IPO: ಆಗಸ್ಟ್‌ 27ರಿಂದ ಪ್ರೀಮಿಯರ್‌ ಎನರ್ಜೀಸ್‌ ಲಿಮಿಟೆಡ್‌ ಐಪಿಒ ಅರ್ಜಿ ಸಲ್ಲಿಕೆ ಆರಂಭ; ಈ ಷೇರಿಗೆ ಬಿಡ್‌ ಮಾಡಬಹುದೇ, ಬೇಡವೇ?-business news premier energies limited ipo details gmp signals ahead of subscription stock market trading jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ipo: ಆಗಸ್ಟ್‌ 27ರಿಂದ ಪ್ರೀಮಿಯರ್‌ ಎನರ್ಜೀಸ್‌ ಲಿಮಿಟೆಡ್‌ ಐಪಿಒ ಅರ್ಜಿ ಸಲ್ಲಿಕೆ ಆರಂಭ; ಈ ಷೇರಿಗೆ ಬಿಡ್‌ ಮಾಡಬಹುದೇ, ಬೇಡವೇ?

IPO: ಆಗಸ್ಟ್‌ 27ರಿಂದ ಪ್ರೀಮಿಯರ್‌ ಎನರ್ಜೀಸ್‌ ಲಿಮಿಟೆಡ್‌ ಐಪಿಒ ಅರ್ಜಿ ಸಲ್ಲಿಕೆ ಆರಂಭ; ಈ ಷೇರಿಗೆ ಬಿಡ್‌ ಮಾಡಬಹುದೇ, ಬೇಡವೇ?

Premier Energies Limited IPO Details: ಪ್ರೀಮಿಯರ್ ಎನರ್ಜೀಸ್‌ ಷೇರುಗಳು ಪ್ರಸ್ತುತ ಜಿಎಂಪಿಯಲ್ಲಿ ಪ್ರತಿ ಷೇರಿಗೆ 330 ರೂಪಾಯಿಗಳ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ಸದ್ಯ ಈ ಷೇರುಗಳನ್ನು ಖರೀದಿಸಲು ಬಯಸುವವರಿಗೆ ಲಾಭದ ಮುನ್ಸೂಚನೆ ಸಿಕ್ಕಿದೆ.

ಆಗಸ್ಟ್‌ 27ರಿಂದ ಪ್ರೀಮಿಯರ್‌ ಎನರ್ಜೀಸ್‌ ಲಿಮಿಟೆಡ್‌ ಐಪಿಒ ಅರ್ಜಿ ಸಲ್ಲಿಕೆ ಆರಂಭ
ಆಗಸ್ಟ್‌ 27ರಿಂದ ಪ್ರೀಮಿಯರ್‌ ಎನರ್ಜೀಸ್‌ ಲಿಮಿಟೆಡ್‌ ಐಪಿಒ ಅರ್ಜಿ ಸಲ್ಲಿಕೆ ಆರಂಭ

Premier Energies Limited IPO Details: ಪ್ರೀಮಿಯರ್ ಎನರ್ಜೀಸ್‌ ಲಿಮಿಟೆಡ್‌ ಕಂಪನಿಯು ತನ್ನ ಷೇರುಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಮಾರಾಟಕ್ಕೆ ಮುಂದಾಗಿದೆ. ಆರಂಭಿಕ ಷೇರು ವಿತರಣೆ (IPO) ಆಗಸ್ಟ್ 27ರಂದು ಆರಂಭವಾಗುತ್ತಿದ್ದು, ಐಪಿಒ ಮೂಲಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುವವರು ಪ್ರೀಮಿಯರ್ ಎನರ್ಜೀಸ್‌ ಐಪಿಒಗಾಗಿ ಬಿಡ್ಡಿಂಗ್‌ ನಡೆಸಬಹುದು. ಇದು ಮೇನ್‌ ಬೋರ್ಡ್‌ ಐಪಿಒ. ಅಂದರೆ, 14,850 ರೂಪಾಯಿಗೆ ಕನಿಷ್ಠ 1 ಲಾಟ್‌ ಐಪಿಒಗೆ ಅರ್ಜಿ ಸಲ್ಲಿಸಬಹುದು. ಈ ಐಪಿಒ ಆಗಸ್ಟ್ 29ರವರೆಗೂ ಬಿಡ್ಡಿಂಗ್‌ಗೆ ಲಭ್ಯವಿರಲಿದೆ. ಹಾಗಿದ್ದರೆ, ಪ್ರೀಮಿಯರ್ ಎನರ್ಜೀಸ್‌ ಷೇರುಗಳನ್ನು ಖರೀದಿಸಬಹುದಾ? ಜಿಎಂಪಿ ಎಷ್ಟಿದೆ? ಇತ್ಯಾದಿ ವಿವರ ಇಲ್ಲಿದೆ.

