ಕನ್ನಡ ಸುದ್ದಿ  /  Nation And-world  /  Business News Opening Bell For 7th March 2024 India Share Market Nifty Set To Open At New Record High Rsm

Opening Bell: ಏಷ್ಯಾ ಷೇರುಪೇಟೆಯಲ್ಲಿ ಚಿಗುರಿದ ಉತ್ಸಾಹ; ಸಾರ್ವಕಾಲಿಕ ದಾಖಲೆಗೆ ಸಜ್ಜಾದ ಭಾರತದ ಷೇರು ಮಾರುಕಟ್ಟೆ; ಈ ಷೇರುಗಳನ್ನು ಗಮನಿಸಿ

Opening Bell: ಕಳೆದ 2-3 ದಿನಗಳಿಂದ ನೀರಸ ಚಟುವಟಿಕೆಯಿಂದ ಕೂಡಿದ್ದ ಭಾರತದ ಷೇರುಪೇಟೆಯಲ್ಲಿ ಗುರುವಾರ ಧನಾತ್ಮಕ ಆರಂಭಕ್ಕೆ ಮುಂದಾಗಿದೆ. ವೇದಾಂತ್‌, ಇನ್ಫೋಸಿಸ್‌ ಸೇರಿದಂತೆ ಇಂದು ಈ ಷೇರುಗಳ ಮೇಲೆ ಹೂಡಿಕೆದಾದರು ಗಮನ ಕೇಂದ್ರೀಕರಿಸಿದ್ದಾರೆ.

7 ಮಾರ್ಚ್‌ 2024 ಭಾರತದ ಷೇರು ಮಾರುಕಟ್ಟೆ ಓಪನಿಂಗ್‌ ಬೆಲ್‌
7 ಮಾರ್ಚ್‌ 2024 ಭಾರತದ ಷೇರು ಮಾರುಕಟ್ಟೆ ಓಪನಿಂಗ್‌ ಬೆಲ್‌

ಬೆಂಗಳೂರು: ಅಮೆರಿಕ ಕೇಂದ್ರೀಯ ಬ್ಯಾಂಕ್‌ ಚೇರ್‌ಮನ್‌ ಜೆರೋಮ್ ಪೊವೆಲ್ ಅವರು ಈ ವರ್ಷ ದರ ಕಡಿತದ ಭರವಸೆ ನೀಡಿದ ನಂತರ ಏಷ್ಯಾ ಷೇರು ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಪುಟಿದೆದ್ದಿದೆ. ಈ ಮೂಲಕ ಭಾರತದ ನಿಫ್ಟಿ 50 ಗುರುವಾರ ಹೊಸ ದಾಖಲೆ ಬರೆಯಲು ಮುಂದಾಗಿದೆ.

ಬುಧವಾರ ಗರಿಷ್ಠ ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ

ಗಿಫ್ಟ್‌ ನಿಫ್ಟಿಯು ಮಾರ್ಚ್‌ 7, ಗುರುವಾರ ಬೆಳಗ್ಗೆ 7:54 ನಂತೆ 22,643.50 ನಲ್ಲಿ ವಹಿವಾಟು ನಡೆಸುತ್ತಿದೆ, ನಿಫ್ಟಿ 50 ಬುಧವಾರದ ಮುಕ್ತಾಯದ 22,474.05 ಕ್ಕಿಂತ ಹೆಚ್ಚು ತೆರೆಯುವ ಮುನ್ಸೂಚನೆ ಇದೆ. ಬುಧವಾರ ಬೆಳಗ್ಗೆ ಷೇರು ಮಾರುಕಟ್ಟೆ ನೀರಸ ಆರಂಭ ಕಂಡರೂ ಅಂತ್ಯದ ವೇಳೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು. ಇಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಉತ್ತಮ ಚೇತರಿಕೆಯನ್ನು ಪ್ರದರ್ಶಿಸಿವೆ. ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕೂಡಾ ಬುಧವಾರ ಗರಿಷ್ಠ ದಾಖಲೆ ಮಾಡಿದ್ದು, ಬ್ಯಾಂಕಿಂಗ್ ಮತ್ತು ಐಟಿ ಷೇರುಗಳಲ್ಲಿ ಖರೀದಿಗೆ ಕಾರಣವಾಗಿದೆ.

