ಕನ್ನಡ ಸುದ್ದಿ  /  Nation And-world  /  Business News Lpg Price Update Rates Of Commercial Cylinders Increased By <Span Class='webrupee'>₹</span>25 Today India News Uks

LPG Price Hike: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 25 ರೂಪಾಯಿ ಏರಿಕೆ; ಯಾವ ನಗರದಲ್ಲಿ ಎಷ್ಟು ರೇಟ್

LPG Price Hike: ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ರೂಢಿಯಂತೆ ಅಂದರೆ ತಿಂಗಳ ಮೊದಲ ದಿನ ಎಲ್‌ಪಿಜಿ ದರ ಪರಿಷ್ಕರಿಸುತ್ತವೆ. ಇದರಂತೆ ಇಂದು (ಮಾ.1) ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಪರಿಷ್ಕರಣೆಯಾಗಿದ್ದು, 25 ರೂಪಾಯಿ ಏರಿಕೆಯಾಗಿದೆ. ಯಾವ ನಗರದಲ್ಲಿ ಎಷ್ಟು ದರ ಇಲ್ಲಿದೆ ವಿವರ.

ಗ್ಯಾಸ್ ಏಜೆನ್ಸಿಯೊಂದರ ಎದುರಿನ ಚಟುವಟಿಕೆ (ಸಾಂಕೇತಿಕ ಚಿತ್ರ)
ಗ್ಯಾಸ್ ಏಜೆನ್ಸಿಯೊಂದರ ಎದುರಿನ ಚಟುವಟಿಕೆ (ಸಾಂಕೇತಿಕ ಚಿತ್ರ) (PTI)

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ (ಮಾ 1) ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 25 ರೂಪಾಯಿ ಹೆಚ್ಚಿಸಿವೆ. ಇದರೊಂದಿಗೆ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ನ ಚಿಲ್ಲರೆ ದರ 1,795 ರೂಪಾಯಿ ಆಗಿದೆ. ಇದೇ ರೀತಿ, ಮುಂಬೈನಲ್ಲಿ ಇಂದಿನಿಂದ 19 ಕೆಜಿ ಸಿಲಿಂಡರ್ 1,749 ರೂ.ಗೆ ಮಾರಾಟವಾಗಲಿದೆ. ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಕ್ರಮವಾಗಿ 1,960 ರೂಪಾಯಿ ಮತ್ತು 1,911 ರೂಪಾಯಿಗೆ ಏರಿದೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ವಾಣಿಜ್ಯ ಅನಿಲ ಸಿಲಿಂಡರ್‌ ಬೆಲೆಯನ್ನು ಸತತ ಎರಡನೇ ಬಾರಿಗೆ ಹೆಚ್ಚಿಸಿವೆ. ಫೆಬ್ರವರಿ 1 ರಂದು 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 14 ರೂಪಾಯಿ ಹೆಚ್ಚಿಸಲಾಗಿತ್ತು. ಇದರೊಂದಿಗೆ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಕ್ರಮವಾಗಿ ದೆಹಲಿಯಲ್ಲಿ 1,769.50 ರೂ, ಕೋಲ್ಕತಾದಲ್ಲಿ 1,887 ರೂ., ಮುಂಬಯಿಯಲ್ಲಿ 1,723 ರೂ ಮತ್ತು ಚೆನ್ನೈನಲ್ಲಿ 1,937 ರೂಪಾಯಿ ಆಗಿತ್ತು.

ತೈಲ ಕಂಪನಿಗಳು 2023 ರ ಡಿಸೆಂಬರ್ 1 ರಂದು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ ದರವನ್ನು 21 ರೂಪಾಯಿ ಹೆಚ್ಚಿಸಿದ್ದವು. ಆದಾಗ್ಯೂ, 2024 ರ ಹೊಸ ವರ್ಷದ ಮುನ್ನಾದಿನ, 19 ಕೆಜಿ ವಾಣಿಜ್ಯ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 39.50 ರೂಪಾಯಿ ಕಡಿತಗೊಳಿಸಲಾಯಿತು.

ಪ್ರಮುಖ ನಗರಗಳಲ್ಲಿ ಇಂದಿನಿಂದ (ಮಾ.1) ವಾಣಿಜ್ಯ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ

 • ದೆಹಲಿ - 1,795 ರೂ
 • ಮುಂಬೈ - 1,749 ರೂ
 • ಕೋಲ್ಕತ್ತಾ - 1,911 ರೂ
 • ಚೆನ್ನೈ - 1,960.50 ರೂ
 • ಚಂಡೀಗಢ - 1,816 ರೂ
 • ಬೆಂಗಳೂರು - 1,875 ರೂ
 • ಇಂದೋರ್ - 1,901 ರೂ
 • ಅಮೃತಸರ - 1,895
 • ಜೈಪುರ - 1,818 ರೂ

(ಇದು ವಿತರಕರನ್ನು ಅವಲಂಬಿಸಿ ಬದಲಾಗಬಹುದು.)

ಪ್ರಮುಖ ನಗರಗಳಲ್ಲಿ ಫೆ 1 ರಂದು ಬದಲಾಗಿದ್ದ ವಾಣಿಜ್ಯ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ

 • ದೆಹಲಿ - 1,769.50 ರೂಪಾಯಿ
 • ಮುಂಬೈ - 1,723 ರೂ
 • ಕೋಲ್ಕತ್ತಾ - 1,887 ರೂ
 • ಚೆನ್ನೈ - 1,937 ರೂ

ಇದನ್ನೂ ಓದಿ| ಬೆಟ್ಟವನ್ನು ಕೊರೆದು ಗ್ರಾಮಸ್ಥರಿಗೆ ದಾರಿ ಮಾಡಿಕೊಟ್ಟ ಛಲಗಾರ, ಬಿಹಾರದ ದಶರಥ್‌ ಮಾಂಜಿಯ ಕಥೆಯನ್ನೊಮ್ಮೆ ಓದಿ

ಏತನ್ಮಧ್ಯೆ, ದೇಶೀಯ ಅನಿಲ ಸಿಲಿಂಡರ್‌ಗಳ (ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್‌) ಬೆಲೆಗಳು ಸ್ಥಿರವಾಗಿವೆ. 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 903 ರೂ., ಕೋಲ್ಕತ್ತಾದಲ್ಲಿ 929 ರೂ., ಮುಂಬೈನಲ್ಲಿ 902.50 ರೂ., ಚೆನ್ನೈನಲ್ಲಿ 918.50 ರೂ. ಇದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್‌) ಪ್ರತಿ ತಿಂಗಳ 1 ರಂದು ಅಡುಗೆ ಅನಿಲ ಬೆಲೆಯನ್ನು ಹಿಂದಿನ ತಿಂಗಳ ಸರಾಸರಿ ಅಂತರರಾಷ್ಟ್ರೀಯ ಬೆಲೆಯ ಆಧಾರದ ಮೇಲೆ ಪರಿಷ್ಕರಿಸುತ್ತವೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point