ಕನ್ನಡ ಸುದ್ದಿ  /  Nation And-world  /  Business News Nifty At 22000 Sensex Sheds 350 Pts It Banks Down Oil Gas Rally March 26th Share Market Closing Bell Rst

Closing Bell: ಭಾರತದ ಷೇರುಪೇಟೆಯಲ್ಲಿ ತಲ್ಲಣ, ಸೆನ್ಸೆಕ್ಸ್‌ 350 ಅಂಕ ಇಳಿಕೆ; ಇಂದು ಲಾಭ-ನಷ್ಟ ಕಂಡ ಷೇರುಗಳ ವಿವರ ಹೀಗಿದೆ

ಮಾರ್ಚ್‌ ತಿಂಗಳಲ್ಲಿ ಬಹುತೇಕ ದಿನ ನಷ್ಟ ಕಂಡಿದ್ದ ಭಾರತದ ಷೇರುಪೇಟೆ ಇಂದು (ಮಾರ್ಚ್‌ 26) ಕೂಡ ಇಳಿಕೆಯಾಗಿದೆ. ಸೆನೆಕ್ಸ್‌ ಹಾಗೂ ನಿಫ್ಟಿ ಎರಡಲ್ಲೂ ಕುಸಿತ ಕಾಣಬಹುದಾಗಿದೆ. ಇಂದು ಲಾಭ-ನಷ್ಟ ಕಂಡ ಷೇರುಗಳ ವಿವರ ಹೀಗಿದೆ.

ಮಾರ್ಚ್‌ 26ರ ಷೇರು ಮಾರುಕಟ್ಟೆ ಕ್ಲೋಸಿಂಗ್‌ ಬೆಲ್‌
ಮಾರ್ಚ್‌ 26ರ ಷೇರು ಮಾರುಕಟ್ಟೆ ಕ್ಲೋಸಿಂಗ್‌ ಬೆಲ್‌ (REUTERS)

ಬೆಂಗಳೂರು: ಮಾರ್ಚ್‌ ತಿಂಗಳ ಕೊನೆಯ ವಾರದಲ್ಲೂ ಭಾರತದ ಷೇರುಪೇಟೆಯಲ್ಲಿ ತಲ್ಲಣ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಏರಿಳಿತ-ಸಾಮಾನ್ಯವಾಗಿದೆ. ಇಂದು (ಮಾರ್ಚ್‌ 26) ಆರಂಭದಲ್ಲಿ ಧನಾತ್ಮಕವಾಗಿದ್ದರೂ ದಿನವಿಡೀ ಚಂಚಲ ವಹಿವಾಟು ನಡೆದು ಮುಕ್ತಾಯದ ವೇಳೆಗೆ ನಷ್ಟ ಅನುಭವಿಸಿದೆ. ಐಟಿ ಹಾಗೂ ಬ್ಯಾಂಕಿಂಗ್‌ ಷೇರುಗಳು ಕುಸಿತ ಕಂಡಿವೆ.

ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 361.64 ಅಂಕ ಅಥವಾ ಶೇ 0.50 ರಷ್ಟು ಕುಸಿದು 72,470.30 ಕ್ಕೆ ತಲುಪಿದೆ. ನಿಫ್ಟಿ 92.10 ಅಂಕ ಅಥವಾ ಶೇ 0.42 ರಷ್ಟು ಕುಸಿದು 22,004.70 ಕ್ಕೆ ತಲುಪಿದೆ. ಸುಮಾರು 1355 ಷೇರುಗಳು ಇಂದು ಲಾಭ ಗಳಿಸಿದವು. 2447 ಷೇರುಗಳು ನಷ್ಟ ಕಂಡಿದ್ದರೆ, 122 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ನಿಫ್ಟಿಯಲ್ಲಿ ಬಜಾಜ್ ಫೈನಾನ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಬ್ರಿಟಾನಿಯಾ ಇಂಡಸ್ಟ್ರೀಸ್, ಅದಾನಿ ಪೋರ್ಟ್ಸ್ ಮತ್ತು ಎಲ್ & ಟಿ ಅತ್ಯಧಿಕ ಲಾಭ ಗಳಿಸಿದ ಕಂಪನಿಗಳಾದರೆ, ಪವರ್ ಗ್ರಿಡ್ ಕಾರ್ಪೊರೇಷನ್, ಐಷರ್ ಮೋಟಾರ್ಸ್, ಭಾರ್ತಿ ಏರ್‌ಟೆಲ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ವಿಪ್ರೋ ನಷ್ಟ ಅನುಭವಿಸಿದವು.

ವಲಯವಾರು ಷೇರುಗಳಲ್ಲಿ ಬ್ಯಾಂಕ್ ಮತ್ತು ಮಾಹಿತಿ ತಂತ್ರಜ್ಞಾನ ಸೂಚ್ಯಂಕವು ತಲಾ ಶೇ 0.5 ಪ್ರತಿಶತದಷ್ಟು ಕಡಿಮೆಯಾಗಿದೆ, ಆದರೆ ಬಂಡವಾಳ ಸರಕುಗಳು, ರಿಯಾಲ್ಟಿ, ತೈಲ ಮತ್ತು ಅನಿಲ, ಲೋಹವು ಶೇ 0.5-1ರಷ್ಟು ಏರಿಕೆಯಾಗಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ 0.7 ರಷ್ಟು ಏರಿತು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಸ್ಥಿರವಾಗಿ ಕೊನೆಗೊಂಡಿತು.

ಇಂದು ರೂಪಾಯಿ ಮೌಲ್ಯವು ಡಾಲರ್‌ ಎದುರು 83.29ಕ್ಕೆ ತಲುಪಿದೆ. ನಿನ್ನೆ ಮುಕ್ತಾಯದ ವೇಳೆಗೆ ರೂಪಾಯಿ ಮೌಲ್ಯವು 83.42 ರಷ್ಟಿತ್ತು. 

IPL_Entry_Point