ITR Filing: ಆದಾಯ 7 ಲಕ್ಷ ರೂಪಾಯಿ ಒಳಗಿದೆ, ಐಟಿಆರ್ ಸಲ್ಲಿಸಬೇಕಾ; ಇಲ್ಲಿದೆ ಆದಾಯ ತೆರಿಗೆ ರಿಟರ್ನ್ ಸಂಬಂಧಿಸಿದ ವಿವರ ಗಮನಿಸಿ
ITR Filing: ಕಳೆದ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ನನ್ನ ಆದಾಯ 7 ಲಕ್ಷ ರೂಪಾಯಿ ಒಳಗಿದೆ, ಐಟಿಆರ್ ಸಲ್ಲಿಸಬೇಕಾ ಎಂಬ ಸಂದೇಹವೇ? ಅದನ್ನು ನಿವಾರಿಸುವ ಪೂರ್ಣ ವಿವರ ಇಲ್ಲಿದೆ ಗಮನಿಸಿ.

ನವದೆಹಲಿ: ಆದಾಯ ತೆರಿಗೆ ರಿಟರ್ನ್ (income tax return) ಅಥವಾ ಐಟಿಆರ್ (ITR) ಸಲ್ಲಿಸುವ ಅವಧಿ ಇದು. ನಿಮ್ಮ ಒಟ್ಟು ಆದಾಯವು ತೆರಿಗೆ ವಿಧಿಸಬಹುದಾದ ಮೂಲ ವಿನಾಯಿತಿಯ ಮಿತಿಯನ್ನು ಮೀರಿದರೆ, ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಆದರೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 87A ಅಡಿಯಲ್ಲಿ ತೆರಿಗೆ ರಿಯಾಯಿತಿ ಇರುವುದರಿಂದ ನೀವು ಆದಾಯ ತೆರಿಗೆಯನ್ನು ಪಾವತಿಸಬೇಕೆಂದು ಇದರ ಅರ್ಥವಲ್ಲ. ಹಳೆಯ ತೆರಿಗೆ ಪದ್ಧತಿಯ ಪ್ರಕಾರ ನಿಮ್ಮ ನಿವ್ವಳ ತೆರಿಗೆಯ ಆದಾಯವು 5 ಲಕ್ಷ ರೂಪಾಯಿಗಳನ್ನು ಮೀರದಿದ್ದರೆ ಅಥವಾ ಹೊಸ ತೆರಿಗೆ ಪದ್ಧತಿಯಂತೆ 7 ಲಕ್ಷ ರೂಪಾಯಿ ಮೀರದೇ ಇದ್ದರೆ ನೀವು ತೆರಿಗೆ ವಿನಾಯಿತಿಗೆ ಅರ್ಹರಾಗಿದ್ದೀರಿ ಎಂದು ಅರ್ಥ.
ಐಟಿಆರ್ ಫೈಲಿಂಗ್ ಮತ್ತು ತೆರಿಗೆ ವಿನಾಯಿತಿ
ಹಳೆಯ ತೆರಿಗೆ ಪದ್ಧತಿಯ ಪ್ರಕಾರ ಗರಿಷ್ಠ ತೆರಿಗೆ ವಿನಾಯಿತಿ 12,500 ರೂಪಾಯಿ ಮತ್ತು ಹೊಸ ತೆರಿಗೆ ಪದ್ಧತಿಯ ಪ್ರಕಾರ ಗರಿಷ್ಠ 25,000 ರೂಪಾಯಿ ತನಕ ರಿಯಾಯಿತಿ ಪಡೆಯಬಹುದು. ಆದ್ದರಿಂದ, ನಿಮ್ಮ ಆದಾಯದ ಮಟ್ಟವು ನಿರ್ದಿಷ್ಟಪಡಿಸಿದ ಮಿತಿಯ ಒಳಗೆ ಇದ್ದರೆ ನೀವು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಆದರೆ ನಿಮ್ಮ ತೆರಿಗೆ ಹೊಣೆಗಾರಿಕೆಯು ಶೂನ್ಯವಾಗಿದ್ದರೂ ಸಹ, ನೀವು ಇನ್ನು ITR ಅನ್ನು ಸಲ್ಲಿಸಬೇಕಾಗುತ್ತದೆ.
