Penny Stock; ಅತಿಬೇಗ ಶ್ರೀಮಂತರಾಗುವಾಸೆ ಕಾರಣ 6 ರೂ ಷೇರು ಖರೀದಿಗೆ ಮುಗಿಬಿದ್ದಿದ್ದಾರೆ ಪೆನ್ನಿ ಸ್ಟಾಕ್ ಹೂಡಿಕೆದಾರರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Penny Stock; ಅತಿಬೇಗ ಶ್ರೀಮಂತರಾಗುವಾಸೆ ಕಾರಣ 6 ರೂ ಷೇರು ಖರೀದಿಗೆ ಮುಗಿಬಿದ್ದಿದ್ದಾರೆ ಪೆನ್ನಿ ಸ್ಟಾಕ್ ಹೂಡಿಕೆದಾರರು

Penny Stock; ಅತಿಬೇಗ ಶ್ರೀಮಂತರಾಗುವಾಸೆ ಕಾರಣ 6 ರೂ ಷೇರು ಖರೀದಿಗೆ ಮುಗಿಬಿದ್ದಿದ್ದಾರೆ ಪೆನ್ನಿ ಸ್ಟಾಕ್ ಹೂಡಿಕೆದಾರರು

Sadbhav Infra Projects Share Price; ಮಲ್ಟಿಬ್ಯಾಗರ್ ಹೂಡಿಕೆದಾರರ ಗಮನಸೆಳೆದ ಮತ್ತೊಂದು ಪೆನ್ನಿ ಸ್ಟಾಕ್‌ ಇದು. ಈಗ ಈ 6 ರೂಪಾಯಿ ಷೇರು ಖರೀದಿಗೆ ಮುಗಿಬಿದ್ದಿದ್ದಾರೆ ಪೆನ್ನಿ ಸ್ಟಾಕ್ ಹೂಡಿಕೆದಾರರು, ದುಪ್ಪಟ್ಟಾಗಬಹುದೆಂಬ ನಿರೀಕ್ಷೆ ಅವರದ್ದು.

6 ರೂಪಾಯಿ ಷೇರು ಖರೀದಿಗೆ ಮುಗಿಬಿದ್ದಿದ್ದಾರೆ ಪೆನ್ನಿ ಸ್ಟಾಕ್ ಹೂಡಿಕೆದಾರರು, ದುಪ್ಪಟ್ಟಾಗಬಹುದೆಂಬ ನಿರೀಕ್ಷೆ ಅವರದ್ದು. (ಸಾಂಕೇತಿಕ ಚಿತ್ರ)
6 ರೂಪಾಯಿ ಷೇರು ಖರೀದಿಗೆ ಮುಗಿಬಿದ್ದಿದ್ದಾರೆ ಪೆನ್ನಿ ಸ್ಟಾಕ್ ಹೂಡಿಕೆದಾರರು, ದುಪ್ಪಟ್ಟಾಗಬಹುದೆಂಬ ನಿರೀಕ್ಷೆ ಅವರದ್ದು. (ಸಾಂಕೇತಿಕ ಚಿತ್ರ)

ಮುಂಬಯಿ: ಪೆನ್ನಿ ಸ್ಟಾಕ್‌ ವಹಿವಾಟು ತುಸು ಹೆಚ್ಚೇ ಅಪಾಯಕಾರಿ. ಹಾಗೆಂದು ಅವು ನಷ್ಟ ಉಂಟುಮಾಡುವ ಕಂಪನಿಗಳು ಎಂದು ಹೇಳಲಾಗದು. ಕೆಲವು ಅಂತಹ ಉತ್ತಮ ಗುಣಮಟ್ಟದ ಕಂಪನಿಗಳ ಕೆಲವು ಹೂಡಿಕೆದಾರರು ಪೆನ್ನಿ ಷೇರುಗಳ ಮೇಲೆ ಹೂಡಿಕೆ ಮಾಡುತ್ತಾರೆ. ಅದರ ಆಕರ್ಷಣೆಗೆ ಒಳಗಾಗುತ್ತಾರೆ. ಕಾರಣ ಇಷ್ಟೆ ಕಡಿಮೆ ಸಮಯದಲ್ಲಿ ಹೂಡಿಕೆದಾರರನ್ನು ಅದು ಶ್ರೀಮಂತರನ್ನಾಗಿಸುತ್ತದೆ. ಅಂತಹ ಒಂದು ಪೆನ್ನಿ ಸ್ಟಾಕ್ ಈಗ ಹೂಡಿಕೆದಾರರ ಗಮನಸೆಳೆದಿದೆ.

