ಕನ್ನಡ ಸುದ್ದಿ  /  Nation And-world  /  Business News Little Relief For Hotels And Restaurants Commercial Lpg Price Cut By Rs 30 5 Rmy

LPG Price: ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಕೊಂಚ ರಿಲೀಫ್; ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 30.5 ರೂಪಾಯಿ ಇಳಿಕೆ

LPG Price: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 30.5 ರೂಪಾಯಿ ಇಳಿಕೆ ಮಾಡಲಾಗಿದೆ. 5 ಕೆಜಿಯ ಎಫ್‌ಟಿಎಲ್ ಸಿಲಿಂಡರ್ ಬೆಲೆಯಲ್ಲೂ ಕಡಿತ ಆಗಿದೆ. ಏಪ್ರಿಲ್ 1 ರಿಂದ ಹೊಸ ದರಗಳು ಜಾರಿಗೆ ಬಂದಿವೆ.

19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 30.5 ರೂಪಾಯಿ ಇಳಿಕೆ ಮಾಡಲಾಗಿದೆ.
19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 30.5 ರೂಪಾಯಿ ಇಳಿಕೆ ಮಾಡಲಾಗಿದೆ.

ಬೆಂಗಳೂರು: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಮತ್ತು 5 ಕೆಜಿ ಎಫ್‌ಟಿಎಲ್ (ಫ್ರೀ ಟ್ರೇಡ್ ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆ ಕ್ರಮವಾಗಿ 30.5 ರೂಪಾಯಿ ಹಾಗೂ 7.50 ರೂಪಾಯಿ ಕಡಿಮೆ ಮಾಡಿವೆ. ಪರಿಷ್ಕೃತ ದರಗಳು ಇಂದಿನಿದಂಲೇ (ಏಪ್ರಿಲ್ 1, ಸೋಮವಾರ) ಜಾರಿಗೆ ಬಂದಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 30.50 ರೂಪಾಯಿ ತಗ್ಗಿಸಿದ ಬಳಿಕ 1,764.50 ರೂಪಾಯಿಗೆ ನಿಗದಿಪಡಿಸಲಾಗಿದೆ ಎಂದು ವರದಿ ಮಾಡಿದೆ.

ತೈಲ ಮಾರುಕಟ್ಟೆ ಕಂಪನಿಗಳು 2024ರ ಮಾರ್ಚ್ 1 ರಂದು ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (Commercial LPG) ಸಿಲಿಂಡರ್‌ ಬೆಲೆಗಳನ್ನು ಹೆಚ್ಚಿಸಿದ್ದವು. 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25 ರೂಪಾಯಿ ಏರಿಕೆ ಮಾಡಲಾಗಿತ್ತು. ಇದಾಗ ಒಂದು ತಿಂಗಳ ನಂತರ ಇದೇ ಸಿಲಿಂಡರ್ ಬೆಲೆಯಲ್ಲಿ 30.5 ರೂಪಾಯಿ ಕಡಿಮೆ ಮಾಡಲಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1 ರಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ಅವಲಂಬಿಸಿರುತ್ತವೆ.

2024 ರ ಹೊಸ ವರ್ಷದ ಮುನ್ನಾದಿನದಂದು 19 ಕೆಜಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 39.50 ರೂ.ಗಳಷ್ಟು ಕಡಿತಗೊಳಿಸಲಾಗಿತ್ತು. ಇದೀಗ ಇಳಿಕೆ ಮಾಡಿ ವಾಣಿಜ್ಯ ಸಿಲಿಂಡರ್‌ಗಳನ್ನು ಬಳಕೆ ಮಾಡುವ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಕೊಂಚ ರಿಲೀಫ್ ನೀಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಲೆಗಳ ಕಡಿತ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ

30.5 ರೂಪಾಯಿ ಕಡಿತದ ಬಳಿಕ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,844.50 ರೂಪಾಯಿ ಇದೆ. ಮಾರ್ಚ್ ತಿಂಗಳಲ್ಲಿ 23 ರೂಪಾಯಿ ಹೆಚ್ಚಳ ಮಾಡಲಾಗಿತ್ತು, ಅದೇ ರೀತಿಯಾಗಿ ಫೆಬ್ರವರಿ 12 ರೂಪಾಯಿ ಹೆಚ್ಚಳ, ಜನವರಿಗ 4 ರೂಪಾಯಿ ಕಡಿತ, 2023 ಡಿಸೆಂಬರ್‌ನಲ್ಲಿ 14 ರೂಪಾಯಿ ಕಡಿತ, ನವೆಂಬರ್‌ನಲ್ಲಿ 44 ರೂಪಾಯಿ ಏರಿಕೆ, ಅಕ್ಟೋಬರ್‌ನಲ್ಲಿ 203 ರೂಪಾಯಿ ಏರಿಕೆ, ಸೆಪ್ಟೆಂಬರ್‌ನಲ್ಲಿ 153 ರೂಪಾಯಿ ಇಳಿಕೆ, ಆಗಸ್ಟ್‌ನಲ್ಲಿ 93 ರೂಪಾಯಿ ಇಳಿಕೆ ಮಾಡಲಾಗಿತ್ತು.

14 ಕೆಜಿ ತೂಕದ ಅಡುಗೆ ಸಿಲಿಂಡರ್ ಬೆಲೆಯಲ್ಲಿ ಯಥಾಸ್ಥಿತಿ

14 ಕೆಜಿ ತೂಕದ ಅಡುಗೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಳತವಾಗಿಲ್ಲ. ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಪ್ರಸ್ತುತ ಬೆಂಗಳೂರಿನಲ್ಲಿ 14 ಕೆಜಿ ತೂಕದ ಅಡುಗೆ ಸಿಲಿಂಡರ್ ಬೆಲೆ 805.50 ರೂಪಾಯಿ ಇದೆ. 2024ರ ಮಾರ್ಚ್‌ನಲ್ಲಿ ಈ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಕಡಿಮೆ ಮಾಡಲಾಗಿತ್ತು. 2023ರ ಸೆಪೆಂಬರ್‌ನಿಂದ 2024ರ ಫೆಬ್ರವರಿ ವರೆಗೆ ಅಡುಗೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆ ಮಾಡಿರಲಿಲ್ಲ.

ವಿಭಾಗ