ಐಟಿಆರ್ ಸಲ್ಲಿಕೆಗೆ ಕೊನೇ ದಿನ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾದ್ದು ಯಾರು
ಸಾಮಾನ್ಯವಾಗಿ ಹಿಂದಿನ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ ಅಥವಾ ಐಟಿಆರ್ ಸಲ್ಲಿಕೆಗೆ ಪ್ರತಿ ಹಣಕಾಸುವರ್ಷ ಜುಲೈ 31 ಕೊನೆಯ ದಿನವಾಗಿರುತ್ತದೆ. ಕಳೆದ ವರ್ಷದ ಅಂದರೆ 2023-24ರ (2023ರ ಏಪ್ರಿಲ್ 1 ರಿಂದ 2024ರ ಮಾರ್ಚ್ 31) ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ 2024ರ ಜುಲೈ 31 ಕೊನೇ ದಿನಾಂಕವಾಗಿರುತ್ತದೆ.
ಇನ್ನು ಆದಾಯ ತೆರಿಗೆ ಸಲ್ಲಿಸಬೇಕಾದ್ದು ಯಾರು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ನಿಮ್ಮ ಒಟ್ಟು ಆದಾಯವು (ಆದಾಯ ತೆರಿಗೆ ಕಾಯ್ದೆ ಅಧ್ಯಾಯ VI ರ ಅಡಿಯಲ್ಲಿ ಕಡಿತಗೊಳಿಸುವ ಮೊದಲು ಅಂದರೆ ವಿಭಾಗ 80C, 80D ಇತ್ಯಾದಿಗಳ ಪ್ರಕಾರ) ಮೂಲ ವಿನಾಯಿತಿ ಮಿತಿಯನ್ನು ಮೀರಿದರೆ, ನೀವು ಐಟಿಆರ್ ಅನ್ನು ಸಲ್ಲಿಸಬೇಕು. ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ವಿವಿಧ ವರ್ಗಗಳಿಗೆ ಮೂಲ ವಿನಾಯಿತಿ ಮಿತಿ ಹೀಗಿದೆ:
60 ವರ್ಷಕ್ಕಿಂತ ಕೆಳಗಿನವರಿಗೆ: 2.5 ಲಕ್ಷ ರೂಪಾಯಿ
60 ವರ್ಷ ಮೇಲ್ಪಟ್ಟು ಆದರೆ 80 ವರ್ಷದೊಳಗೆ ಇರುವವರಿಗೆ - 3 ಲಕ್ಷ ರೂಪಾಯಿ
80 ವರ್ಷ ಮೇಲ್ಪಟ್ಟವರಿಗೆ - 5 ಲಕ್ಷ ರೂಪಾಯಿ
ಈ ಆದಾಯ ಮಿತಿಯವರು ಐಟಿಆರ್ ಸಲ್ಲಿಸಬೇಕಾಗಿರಲಿಲ್ಲ. ಆದಾಗ್ಯೂ ಶೂನ್ಯ ಐಟಿಆರ್ ಸಲ್ಲಿಕೆ ಐಚ್ಛಿಕವಾಗಿ ಚಾಲ್ತಿಯಲ್ಲಿದೆ.
ಇನ್ನು ಹೊಸ ತೆರಿಗೆ ವ್ಯವಸ್ಥೆ ಪ್ರಕಾರ ಅಂದರೆ ಈ ವರ್ಷ (2023-24)ದಿಂದ ತೆರಿಗೆ ವಿನಾಯಿತಿ ಮಿತಿ 3 ಲಕ್ಷ ರೂಪಾಯಿ. ಮುಂದಿನ ವರ್ಷ (2025ರ ಜುಲೈ 31ರ ಒಳಗೆ ಐಟಿಆರ್ ಸಲ್ಲಿಕೆ) ಸಲ್ಲಿಸುವ ಐಟಿಆರ್‌ಗೆ ಅನ್ವಯವಾಗುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
