Closing Bell: ಷೇರುಪೇಟೆಗೆ ಬಲ ತುಂಬಿದ ಇಂಧನ-ಆಟೊಮೊಬೈಲ್, ಸೆನ್ಸೆಕ್ಸ್-ನಿಫ್ಟಿ ಏರಿಕೆ; ಇಂದು ಲಾಭ ಗಳಿಸಿದ ಷೇರುಗಳ ವಿವರ ಹೀಗಿದೆ
ಕಳೆದೊಂದಿಷ್ಟು ದಿನಗಳಿಂದ ಇಳಿಕೆಯತ್ತ ಸಾಗಿದ್ದ ಭಾರತದ ಷೇರುಪೇಟೆಯಲ್ಲಿ ಇಂದು ಚೇತರಿಕೆ ಗೋಚರವಾಗಿದೆ. ಇಂಧನ ಹಾಗೂ ಆಟೊಮೊಬೈಲ್ ಷೇರುಗಳು ಭಾರತದ ಷೇರು ಮಾರುಕಟ್ಟೆಗೆ ಬಲ ತುಂಬಿವೆ. ಇಂದು ಯಾವೆಲ್ಲಾ ಷೇರುಗಳು ಲಾಭ ಗಳಿಸಿವೆ, ಯಾರಿಗೆ ನಷ್ಟವಾಗಿದೆ ಗಮನಿಸಿ.

ಬೆಂಗಳೂರು: ಭಾರತದ ಷೇರುಪೇಟೆಯಲ್ಲಿ ಒಂದಿಷ್ಟು ದಿನಗಳಿಂದ ತಲ್ಲಣ ಉಂಟಾಗುತ್ತಿದೆ. ಬಹುತೇಕ ದಿನಗಳು ನಷ್ಟದಲ್ಲಿ ವಹಿವಾಟು ಮುಗಿದಿತ್ತು. ಭಾರತದ ಷೇರುಪೇಟೆಯ ಏರಿಳಿತಕ್ಕೆ ಹಲವು ಅಂತರರಾಷ್ಟ್ರೀಯ ವಿಷಯಗಳು ಕಾರಣವಾಗಿವೆ. ಈ ಎಲ್ಲದರ ನಡುವೆ ಮಂಗಳವಾರ (ಮೇ 14) ಭಾರತದ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದೆ. ಇಂದು ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ಲಾಭಗಳಿಸಿವೆ.
ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 328.48 ಅಥವಾ ಶೇ 0.45 ಅಂಕ ಗಳಿಸುವ ಮೂಲಕ 73,104.61 ಕ್ಕೆ ತಲುಪಿದೆ. ನಿಫ್ಟಿ 113.80 ಅಥವಾ ಶೇ 0.51 ರಷ್ಟು ಗಳಿಕೆ ಕಾಣುವ ಮೂಲಕ 22,217.85 ಕ್ಕೆ ತಲುಪಿದೆ.
ಇಂದಿನ ಷೇರುಪೇಟೆ ಚೇತರಿಕೆಗೆ ಇಂಧನ ಹಾಗೂ ಆಟೊಮೊಬೈಲ್ ಷೇರುಗಳು ಕಾರಣವಾಗಿವೆ. M&M, L&T, JSW ಸ್ಟೀಲ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ದಿನದ ಟಾಪ್ ಗೇನರ್‌ಗಳಾಗಿ ಹೊರಹೊಮ್ಮಿದವು.
ಧನಾತ್ಮಕ ಆವೇಗವು ಮಾರುಕಟ್ಟೆಯ ವಿಸ್ತಾರದಲ್ಲಿ ಪ್ರತಿಫಲಿಸಿತು. ಇಂದು 1,624 ಷೇರುಗಳು ಲಾಭ ಗಳಿಸಿದೆ, 509 ಷೇರುಗಳು ಕುಸಿತ ಕಂಡವು ಮತ್ತು 104 ಷೇರುಗಳು ಬದಲಾಗದೆ ಉಳಿದಿವೆ.
ಹಣಕಾಸು ವಲಯದ ಜೊತೆಗೆ, ಫಾರ್ಮಾ ಸ್ಟಾಕ್‌ಗಳು ಹೆಚ್ಚಿದ ಖರೀದಿ ಚಟುವಟಿಕೆಯನ್ನು ಕಂಡವು, ಸಿಪ್ಲಾದಿಂದ ಧನಾತ್ಮಕ ನಿರ್ವಹಣಾ ವಿವರಣೆಯಿಂದ ಉತ್ತೇಜಿತವಾಯಿತು.