ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gst Rules: ಜಿಎಸ್‌ಟಿ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ, ಕೇಂದ್ರಕ್ಕೆ ಮತ್ತೊಮ್ಮೆ ಸೆಡ್ಡು ಹೊಡೆದ ಸಿದ್ದರಾಮಯ್ಯ

GST Rules: ಜಿಎಸ್‌ಟಿ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ, ಕೇಂದ್ರಕ್ಕೆ ಮತ್ತೊಮ್ಮೆ ಸೆಡ್ಡು ಹೊಡೆದ ಸಿದ್ದರಾಮಯ್ಯ

GST Rules: ಜಿಎಸ್‌ಟಿ ವಿಧೇಯಕಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ಸಚಿವ ಸಂಪುಟ ಅಂಗೀಕರಿಸಿದೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಸೆಡ್ಡುಹೊಡೆದಿದೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (HT_PRINT/ PTI)

ಬೆಂಗಳೂರು: ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2023 (Karnataka Goods and Service Tax (Amendment) Act 2023) ಕ್ಕೆ ಕರ್ನಾಟಕ ಸಚಿವ ಸಂಪುಟವು (Karnataka Cabinet) ಬುಧವಾರ ಅನುಮೋದನೆ ನೀಡಿದೆ. ಜಿಎಸ್‌ಟಿ ಮಂಡಳಿ (GST Council) ಯಿಂದ ಕೆಲ ತಿದ್ದುಪಡಿಗಳನ್ನು ಅಂಗೀಕರಿಸಲು ನಮಗೆ ಸೂಚಿಸಲಾಗಿತ್ತು. ಆದರೆ ನಾವು ಕರ್ನಾಟಕದಲ್ಲಿ ಎರಡು ತಿದ್ದುಪಡಿ ಒಪ್ಪಿಲ್ಲ ಎಂದು ಸಚಿವ ಎಚ್‌.ಕೆ..ಪಾಟೀಲ ವಿವರಿಸಿದರು.

ಟ್ರೆಂಡಿಂಗ್​ ಸುದ್ದಿ

ವಿಧಾನಸೌಧದಲ್ಲಿ ಸಚಿವ ಸಂಪುಟದ ತೀರ್ಮಾನಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

ಜಿಎಸ್‌ಟಿ ನಿಯಮ '132ಕೆ' ನಿಯಮವನ್ನು ನಾವು ಒಪ್ಪಿಲ್ಲ. 'ಯಾವುದೇ ವ್ಯಾಪಾರಸ್ಥ ಸುಳ್ಳು ಮಾಹಿತಿ ಕೊಟ್ಟರೆ ಅದನ್ನು ಸರಿ ಎಂದು ಸಾಬೀತುಪಡಿಸುವ ಜವಾಬ್ದಾರಿ ಜಿಎಸ್‌ಟಿ ಪಾವತಿದಾರನ ಮೇಲೆಯೇ ಇರುತ್ತಿತ್ತು. ಇದನ್ನು ನಾವು ಬದಲಿಸಿದ್ದೇವೆ. ವ್ಯಾಪಾರಿ ಕೊಟ್ಟ ತಪ್ಪು ಮಾಹಿತಿಯನ್ನು ಪತ್ತೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಕೇಂದ್ರ ಸರ್ಕಾರ ಸೂಚಿಸಿತ್ತು. ಇದನ್ನು ಕರ್ನಾಟಕ ಸಚಿವ ಸಂಪುಟ ಒಪ್ಪಿಲ್ಲ' ಎಂದು ಅವರು ತಿಳಿಸಿದರು.

ಸಚಿವ ಸಂಪುಟ ತೀರ್ಮಾನ ಕುರಿತು ಜಿಎಸ್‌ಟಿ ಮಂಡಳಿಯಲ್ಲಿ ಚರ್ಚೆ ಆಗಬಹುದು. ಆಗ ನಾವೂ ನಮ್ಮ ವಿವರ ಕೊಡುತ್ತೇವೆ. ಈ ವಿಧೇಯಕದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿಯೂ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು

