ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ
ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆಯಲ್ಲಿ ಫೇಲಾಗಿದ್ದು, ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನವಾಗಿದೆ. ಉತ್ತರಾಖಂಡದ ರುದ್ರಾಪುರದ ಪರೀಕ್ಷಾ ಪ್ರಯೋಗಾಲಯದಲ್ಲಿ ಪತಂಜಲಿಯ ಆಹಾರ ಉತ್ಪನ್ನ ಸೋನ್ ಪಾಪ್ಡಿ ಗುಣಮಟ್ಟ ಪರೀಕ್ಷೆಯನ್ನು ನಡೆಸಲಾಗಿತ್ತು. ವಿವರ ವರದಿ ಇಲ್ಲಿದೆ.
ನವದೆಹಲಿ: ಪತಂಜಲಿಯ ಸೋನ್ ಪಾಪಡಿ (ಸೋನ್ ಪಾಪ್ಡಿ) ಆಹಾರ ಉತ್ಪನ್ನ ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನವಾಗಿದೆ. ಪಿಥೋರಗಢದ ಬೆರಿನಾಗ್ ಎಂಬಲ್ಲಿಯ ಮುಖ್ಯ ಮಾರುಕಟ್ಟೆಯಲ್ಲಿರುವ ಲೀಲಾಧರ್ ಪಾಠಕ್ ಅವರ ಅಂಗಡಿಯಲ್ಲಿ ಪತಂಜಲಿ ನವರತ್ನ ಏಲಕ್ಕಿ ಸೋನ್ ಪಾಪ್ಡಿ ಬಗ್ಗೆ 2019ರಲ್ಲಿ ಆಹಾರ ಸುರಕ್ಷತಾ ಇನ್‌ಸ್ಪೆಕ್ಟರ್ ಕಳವಳ ವ್ಯಕ್ತಪಡಿಸಿದ್ದರು.
ಹಾಗೆ ಶುರುವಾದ ಕೇಸ್ ಇದು. ಉತ್ತರಾಖಂಡದ ರುದ್ರಾಪುರದ ಪರೀಕ್ಷಾ ಪ್ರಯೋಗಾಲಯದಲ್ಲಿ ಪತಂಜಲಿಯ ಆಹಾರ ಉತ್ಪನ್ನ ಸೋನ್ ಪಾಪ್ಡಿ ಗುಣಮಟ್ಟ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರಲ್ಲಿ ಅದು ಫೇಲಾದ ಕಾರಣ, ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹಾಯಕ ವ್ಯವಸ್ಥಾಪಕ ಸೇರಿ ಮೂವರಿಗೆ ಪಿಥೋರಗಢದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಗುಣಮಟ್ಟ ಪರೀಕ್ಷೆಯಲ್ಲಿ ಪತಂಜಲಿಯ ಸೋನ್ ಪಾಪಡಿ ಫೇಲು; ಏನಿದು ಪ್ರಕರಣ
ಪಿಥೋರಗಢದ ಬೆರಿನಾಗ್ ಎಂಬಲ್ಲಿಯ ಮುಖ್ಯ ಮಾರುಕಟ್ಟೆಯ ಲೀಲಾಧಾರ್ ಪಾಠಕ್ ಅವರ ಅಂಗಡಿಯಲ್ಲಿ ಪತಂಜಲಿ ನವರತ್ನ ಏಲಕ್ಕಿ ಸೋನ್ ಪಾಪ್ಡಿ ಬಗ್ಗೆ 2019ರಲ್ಲಿ ಆಹಾರ ಸುರಕ್ಷತಾ ಇನ್‌ಸ್ಪೆಕ್ಟರ್ ಕಳವಳ ವ್ಯಕ್ತಪಡಿಸಿದ್ದರು. ಇದರ ಬೆನ್ನಿಗೆ, ಸಿಹಿತಿಂಡಿಯ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ರಾಮನಗರದ ಕನಾಹಾ ಜಿ ವಿತರಕ ಮತ್ತು ಹರಿದ್ವಾರದ ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ನೋಟಿಸ್ ನೀಡಲಾಗಿತ್ತು.
