ಐಟಿಆರ್ ಫೈಲಿಂಗ್; ಆದಾಯ ತೆರಿಗೆ ಸ್ಲ್ಯಾಬ್ ದರಗಳು, ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಕಡಿತ, ವಿನಾಯಿತಿ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಐಟಿಆರ್ ಫೈಲಿಂಗ್; ಆದಾಯ ತೆರಿಗೆ ಸ್ಲ್ಯಾಬ್ ದರಗಳು, ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಕಡಿತ, ವಿನಾಯಿತಿ ವಿವರ

ಐಟಿಆರ್ ಫೈಲಿಂಗ್; ಆದಾಯ ತೆರಿಗೆ ಸ್ಲ್ಯಾಬ್ ದರಗಳು, ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಕಡಿತ, ವಿನಾಯಿತಿ ವಿವರ

ಐಟಿಆರ್ ಫೈಲಿಂಗ್ ಮಾಡುವ ಸಮಯ ಶುರುವಾಗಿದೆ. ತೆರಿಗೆದಾರರ ಮಾಹಿತಿಗಾಗಿ ಇಲ್ಲಿ, ಆದಾಯ ತೆರಿಗೆ ಸ್ಲ್ಯಾಬ್ ದರಗಳು, ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಕಡಿತ, ವಿನಾಯಿತಿ ವಿವರವನ್ನು ಒದಗಿಸಲಾಗಿದೆ.

ಐಟಿಆರ್ ಫೈಲಿಂಗ್; ಆದಾಯ ತೆರಿಗೆ ಸ್ಲ್ಯಾಬ್ ದರಗಳು, ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಕಡಿತ, ವಿನಾಯಿತಿ ವಿವರ
ಐಟಿಆರ್ ಫೈಲಿಂಗ್; ಆದಾಯ ತೆರಿಗೆ ಸ್ಲ್ಯಾಬ್ ದರಗಳು, ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಕಡಿತ, ವಿನಾಯಿತಿ ವಿವರ

ಐಟಿಆರ್ ಫೈಲಿಂಗ್ (ITR Filing): ಕಳೆದ ಹಣಕಾಸು ವರ್ಷದ ಅಂದರೆ 2023-24ರ ಆದಾಯ ತೆರಿಗೆ ರಿಟರ್ನ್ಸ್‌ ಫೈಲ್ ಮಾಡುವುದಕ್ಕೆ ಇದೇ ಜುಲೈ 31 ಕೊನೇ ದಿನ. ಉದ್ಯೋಗಿಗಳಾಗಿದ್ದರೆ ಈಗಾಗಲೇ ಫಾರಂ 16 ಕೈ ಸೇರಿರಬಹುದು ಅಥವಾ ಒಂದು ವಾರದೊಳಗೆ ಕೈ ಸೇರಬಹುದು. ಐಟಿಆರ್ ಫೈಲಿಂಗ್ ಮಾಡುವ ಪ್ರತಿಯೊಬ್ಬರೂ ಗಮನಿಸಬೇಕಾದ ಪ್ರಮುಖ ವಿಷಯ ಒಂದಿದೆ. ಎರಡು ರೀತಿಯ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬಹುದು. ಹಳೆಯ ತೆರಿಗೆ ವ್ಯವಸ್ಥೆ ಮತ್ತು ವಿಭಿನ್ನ ಸ್ಲ್ಯಾಬ್‌ ದರಗಳಿರುವ ಹೊಸ ತೆರಿಗೆ ವ್ಯವಸ್ಥೆ ಈಗ ಚಾಲ್ತಿಯಲ್ಲಿದೆ. ಇದರಲ್ಲಿ ಯಾವುದು ಸೂಕ್ತ ಎಂಬುದನ್ನು ಐಟಿಆರ್ ಫೈಲ್ ಮಾಡುವವರೇ ನಿರ್ಧರಿಸಬೇಕು.

ಹಳೆಯ ತೆರಿಗೆ ವ್ಯವಸ್ಥೆಗೆ ಪರ್ಯಾಯವಾಗಿ 2020-21ನೇ ಸಾಲಿನಿಂದಹೊಸ ತೆರಿಗೆ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ ಇದನ್ನು ಆಯ್ದುಕೊಳ್ಳುವುದನ್ನು ತೆರಿಗೆದಾರರಿಗೆ ಐಚ್ಚಿಕ ಎಂದು ಘೋಷಿಸಿತು. ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳನ್ನು (ಎಚ್ ಯುಎಫ್) ಗುರಿಯಾಗಿಸಿಕೊಂಡು ತೆರಿಗೆದಾರರಿಗೆ ತಮ್ಮ ತೆರಿಗೆ ಬಾಧ್ಯತೆಗಳನ್ನು ನಿರ್ವಹಿಸುವಲ್ಲಿ ಹೆಚ್ಚಿನ ನಮ್ಯತೆ ಮತ್ತು ಆಯ್ಕೆಯನ್ನು ಒದಗಿಸುವ ಗುರಿಯನ್ನು ಇದು ಆರಂಭದಲ್ಲಿ ಹೊಂದಿತ್ತು. ಬಳಿಕ ಇದನ್ನು ಸರ್ಕಾರ ಐಚ್ಛಿಕವಾಗಿ ಇರಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸುವಾಗ, ಈ ಹೊಸ ತೆರಿಗೆ ವ್ಯವಸ್ಥೆಯು ಕಾಯಂ ಆಗಲಿದೆ ಎಂದು ಘೋಷಿಸಿದ್ದರು.