ಹೌದು, ಸದ್ಭಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ (Sadbhav Infra Projects) ಷೇರುಗಳು ಸದ್ಯ ಪೆನ್ನಿ ಸ್ಟಾಕ್‌ ಹೂಡಿಕೆದಾರರ ಗಮನಸೆಳೆದಿದೆ. ಈ ಕಂಪನಿಯ ಷೇರುಗಳು ಶುಕ್ರವಾರ ಶೇಕಡ 10 ರಷ್ಟು ಏರಿಕೆ ಕಂಡು ಷೇರು ಮೌಲ್ಯ 6.30 ರೂಪಾಯಿ ತಲುಪಿತ್ತು.

ಸದ್ಭಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಷೇರುಗಳ ಸ್ಥಿತಿಗತಿ

ಸದ್ಭಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್ ಷೇರುಗಳು ತನ್ನ ನಿತ್ಯದ ವಹಿವಾಟಿನಲ್ಲಿ ಏರಿಕೆಯನ್ನು ದಾಖಲಿಸುತ್ತ ಸಾಗಿದೆ. ವಿಶೇಷವಾಗಿ 20 ಮತ್ತ 50 ದಿನಗಳ ದೈನಂದಿನ ಚಲನೆಯ ಸರಾಸರಿ (ಡಿಎಂಎ) ಕ್ರಮವಾಗಿ 5.91 ರೂಪಾಯಿ ಮತ್ತು 5.99 ರೂಪಾಯಿಗಳ ನಡುವೆ ಧೃಡವಾದ ಮೇಲ್ಮುಖ ವಹಿವಾಟು ನಡೆಸುತ್ತಿದ್ದು, 6.45 ರೂಪಾಯಿಯಲ್ಲಿ ಪ್ರತಿರೋಧ ಎದುರಿಸುತ್ತಿರುವುದು ಕಂಡುಬಂದಿದೆ.

ಈ ಷೇರು ಮೌಲ್ಯ ಈ ಮಟ್ಟ ಮೀರಿ ವ್ಯವಹರಿಸುವ ಸಾಧ್ಯತೆ ದಟ್ಟವಾಗಿದ್ದು, 11 ರೂಪಾಯಿ ತನಕ ತಲುಪುವ ಸಾಧ್ಯತೆ ಇದೆ. ಆದಾಗ್ಯೂ ಇದಕ್ಕೆ ಮಧ್ಯಂತರದಲ್ಲಿ 7.86 ರೂಪಾಯಿಯಲ್ಲಿ ಹೆಚ್ಚನ ಪ್ರತಿರೋಧ ವ್ಯಕ್ತವಾಗಬಹುದು. ಈ ವರ್ಷ ಇಲ್ಲಿಯವರೆಗೆ ಈ ಷೇರಿನ ಮೌಲ್ಯ ವರ್ಷದಿಂದ ದಿನದ ಲೆಕ್ಕದಲ್ಲಿ ಶೇಕಡ 30 ಮತ್ತು ವಾರ್ಷಿಕ ಲೆಕ್ಕದಲ್ಲಿ ಶೇಕಡ 60 ಹೆಚ್ಚಳವಾಗಿದೆ.

ಸದ್ಭಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಕಂಪನಿ ವಹಿವಾಟು

ಸದ್ಭಾವ್‌ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್ ಲಿಮಿಟೆಡ್ ಕಂಪನಿಯು 2007 ರಲ್ಲಿ ಸ್ಥಾಪನೆಯಾಗಿದೆ. ರಸ್ತೆ ಮತ್ತು ಇತರ ಮೂಲಸೌಕರ್ಯ ಬಿಒಟಿ ಯೋಜನೆಗಳಿಗೆ ಆಸ್ತಿ ಹಿಡುವಳಿ ಕಂಪನಿಯಾಗಿ ಇದನ್ನು ಸಂಯೋಜಿಸಲಾಗಿದೆ.

ಷೇರುಪೇಟೆಯಲ್ಲಿ ಸದ್ಭಾವ್‌ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್ ಲಿಮಿಟೆಡ್‌ಗೆ ಬಜಾಜ್ ಆಟೋ ಲಿಮಿಟೆಡ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಒಲೆಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌, ಎಸ್ಕಾರ್ಟ್ಸ್ ಕುಬೊಟ ಲಿಮಿಟೆಡ್, ಮಹಿಂದ್ರಾ ಆಂಡ್ ಮಹಿಂದ್ರಾ ಲಿಮಿಟೆಡ್‌, ಹೀರೊ ಮೊಟೊಕಾರ್ಪ್‌ ಲಿಮಿಟೆಡ್, ಅಶುಲ್‌ ಆಟೋ ಲಿಮಟೆಡ್‌, ಟಿವಿಎಸ್ ಮೋಟಾರ್ ಲಿಮಿಟೆಡ್‌, ಲೆಟೊರಾಕ್ಸ್ ಮೋಟಾರ್ ಲಿಮಿಟೆಡ್‌, ಟಾಟಾ ಮೋಟಾರ್ಸ್‌ ಕಂಪನಿಗಳು ಸ್ಪರ್ಧಿಗಳಾಗಿವೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.