೆರವಾಗಬಲ್ಲ ವಿವರ.

ಐಟಿಆರ್ ಫೈಲಿಂಗ್ 2024; ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ರಾ, ಹೊಸ ಪದ್ಧತಿಗೆ ಹೋಗುವುದಾ, ಹಳೆಯದೇ ಸಾಕಾ ಎಂಬ ಸಂದೇಹವೇ, ಈ 6 ಅಂಶ ಗಮನಿಸಬಹುದು.
ಐಟಿಆರ್ ಫೈಲಿಂಗ್ 2024; ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ರಾ, ಹೊಸ ಪದ್ಧತಿಗೆ ಹೋಗುವುದಾ, ಹಳೆಯದೇ ಸಾಕಾ ಎಂಬ ಸಂದೇಹವೇ, ಈ 6 ಅಂಶ ಗಮನಿಸಬಹುದು. (Canva)

ನವದೆಹಲಿ: ತೆರಿಗೆದಾರರು ಎಲ್ಲರೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಮತ್ತು ಸಲ್ಲಿಸಲೇ ಬೇಕಾದ ಸಮಯ ಇದು. ಹೌದು, ಆದಾಯ ತೆರಿಗೆ ರಿಟರ್ನ್ಸ್ 2024 (ITR filing 2024) ರ ಫೈಲಿಂಗ್ ಅವಧಿ ಶುರುವಾಗಿದ್ದು, ಜುಲೈ 31 ಕೊನೇ ದಿನವಾಗಿರಲಿದೆ. ಈ ಗಡುವಿನೊಳಗೆ ಐಟಿಆರ್ ಸಲ್ಲಿಸುವುದು ಮುಖ್ಯ. ನಂತರ ದಂಡ ಪಾವತಿಯೊಂದಿಗೆ ಐಟಿಆರ್ ಸಲ್ಲಿಕೆಗೆ ಅವಕಾಶವಿದೆ.

ತೆರಿಗೆದಾರರು ತಮ್ಮ 2023-24 ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಐಟಿಆರ್‌ ಸಲ್ಲಿಸಲಾರಂಭಿಸಿದ್ದಾರೆ. ಈ ರೀತಿ ಐಟಿಆರ್ ಸಲ್ಲಿಸುವಾಗ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸಲು ಅಂದರೆ ಹಳೆಯ ತೆರಿಗೆ ಪದ್ಧತಿಯಿಂದ ಹೊಸ ತೆರಿಗೆ ಪದ್ಧತಿಗೆ ಬದಲಾವಣೆಗೆ ಪರಿಗಣಿಸುತ್ತಿದ್ದರೆ, ಕೆಲವು ಅಂಶಗಳನ್ನು ಗಮನಿಸಬೇಕು.

ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಮತ್ತು ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಸರ್ಕಾರವು ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಿತು, ಆದರೆ, ಇದಕ್ಕೆ ತೆರಿಗೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದಾಯ, ಕಡಿತಗಳು, ವಿನಾಯಿತಿಗಳು ಮತ್ತು ದೀರ್ಘಾವಧಿಯ ಹಣಕಾಸು ಯೋಜನೆಗಳನ್ನು ಅವಲಂಬಿಸಿ ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ ನಡುವೆ ಆಯ್ಕೆ ಮಾಡುವುದು ಸಂಕೀರ್ಣವಾಗಿರುತ್ತದೆ. ಹೂಡಿಕೆಗಳಿಲ್ಲದ ವ್ಯಕ್ತಿಗಳು ಹೊಸ ತೆರಿಗೆ ಪದ್ಧತಿ ಕಡೆಗೆ ಒಲವು ತೋರುತ್ತಾರೆ. ಆದರೆ, ಹಣಕಾಸಿನ ಗುರಿಗಳು ಮತ್ತು ಹೂಡಿಕೆಗಳನ್ನು ಹೊಂದಿರುವವರು ಸಾಮಾನ್ಯವಾಗಿ ಹಳೆಯ ತೆರಿಗೆ ಪದ್ಧತಿಯನ್ನು ಮುಂದುವರಿಸಿದ್ದಾರೆ.

