ಹೊಸದಾಗಿ ಜಿಯೋ ಏರ್‌ಫೈಬರ್ ಕನೆಕ್ಷನ್ ತಗೊಳ್ತೀರಾ, ಇನ್‌ಸ್ಟಾಲೇಶನ್ ಶುಲ್ಕ 1000 ರೂಪಾಯಿ ಕೊಡಬೇಕಾಗಿಲ್ಲ, ಪ್ಲಾನ್‌ನಲ್ಲಿ ಶೇ 30 ರಿಯಾಯಿತಿ
ಸ್ವಾತಂತ್ರ್ಯ ದಿನ ಸಮೀಪದಲ್ಲಿದೆ. ವಿವಿಧ ಕಂಪನಿಗಳು ವಿವಿಧ ಆಫರ್‌ಗಳನ್ನು ನೀಡಿ ಹೊಸ ಗ್ರಾಹಕರನ್ನು ಆಕರ್ಷಿಸುವುದು ಸಹಜ. ಟೆಲಿಕಾಂ ಕೂಡ ಅದಕ್ಕೆ ಹೊರತಲ್ಲ. ಜಿಯೋ ಅಂಥದ್ದೊಂದು ಆಫರ್ ನೀಡಿದೆ. ಹೊಸದಾಗಿ ಜಿಯೋ ಏರ್‌ಫೈಬರ್ ಕನೆಕ್ಷನ್ ತಗೊಳ್ತೀರಾ, ಇನ್‌ಸ್ಟಾಲೇಶನ್ ಶುಲ್ಕ 1000 ರೂ ಕೊಡಬೇಕಾಗಿಲ್ಲ, ಪ್ಲಾನ್‌ನಲ್ಲಿ ಶೇ 30 ರಿಯಾಯಿತಿ ಇರುವ ಫ್ರೀಡಂ ಆಫರ್ ವಿವರ ಹೀಗಿದೆ.

ಮುಂಬಯಿ: ಹೊಸದಾಗಿ ಜಿಯೋ ಏರ್ ಫೈಬರ್ ಕನೆಕ್ಷನ್ ತಗೊಳ್ತೀರಾ, ಇನ್‌ಸ್ಟಾಲೇಶನ್ ಶುಲ್ಕ 1000 ರೂಪಾಯಿ ಕೊಡಬೇಕಾಗಿಲ್ಲ. ಪ್ಲಾನ್‌ನಲ್ಲೂ ಶೇಕಡ 30 ರಿಯಾಯಿತಿ ಸಿಗಲಿದೆ. ಹೌದು, ರಿಲಯನ್ಸ್ ಜಿಯೋ ತನ್ನ ಹೊಸ ಏರ್ ಫೈಬರ್ ಗ್ರಾಹಕರಿಗೆ ಆಕರ್ಷಕ ಆಫರ್ ಘೋಷಿಸಿದೆ. ಈ ಆಫರ್ ಇಂದು ಜಾರಿಗೆ ಬಂದಿದ್ದು, ಆಗಸ್ಟ್ 15ರ ತನಕ ಲಭ್ಯವಿದೆ.
ಸ್ವಾತಂತ್ರ್ಯ ದಿನಾಚರಣೆ ಸಮೀಪದಲ್ಲಿರುವಾಗ ಜಿಯೋ ಈ “ಫ್ರೀಡಂ ಆಫರ್” ಘೋಷಿಸಿದ್ದು, ಹೊಸ ಗ್ರಾಹಕರಿಗೆ ಈ ಅನುಕೂಲವನ್ನು ಒದಗಿಸಲಿದೆ. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅತಿ ದೊಡ್ಡ ಗೃಹ ಬ್ರಾಡ್ ಬ್ಯಾಂಡ್ ಹಾಗೂ ಮನರಂಜನಾ ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆ ಜಿಯೋಫೈಬರ್ ಅಥವಾ ಏರ್ ಫೈಬರ್.
ಈಗಾಗಲೇ, 1.2 ಕೋಟಿ ಮನೆಗಳಿಗೆ ಸಂಪರ್ಕ ನೀಡಿರುವ ಜಿಯೋ ಫೈಬರ್ ಅಥವಾ ಏರ್ ಫೈಬರ್ ಭಾರತೀಯರ ಮನೆಗಳನ್ನು ಇನ್ನಷ್ಟು ವೇಗವಾಗಿ ಡಿಜಿಟೈಸ್ ಮಾಡುವ ಉದ್ದೇಶ ಹೊಂದಿದೆ. ಭಾರತವನ್ನು ಡಿಜಿಟಲ್ ಸಮುದಾಯವಾಗಿ ಮಾರ್ಪಡಿಸುವ ಉದ್ದೇಶದಿಂದ ಈ ಭರವಸೆಯ ಕೊಡುಗೆಯನ್ನು ಘೋಷಣೆ ಮಾಡಲಾಗಿದೆ ಎಂದು ಜಿಯೋ ತಿಳಿಸಿದೆ.