ಪ್ರೀಮಿಯರ್‌ ಎನರ್ಜೀಸ್‌ ಲಿಮಿಟೆಡ್‌ ಐಪಿಒ ಪ್ರಮುಖ ದಿನಾಂಕಗಳು

  • ಐಪಿಒ ಓಪನಿಂಗ್‌ ದಿನಾಂಕ : ಆಗಸ್ಟ್ 27 ಮಂಗಳವಾರ, 2024
  • ಐಪಿಒ ಕ್ಲೋಸಿಂಗ್‌ ದಿನಾಂಕ: ಆಗಸ್ಟ್ 29 ಗುರುವಾರ, 2024
  • ಐಪಿಒ ವಿತರಣೆ ದಿನಾಂಕ: ಆಗಸ್ಟ್ 30 ಶುಕ್ರವಾರ, 2024
  • ಡಿಮ್ಯಾಟ್‌ ಖಾತೆಗೆ ಷೇರುಗಳು ಕ್ರೆಡಿಟ್‌ ಆಗುವ ದಿನಾಂಕ: ಸೆಪ್ಟೆಂಬರ್ 2 ಸೋಮವಾರ, 2024
  • ಷೇರುಮಾರುಕಟ್ಟೆಯಲ್ಲಿ ಲಿಸ್ಟ್‌ ಆಗುವ ದಿನಾಂಕ: ಸೆಪ್ಟೆಂಬರ್ 3 ಮಂಗಳವಾರ, 2024
  • ಯುಪಿಐ ಮ್ಯಾಂಡೇಟ್‌ ಕೊನೆದಿನಾಂಕ: ಆಗಸ್ಟ್ 29, 2024 ರಂದು ಸಂಜೆ 5

ಇಂಟಿಗ್ರೇಟೆಡ್ ಸೋಲಾರ್ ಸೆಲ್ ಮತ್ತು ಸೋಲಾರ್ ಪ್ಯಾನಲ್ ತಯಾರಕ ಕಂಪನಿಯಾದ ಪ್ರೀಮಿಯರ್‌ ಎನರ್ಜಿಸ್‌ ಲಿಮಿಟೆಡ್‌ 1 ರೂ ಮುಖಬೆಲೆಯೊಂದಿಗೆ ತನ್ನ ಒಟ್ಟು ಸ್ಟಾಕ್‌ಗಳಲ್ಲಿ ಪ್ರತಿ ಷೇರಿಗೆ 427 ರೂಪಾಯಿಯಿಂದ 450 ರೂಪಾಯಿ ಬೆಲೆಯ ಬ್ಯಾಂಡ್ ಅನ್ನು ನಿಗದಿಪಡಿಸಿದೆ.