ಹಳೆಯ ಆದಾಯ ತೆರಿಗೆ ಪದ್ಧತಿ vs ಹೊಸ ಆದಾಯ ತೆರಿಗೆ ಪದ್ಧತಿ; ಆಯ್ಕೆಗೆ ಮುನ್ನ ಈ 6 ಅಂಶ ಗಮನಿಸಿ

ಎರಡು ತೆರಿಗೆ ಪದ್ಧತಿಗಳ ನಡುವೆ ಆಯ್ಕೆ ವಿಚಾರ ಬಂದಾಗ ನಿರ್ಧಾರ ತೆಗೆದುಕೊಳ್ಳುವ ಮೊದಲು ನೀವು ಅರ್ಥಮಾಡಿಕೊಳ್ಳಬೇಕಾದ ಪರಿಣಾಮಗಳು, ಹಂತಗಳ ವಿವರ ಅವಲೋಕನದ 6 ಅಂಶಗಳು ಇಲ್ಲಿವೆ.

1) ಹೊಸ ಆದಾಯ ತೆರಿಗೆ ಪದ್ಧತಿ: ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಸಲ್ಲಿಕೆಗೆ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಲಾಗಿನ್ ಆದ ಕೂಡಲೇ ಅದು ತನ್ನಿಂತಾನೇ ಹೊಸ ಆದಾಯ ತೆರಿಗೆ ಪದ್ಧತಿಯನ್ನೇ ತೋರಿಸುತ್ತದೆ. ಹಳೆಯ ಆದಾಯ ತೆರಿಗೆ ಪದ್ಧತಿ ಬೇಕಾದರೆ ಫೈಲಿಂಗ್ ಮಾಡುವಾಗ ಆಯ್ಕೆ ಮಾಡಿಕೊಳ್ಳಬೇಕು. ವಿ ಸಹಾಯ್‌ ತ್ರಿಪಾಠಿ ಆಂಡ್ ಕಂಪನಿಯ ಪಾಲುದಾರರಾಗಿರುವ ಗರಿಮಾ ತ್ರಿಪಾಠಿ ಅವರ ಪ್ರಕಾರ, ಲೆಕ್ಕ ಪರಿಶೋಧಕರು, ವೇತನ ಪಡೆಯುವ ಉದ್ಯೋಗಿಗಳು ವರ್ಷಕ್ಕೊಮ್ಮೆ ತಮ್ಮ ತೆರಿಗೆ ಪದ್ಧತಿಯನ್ನು ಬದಲಾಯಿಸಬಹುದು ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ಲೈವ್ ಮಿಂಟ್ ವರದಿ ಮಾಡಿದೆ.

2) ಫ್ಯೂಚರ್ ಆಂಡ್ ಆಪ್ಶನ್ಸ್ ಅದಾಯ ಹೊಂದಿದವರು: "ವ್ಯಾಪಾರ ಅಥವಾ ಫ್ಯೂಚರ್ ಆಂಡ್ ಆಪ್ಶನ್ಸ್‌ ಅಥವಾ ವೃತ್ತಿಯಿಂದ ಆದಾಯವನ್ನು ಗಳಿಸುವವರು ಒಮ್ಮೆ ಹಳೆಯ ತೆರಿಗೆ ಯೋಜನೆಯಿಂದ ಹೊರಗೆ ಬಂದರೆ ಮತ್ತೆ ಅದಕ್ಕೆ ಹಿಂತಿರುಗಲು ಸಾಧ್ಯವಿಲ್ಲ" ಎಂದು ಗರಿಮಾ ತ್ರಿಪಾಠಿ ವಿವರಿಸಿದ್ದಾರೆ.