30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಕನಿಷ್ಠ 73,321.48 ರಿಂದ 408.86 ಪಾಯಿಂಟ್‌ಗಳು ಅಥವಾ 0.55 ರಷ್ಟು ಏರಿಕೆಯಾಗಿ 74,085.99 ಕ್ಕೆ ತಲುಪಿತು. ಇದು ಸಾರ್ವಕಾಲಿಕ ಗರಿಷ್ಠ 74,151.27 ಪಾಯಿಂಟ್‌ಗಳನ್ನು ಗಳಿಸಿದೆ. ನಿಫ್ಟಿ 50 ಷೇರು ಸೂಚ್ಯಂಕವು 22,497.20 ರ ಹೊಸ ದಾಖಲೆ ಬರೆದಿದೆ. 12 ಬ್ಯಾಂಕಿಂಗ್ ಸ್ಟಾಕ್‌ಗಳನ್ನು ಒಳಗೊಂಡಿರುವ ಬ್ಯಾಂಕಿಂಗ್ ವಲಯವನ್ನು ಟ್ರ್ಯಾಕ್ ಮಾಡುವ ನಿಫ್ಟಿ ಬ್ಯಾಂಕ್ ಸೂಚ್ಯಂಕವು 384.40 ಪಾಯಿಂಟ್‌ಗಳು ಅಥವಾ 0.81 ಶೇಕಡಾವನ್ನು ಗಳಿಸಿ 47,965.40 ಕ್ಕೆ ತಲುಪಿದೆ.

ಲಾಭ, ನಷ್ಟ ಕಂಡ ಷೇರುಗಳಿವು

ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ಸ್ಮಾಲ್‌ಕ್ಯಾಪ್ 100 ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.52 ಮತ್ತು 1.96 ರಷ್ಟು ದುರ್ಬಲಗೊಂಡವು. ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಎಚ್‌ಸಿಎಲ್ ಟೆಕ್, ಟೈಟಾನ್, ಎಂ & ಎಂ, ಟಿಸಿಎಸ್, ಎಲ್ & ಟಿ, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಇನ್ಫೋಸಿಸ್ ಹೆಚ್ಚು ಲಾಭ ಗಳಿಸಿದ ಷೇರುಗಳಾದರೆ. ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ, ಮಾರುತಿ, ಜೆಎಸ್‌ಡಬ್ಲ್ಯೂ ಸ್ಟೀಲ್, ಪವರ್ ಗ್ರಿಡ್, ಟಾಟಾ ಮೋಟಾರ್ಸ್ ಮತ್ತು ಟಾಟಾ ಸ್ಟೀಲ್ ನಷ್ಟ ಅನುಭವಿಸಿವೆ.

ವಿದೇಶಿ ಮತ್ತು ದೇಶೀಯ ಹೂಡಿಕೆದಾರರು ಬುಧವಾರ ಭಾರತೀಯ ಷೇರುಗಳ ನಿವ್ವಳ ಖರೀದಿದಾರರಾಗಿದ್ದರು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿವ್ವಳ ಆಧಾರದ ಮೇಲೆ 27.67 ಶತಕೋಟಿ ರೂಪಾಯಿಗಳ (~ $334 ಮಿಲಿಯನ್) ಷೇರುಗಳನ್ನು ಸೇರಿಸಿದರು, ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು 21.50 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದರು.

ಇಂದು ಗಮನಿಸಬಹುದಾದ ಷೇರುಗಳು

* ವೇದಾಂತ್‌

* ಇನ್ಫೋಸಿಸ್‌

* ಹಿಂದೂಸ್ತಾನ್‌ ಏರೋನಾಟಿಕ್ಸ್‌

*ಜೊಮ್ಯಾಟೋ

IPL_Entry_Point