ಪೇಟಿಎಂ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ಎಫೆಕ್ಟ್; ಷೇರುಪೇಟೆಯಲ್ಲಿ ಪೇಟಿಎಂ ಷೇರುಗಳ ಮೌಲ್ಯ ಶೇಕಡಾ 20 ರಷ್ಟು ಕುಸಿತ
ಮುಂಬೈ ಷೇರುಪೇಟೆಯಲ್ಲಿ ಪೇಟಿಎಂಗೆ ಭಾರಿ ಹಿನ್ನಡೆಯಾಗಿದೆ. ಪೇಟಿಎಂ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಈ ಸಂಸ್ಥೆಯ ಷೇರುಗಳು ಶೇಕಡಾ 20 ರಷ್ಟು ಲೋವರ್ ಸರ್ಕ್ಯೂಟ್‌ಗೆ ಮುಟ್ಟಿದೆ.
ಮುಂಬೈ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ.(ಪಿಪಿಬಿಎಲ್) ಮೇಲೆ ನಿನ್ನೆ (ಜನವರಿ 31, ಬುಧವಾರ) ಆರ್‌ಬಿಐ ನಿರ್ಬಂಧ ವಿಧಿಸಿದ ಪರಿಣಾಮವಾಗಿ ಇಂದು (ಫೆಬ್ರವರಿ 1, ಗುರುವಾರ) ಪೇಟಿಎಂ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ಪರಿಣಾಮವಾಗಿ ಷೇರುಗಳ ಬೆಲೆ ಶೇಕಡಾ 20 ರಷ್ಟು ಕುಸಿತವಾಗಿದೆ. ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 608 ರೂಪಾಯಿಯಲ್ಲಿ ವಹಿವಾಟು ಆರಂಭಿಸಿತ್ತು
ಬುಧವಾರ (ಜನವರಿ 31), ಪೇಟಿಎಂ ಷೇರು 761.20 ರೂಪಾಯಿಗಳೊಂದಿಗೆ ವಹಿವಾಟು ಮುಗಿಸಿತ್ತು. ಆದರೆ ಇವತ್ತಿನ ಆರಂಭಿಕ ವಹಿವಾಟಿನಲ್ಲೇ ಶೇಕಡಾ 20 ರಷ್ಟು ಲೋವರ್ ಸರ್ಕ್ಯೂಟ್ ಅನ್ನು ಮುಟ್ಟಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧಗಳನ್ನು ವಿಧಿಸಿರುವುದೇ ಪೇಟಿಎಂ ಷೇರುಗಳ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಆರ್‌ಬಿಐನ ಈ ನಿರ್ಬಂಧಗಳು ಫಿನ್‌ಟೆಕ್ ಕಂಪನಿಯ ಸಾಲ ವ್ಯವಹಾರದ ಮೇಲೂ ಪರಿಣಾಮ ಬೀರಬಹುದು. ಸೇವೆಗಳಿಗೆ ಆರ್‌ಬಿಐ ನಿರ್ಬಂಧಗಳನ್ನು ವಿಧಿಸಿರುವ ಬಗ್ಗೆ ಪೇಟಿಎಂ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಮಾಡುವವರೆಗೆ ಅದರ ಷೇರುಗಳು ಒತ್ತಡದಲ್ಲೇ ಮುಂದುವರಿಯಬಹುದು ಎನ್ನಲಾಗಿದೆ.
ಕೇಂದ್ರ ಬಜೆಟ್ ದಿನವೇ ಪೇಟಿಎಂ ಷೇರುಗಳ ಪತನದ ಬಗ್ಗೆ ಮಾತನಾಡಿರುವ ಪ್ರಾಫಿಟ್‌ಮಾರ್ಟ್ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಅವಿನಾಶ್ ಗೋರಕ್ಷಕರ್, ಭಾರತೀಯ ರಿಸರ್ವ್ ಬ್ಯಾಂಕ್ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದರಿಂದ ಆ ಕಂಪನಿಯ ಷೇರುಗಳ ಮಾರಾಟದ ಒತ್ತಡ ಹೆಚ್ಚಾಗಿದೆ. ಇದು ಪೇಟಿಎಂ ಸಾಲ ವ್ಯವಹಾರದ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಫಿನ್‌ಟೆಕ್ ಕಂಪನಿಯ ನಿವ್ವಳ ಆದಾಯದ ಸುಮಾರು 20 ರಷ್ಟು ಪಾಲವನ್ನು ತಂದುಕೊಡುತ್ತಿದೆ. ಚಾರ್ಟ್ ಮಾದರಿಯಲ್ಲಿ ಪೇಟಿಎಂ ಷೇರು ಬೆಲೆ ದುರ್ಬಲವಾಗಿ ಕಾಣುತ್ತಿದೆ. ಪ್ರಸ್ತುತ 600 ರಿಂದ 590ಕ್ಕೆ ಕುಸಿದರೆ ದುರ್ಬಲವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಚಾಯ್ಸ್ ಬ್ರೋಕಿಂಗ್ ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಸಕ್ಷೆನ್ 35ಎಂ ಅಡಿಯಲ್ಲಿ ಪೇಟಿಎಂ ಬ್ಯಾಂಕ್ ಫೆಬ್ರವರಿ 29 ರ ನಂತರ ಯಾವುದೇ ಗ್ರಾಹಕರ ಖಾತೆಗೆ, ವಾಲೆಟ್‌ಗಳು ಅಥವಾ ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿ ಅಥವಾ ಟಾಪ್ ಅಪ್‌ಗಳನ್ನು ಸ್ವರಿಸದಂತೆ ಆರ್‌ಬಿಐ ಆದೇಶ ಹೊರಡಿಸಿದೆ.
ಲೋವರ್ ಸರ್ಕ್ಯೂಟ್ ಎಂದರೇನು?
ಷೇರು ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯ ತೀವ್ರ ಏರಿಳಿತದ ವಿಧಾನವೇ ಅಪ್ಪರ್ ಮತ್ತು ಲೋವರ್ ಸರ್ಕ್ಯೂಟ್ ಆಗಿದೆ. ಒಂದು ಸಂಸ್ಥೆಯ ಷೇರುಗಳು ದಿನದ ವಹಿವಾಟಿನಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದರೆ ಅದನ್ನು ಲೋಯರ್ ಸರ್ಕ್ಯೂಟ್ ಎನ್ನಲಾಗುತ್ತದೆ. ಪ್ರೈಸ್ ಬಾಂಡ್‌ಗಳಂತಲೂ ಕರೆಯಲಾಗುತ್ತದೆ. ಷೇರಗಳನ್ನು ಅತಿಯಾಗಿ ಖರೀಸುವುದು ಇಲ್ಲವೇ ಅತಿಯಾಗಿ ಮಾರಾಟ ಮಾಡುವುದನ್ನು ನಿಯಂತ್ರಿಸಲು ಸರ್ಕ್ಯೂಟ್ ಫಿಲ್ಟರ್‌ಗಳನ್ನು ಬಳಸಲಾಗುತ್ತದೆ. (This copy first appeared in Hindustan Times Kannada website. To read more like this please logon to kannada.hindustantime.com)
ವಿಭಾಗ