3) ಹೊಸತು vs ಹಳೆಯ ತೆರಿಗೆ ಪದ್ಧತಿ: ಹಳೆಯ ತೆರಿಗೆ ಪದ್ಧತಿಯು HRA, LTA, ಮತ್ತು ಚಾಪ್ಟರ್‌ VI-A ಯಂತಹ ವಿನಾಯಿತಿಗಳನ್ನು ಒಳಗೊಂಡಿದೆ. ಆದರೆ, ಹೊಸ ತೆರಿಗೆ ಪದ್ಧತಿಯಲ್ಲಿ ಕಡಿಮೆ ತೆರಿಗೆ ದರವಿದೆ. ಆದರೆ, ಹೆಚ್ಚಿನ ವಿನಾಯಿತಿ ಮತ್ತು ತೆರಿಗೆ ಕಡಿತ ಇರಲ್ಲ. ಲೈವ್ ಮಿಂಟ್ ವರದಿ ಪ್ರಕಾರ, ಎನ್‌ ಎ ಶಾ ಅಸೋಸಿಯೇಟ್ಸ್ ನೇರ ತೆರಿಗೆ ಅಸೋಸಿಯೇಟ್ ಪಾರ್ಟ್‌ನರ್‌ ಮಿಲಿನ್ ಬಖೈ ಅವರು, "ಈ ಪರಿಸ್ಥಿತಿಯಲ್ಲಿ, ವ್ಯಕ್ತಿಗಳು ತಮ್ಮ ಹೂಡಿಕೆ ಮತ್ತು ಅರ್ಹ ಕಡಿತಗಳನ್ನು ಪರಿಗಣಿಸುವ ಮೂಲಕ ತಮ್ಮ ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಾಚಾರ ಮಾಡುವುದು ಸೂಕ್ತ. ತೆರಿಗೆದಾರರು ಆನ್‌ಲೈನ್ ಕ್ಯಾಲ್ಕುಲೇಟರ್‌ಗಳನ್ನು ಬಳಸಬಹುದು ಅಥವಾ ಎರಡೂ ಆಡಳಿತಗಳ ಅಡಿಯಲ್ಲಿ ಪಾವತಿಸಬೇಕಾದ ತೆರಿಗೆಯನ್ನು ನಿರ್ಣಯಿಸಲು ತೆರಿಗೆ ವೃತ್ತಿಪರರಿಂದ ಸಲಹೆ ಪಡೆಯಬಹುದು" ಎಂದು ಹೇಳಿದ್ದಾರೆ.

4) ಫಾರ್ಮ್ 10IEA ಫೈಲಿಂಗ್: ಮಿಲಿನ್ ಬಖೈ ಅವರ ಪ್ರಕಾರ, ಹೊಸ ತೆರಿಗೆ ಆಡಳಿತವನ್ನು 2023ರ ಬಜೆಟ್‌ನಲ್ಲಿ ಡೀಫಾಲ್ಟ್ ಆಯ್ಕೆಯಾಗಿ ಪರಿಚಯಿಸಲಾಗಿದೆ. ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ ವ್ಯಾಪಾರ ಮತ್ತು ವೃತ್ತಿಯಿಂದ ಆದಾಯ ಹೊಂದಿರುವ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್‌ನೊಂದಿಗೆ ಫಾರ್ಮ್ 10IEA ಅನ್ನು ಸಲ್ಲಿಸಬೇಕು. ವ್ಯಾಪಾರ ಮತ್ತು ವೃತ್ತಿಯಿಂದ ಆದಾಯವಿಲ್ಲದ ತೆರಿಗೆದಾರರಿಗೆ, ತಮ್ಮ ಆದಾಯ ತೆರಿಗೆ ರಿಟರ್ನ್‌ನಲ್ಲಿ ಹಳೆಯ ಆಡಳಿತವನ್ನು ಆರಿಸಿಕೊಳ್ಳುವುದು ಕಡ್ಡಾಯ.

5) ತೆರಿಗೆ-ಮುಕ್ತ ಆದಾಯ ಮಟ್ಟ: ಹಳೆಯ ತೆರಿಗೆ ಪದ್ಧತಿಯಲ್ಲಿ, ತೆರಿಗೆ ಸ್ಲ್ಯಾಬ್‌ಗಳು ಮತ್ತು ರಿಯಾಯಿತಿಗಳ ಕಾರಣದಿಂದ 5 ಲಕ್ಷ ರೂಪಾಯಿವರೆಗಿನ ಆದಾಯವನ್ನು ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಈ ಮಿತಿಯನ್ನು 7 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.

6) ಕಡಿಮೆಯಾದ ಸರ್‌ಚಾರ್ಜ್: ಗರಿಮಾ ತ್ರಿಪಾಠಿ ಅವರು, ಹೊಸ ವ್ಯವಸ್ಥೆಯ ಅಡಿಯಲ್ಲಿ, 5 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯದ ಮೇಲಿನ 37 ಪ್ರತಿಶತ ಸರ್‌ಚಾರ್ಜ್ ಅನ್ನು 25 ಪ್ರತಿಶತಕ್ಕೆ ಇಳಿಸಲಾಗಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.