ಮುಂಬೈ ಷೇರು ಮಾರುಕಟ್ಟೆಗೆ ಇಂದು ರಜೆ ಇಲ್ಲ: ಈ ಕಾರಣಕ್ಕೆ ಶನಿವಾರ ನಡೆಯುತ್ತೆ ಲೈವ್ ಟ್ರೇಡಿಂಗ್ -Share Market Special Session
ಶನಿವಾರ ಷೇರು ಮಾರ್ಕೆಟ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇದಕ್ಕೊಂದು ಕಾರಣವಿದೆ. ಡಿಸಾಸ್ಟರ್ ರಿಕವರಿ ಸಿಸ್ಟಮ್ ಅನ್ನು ಪರೀಕ್ಷೆ ಮಾಡಲು ಈ ವಿಶೇಷ ಲೈವ್ ಸೆಷನ್ ನಡೆಸಲಾಗುತ್ತಿದೆ.
ಮುಂಬೈ: ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಇಂದು (ಮಾರ್ಚ್ 2, ಶನಿವಾರ) ಎರಡು ವಿಶೇಷ ಲೈವ್ ಟ್ರೇಡಿಂಗ್ ಸೆಷನ್‌ಗಳನ್ನು ನಡೆಸಲಿವೆ. ತುರ್ತು ಸಂದರ್ಭದಲ್ಲಿ ಷೇರು ಮಾರುಕಟ್ಟೆಯ ವಿಪತ್ತು ಸನ್ನದ್ಧತೆಯನ್ನು ಪರೀಕ್ಷಿಸಲು ಈ ಅಧಿವೇಶನವನ್ನು ನಡೆಸಲಾಗುತ್ತಿದೆ. ಶನಿವಾರ ಸಾಮಾನ್ಯವಾಗಿ ಷೇರು ಮಾರುಕಟ್ಟೆ ರಜೆ ಇರುತ್ತದೆ. ಆದರೆ ವಿಪತ್ತು ಸಂದರ್ಭದಲ್ಲಿ ವ್ಯವಹಾರ ಮುಂದುವರಿಕೆ ಯೋಜನೆಗೆ ಸುಗಮ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಮಾರ್ಚ್ 2 ರಂದು ನೇರ ವ್ಯಾಪಾರ ಸೆಷನ್ ನಡೆಯಲಿದೆ ಎಂದು ಎನ್ಎಸ್ಇ ಮತ್ತು ಬಿಎಸ್ಇ ಫೆಬ್ರವರಿಯಲ್ಲಿ ಘೋಷಿಸಿದ್ದವು. ತುರ್ತು ಸಂದರ್ಭದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ವ್ಯಾಪಾರ ಮುಂದುವರಿಯುತ್ತದೆ ಎಂದು ಇದು ಖಚಿತಪಡಿಸುತ್ತದೆ. ಇವತ್ತು ಷೇರು ಮಾರುಕಟ್ಟೆಯಿಂದ ಒಟ್ಟು ಎರಡು ವಿಶೇಷ ಲೈವ್ ಟ್ರೇಡಿಂಗ್ ಅಧಿವೇಶನಗಳು ನಡೆಯಲಿದ್ದು, ಅವುಗಳ ಸಮಯವು ಬೆಳಿಗ್ಗೆ 9:15 ರಿಂದ 10 ರವರೆಗೆ ಮತ್ತು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ ಇರುತ್ತದೆ.
ಷೇರು ಖರೀದಿ ಮತ್ತು ಮಾರಾಟಗಾರರು ಮತ್ತು ಡಿಪಾಸಿಟರಿಗಳಿಗೆ ವ್ಯವಹಾರ ಮುಂದುವರಿಕೆ ಯೋಜನೆ (ಬಿಸಿಪಿ) ಮತ್ತು ರಿಸಾಸ್ಟರ್ ರಿಕವರಿ ಸಿಸ್ಟಮ್ (ಡಿಆರ್‌ಎಸ್) ಚೌಕಟ್ಟಿನ ಭಾಗವಾಗಿ ಸೆಬಿ ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ಲೈವ್ ಟ್ರೇಡಿಂಗ್ ಸೆಷನ್ಸ್‌ಗಳನ್ನು ನಡೆಸಲಾಗುತ್ತಿದೆ. ಇದರರ್ಥ ಮಾರ್ಚ್ ಮೊದಲ ಶನಿವಾರ ಷೇರು ಮಾರುಕಟ್ಟೆ ರಜಾದಿನವಾಗಿರುವುದಿಲ್ಲ.
ಏನಿದು ಡಿಸಾಸ್ಟರ್ ರಿಕವರಿ ಸಿಸ್ಟಮ್?
