ಮರದ ಕವರ್‌ನೊಂದಿಗೆ ಬಂದಿದೆ ನಾರ್ಡಿಕ್ ವುಡ್ ಮೊಟೊರೊಲಾ ಎಡ್ಜ್ 50 ಅಲ್ಟ್ರಾ, 59999 ರೂಪಾಯಿ ಭರ್ಜರಿ ಫೋನ್‌ನ ವೈಶಿಷ್ಟ್ಯ ಮತ್ತು ಇತರೆ ವಿವರ
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ದುಮಾಡತೊಡಗಿದೆ ಮೊಟೊರೊಲಾ ಎಡ್ಜ್ 50 ಅಲ್ಟ್ರಾ. ಮೂರು ವೈರೆಟಿಗಳ ಪೈಕಿ ನಾರ್ಡಿಕ್ ವುಡ್ ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಗಮನಸೆಳೆದಿದೆ. 59999 ರೂಪಾಯಿ ಭರ್ಜರಿ ಫೋನ್‌ನ ವೈಶಿಷ್ಟ್ಯ ಮತ್ತು ಇತರೆ ವಿವರ ಹೀಗಿದೆ ನೋಡಿ.

ಬೆಂಗಳೂರು: ಮೊಟೊಎಡ್ಜ್ 50 ಅಲ್ಟ್ರಾ (Moto Edge 50 Ultra) ಸ್ಮಾರ್ಟ್‌ಫೋನ್ ಅನ್ನು ಮೊಟೊರೊಲಾ (Motorola) ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸಲ ಮೊಟೊರೊಲಾ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್ ವಿಶಿಷ್ಟವಾಗಿದ್ದು, ಮರದ ವರ್ಣದ ಕವರ್‌ನೊಂದಿಗೆ ಗಮನಸೆಳೆದಿದೆ. ಈ ಫೋನ್ ದರದ ವಿಚಾರದಲ್ಲಿ ಸ್ವಲ್ಪ ಕೈಕಚ್ಚುವಂಥದ್ದೇ ಆಗಿದೆ. ಹೆಚ್ಚೇನಿಲ್ಲ, 59,999 ರೂಪಾಯಿ ಮಾತ್ರ. ಆದಾಗ್ಯೂ, ಇದರ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂಬುದೂ ಅಷ್ಟೇ ವಾಸ್ತವ.
ಮರದ ವರ್ಣದಲ್ಲಿರುವ ಫೋನ್ ಮಾದರಿಗೆ ಮೊಟೊರೊಲಾ, ನಾರ್ಡಿಕ್ ವುಡ್ (Nordic Wood) ಎಂದು ನಾಮಕರಣ ಮಾಡಿದೆ. ಈ ಕವಚವನ್ನು ಮರುಬಳಕೆ ಮಾಡಬಹುದಾದ ಮರದ ನಾರುಗಳಿಂದ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಫೋನ್‌ನ ಪ್ಯಾನೆಲ್ ನೀರು ಮತ್ತು ಎಣ್ಣೆ ನಿರೋಧಕವಾಗಿದ್ದು, ಈ ಎರಡು ವಸ್ತುಗಳಿಂದ ಅದು ಹಾನಿಗೊಳಗಾಗದು. ಕಾಲಾನುಕ್ರಮದಲ್ಲಿ ಹೆಚ್ಚಿನ ಬಳಕೆಯ ನಂತರವೂ ಪ್ಯಾನೆಲ್‌ನ ಬಣ್ಣ ಬದಲಾಗದು ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. ಈ ಫೋನ್ ಕಪ್ಪು ಮತ್ತು ಪೀಚ್ ಫಝ್ ವರ್ಣದಲ್ಲಿ ಕೂಡ ಲಭ್ಯವಿದೆ. ಮೊಟೊ ಎಡ್ಜ್ 50 ಅಲ್ಟ್ರಾ ಫೋನ್ ಧೂಳು ಮತ್ತು ನೀರು ನಿರೋಧಕ ಶ್ರೇಯಾಂಕದ ಪೈಕಿ ಐಪಿ68 ರೇಟಿಂಗ್ ಪಡೆದಿದೆ.
