Stock Market Update: ಲೋಕಸಭಾ ಚುನಾವಣೆ ಮತ ಎಣಿಕೆ ಪರಿಣಾಮ, ಷೇರುಪೇಟೆಯಲ್ಲಿ ತಲ್ಲಣ; ಸೆನ್ಸೆಕ್ಸ್‌ 2800 ಅಂಕ ಕುಸಿತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Stock Market Update: ಲೋಕಸಭಾ ಚುನಾವಣೆ ಮತ ಎಣಿಕೆ ಪರಿಣಾಮ, ಷೇರುಪೇಟೆಯಲ್ಲಿ ತಲ್ಲಣ; ಸೆನ್ಸೆಕ್ಸ್‌ 2800 ಅಂಕ ಕುಸಿತ

Stock Market Update: ಲೋಕಸಭಾ ಚುನಾವಣೆ ಮತ ಎಣಿಕೆ ಪರಿಣಾಮ, ಷೇರುಪೇಟೆಯಲ್ಲಿ ತಲ್ಲಣ; ಸೆನ್ಸೆಕ್ಸ್‌ 2800 ಅಂಕ ಕುಸಿತ

ಲೋಕಸಭಾ ಚುನಾವಣೆ 2024ರ ಫಲಿತಾಂಶ ಇಂದು (ಜೂನ್‌ 4) ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಚುನಾವಣಾ ಫಲಿತಾಂಶದ ಪರಿಣಾಮ ಷೇರುಪೇಟೆಯಲ್ಲಿ ತಲ್ಲಣ ಉಂಟಾಗಿದ್ದು, ಸೆನ್ಸೆಕ್ಸ್‌ ಹಾಗೂ ನಿಫ್ಟಿ ಭಾರಿ ಇಳಿಕೆ ಕಂಡಿದೆ. ಸೆನೆಕ್ಸ್‌ 1000 ಅಂಕಗಳಷ್ಟು ಕುಸಿತ ಕಂಡಿದೆ.

ಲೋಕಸಭೆ ಚುನಾವಣೆ ಮತ ಎಣಿಕೆ ಪರಿಣಾಮ, ಷೇರುಪೇಟೆಯಲ್ಲಿ ತಲ್ಲಣ
ಲೋಕಸಭೆ ಚುನಾವಣೆ ಮತ ಎಣಿಕೆ ಪರಿಣಾಮ, ಷೇರುಪೇಟೆಯಲ್ಲಿ ತಲ್ಲಣ (REUTERS)

ಬೆಂಗಳೂರು: ಲೋಕಸಭಾ ಚುನಾವಣೆಯ ಪರಿಣಾಮ ಷೇರುಪೇಟೆ ಮೇಲಾಗಿದ್ದು, ಇಂದು (ಜೂನ್‌ 1) ಮತಎಣಿಕೆ ಆರಂಭವಾದ ಬೆನ್ನಲ್ಲೇ ಪೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು ಬೆಳಿಗ್ಗೆ 9.15 ರ ಹೊತ್ತಿಗೆ 2.2 ಶೇ 22,779 ರಷ್ಟು ಕುಸಿದಿದೆ ಮತ್ತು ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ ಶೇ 1.8 ರಷ್ಟು ಕುಸಿದು 75,163 ಕ್ಕೆ ತಲುಪಿದೆ.

ಲೋಕಸಭಾ ಚುನಾವಣೆ 2024ರ ಆರಂಭಿಕ ಹಂತದ ಮತದಾನದಲ್ಲಿ ಎನ್‌ಡಿರ ಮೈತ್ರಿಕೂಟಗಳು 290ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಪೂರ್ಣ ಪ್ರಮಾಣದ ಫಲಿತಾಂಶ ಇನ್ನಷ್ಟೇ ತಿಳಿಯಬೇಕಿದೆ.

ಸೋಮವಾರ ಭಾರತದ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳು ಶೇ 3ಕ್ಕಿಂತ ಹೆಚ್ಚು ಗಳಿಕೆ ಕಾಣುವ ಮೂಲಕ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದವು. ಬಿಜೆಪಿ ಮೈತ್ರಿಕೂಟವು ಕೆಳಮನೆಯಲ್ಲಿ ಮೂರನೇ ಎರಡಷ್ಟು ಬಹುಮತ ಪಡೆಯುವ ಸಾಧ್ಯತೆ ಇದೆ ಎಂದು ಎಕ್ಸಿಟ್‌ ಫಲಿತಾಂಶಗಳು ಭವಿಷ್ಯ ನುಡಿದ ಹಿನ್ನೆಲೆ ಪೇರುಪೇಟೆ ಆಕಾಶದೆತ್ತರಕ್ಕೆ ಜಿಗಿದಿತ್ತು.

ಆದರೆ ನಿನ್ನೆಯ ದಾಖಲೆಯ ಜಿಗಿತ ಒಂದೇ ದಿನಕ್ಕೆ ಕುಸಿದಿದೆ. ಒಂದು ಪೇರುಪೇಟೆ ಶೇ 4 ರಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್‌ 2800 ಅಂಕಗಳಷ್ಟು ಇಳಿಕೆ ಕಂಡರೆ, ನಿಫ್ಟಿ 874 ಅಂಕಗಳಿಗಿಂತ ಹೆಚ್ಚು ಇಳಿಕೆ ಕಂಡಿದೆ. ಪಿಎಸ್‌ಯು ಹಾಗೂ ಬ್ಯಾಂಕಿಂಗ್‌ ಷೇರುಗಳು ಭಾರಿ ಇಳಿಕೆ ಕಂಡಿದ್ದನ್ನು ಈ ವೇಳೆ ಗಮನಿಸಬಹುದು.

ಪವರ್ ಗ್ರಿಡ್, ಎಸ್‌ಬಿಐ, ಎಲ್ & ಟಿ, ಎನ್‌ಟಿಪಿಸಿ, ಮತ್ತು ರಿಲಯನ್ಸ್‌ನಂತಹ ಷೇರುಗಳು ಕೂಡ ಇಂದು ಇಳಿಕೆ ಕಂಡು ಮಾರುಕಟ್ಟೆ ಇನ್ನಷ್ಟು ನಷ್ಟ ಕಾಣಲು ಕಾರಣವಾಗಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.