investorgain.com ಮಾಹಿತಿ ಪ್ರಕಾರ, ಪ್ರೀಮಿಯರ್ ಎನರ್ಜೀಸ್‌ನ ಷೇರುಗಳು ಪ್ರಸ್ತುತ ಗ್ರೇ ಮಾರ್ಕೆಟ್‌ ಪ್ರೀಮಿಯಂ (ಜಿಎಂಪಿ)ನಲ್ಲಿ ಪ್ರತಿ ಷೇರಿಗೆ 330 ರೂಪಾಯಿ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ಅಂದರೆ, ಪ್ರೀಮಿಯರ್ ಎನರ್ಜಿಸ್ ಐಪಿಒದ ಅಂದಾಜು ಪಟ್ಟಿ ಬರೋಬ್ಬರಿ 780 ರೂಪಾಯಿ. ವಿತರಣಾ ಬೆಲೆ 450ಕ್ಕೆ ಹೋಲಿಸಿದರೆ, ಇದು ಶೇಕಡಾ 73.33ರಷ್ಟು ಹೆಚ್ಚು. ಸದ್ಯ ಇದು ಲಾಭದ ಮುನ್ಸೂಚನೆ ಕೊಟ್ಟಿದೆ. ಹೀಗಾಗಿ ಹೂಡಿಕೆದಾರರು ಐಪಿಒ ಖರೀದಿಯ ಯೋಚನೆ ಮಾಡಬಹುದು.

ಪ್ರೀಮಿಯರ್ ಎನರ್ಜಿಸ್ ಐಪಿಒ ಒಟ್ಟು 2,830.40 ಕೋಟಿ ರೂಪಾಯಿಗಳ ಆರಂಭಿಕ ವಿತರಣೆಯಾಗಿದೆ. ಇದು 1,291.40 ಕೋಟಿ ರೂ.ಗಳ 2.87 ಕೋಟಿ ಷೇರುಗಳ ಹೊಸ ವಿತರಣೆ ಮತ್ತು 1,539 ಕೋಟಿ ರೂ.ಗಳ ಒಟ್ಟು 3.42 ಕೋಟಿ ಷೇರುಗಳ ಮಾರಾಟದ ಪ್ರಸ್ತಾಪವನ್ನು ಒಳಗೊಂಡಿದೆ.

ಕನಿಷ್ಠ ಎಷ್ಟು ಷೇರು ಖರೀದಿಸಬೇಕು?

ಪ್ರೀಮಿಯರ್ ಎನರ್ಜೀಸ್ ಐಪಿಒಗೆ ಪ್ರತಿ ಷೇರಿಗೆ 427 ರಿಂದ 450ರ ನಡುವೆ ಬೆಲೆ ನಿಗದಿಪಡಿಸಲಾಗಿದೆ. ಹೂಡಿಕೆದಾರರು ಕನಿಷ್ಠ 33 ಷೇರುಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ, ಕಂಪನಿಯ ಷೇರು ಖರೀದಿಯ ಬಯಕೆ ಹೊಂದಿರುವ ಚಿಲ್ಲರೆ ಹೂಡಿಕೆದಾರು ಕನಿಷ್ಠ 14,850 ರೂಪಾಯಿಯನ್ನು ಕಂಪನಿ ಷೇರುಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಅಂತಿಮ ಪಟ್ಟಿ ಪ್ರಕಟ ಯಾವಾಗ?

ಪ್ರೀಮಿಯರ್ ಎನರ್ಜಿಸ್ ಐಪಿಒ ಹಂಚಿಕೆಯನ್ನು ಆಗಸ್ಟ್ 30ರ ಶುಕ್ರವಾರ ಅಂತಿಮಗೊಳಿಸುವ ನಿರೀಕ್ಷೆಯಿದೆ. ಐಪಿಒ ಬಿಎಸ್ಇ ಮತ್ತು ಎನ್ಎಸ್ಇ ಎರಡರಲ್ಲೂ ಲಿಸ್ಟಿಂಗ್‌ ಆಗುವ ನಿರೀಕ್ಷೆಯಿದೆ. ಸೆಪ್ಟೆಂಬರ್ 3ರ ಮಂಗಳವಾರ ತಾತ್ಕಾಲಿಕ ಪಟ್ಟಿ ಪ್ರಕಟವಾಗಲಿದೆ. ನಿವ್ವಳ ಕೊಡುಗೆಯು ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಶೇಕಡಾ 50ರಷ್ಟು ನಿಗದಿಪಡಿಸಲಾಗದೆ. ಉಳಿದಂತೆ ನಾನ್‌-ಇನ್ಸ್ಟಿಟ್ಯೂಷನಲ್ ಹೂಡಿಕೆದಾರರಿಗೆ ಶೇಕಡಾ 15 ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಶೇಕಡಾ 35ರಷ್ಟು ಕಾಯ್ದಿರಿಸಿದೆ.

