ಕನ್ನಡ ಸುದ್ದಿ  /  Nation And-world  /  Business News Sensex Down 434 Pts Nifty Below 22100 Realty Psu Banks Outperform Share Market Closing Bell Rst

Closing Bell: ದಾಖಲೆಯ ಗಳಿಕೆಯ ಬಳಿಕ ಕುಸಿದ ನಿಫ್ಟಿ, ಸೆನ್ಸೆಕ್ಸ್‌ 434 ಅಂಕ ಇಳಿಕೆ; ಇಂದು ಲಾಭ-ನಷ್ಟ ಕಂಡ ಷೇರುಗಳಿವು

ಭಾರತದ ಷೇರು ಮಾರುಕಟ್ಟೆಯಲ್ಲಿ ಹಾವು-ಏಣಿ ಆಟ ಮುಂದುವರಿದಿದೆ. ನಿನ್ನೆ (ಫೆ.20) ಮಾರುಕಟ್ಟೆ ಮುಕ್ತಾಯದ ವೇಳೆಗೆ ನಿಫ್ಟಿಯು 22,200ಕ್ಕೆ ತಲುಪುವ ಮೂಲಕ ಹೊಸ ದಾಖಲೆ ಬರೆದಿತ್ತು. ಆದರೆ ಇಂದು ಮತ್ತೆ ನಷ್ಟ ಕಂಡಿದೆ. ಸೆನ್ಸೆಕ್ಸ್‌ನಲ್ಲೂ ಇಳಿಕೆಯಾಗಿದೆ.

ದಾಖಲೆಯ ಗಳಿಕೆಯ ಬಳಿಕ ಕುಸಿದ ನಿಫ್ಟಿ, ಸೆನ್ಸೆಕ್ಸ್‌ 434 ಅಂಕ ಇಳಿಕೆ; ಇಂದು ಲಾಭ-ನಷ್ಟ ಕಂಡ ಷೇರುಗಳಿವು
ದಾಖಲೆಯ ಗಳಿಕೆಯ ಬಳಿಕ ಕುಸಿದ ನಿಫ್ಟಿ, ಸೆನ್ಸೆಕ್ಸ್‌ 434 ಅಂಕ ಇಳಿಕೆ; ಇಂದು ಲಾಭ-ನಷ್ಟ ಕಂಡ ಷೇರುಗಳಿವು (MINT_PRINT)

ಬೆಂಗಳೂರು: ಷೇರು ಮಾರುಕಟ್ಟೆಯ ಭವಿಷ್ಯವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ನಿನ್ನೆ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು. ನಿಫ್ಟಿಯು ಮೊದಲ ಬಾರಿಗೆ 22,220ಕ್ಕೆ ತಲುಪುವ ಮೂಲಕ ಹೂಡಿಕೆದಾರರಲ್ಲಿ ಹರ್ಷ ಹೆಚ್ಚುವಂತೆ ಮಾಡಿತ್ತು. ಸೆನ್ಸೆಕ್ಸ್‌ನಲ್ಲೂ ಲಾಭಗಳಿಕೆಯ ಮೂಲಕ ವಹಿವಾಟು ಮುಗಿದಿತ್ತು. ಆದರೆ ಇಂದು (ಫೆ. 21) ಮತ್ತೆ ಮಾರುಕಟ್ಟೆಯಲ್ಲಿ ಚಂಚಲ ವಹಿವಾಟು ನಡೆದಿದೆ. ಪಿಎಸ್‌ಯು ಬ್ಯಾಂಕ್‌ ಕಳಪೆ ಪ್ರದರ್ಶನ ತೋರಿದ್ದು, ಇದು ಇಂದಿನ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

ಮಾರುಕಟ್ಟೆ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 434.31 ಅಂಕ ಅಥವಾ ಶೇ 0.59 ರಷ್ಟು ಇಳಿಕೆಯಾಗಿ 72,623.09 ಕ್ಕೆ ತಲುಪಿದೆ. ನಿಫ್ಟಿ 142.00 ಅಂಕ ಅಥವಾ ಶೇ 0.64 ರಷ್ಟು ಕುಸಿದು 22,055.00 ಕ್ಕೆ ತಲುಪಿದೆ. ಸುಮಾರು 1227 ಷೇರುಗಳು ಲಾಭ ಗಳಿಸಿದ್ದರೆ, 2078 ಷೇರುಗಳು ಹಿನ್ನಡೆ ಕಂಡಿವೆ. 69 ಷೇರುಗಳು ಯಾವುದೇ ರೀತಿ ಬದಲಾಗಿಲ್ಲ.