ಈಕ್ವಿಟೀಸ್ ಹಿರಿಯ ಉಪಾಧ್ಯಕ್ಷ, ಸಂಶೋಧನಾ ವಿಶ್ಲೇಷಕ ಪ್ರಶಾಂತ್ ತಾಪ್ಸೆ ಈ ಬಗ್ಗೆ ಮಾಹಿತಿ ನೀಡಿ, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವ ಭಾರತವು ಯಾವುದೇ ಪರಿಸ್ಥಿತಿಯನ್ನು ತಡೆದುಕೊಳ್ಳಲು ಅದರ ಮೂಲಸೌಕರ್ಯವು ಬಲವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಶೂನ್ಯ ಡೌನ್‌ಟೈಮ್‌ನೊಂದಿಗೆ ವ್ಯವಹಾರ ನಡೆಸಲು ಸಿದ್ಧವಾಗಲು ಇಂತಹ ಸೆಷನ್‌ಗಳು ವಿನಿಮಯಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ತಾಂತ್ರಿಕ ಕಾರಣಗಳಿಂದಾಗಿ, ಬ್ರೋಕರೇಜ್ ಅಪ್ಲಿಕೇಶನ್‌ಗಳು ಮತ್ತು ಷೇರು ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ಗಳನ್ನು ನಿಲ್ಲಿಸಲಾಗಿದೆ. ಇದರಿಂದ ವ್ಯಾಪಾರಿಗಳು ಮತ್ತು ಹೂಡಿಕೆದಾರರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಅವುಗಳನ್ನು ನಿಯಂತ್ರಿಸಲು ಈ ಡಿಸಾಸ್ಟರ್ ರಿಕವರಿ ಸಿಸ್ಟಮ್ ತರಲಾಗುತ್ತಿದೆ.
ಪ್ರೈಸ್ ಬ್ಯಾಂಡ್ ಡೆರಿವೇಟಿವ್
ಇವತ್ತಿನ ಸ್ಟಾಕ್ ಮಾರ್ಕೆಟ್ ಲೈವ್ ಟ್ರೇಡಿಂಗ್ ಸೆಷನ್‌ನಲ್ಲಿ ಡೆರಿವೆಟಿವ್ ಉತ್ಪನ್ನಗಳನ್ನು ಸಹ ಎಲ್ಲಾ ಸೆಕ್ಯುರಿಟಿಗಳಿಗೆ ಗರಿಷ್ಠ ಧರ ಬ್ಯಾಂಡ್ ಶೇಕಡಾ 5 ರಷ್ಟು. ಪ್ರಸುತ 2 ಇಲ್ಲವೇ ಅದಕ್ಕಿಂತ ಕಡಿಮೆ ಬೆಲೆ ಬ್ಯಾಂಡ್‌ನಲ್ಲಿ ಇರುವ ಷೇರುಗಳು ಈ ಬ್ಯಾಂಡ್‌ನಲ್ಲಿ ಲಭ್ಯವಿರುತ್ತವೆ ಎಂದು ಎನ್‌ಎಸ್‌ಇ ಹೇಳಿದೆ.
ನಿನ್ನೆಯ (ಶುಕ್ರವಾರ) ವಹಿವಾಟಿನಲ್ಲಿ ದೇಶಿಯ ಸೂಚ್ಯಂಕಗಳು ಭಾರಿ ಏರಿಕೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 1,245 ಪಾಯಿಂಟ್ ಏರಿಕೆ ಕಂಡು 73,745ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 356 ಅಂಕಗಳ ಏರಿಕೆಯೊಂದಿಗೆ 22,339 ನಲ್ಲಿ ಕೊನೆಗೊಂಡಿತು. ಬ್ಯಾಂಕ್ ನಿಫ್ಟಿ 1,166 ಪಾಯಿಂಟ್ ಏರಿಕೆ ಕಂಡು 47,287ಕ್ಕೆ ತಲುಪಿದೆ. ಶುಕ್ರವಾರದ ವಹಿವಾಟಿನಲ್ಲಿ ಎಫ್‌ಐಐಗಳು 128.94 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಲಾಗಿದೆ. ಅದೇ ಸಮಯದಲ್ಲಿ ಡಿಐಐಗಳು 3,814.53 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಲಾಗಿದೆ.
ವಿಶೇಷ ವ್ಯಾಪಾರ ಅಧಿವೇಶನದ ಮೊದಲ ಭಾಗವು ಬೆಳಿಗ್ಗೆ 9:15 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಬೆಳಿಗ್ಗೆ 10 ಗಂಟೆಗೆ ಕೊನೆಗೊಳ್ಳುತ್ತದೆ, ಇದು ಪ್ರೈಮಿಟಿ ಎನ್‌ಎಸ್‌ಇ ವೆಬ್‌ಸೈಟ್‌ನಲ್ಲಿ ನಡೆಯುತ್ತದೆ. ಲೈವ್ ಟ್ರೇಡಿಂಗ್ ಸೆಷನ್‌ನ ಎರಡನೇ ಭಾಗವು ಸ್ಟಾಕ್ ಮಾರ್ಕೆಟ್ ಎಕ್ಸ್‌ಚೇಂಜ್‌ಗಳ ಚೇತರಿಕೆ ಸೈಟ್‌ನಲ್ಲಿ ನಡೆಯಲಿದೆ.