ಕನ್ನಡ ಸುದ್ದಿ  /  Nation And-world  /  Business News Personal Finance How To Become Rich Wealth Building Tips Money Management Investment Pcp

Personal Finance: ಶ್ರೀಮಂತರಾಗುವುದು ಹೇಗೆ? ಸಂಪತ್ತಿನ ಸಾಮ್ರಾಜ್ಯ ಸೃಷ್ಟಿಸಲು ಬಯಸುವವರಿಗೆ ಇಲ್ಲುಂಟು 8 ಪರ್ಸನಲ್‌ ಫೈನಾನ್ಸಿಂಗ್‌ ಗುಟ್ಟು

How to become rich? ಈ ಪ್ರಶ್ನೆ ಎಲ್ಲರಲ್ಲಿಯೂ ಇರುತ್ತದೆ. ಶ್ರೀಮಂತರಾಗಬೇಕೆಂದರೆ ಹಣ ಸಂಪಾದಿಸಬೇಕು, ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಬೇಕು. ಹೊಸ ಆದಾಯದ ಮೂಲಗಳನ್ನು ಹುಡುಕಬೇಕು. ಇಲ್ಲಿ ಸಂಪತ್ತು ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಎಂಟು Wealth Building ಸಲಹೆಗಳನ್ನು ನೀಡಲಾಗಿದೆ.

ಶ್ರೀಮಂತರಾಗುವುದು ಹೇಗೆ?
ಶ್ರೀಮಂತರಾಗುವುದು ಹೇಗೆ? (Pixabay)

ಎಲ್ಲರೂ ಶ್ರೀಮಂತಿಕೆ ಬಯಸುತ್ತಾರೆ. ಆದರೆ, ಹೆಚ್ಚಿನವರು ಹುಟ್ಟುವಾಗಲೇ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿರುವುದಿಲ್ಲ. ಶ್ರೀಮಂತರಾಗಲು ಹಲವು ನೇರ ದಾರಿಗಳಿವೆ. ಮೊದಲನೆಯದಾಗಿ ಶಿಕ್ಷಣ ಪಡೆಯಬೇಕು. ಶೈಕ್ಷಣಿಕ ಕಲಿಕೆ ಬಳಿಕ ಒಳ್ಳೊಳ್ಳೆಯ ಐಡಿಯಾ ಮಾಡಿ ಪರಿಶ್ರಮಪಟ್ಟು ಮೇಲೆ ಬರಬಹುದು. ಸಂಪತ್ತು ಸೃಷ್ಟಿಸಲು ಮತ್ತು ಶ್ರೀಮಂತರಾಗಲು ಅಂತಹ ಫಾರ್ಮುಲಾಗಳು ಏನೂ ಬೇಕಾಗಿಲ್ಲ, ಕಡಿಮೆ ಖರ್ಚು ಮಾಡಿ, ಹೆಚ್ಚು ಉಳಿತಾಯ ಮಾಡಿ ಎಂದು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ. ಇದನ್ನೇ ನಮ್ಮ ಹಿರಿಯರು "ಹೊಟ್ಟೆ ಬಟ್ಟೆ ಕಟ್ಟಿ ಸಾಕಿದೆ, ಸಲಹಿದೆ" ಎಂದೆಲ್ಲ ಹೇಳುತ್ತಾರೆ. ಆದರೆ, ಇಂದಿನ ಎಲ್ಲಾ ಸುಖವನ್ನು ತ್ಯಾಗ ಮಾಡಿ ನಾಳೆಗಾಗಿ ಹಣ ಕೂಡಿಡುವುದ್ಯಾಕೆ.

ಸಾಲದ ಕಂತುಗಳು, ದೈನಂದಿನ ಖರ್ಚುವೆಚ್ಚಗಳು ಹೆಚ್ಚಾಗುತ್ತಿರುವುದು, ಹಣದುಬ್ಬರ ಹೆಚ್ಚಳ, ತುರ್ತಾಗಿ ಕಾಡುವ ಹಣಕಾಸು ಪರಿಸ್ಥಿತಿಗಳು ಇತ್ಯಾದಿಗಳು ನಮ್ಮ ಶ್ರೀಮಂತರಾಗುವ ಕನಸಿಗೆ ಅಡ್ಡಿಯಾಗುತ್ತವೆ. ಶ್ರೀಮಂತರಾಗಲು ಬಯಸುವವರು ಈ ಮುಂದಿನ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಹಣಕಾಸು ಗುರಿಗಳನ್ನು ನಿಗದಿಪಡಿಸಿಕೊಳ್ಳಿ