ಲಾಭ-ನಷ್ಟ ಕಂಡ ಷೇರುಗಳು

ನಿಫ್ಟಿಯಲ್ಲಿ ಬಿಪಿಸಿಎಲ್, ಕೋಲ್ ಇಂಡಿಯಾ, ಹೀರೋ ಮೋಟೋಕಾರ್ಪ್, ಪವರ್ ಗ್ರಿಡ್ ಕಾರ್ಪ್ ಮತ್ತು ಎನ್‌ಟಿಪಿಸಿ ದೊಡ್ಡ ನಷ್ಟವನ್ನು ಅನುಭವಿಸಿದರೆ, ಟಾಟಾ ಸ್ಟೀಲ್, ಎಸ್‌ಬಿಐ, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಗ್ರಾಹಕ ಉತ್ಪನ್ನಗಳು ಮತ್ತು ಇಂಡಸ್‌ಇಂಡ್ ಬ್ಯಾಂಕ್ ಲಾಭ ಗಳಿಸಿದವು.

ವಲಯದ ಮುಂಭಾಗದಲ್ಲಿ, ರಿಯಾಲ್ಟಿ ಮತ್ತು ಪಿಎಸ್‌ಯು ಬ್ಯಾಂಕ್ ಹೊರತುಪಡಿಸಿ, ಉಳಿದೆಲ್ಲಾ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ವಹಿವಾಟು ಮುಗಿಸಿವೆ. ಬಿಎಸ್‌ಇ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1 ರಷ್ಟು ಇಳಿಕೆಯಾಗಿವೆ.

ಇಂದು ಡಾಲರ್‌ ಎದುರು ರೂಪಾಯಿ ಮೌಲ್ಯವು 82.97ಕ್ಕೆ ತಲುಪಿದೆ. ನಿನ್ನೆಯೂ ಇದೇ ಮೌಲ್ಯವಿತ್ತು.

ಅಮೆರಿಕ ಕೇಂದ್ರಿಯ ಬ್ಯಾಂಕ್‌ನ ನೀತಿ ನಿರ್ಧಾರದ ಮೇಲೆ ಜಾಗತಿಕ ಹೂಡಿಕೆದಾರರು ದೃಷ್ಟಿನೆಟ್ಟಿದ್ದಾರೆ. ಈ ನಡುವೆ ಚೀನಾದ ಮಾರುಕಟ್ಟೆಗಳು ನೀತಿ ಮಧ್ಯಸ್ಥಿಕೆಯಿಂದ ಉತ್ತೇಜಿತಗೊಂಡಿವೆ. ಹಣದುಬ್ಬರದ ಅಪಾಯವು ಫೆಬ್ರುವರಿಗಿಂತ ಹೆಚ್ಚಿರುವುದು ಮಾರುಕಟ್ಟೆಯ ತಲ್ಲಣಕ್ಕೆ ಕಾರಣವಾಗುತ್ತಿದೆ.

ಇದನ್ನೂ ಓದಿ

ಕ್ಲೌಡ್‌ಟೇಲ್‌-ಅಮೆಜಾನ್‌ ಡೀಲ್‌: ಇನ್ಫೋಸಿಸ್‌ ನಾರಾಯಣ ಮೂರ್ತಿ, ಸುಧಾಮೂರ್ತಿಗೆ 915 ಕೋಟಿ ಗಳಿಕೆ ತಂದುಕೊಟ್ಟ ಕ್ಯಾಟಮಾರನ್‌

ಇನ್ಫೋಸಿಸ್‌ನ ನಾರಾಯಣ ಮೂರ್ತಿ-ಸುಧಾಮೂರ್ತಿ ಕುಟುಂಬದ ನೇತೃತ್ವದ ಹೂಡಿಕೆ ಸಂಸ್ಥೆಯಾದ ಕ್ಯಾಟಮಾರನ್‌ ಕ್ಲೌಡ್‌ಟೈಲ್‌ನಲ್ಲಿನ ತನ್ನ ಪಾಲನ್ನು ಅಮೆಜಾನ್‌ಗೆ ಮಾರಾಟ ಮಾಡಿದೆ. ಈ ಒಪ್ಪಂದದಿಂದ ಮೂರ್ತಿ ದಂಪತಿಗಳು ಭಾರಿ ಲಾಭ ಗಳಿಸಿದ್ದಾರೆ. ಅಲ್ಲದೇ, ತಮ್ಮ ಹೂಡಿಕೆಯ ಮೇಲೆ 3 ಪಟ್ಟು ಗಳಿಕೆ ಕಂಡಿದ್ದಾರೆ.