ನೀರಾವರಿ ಯೋಜನೆಗಳಿಗಾಗಿ ಉಪ ಸಮಿತಿ

ಕೃಷ್ಣಾ, ಕಾವೇರಿ, ಮಹದಾಯಿ ಹಾಗೂ ಇತರ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ನ್ಯಾಯಾಧೀಕರಣ ತೀರ್ಮಾನಗಳ ಅನುಷ್ಠಾನದ ಬಗ್ಗೆ ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಅದರಂತೆ ಉಪ ಸಮಿತಿ ರಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಈ ಉಪ ಸಮಿತಿಯಲ್ಲಿ ಯಾರು ಇರಬೇಕೆಂದು ನಿರ್ಧರಿಸಲು ಮುಖ್ಯಮಂತ್ರಿಗೆ ಅಧಿಕಾರ ಕೊಡಲಾಗಿದೆ.

ಅಪರಾಧ ಪ್ರಕರಣ ಹಿಂಪಡೆಯುವ ಕುರಿತು ಪರಿಶೀಲಿಸಲು ಉಪ ಸಮಿತಿ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಸಲವಾಗಿ ಹಲವಾರು ಸಂಘ ಸಂಸ್ಥೆಗಳು ಬಂದು ನಮಗೆ ಮನವಿ ಸಲ್ಲಿಸಿವೆ. ಸರ್ಕಾರ ಪ್ರಕರಣ ಹಿಂಪಡೆಯಬೇಕು ಎಂದು ಕೋರಿದ್ದರು. ಇಂಥ ಮನವಿಗಳನ್ನು ಪರಿಶೀಲಿಸಲು, ಅಪರಾಧ ಪ್ರಕರಣಗಳನ್ನು ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಸಮಿತಿಯಲ್ಲಿ ಯಾರೆಲ್ಲಾ ಇರಬೇಕು ಎನ್ನುವುದು ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದು ಎಚ್‌.ಕೆ.ಪಾಟೀಲ ಹೇಳಿದರು.

ಕರ್ನಾಟಕದಲ್ಲಿ ಎಷ್ಟು ಅಪರಾಧ ಪ್ರಕರಣಗಳ ಬಗ್ಗೆ ಇಂಥ ಬೇಡಿಕೆಯಿದೆ ಎಂಬ ಪ್ರಶ್ನೆಗೆ, "ನನ್ನ ಬಳಿ ಮಾಹಿತಿ ಇಲ್ಲ" ಎಂದು ಎಚ್‌.ಕೆ.ಪಾಟೀಲ ಉತ್ತರಿಸಿದರು.

ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ಸ್ಥಳೀಯ ಸಂಘಟನೆಗಳಿಂದ ಇಂಥ ಮನವಿಗಳು ಬಂದಿದ್ದವು. ಯಾವುದೇ ನಿರ್ದಿಷ್ಟ ಅವಧಿಯಲ್ಲಿ ದಾಖಲಾದ ಪ್ರಕರಣಗಳನ್ನಷ್ಟೇ ಪರಿಶೀಲಿಸುವುದಿಲ್ಲ. ಕಾಲಮಿತಿಯನ್ನು ತೀರ್ಮಾನಿಸಿಲ್ಲ. ನಿರಪರಾಧಿಗಳ ವಿರುದ್ಧ ತಪ್ಪು ಆರೋಪ, ತಪ್ಪಾಗಿ ಪ್ರಕರಣ ದಾಖಲಿಸಲಾಗಿದೆ ಎಂಬ ದೂರು ಬಂದರೆ ಈ ಉಪ ಸಮಿತಿ ಪರಿಶೀಲಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಪೊಲೀಸರು ಅನ್ಯಾಯವಾಗಿ ಪ್ರಕರಣ ದಾಖಲಿಸಿದ್ದರೆ, ಆ ಸಂದರ್ಭದಲ್ಲಿ ಆ ಸ್ಥಳದಲ್ಲಿದ್ದವರಿಂದ ತಪ್ಪು ನಿರ್ಧಾರಗಳಿಂದ ಜನರಿಗೆ ತೊಂದರೆಯಾಗಿದ್ದರೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಲಿದೆ ಎಂಬ ಸಂದೇಶ ರವಾನಿಸುವುದು ಈ ಉಪ ಸಮಿತಿ ರಚನೆಯ ಉದ್ದೇಶ ಎಂದು ಅವರು ಹೇಳಿದರು.

IPL_Entry_Point