ನಿಮ್ಮ ಪ್ರಕಾರ ಶ್ರೀಮಂತಿಕೆ ಎಂದರೆ ಏನೆಂದು ಮೊದಲು ಸ್ಪಷ್ಟಪಡಿಸಿಕೊಳ್ಳಿ. ಕೋಟ್ಯಧಿಪತಿಯಾಗುವ ಕನಸು ಕಾಣುತ್ತಿದ್ದೀರಾ ಅಥವಾ ನಿವೃತ್ತಿ ಕಾಲಕ್ಕೆ ಹತ್ತಿಪ್ಪತ್ತು ಲಕ್ಷ ಹಣವಿರುವ ಶ್ರೀಮಂತಿಕೆ ಬೇಕಾ. ಇವರಿಬ್ಬರೂ ಶ್ರೀಮಂತರೇ. ಹೀಗಾಗಿ, ನಿಮ್ಮ ಹಣಕಾಸು ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಿ. ನಿವೃತ್ತಿ ಸಮಯದಲ್ಲಿ ಸ್ವಂತ ಮನೆಗೆ ಹಣ ಕೂಡಿರುವಿರಾ? ಮಕ್ಕಳ ಶಿಕ್ಷಣಕ್ಕೆ ಹಣ ಕೂಡಿರುವಿರಾ? ನಿವೃತ್ತಿಯೆಂದರೆ ನಿಮ್ಮ ಪ್ರಕಾರ ಏನು? ಹಾಯಾಗಿ ಮನೆಯಲ್ಲಿರುವುದೇ? ಪ್ರವಾಸವೇ? ಸ್ಪಷ್ಟವಾಗಿ ಯೋಚಿಸಿ ಹಣಕಾಸು ಗುರಿಗಳನ್ನು ನಿಗದಿಪಡಿಸಿರಿ.

ಸಾಲದ ಶೂಲದಿಂದ ಹೊರಬನ್ನಿ

ಶ್ರೀಮಂತರು ಸಾಲ ತೆಗೆದುಕೊಂಡು ಶ್ರೀಮಂತರಾಗುತ್ತಾರೆ ಎನ್ನುವುದು ಬೇರೆಯೇ ವಿಷಯ. ಸುಸ್ತಿಯಾಗದ ಇಂತಹ ಸಾಲಗಳಿಂದ ಬ್ಯಾಂಕ್‌ಗಳೇ ದಿವಾಳಿಯಾಗುತ್ತಿದೆ. ಆದರೆ, ನೀವು ಶ್ರೀಮಂತರಾಗಬೇಕಿದ್ದರೆ ನಿಮ್ಮ ಸಾಲಗಳನ್ನು ತೀರಿಸಿ. ಇಲ್ಲವಾದರೆ ನಿಮ್ಮ ಆದಾಯದ ಬಹುಪಾಲು ಈ ಸಾಲ ತೀರಿಸುವ ಮೊತ್ತಕ್ಕೆ ಸರಿ ಹೋಗುತ್ತದೆ. ಅದಕ್ಕೆ ಅತ್ಯಧಿಕ ಬಡ್ಡಿದರ ಪಾವತಿಸಿ ನೀವು ಬಡವರಾಗಿಯೇ ಉಳಿಯುವಿರಿ.

ತುರ್ತು ನಿಧಿ ಇರಲಿ

ಶ್ರೀಮಂತರಾಗಬೇಕಾದರೆ ನೀವು ತುರ್ತು ನಿಧಿ ಇಟ್ಟುಕೊಳ್ಳಬೇಕು. ತುರ್ತಾಗಿ ಅನಾರೋಗ್ಯ ಕಾಡಿ ಆಸ್ಪತ್ರೆಗೆ ಲಕ್ಷಲಕ್ಷ ಸುರಿಯಲು ಈ ತುರ್ತು ನಿಧಿ ನೆರವಾಗುತ್ತದೆ. ಇದರಿಂದ ನಿಮ್ಮ ಇತರೆ ಹಣ ಖರ್ಚಾಗದೆ ಬಡವರಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಕನಿಷ್ಠ ಆರು ತಿಂಗಳ ವೇತನದ ಮೊತ್ತದಷ್ಟು ಹಣವು ನಿಮ್ಮ ತುರ್ತು ನಿಧಿಯಾಗಿರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಹಣವನ್ನು ಹೂಡಿಕೆ ಮಾಡಿ

