ITR filing: ಐಟಿಆರ್‌-3 ನಮೂನೆ ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ, ಇದನ್ನು ಯಾರು ಸಲ್ಲಿಸಬೇಕು? ನಮೂನೆಗಳ ಬಗ್ಗೆ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Itr Filing: ಐಟಿಆರ್‌-3 ನಮೂನೆ ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ, ಇದನ್ನು ಯಾರು ಸಲ್ಲಿಸಬೇಕು? ನಮೂನೆಗಳ ಬಗ್ಗೆ ತಿಳಿದುಕೊಳ್ಳಿ

ITR filing: ಐಟಿಆರ್‌-3 ನಮೂನೆ ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ, ಇದನ್ನು ಯಾರು ಸಲ್ಲಿಸಬೇಕು? ನಮೂನೆಗಳ ಬಗ್ಗೆ ತಿಳಿದುಕೊಳ್ಳಿ

ITR filing: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಡೆಡ್‌ಲೈನ್‌ ಹತ್ತಿರದಲ್ಲಿದೆ. ಇದೇ ಸಮಯದಲ್ಲಿ ಆದಾಯ ತೆರಿಗೆ ಇಲಾಖೆಯು ಆನ್‌ಲೈನ್‌ ಐಟಿಆರ್‌ -3 ನಮೂನೆ (ITR-3 form)ಯನ್ನು ತನ್ನ ಅಧಿಕೃತ ವೆಬ್‌ಸಟ್‌ನಲ್ಲಿ ಬಿಡುಗಡೆ ಮಾಡಿದೆ.

ITR filing: ಐಟಿಆರ್‌-3 ನಮೂನೆ ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ, ಇದನ್ನು ಯಾರು ಸಲ್ಲಿಸಬೇಕು? ನಮೂನೆಗಳ ಬಗ್ಗೆ ತಿಳಿದುಕೊಳ್ಳಿ
ITR filing: ಐಟಿಆರ್‌-3 ನಮೂನೆ ಬಿಡುಗಡೆ ಮಾಡಿದ ಆದಾಯ ತೆರಿಗೆ ಇಲಾಖೆ, ಇದನ್ನು ಯಾರು ಸಲ್ಲಿಸಬೇಕು? ನಮೂನೆಗಳ ಬಗ್ಗೆ ತಿಳಿದುಕೊಳ್ಳಿ

ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಡೆಡ್‌ಲೈನ್‌ ಹತ್ತಿರದಲ್ಲಿದೆ. ಇದೇ ಸಮಯದಲ್ಲಿ ಆದಾಯ ತೆರಿಗೆ ಇಲಾಖೆಯು ಆನ್‌ಲೈನ್‌ ಐಟಿಆರ್‌ -3 ನಮೂನೆ (ITR-3 form)ಯನ್ನು ತನ್ನ ಅಧಿಕೃತ ವೆಬ್‌ಸಟ್‌ನಲ್ಲಿ ಬಿಡುಗಡೆ ಮಾಡಿದೆ. ಈಗಾಗಲೇ ಆದಾಯ ತೆರಿಗೆ ಇಲಾಖೆಯು ITR-2, ITR-1 ಮತ್ತು ITR-4 ಅನ್ನು ಬಿಡುಗಡೆ ಮಾಡಿದೆ. ಇದೀಗ ಐಟಿಆರ್‌ -3 ಬಿಡುಗಡೆ ಮಾಡಿದ್ದು, ಇದು ಯಾರು ಸಲ್ಲಿಸಲು ಇರುವ ನಮೂನೆ ಎನ್ನುವುದನ್ನು ತಿಳಿದುಕೊಳ್ಳೋಣ.

ವೈಯಕ್ತಿಕವಾಗಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವವರಿಗೆ ಒಟ್ಟು ಏಳು ಬಗೆಯ ಐಟಿಆರ್‌ ನಮೂನೆಗಳಿವೆ. ITR 1, ITR 2, ITR 3, ITR 4, ITR 5, ITR 6 ಮತ್ತು ITR 7 ಎಂಮಬ ಏಳು ನಮೂನೆಗಳಲ್ಲಿ ಎಲ್ಲವೂ ಎಲ್ಲರಿಗಾಗಿ ಅಲ್ಲ. ಯಾರು ಯಾವ ನಮೂನೆಯ ಮೂಲಕ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಬೇಕು ಎಂಬ ನಿಯಮವಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ ನೀಡಲಾಗಿದೆ.

ಐಟಿಆರ್‌-3 ಮೂಲಕ ಯಾರು ರಿಟರ್ನ್‌ ಸಲ್ಲಿಸಬೇಕು?

ಐಟಿಆರ್‌-3 ನಮೂನೆಯನ್ನು ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬವು "ಲಾಭಗಳು ಅಥವಾ ವ್ಯಾಪಾರ ಅಥವಾ ವೃತ್ತಿಯ ಲಾಭಗಳು" ಎಂಬ ಶೀರ್ಷಿಕೆಯಡಿಯಲ್ಲಿ ಆದಾಯವನ್ನು ಹೊಂದಿರುವವರು, ಅವರು ನಮೂನೆ ಐಟಿಆರ್‌ 1 (ಸಹಜ್‌) ಮತ್ತು ಐಟಿಆರ್‌-2 ಹಾಗೂ ಐಟಿಆರ್‌ -4 ಸುಗಮ್‌ ಸಲ್ಲಿಸಲು ಅರ್ಹರಲ್ಲದವರು ಬಳಸಬೇಕು.

