PURE EV: ಅತ್ಯುತ್ತಮ ರೈಡಿಂಗ್‌ ಅನುಭವಕ್ಕಾಗಿ ಜಿಯೋ ಥಿಂಗ್ಸ್‌ ಜೊತೆಗೆ ಪ್ಯೂರ್‌ ಇವಿ ಪಾಲುದಾರಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pure Ev: ಅತ್ಯುತ್ತಮ ರೈಡಿಂಗ್‌ ಅನುಭವಕ್ಕಾಗಿ ಜಿಯೋ ಥಿಂಗ್ಸ್‌ ಜೊತೆಗೆ ಪ್ಯೂರ್‌ ಇವಿ ಪಾಲುದಾರಿಕೆ

PURE EV: ಅತ್ಯುತ್ತಮ ರೈಡಿಂಗ್‌ ಅನುಭವಕ್ಕಾಗಿ ಜಿಯೋ ಥಿಂಗ್ಸ್‌ ಜೊತೆಗೆ ಪ್ಯೂರ್‌ ಇವಿ ಪಾಲುದಾರಿಕೆ

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಪ್ಯೂರ್ ಇವಿ ಇದೀಗ ತನ್ನ ಎಲೆಕ್ನಿಕ್ ವಾಹನಗಳಲ್ಲಿ ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್ ಮತ್ತು ಟೆಲಿಮ್ಯಾಟಿಕ್ಸ್ ಅನ್ನು ಸಂಯೋಜಿಸುವ ಉದ್ದೇಶದಿಂದ ಜಿಯೋ ಪ್ಲಾಟ್ ಫಾರ್ಮ್ಸ್ ಲಿಮಿಟೆಡ್ ನ ಅಂಗಸಂಸ್ಥೆಯಾದ ಜಿಯೋಥಿಂಗ್ಸ್ ಲಿಮಿಟೆಡ್ ಜೊತೆಗೆ ಪಾಲುದಾರಿಕೆಗೆ ಸಹಿ ಹಾಕಿದೆ.

PURE EV: ಅತ್ಯುತ್ತಮ ರೈಡಿಂಗ್‌ ಅನುಭವಕ್ಕಾಗಿ ಜಿಯೋ ಥಿಂಗ್ಸ್‌ ಜೊತೆಗೆ ಪ್ಯೂರ್‌ ಇವಿ ಮೈತ್ರಿ
PURE EV: ಅತ್ಯುತ್ತಮ ರೈಡಿಂಗ್‌ ಅನುಭವಕ್ಕಾಗಿ ಜಿಯೋ ಥಿಂಗ್ಸ್‌ ಜೊತೆಗೆ ಪ್ಯೂರ್‌ ಇವಿ ಮೈತ್ರಿ

ಹೈದರಾಬಾದ್‌: ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಪ್ಯೂರ್ ಇವಿ ಇದೀಗ ತನ್ನ ಎಲೆಕ್ನಿಕ್ ವಾಹನಗಳಲ್ಲಿ ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್ ಮತ್ತು ಟೆಲಿಮ್ಯಾಟಿಕ್ಸ್ ಅನ್ನು ಸಂಯೋಜಿಸುವ ಉದ್ದೇಶದಿಂದ ಜಿಯೋ ಪ್ಲಾಟ್ ಫಾರ್ಮ್ಸ್ ಲಿಮಿಟೆಡ್ ನ ಅಂಗಸಂಸ್ಥೆಯಾದ ಜಿಯೋಥಿಂಗ್ಸ್ ಲಿಮಿಟೆಡ್ ಜೊತೆಗೆ ಪಾಲುದಾರಿಕೆಗೆ ಸಹಿ ಹಾಕಿದೆ. ಈ ಪಾಲುದಾರಿಕೆಯು ಅತ್ಯಾಧುನಿಕ ಐಓಟಿ ಉತ್ಪನ್ನಗಳು, ಅತ್ಯುತ್ತಮ ಕನೆಕ್ಟಿವಿಟಿ ಮತ್ತು ಡಿಜಿಟಲ್ ಏಕೀಕರಣದ ಮೂಲಕ ಬಳಕೆದಾರರಿಗೆ ಅತ್ಯುತ್ಕೃಷ್ಟ ರೈಡಿಂಗ್ ಅನುಭವ ಒದಗಿಸುವ ಗುರಿಯನ್ನು ಹೊಂದಿದೆ.