ನಿಮ್ಮಲ್ಲಿರುವ ಹಣವು ಹಾಗೆಯೇ ಇದ್ದರೆ ಅದು ಬೆಳೆಯದು. ಷೇರು ಮಾರುಕಟ್ಟೆ, ಮ್ಯೂಚುವಲ್‌ ಫಂಡ್‌ ಇತ್ಯಾದಿಗಳ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಿ. ಇಲ್ಲಿ ನಿಮ್ಮ ಹಣವು ದೊಡ್ಡ ಮೊತ್ತವಾಗಿ ಬೆಳೆಯುವ ಅವಕಾಶವಿರುತ್ತದೆ. ಈ ಕುರಿತು ಹೂಡಿಕೆ ಮಾಡುವ ಮೊದಲು ಸರಿಯಾದ ಜ್ಞಾನ ಅಗತ್ಯ. ಇಲ್ಲವಾದರೆ ರಿಸ್ಕ್‌ ಹೆಚ್ಚಿರುತ್ತದೆ. ಆರಂಭದಲ್ಲಿ ಕಡಿಮೆ ಮೊತ್ತ ಹೂಡಿಕೆ ಮಾಡಿ ಹೂಡಿಕೆ ಜಗತ್ತನ್ನು ಕಲಿಯಿರಿ.

ಆದಾಯ ಹೆಚ್ಚಿಸಿಕೊಳ್ಳಿ

ಕಡಿಮೆ ವೇತನದ ಅದೇ ಉದ್ಯೋಗದಲ್ಲಿ ಉಳಿಯಬೇಡಿ. ಹೆಚ್ಚು ವೇತನ ನೀಡುವ ಇತರೆ ಉದ್ಯೋಗಗಳ ಅನ್ವೇಷಣೆ ಮಾಡಿ. ನೀವು ಬಿಸ್ನೆಸ್‌ಮ್ಯಾನ್‌ ಆಗಿದ್ದರೆ ನಿಮ್ಮ ವ್ಯವಹಾರವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ನಿರಂತರ ಪ್ರಯತ್ನ ಮಾಡುತ್ತ ಇರಿ.

ಹಣಕಾಸು ಸ್ವಾತಂತ್ರ್ಯದ ಬಗ್ಗೆ ಗಮನವಿರಲಿ

ನಿಮ್ಮ ಸ್ವಂತ ಖರ್ಚಿಗೆ ಬೇಕಾಗುವ ಹಣಕ್ಕೆ ಯಾವತ್ತೂ ಇತರರನ್ನು ಅವಲಂಬಿಸುವುದು ಬೇಡ. ಅಷ್ಟು ಹಣ ನಿಮ್ಮಲ್ಲಿರಲೇಬೇಕು. ನಿವೃತ್ತಿ ಕಾಲದ ಹಣಕ್ಕಾಗಿ ಈಗಲೇ ಯೋಜನೆ ರೂಪಿಸಿ. ಯುವಕರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಹಣ ಉಳಿತಾಯ ಮತ್ತು ಹೂಡಿಕೆ ಕಲಿಯುವುದು ಉತ್ತಮ.

ತಪ್ಪಾದ ಹೂಡಿಕೆ ಮಾಡಬೇಡಿ

ನಿಮ್ಮನ್ನು ವಂಚಿಸಲು ಹಲವು ಸ್ಕೀಮ್‌ಗಳು ಬಾಯಿ ತೆರೆದು ಕಾಯುತ್ತಿವೆ. ನೀವು ಹೂಡಿಕೆ ಮಾಡುತ್ತೀರಿ ಎಂದು ಗೊತ್ತಾದ ತಕ್ಷಣ ನಿಮ್ಮ ಹಣವನ್ನು ಗುಳುಂ ಮಾಡಲು ಹಲವು ಜನರು ಕಾಯುತ್ತಿರಬಹುದು. ಇಂತಹ ತಪ್ಪಾದ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಿ ಬಡವರಾಗಬೇಡಿ.

IPL_Entry_Point