ಐಟಿಆರ್‌-3 ನಮೂನೆಯನ್ನು ಸಲ್ಲಿಸಲು ಇರುವ ವಿವಿಧ ವಿಧಾನಗಳು ಯಾವುವು?

  1. ಡಿಜಿಟಲ್‌ ಸಿಗ್ನೇಷ್‌ ಮೂಲಕ ವಿದ್ಯುನ್ಮಾನ ವಿಧಾನದ ಮೂಲಕ ಸಲ್ಲಿಸುವುದು.
  2. ಎಲೆಕ್ಟ್ರಿಕಲ್‌ ವೇರಿಫಿಕೇಷನ್‌ ಕೋಡ್‌ ಮೂಲಕ ಐಟಿಆರ್‌ ನಮೂನೆಯನ್ನು ಎಲೆಕ್ಟ್ರಾನಿಕ್‌ ಆಗಿ ಮಾಹಿತಿ ಪಡೆದು ಸಲ್ಲಿಸುವುದು.
  3. ಐಟಿಆರ್‌ ನಮೂನೆ ಭರ್ತಿ ಮಾಡಿ ITR-V ರಿಟರ್ನ್‌ ವೇರಿಫಿಕೇಷನ್‌ ಸಲ್ಲಿಸಿ ಆದಾಯ ತೆರಿಗೆ ಕಚೇರಿಗೆ ಇಮೇಲ್‌ ಮೂಲಕ ಸಲ್ಲಿಸುವುದು.

ಐಟಿಆರ್‌ ಸಲ್ಲಿಕೆಗೆ ಕೊನೆದಿನ ಯಾವಾಗ?

ಐಟಿಆರ್‌ ರಿಟರ್ನ್‌ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಆ ಗಡುವಿನೊಳಗೆ ಸಲ್ಲಿಸದೆ ಇದ್ದರೆ 1-5 ಸಾವಿರದವರೆಗೆ ದಂಡ ಪಾವತಿಸಬೇಕಾಗುತ್ತದೆ.

ಫಾರ್ಮ್‌ 16 ಯಾವಾಗ ದೊರಕುತ್ತದೆ?

ಇಂದು ಅಥವಾ ನಾಳೆ ಅಥವಾ ಸದ್ಯದಲ್ಲಿಯೇ ಕಂಪನಿಗಳು ಉದ್ಯೋಗಿಗಳಿಗೆ ನಮೂನೆ 16 ಅನ್ನು ನೀಡುತ್ತವೆ.

ಫಾರ್ಮ್‌ 16ರಲ್ಲಿ ಈ ವಿಷಯಗಳನ್ನು ಪರಿಶೀಲಿಸಲು ಮರೆಯಬೇಡಿ

1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 203ರ ಪ್ರಕಾರ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ನಮೂನೆ 16 ಅನ್ನು ನೀಡುವುದು ಕಡ್ಡಾಯ. ಇದು ಇವರ ಆದಾಯದ ಮೇಲೆ ಒಟ್ಟು ಟಿಡಿಎಸ್‌ ಅನ್ನು ಪ್ರತಿನಿಧಿಸುತ್ತದೆ. ಫಾರ್ಮ್‌ 16 ದೊರಕಿದ ಬಳಿಕ ಅದರಲ್ಲಿರುವ ವಿವರಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಮಾಡುವವರಿಗೆ ಇದು ಪ್ರಮುಖ ದಾಖಲೆ. ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವ ಸಂದರ್ಭದಲ್ಲಿ ಇದು ಅಗತ್ಯಕ್ಕೆ ಬರುತ್ತದೆ. ಇದರಲ್ಲಿ ನಿಮಗೆ ಪಾವತಿಯಾದ ವೇತನದ ವಿವರ, ಕಡಿತದ ವಿವರ, ಟಿಡಿಎಸ್‌ ವಿವರ ಇತ್ಯಾದಿಗಳು ದೊರಕುತ್ತದೆ. ಫಾರ್ಮ್‌ 16ರಲ್ಲಿ ಗಮನಿಸಬೇಕಾದ ವಿಷಯಗಳ ಕುರಿತು ವಿಶೇಷ ಲೇಖನ ಇಲ್ಲಿದೆ.

ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ಮೊದಲು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

ಜುಲೈ 31 ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಈಗಾಗಲೇ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ಸಾಕಷ್ಟು ಜನರು ಮುಂದಾಗಿದ್ದಾರೆ. ಆನ್‌ಲೈನ್‌ ಮೂಲಕ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವಾಗ ಟೆಕ್ನಿಕಲ್‌ ಆಗಿಯೂ ಕೆಲವು ಎಚ್ಚರಿಕೆವಹಿಸಬೇಕಾಗುತ್ತದೆ. ಎಲ್ಲಾದರೂ ಸಣ್ಣ ತಪ್ಪು ಮಾಡಿದರೂ ದೊಡ್ಡ ಎರರ್‌ಗೆ ಕಾರಣವಾಗಬಹುದು. ನೀವು ಉದ್ಯೋಗದಲ್ಲಿರುವ ವ್ಯಕ್ತಿಯಾಗಿದ್ದರೆ, ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವವರಾಗಿದ್ದಾರೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಬೇಕು. ಈ ಕುರಿತು ವಿಶೇಷ ಲೇಖನ ಇಲ್ಲಿದೆ. ಓದಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.