ರುದ್ರಪುರದ ಪರೀಕ್ಷಾ ಪ್ರಯೋಗಾಲಯವು 2020ರ ಡಿಸೆಂಬರ್‌ನಲ್ಲಿ ಸಿಹಿತಿಂಡಿಯ ಕಳಪೆ ಗುಣಮಟ್ಟದ ಬಗ್ಗೆ ರಾಜ್ಯ ಆಹಾರ ಸುರಕ್ಷತಾ ಇಲಾಖೆಗೆ ನೋಟಿಸ್ ಕಳುಹಿಸಿತ್ತು. ಇದಾಗಿ, ಉದ್ಯಮಿ ಲೀಲಾಧರ್ ಪಾಠಕ್, ವಿತರಕ ಅಜಯ್ ಜೋಶಿ ಮತ್ತು ಪತಂಜಲಿ ಸಹಾಯಕ ವ್ಯವಸ್ಥಾಪಕ ಅಭಿಷೇಕ್ ಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮೂವರಿಗೆ ಕ್ರಮವಾಗಿ 5,000, 10,000 ಮತ್ತು 25,000 ರೂ.ಗಳ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಪತಂಜಲಿಯ 14 ಉತ್ಪನ್ನಗಳ ಪರವಾನಗಿ ಅಮಾನತು
ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರವು ಉತ್ಪಾದನಾ ಪರವಾನಗಿಗಳನ್ನು ಅಮಾನತುಗೊಳಿಸಿದ ತನ್ನ 14 ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದೆಯೇ ಎಂದು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಪತಂಜಲಿ ಆಯುರ್ವೇದ ಲಿಮಿಟೆಡ್ ಅನ್ನು ಕೇಳಿತ್ತು. ಪತಂಜಲಿ ಕಂಪನಿಯ ಪರ ಹಿರಿಯ ವಕೀಲ ಬಲ್ಬೀರ್ ಸಿಂಗ್ ಅವರು ಈ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಪರವಾನಗಿಗಳನ್ನು ಅಮಾನತುಗೊಳಿಸಿದ ಉತ್ಪನ್ನಗಳ ಜಾಹೀರಾತುಗಳನ್ನು ಹಿಂಪಡೆಯಲು ಕೈಗೊಂಡ ಕ್ರಮಗಳನ್ನು ಸೂಚಿಸುವ ಅಫಿಡವಿಟ್‌ಗಳನ್ನು ಸಲ್ಲಿಸಲು ಪತಂಜಲಿ ಕಂಪನಿ ಪರ ವಕೀಲರು ಸಮಯಾವಕಾಶ ಕೋರಿದರು.
"ಈ ಅಫಿಡವಿಟ್ ಅನ್ನು ಮೂರು ವಾರಗಳಲ್ಲಿ ಸಲ್ಲಿಸುವಂತೆ ಕೋರಲಾಗಿದೆ. ಅಗತ್ಯವಿರುವುದನ್ನು ಮೂರು ವಾರಗಳಲ್ಲಿಯೇ ಮಾಡಬೇಕು" ಎಂದು ನ್ಯಾಯಪೀಠ ಕಂಪನಿ ಪರ ವಕೀಲರಿಗೆ ಸೂಚನೆ ನೀಡಿತು.
"ಪತಂಜಲಿ ಆಯುರ್ವೇದ ಲಿಮಿಟೆಡ್, ಬಾಲಕೃಷ್ಣ ಮತ್ತು ರಾಮದೇವ್ ನೀಡಲಾದ ನ್ಯಾಯಾಂಗ ನಿಂದನೆ ನೋಟಿಸ್ ಆದೇಶಗಳನ್ನು ಕಾಯ್ದಿರಿಸಲಾಗಿದೆ. ಅದೇ ರೀತಿ, ನಿರ್ದಿಷ್ಟ ಆದೇಶಗಳನ್ನು ಹೊರಡಿಸುವವರೆಗೆ ರಾಮದೇವ್ ಮತ್ತು ಬಾಲಕೃಷ್ಣ ನ್ಯಾಯಾಲಯಕ್ಕೆ ಹಾಜರಾಗುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದ್ದಾಗಿ ಪಿಟಿಐ ವರದಿ ಹೇಳಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.