ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ ಎಫೆಕ್ಟ್; ದಿನದ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 2000 ಅಂಕಗಳ ಭಾರಿ ಜಿಗಿತ

ಲೋಕಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ ಎಫೆಕ್ಟ್; ದಿನದ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 2000 ಅಂಕಗಳ ಭಾರಿ ಜಿಗಿತ

ಜೂನ್ 3ರ ಸೋಮವಾರ ಮುಂಬೈ ಷೇರು ಮಾರುಕಟ್ಟೆ ಹೊಸ ದಾಖಲೆ ಬರೆದಿದ್ದು, ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಬರೋಬ್ಬರಿ 2000 ಅಂಕ ಹೆಚ್ಚಿಸಿಕೊಂಡಿದೆ. ನಿಫ್ಟಿ 660 ಅಂಕಗಳ ಏರಿಕೆಯೊಂದಿಗೆ ಹೊಸ ದಾಖಲೆ ಬರೆಯುತ್ತಿವೆ. ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

ಲೋಕಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ ಪರಿಣಾಮದಿಂದ ದಿನದ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 2000 ಅಂಕಗಳ ಭಾರಿ ಜಿಗಿತ ಕಂಡಿದೆ.
ಲೋಕಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ ಪರಿಣಾಮದಿಂದ ದಿನದ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 2000 ಅಂಕಗಳ ಭಾರಿ ಜಿಗಿತ ಕಂಡಿದೆ. (Bloomberg)

ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಎಕ್ಸಿಟ್ ಪೋಲ್‌ನಲ್ಲಿ (Exit Poll 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 350 ಪ್ಲಸ್ ಸ್ಥಾನಗಳನ್ನು ಗಳಿಸುತ್ತದೆ ಎಂದು ಅಂದಾಜಿಸಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಇದೇ ರೀತಿಯ ಭವಿಷ್ಯವನ್ನು ಹೇಳಿರುವ ಪರಿಣಾಮ ಮುಂಬೈ ಷೇರುಪೇಟೆಯಲ್ಲಿ (Mumbai Share Market) ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಹೊಸ ದಾಖಲೆಯನ್ನು ಬರೆದಿವೆ. ಜೂನ್ 3ರ ಸೋಮವಾರದ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಬರೋಬ್ಬರಿ 2000 ಸಾವಿರ ಅಂಕಗಳ ಭಾರಿ ಜಿಗಿತದೊಂದಿಗೆ 76 ಸಾವಿರ ಗಡಿ ದಾಟುವ ಮೂಲಕ ಮುಂಬೈ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಮತ್ತೊಂದೆಡೆ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 650 ಅಂಕಗಳ ಏರಿಕೆಯೊಂದಿಗೆ 23 ಸಾವಿರಕ್ಕೆ ಬಂದು ನಿಂತಿದೆ.

ಟ್ರೆಂಡಿಂಗ್​ ಸುದ್ದಿ

ಟಾಟಾ ಸ್ಟೀಲ್, ಡಿಮಾರ್ಟ್, ಜೆಕೆ ಸಿಮೆಂಟ್ , ಎಲ್‌ಐಸಿ, ಐಆರ್‌ಸಿಟಿಸಿ, ಟಿವಿಎಸ್ ಮೋಟಾರ್ಸ್, ಅದಾನಿ ಗ್ರೀನ್, ಬಜಾಜ್ ಫೈನಾನ್ಸ್, ಟೈಟಾನ್, ಏಷಿಯನ್ ಪೈಂಟ್ಸ್, ರಿಲಯನ್ಸ್, ಏರ್ಟೆಲ್, ಟಾಟಾ, ಟಿಸಿಎಸ್ ಪೇಟಿಎಂ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಇಂದಿನ (ಜೂನ್ 3, ಸೋಮವಾರ) ಆರಂಭಿಕ ವಹಿವಾಟಿನಲ್ಲಿ ಲಾಭಗಳಿಸಿರುವ ಪ್ರಮುಖ ಷೇರು ಕಂಪನಿಗಳಾಗಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹೂಡಿಕೆದಾರರು ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಬಗ್ಗೆ ಆಶಾವಾದಿಯಾಗಿರುವ ಕಾರಣ ನಿಫ್ಟಿ 50 23,000 ಮತ್ತು ಬಿಎಸ್ಇ ಸೆನ್ಸೆಕ್ಸ್ 76,000 ಗಡಿ ದಾಟಿದೆ. ಬಿಎಸ್ಇ ಸೆನ್ಸೆಕ್ಸ್ 2,178 ಪಾಯಿಂಟ್ಸ್ ಅಥವಾ ಶೇಕಡಾ 2.94 ರಷ್ಟು ಏರಿಕೆ ಕಂಡು 76,139 ಕ್ಕೆ ವಹಿವಾಟು ನಡೆಸುತ್ತಿವೆ.

ಎಲ್ಲಾ 30 ಸೆನ್ಸೆಕ್ಸ್ ಕಂಪನಿಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಪವರ್ ಗ್ರಿಡ್, ಎನ್‌ಟಿಪಿ, ಲಾರ್ಸೆನ್ ಆಂಡ್ ಟರ್ಬೋ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, , ಇಂಡಸ್ಇಂಡ್ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಮತ್ತು ಮಹೀಂದ್ರಾ & ಮಹೀಂದ್ರಾ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಬಿಎಸ್ಇಯಲ್ಲಿ ಎಲ್ಲಾ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು 423.21 ಲಕ್ಷ ಕೋಟಿ ರೂ.ಗೆ ಏರಿದೆ.

ಬ್ಯಾಂಕ್, ತೈಲ, ಅನಿಲ, ಹಣಕಾಸು ಸೇವೆಗಳು, ಲೋಹ, ರಿಯಾಲ್ಟಿ ಹಾಗೂ ಆಟೋ 3 ಷೇರುಗಳು ಒಟ್ಟಾರೆಯಾಗಿ ಶೇಕಡಾ 5 ರಷ್ಟು ಏರಿಕೆಯಾಗಿವೆ. ಮಾರ್ಚ್‌ನಲ್ಲಿ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಶೇಕಡಾ 8.2 ರಷ್ಟು ಬೆಳೆದಿದೆ ಎಂದು ಭಾರತದ ಜಿಡಿಪಿ ದತ್ತಾಂಶವು ತೋರಿಸಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಶಾಂಘೈ ಕೆಂಪು ಬಣ್ಣದಲ್ಲಿದೆ. ಯುಎಸ್ ಮಾರುಕಟ್ಟೆಗಳು ಶುಕ್ರವಾರ ಹೆಚ್ಚಾಗಿ ಏರಿಕೆ ಕಂಡಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಶುಕ್ರವಾರ 1,613.24 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಅಂಕಿ ಅಂಶಗಳು ತಿಳಿಸಿವೆ. ಜಾಗತಿಕ ತೈಲ ಬೆಂಚ್‌ಮಾರ್ಟ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.04 ರಷ್ಟು ಇಳಿದು ಬ್ಯಾರೆಲ್‌ಗೆ 81.08 ಡಾಲರ್‌ಗೆ ತಲುಪಿದೆ.

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿವೆ. ಆದರೆ ಸ್ಪಷ್ಟಚಿತ್ರಣ ಜೂನ್ 4ರ ಮಂಗಳವಾರ ನಡೆಯಲಿರುವ ಮತ ಎಣಿಕೆಯಲ್ಲಿ ಗೊತ್ತಾಗಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024