ಮೊಟೊ ಎಡ್ಜ್ 50 ಅಲ್ಟ್ರಾ; ಪ್ರಮುಖ ವೈಶಿಷ್ಟ್ಯ
1) ಮೊಟೊ ಎಡ್ಜ್ 50 ಅಲ್ಟ್ರಾದಲ್ಲಿ 6.7 ಇಂಚಿನ p-OLED ಡಿಸ್ಪ್ಲೇ ಮತ್ತು 1.5K ರೆಸಲ್ಯೂಷನ್ ಜೊತೆಗೆ 144Hz ವರೆಗೆ ರಿಫ್ರೆಶ್ ದರ
2) ಫ್ಯಾನೆಲ್‌ನ ಪ್ರಕಾಶ 2,500 ನಿಟ್ಸ್ ಇದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಮೂಲಕ ರಕ್ಷಿಸಲ್ಪಟ್ಟಿದೆ.
3) ಹೊರ ಚೌಕಟ್ಟು ನಾಜೂಕು ಮತ್ತು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ.
4) ಸ್ನ್ಯಾಪ್‌ಡ್ರಾಗನ್ 8s Gen 3, 4,500 mAh ಬ್ಯಾಟರಿ, 125W ವೇಗದ ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್
5) ಮೊಟೊರೊಲಾದ ಈ ಸ್ಮಾರ್ಟ್‌ಫೋನ್ ಹಲೊ ಯುಐ ಮತ್ತು ಆಂಡ್ರಾಯ್ಡ್ 14ರ ವರ್ಷನ್ ಹೊಂದಿದೆ.
6) ಮೂರು ವರ್ಷಗಳ ಅವಧಿಗೆ ಪ್ರಮುಖ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್f ಮತ್ತು 4 ವರ್ಷಗಳ ಅವಧಿಗೆ ಸೆಕ್ಯುರಿಟಿ ಅಪ್ಡೇಟ್ಸ್ ಬದ್ಧತೆಯೊಂದಿಗೆ ಲಭ್ಯವಿದೆ.
7) ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 7, ಬ್ಲೂಟೂತ್ 5.4 ಮತ್ತು NFC ಗಳಿವೆ.
8) ಬಯೋಮಿಮೆಟಿಕ್ಸ್ ಅನ್ನು ಅಂಡರ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ಮೂಲಕ ನಿರ್ವಹಿಸಲಾಗುತ್ತದೆ. ಸ್ಟೀರಿಯೋ ಸ್ಪೀಕರ್‌ಗಾಗಿ ಟ್ಯಾಬ್ಲೆಟ್ ಮತ್ತು PC ಗಳೊಂದಿಗೆ ಸ್ಮಾರ್ಟ್ ಸಂಪರ್ಕಕ್ಕೆ ಸಪೋರ್ಟ್ ಮಾಡುತ್ತದೆ.
9) ಮೊಟೊ ಎಐ ಎಂಬ ಎಐ ಸ್ಯೂಟ್ ಹೊಂದಿದ್ದು, ಫೋಟೋ ಎಡಿಟಿಂಗ್ ಮತ್ತು ವಾಲ್‌ಪೇಪರ್ ಉತ್ಪಾದನೆಗೆ ನೆರವಾಗುತ್ತದೆ. AI ಮ್ಯಾಜಿಕ್ ಕ್ಯಾನ್ವಾಸ್ ಕೂಡ ಲಭ್ಯವಿದೆ.
10) ಛಾಯಾಗ್ರಹಣಕ್ಕಾಗಿ, ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೇರಿ f/1.6 OIS ಲೆನ್ಸ್, 64-ಮೆಗಾಪಿಕ್ಸೆಲ್ 3x ಟೆಲಿಫೋಟೋ ಮತ್ತು ಇನ್ನೊಂದು 50-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಟೋಫೋಕಸ್‌ನೊಂದಿಗೆ ಮೂರು ಸಂವೇದಕಗಳನ್ನು ಹೊಂದಿದೆ. ಮ್ಯಾಕ್ರೋ ಮುಂಭಾಗದ ಕ್ಯಾಮೆರಾವು 50-ಮೆಗಾಪಿಕ್ಸೆಲ್ f/1.9 ಆಗಿದೆ.
ಭಾರತದ ಮಾರುಕಟ್ಟೆಯಲ್ಲಿ ಮೊಟೊ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್‌ಫೋನ್ ಜೂನ್ 24 ರಿಂದ ಸೀಮಿತ ಅವಧಿಗೆ 54,999 ರೂಪಾಯಿಗೆ ಲಭ್ಯವಿದೆ. ಈ ದರವು ವಿಶೇಷ ಪರಿಚಯಾತ್ಮಕ ದರವಾಗಿದ್ದು, ಕೊಡುಗೆ ದೀರ್ಘಕಾಲ ಇರಲಾರದು ಎಂದು ಕಂಪನಿ ಮೂಲಗಳು ತಿಳಿಸಿವೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