ಪ್ಯೂ‌ರ್ ಇವಿ ಸಂಸ್ಥೆಯು ಜಿಯೋಥಿಂಗ್ಸ್ ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್ ಗಳನ್ನು ತನ್ನ ಉತ್ಪನ್ನಗಳಲ್ಲಿ ಬಳಸಿಕೊಳ್ಳಲು ಯೋಜಿಸಿದ್ದು, ಈ ವ್ಯವಸ್ಥೆಯು ಐಓಟಿ ಉತ್ಪನ್ನಗಳನ್ನು ಒಳಗೊಂಡಿದೆ. ತನ್ನ ಎಲೆಕ್ನಿಕ್ ದ್ವಿಚಕ್ರ ವಾಹನಗಳಲ್ಲಿ ಐಓಟಿ ಉತ್ಪನ್ನಗಳನ್ನು ಬಳಸಿಕೊಳ್ಳುವ ಮೂಲಕ ವಾಹನಗಳ ಕಾರ್ಯನಿರ್ವಹಣೆ ಮತ್ತು ಸೌಕರ್ಯಗಳನ್ನು ಹೆಚ್ಚಿಸುವ ಕೆಲಸ ನಡೆಯಲಿದೆ. 4ಜಿ ಸಂಪರ್ಕದಿಂದ ಕಾರ್ಯ ನಿರ್ವಹಿಸುವ ಟೆಲಿಮ್ಯಾಟಿಕ್ಸ್ ನ ಸಂಯೋಜನೆಯಿಂದ ಗ್ರಾಹಕರು ಆಯಾ ಸಮಯದಲ್ಲಿ ವಾಹನದ ಕುರಿತ ಉಪಯುಕ್ತ ಒಳನೋಟಗಳನ್ನು ಪಡೆಯಬಹುದಾಗಿದ್ದು, ಆ ಮೂಲಕ ಗ್ರಾಹಕರು ವಾಹನದ ಕಾರ್ಯಕ್ಷಮತೆಯ ಮೇಲೆ ಗಮನ ಹರಿಸಲು ಮತ್ತು ಹೆಚ್ಚು ಪರಿಣಾಮಕಾರಿ ಕಾರ್ಯಾಚರಣೆ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ತಿಳಿಸಿದೆ.

ಜಿಯೋ ಥಿಂಗ್ಸ್ 4ಜಿ ಸ್ಮಾರ್ಟ್ ಡಿಜಿಟಲ್ ಕ್ಲಸ್ಟರ್, ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್ (ಎ ಓ ಎಸ್ ಪಿ) ಆಧಾರಿತ ಅವಿ ಓಎಸ್ ಅನ್ನು ಬಳಸುತ್ತದೆ. ಈ ವ್ಯವಸ್ಥೆಯು ಆಯಾ ಸಮಯದ ಡೇಟಾ ಅನಾಲಿಟಿಕ್ಸ್, ಟೂ ವೀಲರ್ ಇಂಟರ್ಫೇಸ್ ಕಸ್ಟಮೈಸೇಶನ್ ಮತ್ತು ಪೂರ್ಣ ಹೆಚ್ ಡಿ+ ಟಚ್ ಸ್ಕಿನ್ ಡಿಸ್ ಪ್ಲೇ ಸೌಲಭ್ಯವನ್ನು ನೀಡುತ್ತದೆ. ಈ ವಿಶಿಷ್ಟ ಡಿಜಿಟಲ್ ಕ್ಲಸ್ಟರ್ ಓರಿಜಿನಲ್ ಈಕ್ವಿಪ್ ಮೆಂಟ್ ಮ್ಯಾನುಫ್ಯಾಕ್ಟರಿಂಗ್ ಸಂಸ್ಥೆಗಳಿಗೆ ತಮ್ಮ ಉತ್ಪನ್ನಗಳಲ್ಲಿ ಐಓಟಿ ಉತ್ಪನ್ನಗಳನ್ನು ಸಂಯೋಜಿಸುವ ಈ ವಿಚಾರದಲ್ಲಿ ವೇಗ ಪಡೆಯಲು ಪ್ರೋತ್ಸಾಹಿಸುತ್ತದೆ.

ಜಿಯೋ ಆಟೋಮೋಟಿವ್ ಆಪ್ ಸೂಟ್ (ಜೆಎಎಎಸ್) ಈ ವಾಹನಗಳಲ್ಲಿ ಸಂಯೋಜಿಸಲಾಗುವ ಮತ್ತೊಂದು ವಿಶಿಷ್ಟ ಸೌಲಭ್ಯವಾಗಿದೆ. ಈ ಆಪ್ ಸೂಟ್ ಮೂಲಕ ಜಿಯೋ ಸ್ಟೋರ್, ಸಂಗೀತ ಕೇಳುವಿಕೆ, ವೆಬ್ ಬ್ರೌಸಿಂಗ್, ವಾಯ್ಸ್ ಅಸಿಸ್ಟೆಂಟ್, ನ್ಯಾವಿಗೇಷನ್, ಗೇಮಿಂಗ್ ಮತ್ತು ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಂತೆ ದ್ವಿಚಕ್ರ ವಾಹನ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಲವಾರು ಉತ್ಪನ್ನಗಳು ಮತ್ತು ಸೇವೆಗಳ ಶ್ರೇಣಿಯನ್ನು ಒದಗಿಸಲಾಗುತ್ತದೆ.