ಹೊಸ ತೆರಿಗೆ ವ್ಯವಸ್ಥೆಯ ಸ್ಲ್ಯಾಬ್‌ಗಳು

3 ಲಕ್ಷ ರೂಪಾಯಿ ತನಕ ತೆರಿಗೆ ಇಲ್ಲ

3 ಲಕ್ಷ ರೂಪಾಯಿಯಿಂದ 6 ಲಕ್ಷ ರೂಪಾಯಿ ತನಕದ ಆದಾಯಕ್ಕೆ ಶೇಕಡ 5 ತೆರಿಗೆ

6 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿ ತನಕದ ಆದಾಯಕ್ಕೆ 15,000 ರೂಪಾಯಿ + ಆರು ಲಕ್ಷ ರೂಪಾಯಿಗೆ ಮೇಲಿನ ಆದಾಯಕ್ಕೆ ಶೇಕಡ 10 ತೆರಿಗೆ

9 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿ ತನಕದ ಆದಾಯಕ್ಕೆ 45,000 ರೂಪಾಯಿ ತೆರಿಗೆ + 9 ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇಕಡ 15 ತೆರಿಗೆ

12 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿ ತನಕದ ಆದಾಯಕ್ಕೆ 90,000 ರೂಪಾಯಿ ತೆರಿಗೆ + 12 ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇಕಡ 20 ತೆರಿಗೆ

15 ಲಕ್ಷ ರೂಪಾಯಿ ಆದಾಯಕ್ಕೆ 1.5 ಲಕ್ಷ ರೂಪಾಯಿ ತೆರಿಗೆ + 15 ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇಕಡ 30 ತೆರಿಗೆ

ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ದರ

2.5 ಲಕ್ಷ ರೂಪಾಯಿ ತನಕದ ಆದಾಯಕ್ಕೆ ತೆರಿಗೆ ಇಲ್ಲ

2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿ ತನಕದ ಆದಾಯಕ್ಕೆ ಶೇಕಡ 5 ತೆರಿಗೆ

5 ಲಕ್ಷ ರೂಪಾಯಿಂದ 10 ಲಕ್ಷ ರೂಪಾಯಿ ತನಕದ ಆದಾಯಕ್ಕೆ 12,500 ರೂಪಾಯಿ + 5 ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇಕಡ 20 ತೆರಿಗೆ

10 ಲಕ್ಷ ರೂಪಾಯಿ ಆದಾಯಕ್ಕೆ 1,12,500 ರೂಪಾಯಿ + 10 ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇಕಡ 30 ತೆರಿಗೆ

ಹೊಸ ತೆರಿಗೆ ವ್ಯವಸ್ಥೆಯಲ್ಲಿ ವಿನಾಯಿತಿ ಯಾವುದಕ್ಕೆ(ವಿಶೇಷವಲ್ಲದ್ದು)

1) ವಿಕಲಚೇತನರ (ಪಿಡಬ್ಲ್ಯೂಡಿ) ಸಾರಿಗೆ ಭತ್ಯೆಗಳು

2) ಸಾಗಣೆ ಭತ್ಯೆ

3) ಪ್ರಯಾಣ / ಪ್ರವಾಸ / ವರ್ಗಾವಣೆ ಪರಿಹಾರ

4) ಸ್ವಯಂ ನಿವೃತ್ತಿ ಯೋಜನೆಗೆ ಸಂಬಂಧಿಸಿದ ವಿನಾಯಿತಿ

5) ಗ್ರಾಚ್ಯುಟಿ ಮೊತ್ತ ಯು / ಸೆಕ್ಷನ್ 10 (10)

6) ರಜೆ ನಗದೀಕರಣ ಯು / ಸೆಕ್ಷನ್ 10 (10 ಎಎ)

7) ಅಗ್ನಿವೀರ್ ಕಾರ್ಪಸ್ ಫಂಡ್‌ನ ಠೇವಣಿಗಳ ಮೇಲಿನ ಕಡಿತಗಳು / ಸೆಕ್ಷನ್ 80 ಸಿಸಿಎಚ್ (2)

ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ವಿನಾಯಿತಿಗಳಿವು

ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆದಾರರಿಗೆ ಹಲವು ರೀತಿಯ ತೆರಿಗೆ ವಿನಾಯಿತಿಗಳಿವೆ. ಮನೆ ಬಾಡಿಗೆ ಭತ್ಯೆ (ಎಚ್ಆರ್‌ಎ), ರಜೆ ಪ್ರಯಾಣ ಭತ್ಯೆ (ಎಲ್ಟಿಎ), ಸೆಕ್ಷನ್ 80 ಸಿ, 80 ಡಿ, 80 ಸಿಸಿಡಿ (1 ಬಿ), 80 ಸಿಸಿಡಿ (2) ಮತ್ತು ಇತರೆ ಪ್ರಕಾರದ ವಿನಾಯಿತಿಗಳು ಹೆಚ್ಚು ಬಳಸಲ್ಪಡುತ್ತವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.