ಜಿಯೋ ಏರ್‌ಫೈಬರ್ ಫ್ರೀಡಂ ಆಫರ್
ಈಗಾಗಲೇ ಕೈಗೆಟುಕುವ ಬೆಲೆಯಲ್ಲಿ ಇರುವ ಜಿಯೋಏರ್ ಫೈಬರ್ ಪ್ಲಾನ್ ಗಳ ಜೊತೆಗೆ ಶೇಕಡಾ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಫ್ರೀಡಂ ಆಫರ್‌ನಲ್ಲಿ ಹೊಸ ಜಿಯೋಏರ್ ಫೈಬರ್ ಬಳಕೆದಾರರು ಉಚಿತ ಇನ್‌ಸ್ಟಾಲೇಶನ್ ಜೊತೆಗೆ ಪ್ಲಾನ್ ಮೇಲೆ ಶೇ 30ರಷ್ಟು ರಿಯಾಯಿತಿ ಕೂಡ ಪಡೆಯಲಿದ್ದಾರೆ. ಈ ಆಫರ್ ಇಲ್ಲದೇ ಇದ್ದಾಗ 1000 ರೂಪಾಯಿ ಇನ್‌ಸ್ಟಾಲೇಶನ್ ಶುಲ್ಕವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ. ಇದು ಸೀಮಿತ ಅವಧಿಯ ಕೊಡುಗೆ ಆಗಿದ್ದು, ಜುಲೈ 26ರಿಂದ ಆಗಸ್ಟ್ 15ರ ತನಕ ಮಾತ್ರ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ.
ಜಿಯೋದಿಂದ ಸ್ಥಿರ ನಿಸ್ತಂತು (ವೈರ್ ಲೆಸ್) ಕೊಡುಗೆ ಏರ್ ಫೈಬರ್ ಅನ್ನು ಕಳೆದ ವರ್ಷ ಗಣೇಶ ಚತುರ್ಥಿಗೆ ಪರಿಚಯಿಸಲಾಯಿತು. ಜಿಯೋದಿಂದ 5ಜಿ ಸ್ಟ್ಯಾಂಡ್ ಅಲೋನ್ ಸಂಪರ್ಕ ಸೇವೆಗಳನ್ನು ನಿಯೋಜಿಸಲಾಗಿದೆ. 5ಜಿ ಸ್ಥಿರ ನಿಸ್ತಂತು ಸಂಪರ್ಕವನ್ನು ಒದಗಿಸುವುದಕ್ಕೆ ಮೀಸಲಿಟ್ಟ ನೆಟ್ ವರ್ಕ್ ಬಳಕೆ ಮಾಡುತ್ತಿದೆ. ನೆಟ್ ವರ್ಕ್ ಇಕ್ಕಟ್ಟಾಗುವುದನ್ನು ನಿರ್ವಹಿಸುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಆದರೂ ಏರ್ ಫೈಬರ್ ನ ಸರಾಸರಿ ಬಳಕೆದಾರರು ಒಂದು ತಿಂಗಳಿಗೆ 400 ಜಿಬಿ ಡೇಟಾ ಬಳಸುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಏನಿದು ಜಿಯೋಏರ್ ಫೈಬರ್?
ಯಾವುದೇ ತಂತಿ ಇಲ್ಲದೆ ಫೈಬರ್ ರೀತಿ ವೇಗವನ್ನು ಗಾಳಿಯ ಮೂಲಕವೇ ಒದಗಿಸುತ್ತದೆ ಏರ್ ಫೈಬರ್. ಬಳಕೆದಾರರು ಪ್ಲಗ್ ಹಾಕಿ, ಆನ್ ಮಾಡಿದರೆ ಆಯಿತು. ಇಷ್ಟು ಮಾಡಿದಲ್ಲಿ ತಮ್ಮ ಮನೆಯಲ್ಲಿ ವೈಯಕ್ತಿಕ ಹಾಟ್ ಸ್ಪಾಟ್ ಅನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಂತಾಗುತ್ತದೆ.
ಜಿಯೋಫೈಬರ್ ಸ್ಥಿರ ನಿಸ್ತಂತು ಸಂಪರ್ಕ ಪರಿಹಾರವಾಗಿದ್ದು, ಇದರಿಂದ ಯಾವುದೇ ಅಡೆತಡೆಯಿಲ್ಲದೆ 1 ಜಿಬಿಪಿಎಸ್ ತನಕದ ಹೈ- ಸ್ಪೀಡ್ ಸಂಪರ್ಕ ಮನೆ ಮತ್ತು ಕಚೇರಿಗಳಿಗೆ ದೊರೆಯುತ್ತದೆ . ಏಕಕಾಲಕ್ಕೆ ಹಲವು ಸಾಧನಗಳನ್ನು ಬಳಸಬಹುದು. ಸ್ಮಾರ್ಟ್ ಫೋನ್, ಪರ್ಸನಲ್ ಕಂಪ್ಯೂಟರ್ ಗಳು, ಟ್ಯಾಬ್ಲೆಟ್, ಸ್ಮಾರ್ಟ್ ಟೀವಿಗಳು, ಮತ್ತು ಇದರ ಜತೆಗೆ ಸೆಟ್ ಟಾಪ್ ಬಾಕ್ಸ್ ಗಳನ್ನು ಸಹ ಏಕಕಾಲಕ್ಕೆ ಸಂಪರ್ಕ ಕೊಡಬಹುದು, ಅದು ಕೂಡ ಇಂಟರ್ ನೆಟ್ ವೇಗದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಸಾಧ್ಯವಾಗುತ್ತದೆ
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)