ಪ್ರೀಮಿಯರ್‌ ಎನರ್ಜೀಸ್‌ ಲಿಮಿಟೆಡ್‌ ಐಪಿಒಗೆ ಅರ್ಜಿ ಸಲ್ಲಿಸಬಹುದೇ?

ಐಪಿಒಗೆ ಅರ್ಜಿ ಸಲ್ಲಿಸುವ ಮುನ್ನ ಸಾಕಷ್ಟು ರಿಸರ್ಚ್‌ ಅಗತ್ಯ. ವಿವಿಧ ತಾಣಗಳಲ್ಲಿ ತಜ್ಞರು ನಿರ್ದಿಷ್ಟ ಐಪಿಒಗಳಿಗೆ ಅರ್ಜಿ ಸಲ್ಲಿಸಬಹುದೇ? ಬೇಡವೇ? ಅವಾಯ್ಡ್‌ ಮಾಡಬೇಕೇ? ಇತ್ಯಾದಿ ಸೂಚನೆ ನೀಡಿರುತ್ತಾರೆ. ಅಂದರೆ, ಅಪ್ಲೈ, ಮೇ ಅಪ್ಲೈ, ಅವಾಯ್ಡ್‌ ಎಂಬ ಸೂಚನೆ ನೀಡಿರುತ್ತಾರೆ. ಅಪ್ಲೈ ಎಂದಿದ್ದರೆ ಧೈರ್ಯವಾಗಿ ಬಿಡ್‌ ಸಲ್ಲಿಸಬಹುದು ಎಂದರ್ಥ. ಮೇ ಅಪ್ಲೈ ಅಂದರೆ “ಯೋಚಿಸಿ, ನಿಮಗೆ ಮಾರುಕಟ್ಟೆ ಕುರಿತು ಸಾಕಷ್ಟು ಜ್ಞಾನವಿದ್ದರೆ ಮುಂದಡಿ ಇಡಬಹುದು” ಎಂದರ್ಥ. ಇದೇ ರೀತಿ, ಅವಾಯ್ಡ್‌ ಎಂದರೆ, “ಕಂಪನಿಯ ವ್ಯವಹಾರ ಹೀಗೆ ಇದೆ, ಹಿಂದಿನ ತ್ರೈಮಾಸಿಕಗಳಲ್ಲಿ ಇಷ್ಟೆಲ್ಲ ನಷ್ಟ ಆಗಿದೆ, ಕಂಪನಿಯ ಆಡಳಿತದ ಕುರಿತು ಇಂತಹ ವಿಷಯಗಳಿವೆ… ಇತ್ಯಾದಿ ಅಂಶಗಳ ಆಧಾರದಲ್ಲಿ “ಅವಾಯ್ಡ್‌” ಎಂದು ಸೂಚಿಸುತ್ತಾರೆ.

ಪ್ರೀಮಿಯರ್‌ ಎನರ್ಜೀಸ್‌ ಲಿಮಿಟೆಡ್‌ ಐಪಿಒ ಕುರಿತು ವಿವಿಧ ಮಾರುಕಟ್ಟೆ ತಜ್ಞರು “May Apply” ಎಂದು ಸೂಚಿಸಿದ್ದಾರೆ.

Disclaimer: ಷೇರುಪೇಟೆ ಮತ್ತು ಐಪಿಒ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಲೇಖನ ಬರೆಯಲಾಗಿದೆ. ಯಾವುದೇ ಷೇರು ಅಥವಾ ಐಪಿಒ ಖರೀದಿಸಬೇಕೆಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಶಿಫಾರಸು ಮಾಡುವುದಿಲ್ಲ. ಎಚ್‌ಟಿ ಕನ್ನಡದ ಓದುಗ ಹೂಡಿಕೆದಾರರು ಷೇರುಪೇಟೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.