Opening Bell: ಜಾಗತಿಕ ಷೇರುಪೇಟೆಗೆ ಹಣದುಬ್ಬರದ ಆತಂಕ, ಸೆನ್ಸೆಕ್ಸ್ ನಿಫ್ಟಿ ನೀರಸ ಆರಂಭ ಸಾಧ್ಯತೆ; ಈ ಷೇರುಗಳ ಮೇಲೆ ಕಣ್ಣಿಡಿ
Opening Bell: ಏಷ್ಯಾ ಮಾರುಕಟ್ಟೆ ಹಣದುಬ್ಬರ ಪ್ರಭಾವದಿಂದ ಇಂದು (ಫೆ.26) ಭಾರತದ ಷೇರು ಮಾರುಕಟ್ಟೆ ನೀರಸ ಆರಂಭದ ಮುನ್ಸೂಚನೆ ಕಾಣುತ್ತಿದೆ. ಕೋಟಕ್ ಮಹಿಂದ್ರಾ ಬ್ಯಾಂಕ್ ಸೇರಿದಂತೆ ಇಂದು ಗಮನಿಸಬಹುದಾದ ಷೇರುಗಳು ಈ ರೀತಿ ಇವೆ.
ಬೆಂಗಳೂರು: ಅಮೆರಿಕ, ಜಪಾನ್, ಯುರೋಪ್ ಹಣದುಬ್ಬರ ಪ್ರಭಾವದಿಂದ ಭಾರತದ ಷೇರು ಮಾರುಕಟ್ಟೆ ಸೋಮವಾರ ನೀರಸ ಆರಂಭಕ್ಕೆ ಸಿದ್ಧವಾಗಿದೆ. ಭಾರತದ ಗಿಫ್ಟ್ ನಿಫ್ಟಿ ಬೆಳಗ್ಗೆ 8:03 ಕ್ಕೆ 22,222.50 ನಲ್ಲಿ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿ 50 ಶುಕ್ರವಾರದ ಮುಕ್ತಾಯದ 22,212.70 ಕ್ಕಿಂತ ಸ್ವಲ್ಪಮಟ್ಟಿಗೆ ಮಾತ್ರ ತೆರೆಯುವ ಮುನ್ಸೂಚನೆ ಇದೆ.
ಫೆ 23, ಶುಕ್ರವಾರ ಎನ್‌ಎಸ್‌ಇ ನಿಫ್ಟಿ 50 ಆರಂಭಿಕ ವಹಿವಾಟಿನಲ್ಲಿ 22,297.50 ರ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಶೇಕಡಾ 0.02 ರಷ್ಟು ಕುಸಿದು 22,212.70 ಕ್ಕೆ ಸ್ಥಿರವಾಯಿತು. ಬಿಎಸ್‌ಇ ಸೆನ್ಸೆಕ್ಸ್ 15.44 ಅಂಕ ಕುಸಿದು 73,142.80ಕ್ಕೆ ಸ್ಥಿರವಾಯಿತು. ಬ್ಯಾಂಕ್ ನಿಫ್ಟಿ ಸೂಚ್ಯಂಕ 108.05 ಪಾಯಿಂಟ್ ಕಳೆದುಕೊಂಡು 46,811.75ಕ್ಕೆ ಸ್ಥಿರವಾಯಿತು. ರಿಯಾಲ್ಟಿ, ಮಾಧ್ಯಮ, ಫಾರ್ಮಾ ಮತ್ತು ಹಣಕಾಸು ಸೇವೆಗಳ ಷೇರುಗಳು ಇತರ ವಲಯದ ಸೂಚ್ಯಂಕಗಳ ನಡುವೆ ಲಾಭವನ್ನು ಮುನ್ನಡೆಸಿದರೆ, ಬ್ಯಾಂಕಿಂಗ್ ಷೇರುಗಳು ಕಡಿಮೆಯಾಗಿ ಕೊನೆಗೊಂಡವು.
ಬಜಾಜ್ ಫಿನ್‌ಸರ್ವ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪನಿ, ಹೆಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಕಂಪನಿ, ಎಲ್‌ಟಿಐಎಂಡ್‌ಟ್ರೀ ಮತ್ತು ಡಾ ರೆಡ್ಡೀಸ್ ಲ್ಯಾಬ್‌ಗಳು ಎನ್‌ಎಸ್‌ಇಯಲ್ಲಿ ಹೆಚ್ಚು ಲಾಭ ಗಳಿಸಿದರೆ, ಬಿಪಿಸಿಎಲ್, ಹೆಚ್‌ಸಿಎಲ್ ಟೆಕ್, ಮಾರುತಿ ಸುಜುಕಿ ಇಂಡಿಯಾ, ಏಷ್ಯನ್ ಪೇಂಟ್ಸ್ ಮತ್ತು ಒಎನ್‌ಜಿಸಿ ನಷ್ಟ ಕಂಡವು.
ವಿದೇಶಿ ಹೂಡಿಕೆದಾರರು ಶುಕ್ರವಾರ 12.76 ಶತಕೋಟಿ ರೂಪಾಯಿ (ಸುಮಾರು $154 ಮಿಲಿಯನ್) ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿವ್ವಳ 1.77 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಸೇರಿಸಿದ್ದಾರೆ.
ಇಂದು ಗಮನಿಸಬಹುದಾದ ಷೇರುಗಳು
* ಕೋಟಕ್ ಮಹೀಂದ್ರಾ ಬ್ಯಾಂಕ್
* ರಿಲಯನ್ಸ್ ಇಂಡಸ್ಟ್ರೀಸ್
*ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್
*ಸನೋಫಿ ಇಂಡಿಯಾ