ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Closing Bell: ಚೇತರಿಸಿಕೊಂಡ ಷೇರುಪೇಟೆ; ಸೆನ್ಸೆಕ್ಸ್‌ 2303 ಅಂಕ ಏರಿಕೆ; ಎಲ್ಲಾ ವಲಯಗಳು ಹಸಿರಾಗುವ ಮೂಲಕ ದಿನದ ವಹಿವಾಟು ಅಂತ್ಯ

Closing Bell: ಚೇತರಿಸಿಕೊಂಡ ಷೇರುಪೇಟೆ; ಸೆನ್ಸೆಕ್ಸ್‌ 2303 ಅಂಕ ಏರಿಕೆ; ಎಲ್ಲಾ ವಲಯಗಳು ಹಸಿರಾಗುವ ಮೂಲಕ ದಿನದ ವಹಿವಾಟು ಅಂತ್ಯ

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನವಾದ ನಿನ್ನೆ (ಜೂನ್‌ 4) ಭಾರತದ ಷೇರುಪೇಟೆಯು ಭಾರಿ ನಷ್ಟ ಕಂಡಿತ್ತು. ಸೆನ್ಸೆಕ್ಸ್‌ 4,000 ಅಂಕ ಇಳಿಯುವ ಮೂಲಕ ಹೂಡಿಕೆದಾರರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿತ್ತು. ಇದೀಗ ಇಂದು (ಜೂನ್‌ 5) ದಿನದ ವಹಿವಾಟಿನ ಅಂತ್ಯದ ವೇಳೆಗೆ ಮಾರುಕಟ್ಟೆ ಚುರುಕಾಗಿದೆ. ಸೆನ್ಸೆಕ್ಸ್‌, ನಿಫ್ಟಿ ಎರಡೂ ಏರಿಕೆಯಾಗಿವೆ.

ಚೇತರಿಸಿಕೊಂಡ ಷೇರುಪೇಟೆ; ಸೆನ್ಸೆಕ್ಸ್‌ 2,303 ಅಂಕ ಏರಿಕೆ
ಚೇತರಿಸಿಕೊಂಡ ಷೇರುಪೇಟೆ; ಸೆನ್ಸೆಕ್ಸ್‌ 2,303 ಅಂಕ ಏರಿಕೆ

ಬೆಂಗಳೂರು: ಭಾರತದ ಲೋಕಸಭಾ ಚುನಾವಣೆಯ ಫಲಿತಾಂಶವು ಪರಿಣಾಮ ಷೇರುಪೇಟೆಯ ಮೇಲಾಗಿದ್ದು ಸುಳ್ಳಲ್ಲ. ನಿನ್ನೆ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಹುತೇಕ ಷೇರುಗಳು ಪಾತಾಳಕ್ಕೆ ಇಳಿದಿದ್ದವು. ಭಾರತದ ರಾಜಕೀಯದಲ್ಲಿ ಉಂಟಾಗಿರುವ ಗೊಂದಲಗಳು ಷೇರುಪೇಟೆಯ ತಲ್ಲಟಕ್ಕೆ ಕಾರಣವಾಗಿದೆ. ನಿನ್ನೆ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಎರಡೂ ಭಾರಿ ಇಳಿಕೆ ಕಂಡು ಹೂಡಿಕೆದಾರರಿಗೆ ನಿರಾಸೆ ಉಂಟು ಮಾಡಿದ್ದವು.

ಟ್ರೆಂಡಿಂಗ್​ ಸುದ್ದಿ

ಇಂದು (ಜೂನ್‌ 5) ಮಾರುಕಟ್ಟೆ ಆರಂಭವಾದಾಗ ಮಂಕಾಗಿಯೇ ಇದ್ದ ಷೇರುಪೇಟೆಯ ದಿನದ ವಹಿವಾಟಿನ ಅರ್ಧಕ್ಕೆ ಬಂದಾಗ ಚೇತರಿಸಿಕೊಳ್ಳಲು ಆರಂಭಿಸಿತು. ಮೋದಿಗೆ ಚಂದ್ರಬಾಯ್ಡು ಬೆಂಬಲ ಸೂಚಿಸಿರುವುದು ಷೇರುಪೇಟೆ ಮತ್ತೆ ಚೇತರಿಸಿಕೊಳ್ಳಲು ಕಾರಣ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಬಿಎಸ್‌ಇ ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳಲ್ಲೂ ಏರಿಕೆಯಾಗಿದೆ.

ಇಂದು ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 2,303.19 ಅಂಕ ಅಥವಾ ಶೇ 3.20 ರಷ್ಟು ಏರಿಕೆಯಾಗಿ 74,382.24 ಕ್ಕೆ ತಲುಪಿದೆ ಮತ್ತು ನಿಫ್ಟಿ 735.80 ಅಂಕ ಅಥವಾ ಶೇ 3.36 ರಷ್ಟು ಏರಿಕೆಯಾಗಿ 22,620.30 ಕ್ಕೆ ತಲುಪಿದೆ. ಸುಮಾರು 2348 ಷೇರುಗಳು ಮುಂದುವರಿದವು, 1008 ಷೇರುಗಳು ನಷ್ಟ ಅನುಭವಿಸಿವೆ ಮತ್ತು 74 ಷೇರುಗಳು ಬದಲಾಗಿಲ್ಲ.

ಬಿಪಿಸಿಎಲ್‌ ಮತ್ತು ಎಲ್‌ಅಂಡ್‌ಟಿ ಹೊರತುಪಡಿಸಿ, ಎಲ್ಲಾ ಬಿಎಸ್‌ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಷೇರುಗಳು ಹಸಿರು ಬಣ್ಣದಲ್ಲಿ ಕೊನೆಗೊಂಡವು.

ಆಟೊ, ಬ್ಯಾಂಕ್, ಎಫ್‌ಎಂಸಿಜಿ, ಮೆಟಲ್, ಟೆಲಿಕಾಂ ಮತ್ತು ಮೀಡಿಯಾ ಶೇ 4-6 ರಷ್ಟು ಏರಿಕೆಯೊಂದಿಗೆ ಎಲ್ಲಾ ವಲಯದ ಸೂಚ್ಯಂಕಗಳು ಸಕಾರಾತ್ಮಕ ಟಿಪ್ಪಣಿಯಲ್ಲಿ ದಿನದ ವಹಿವಾಟು ಮುಗಿಸಿವೆ.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ.4ರಷ್ಟು ಏರಿಕೆ ಕಂಡರೆ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ.3ರಷ್ಟು ಏರಿಕೆ ಕಂಡಿದೆ.

ಟಿ20 ವರ್ಲ್ಡ್‌ಕಪ್ 2024