"ನಮ್ಮ ಎಲೆಕ್ನಿಕ್ ದ್ವಿಚಕ್ರ ವಾಹನಗಳಲ್ಲಿ ಜಿಯೋ ಥಿಂಗ್ಸ್ ನ ಉನ್ನತ ಗುಣಮಟ್ಟದ ಐಓಟಿ ಉತ್ಪನ್ನಗಳನ್ನು ಸಂಯೋಜಿಸುವ ಮೂಲಕ ಪೂರ್ ಇವಿಯ ಉತ್ಪನ್ನಗಳನ್ನು ಉದ್ಯಮದಲ್ಲಿಯೇ ಅತ್ಯುನ್ನತ ಗುಣಮಟ್ಟಕ್ಕೆ ಏರಿಸುವ ಮಹತ್ವದ ಕೆಲಸ ನಡೆಯಲಿದೆ. ನಮ್ಮ ವಾಹನಗಳ ಕಾರ್ಯಕ್ಷಮತೆ ಮತ್ತು ಕನೆಕ್ಟಿವಿಟಿಯನ್ನು ಹೆಚ್ಚಿಸುವ ಮೂಲಕ ಎಲೆಕ್ನಿಕ್ ಸಾರಿಗೆ ವ್ಯವಸ್ಥೆಯನ್ನೇ ಬದಲಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಹೊಸ ಯೋಜನೆಯು ಇವಿ ಪರಿಸರ ವ್ಯವಸ್ಥೆಯನ್ನೇ ಮರು ರೂಪಿಸುವ ಸಾಧ್ಯತೆಯನ್ನು ಅನ್ವೇಷಿಸುವ ನಿಟ್ಟಿನಲ್ಲಿ ನಮ್ಮ ಮಹತ್ವದ ಯೋಜನೆಯಾಗಿದೆ.ಈ ಮೂಲಕ ನಮ್ಮ ಗ್ರಾಹಕರು ಉತ್ತಮ ಕನೆಕ್ಟಿವಿಟಿ, ಹೆಚ್ಚಿನ ಸೌಕರ್ಯ ಮತ್ತು ಹೆಚ್ಚು ಅನುಕೂಲತೆಯ ಪ್ರಯೋಜನ ಪಡೆಯುತ್ತಾರೆ ಎಂಬುದನ್ನು ಈ ಮೂಲಕ ಖಚಿತಪಡಿಸುತ್ತಿದ್ದೇವೆ" ಎಂದು ಪ್ಯೂರ್‌ ಇವಿಯ ಸಂಸ್ಥಾಪಕ ಮತ್ತು ಎಂ.ಡಿ. ಡಾ. ನಿಶಾಂತ್ ಡೊಂಗಾರಿ ಹೇಳಿದ್ದಾರೆ

"ಎಲೆಕ್ನಿಕ್ ಸಾರಿಗೆ ಕ್ಷೇತ್ರದಲ್ಲಿ ಹೊಸತನ ಮತ್ತು ಶ್ರೇಷ್ಠವಾದುದನ್ನು ಸಾಧಿಸುವ ಉದ್ದೇಶ ಹೊಂದಿರುವ ಕಂಪನಿಯಾದ ಪ್ಯೂರ್. ಇವಿ ಜೊತೆಗೆ ಸಹಭಾಗಿತ್ವ ಹೊಂದಲು ನಾವು ಸಂತೋಷ ಪಡುತ್ತೇವೆ. ನಮ್ಮ ಅತ್ಯಾಧುನಿಕ ಐಓಟಿ ಉತ್ಪನ್ನಗಳನ್ನು ಅವರ ದ್ವಿಚಕ್ರ ವಾಹನಗಳಲ್ಲಿ ಸಂಯೋಜಿಸುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಎಲೆಕ್ನಿಕ್ ದ್ವಿಚಕ್ರ ವಾಹನದ ಅನುಭವವನ್ನು ಒದಗಿಸುವ ಪ್ಯೂರ್ ಇವಿಯ ಉದ್ದೇಶಕ್ಕೆ, ಬೆಂಬಲ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಮೂಲಕ ದಕ್ಷತೆ ಮತ್ತು ಕನೆಕ್ಟಿವಿಟಿ ವಿಚಾರದಲ್ಲಿ ಹೊಸ ಮಾನದಂಡ ಹಾಕಿಕೊಡುತ್ತೇವೆ. ಈ ಪಾಲುದಾರಿಕೆಯು ಎಲೆಕ್ನಿಕ್ ದ್ವಿಚಕ್ರ ವಾಹನ ಕ್ಷೇತ್ರದ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ಸುಸ್ಥಿರ ಸಾರಿಗೆ ಉತ್ಪನ್ನ ವ್ಯಾಪಕ ಅಳವಡಿಕೆಗೆ ಚಾಲನೆ ನೀಡುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ'" ಎಂದು ಸಹಯೋಗದ ಕುರಿತು ಮಾತನಾಡಿದ ಜಿಯೋ ಪ್ಲಾಟ್ ಫಾರ್ಮ್ಸ್ ಲಿಮಿಟೆಡ್‌ನ ಅಧ್ಯಕ್ಷರಾದ ಆಶಿಶ್ ಲೋಧಾ ಹೇಳಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.