Stock Market: ಹೊಸ ಎತ್ತರಕ್ಕೆ ತಲುಪಿದ ನಿಫ್ಟಿ 50, ಸತತ 10ನೇ ದಿನವೂ ಹಸಿರು; ಮಾರುಕಟ್ಟೆಗೆ ಚೈತನ್ಯ ತಂದ ರಿಲಯೆನ್ಸ್ ಇಂಡಸ್ಟ್ರೀಸ್ ಸಭೆ
Share Market Today: ಭಾರತೀಯ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ನಿಫ್ಟಿ50 ಕಳೆದ17 ವರ್ಷಗಳಲ್ಲೇ ಅತ್ಯಧಿಕ 25,150 ಅಂಕಕ್ಕೆ ತಲುಪಿ ಹೊಸ ದಾಖಲೆ ಬರೆದಿದೆ.. ಇದೇ ಸಮಯದಲ್ಲಿ ಸೆನ್ಸೆಕ್ಸ್ ಶೇಕಡ 0.43 ಅಥವಾ 349.05 ಅಂಕ ಏರಿಕೆ ಕಂಡು 82,134.61ಕ್ಕೆ ತಲುಪಿದೆ.
Stock Market Today: ಆಗಸ್ಟ್ 29ರಂದು ವಹಿವಾಟಿನ ಅಂತ್ಯದಲ್ಲಿ ಭಾರತೀಯ ರಾಷ್ಟ್ರೀಯ ಷೇರುಪೇಟೆ ನಿಫ್ಟಿಯು 25,150 ಅಂಕಕ್ಕೆ ತಲುಪಿ ಹೊಸ ಎತ್ತರಕ್ಕೆ ನೆಗೆದಿದೆ. ವಾಹನ, ಐಟಿ, ತೈಲ ಮತ್ತು ಅನಿಲ, ಎಫ್‌ಎಂಸಿಜಿ ಷೇರುಗಳ ಖರೀದಿ ಹೆಚ್ಚಾಗಿರುವುದು ನಿಫ್ಟಿ ಏರಿಕೆಗೆ ಕಾರಣವಾಗಿದೆ. ಇದೇ ಸಮಯದಲ್ಲಿ ಸೆನ್ಸೆಕ್ಸ್ ಶೇಕಡ 0.43 ಅಥವಾ 349.05 ಅಂಕ ಏರಿಕೆ ಕಂಡು 82,134.61ಕ್ಕೆ ತಲುಪಿದೆ. ನಿಫ್ಟಿಯು 99.70 ಅಂಕ ಅಥವಾ ಶೇಕಡ 0.40ರಷ್ಟು ಹೆಚ್ಚಾಗಿ 25,152ಕ್ಕೆ ತಲುಪಿದೆ.
ಭಾರತೀಯ ಷೇರು ಮಾರುಕಟ್ಟೆಯು ಆಗಸ್ಟ್ 29ರ ಗುರುವಾರ ದಾಖಲೆ ಬರೆದಿದೆ. ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಮುಕೇಶ್ ಅಂಬಾನಿಯವರ ರಿಲಯನ್ಸ್ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯ ನಡುವೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ನಿಫ್ಟಿ 17 ವರ್ಷಗಳಲ್ಲೇ ಅತಿಹೆಚ್ಚು ಲಾಭ ಗಳಿಸಿದೆ. ಕೃತಕ ಬುದ್ಧಿಮತ್ತೆ ಅಳವಡಿಕೆ ಮತ್ತು ಬೋನಸ್ ಷೇರುಗಳನ್ನು ವಿತರಿಸಲು ರಿಲಯನ್ಸ್ ಇಂಡಸ್ಟ್ರೀಸ್ ಯೋಜಿಸಿದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಇಂಥಾ ವ್ಯತ್ಯಾಸಗಳಾಗಿವೆ.
ಎನ್ಎಸ್ಇ ನಿಫ್ಟಿ 50 ಮತ್ತು ಬಿಎಸ್ಇ ಸೆನ್ಸೆಕ್ಸ್ ಎರಡೂ ಶೇಕಡಾ 0.6 ರಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು. ನಿಫ್ಟಿ 50 ಸತತ 11 ಸೆಷನ್‌ಗಳಲ್ಲಿ ಏರಿಕೆ ಕಂಡಿದ್ದು, ಅಕ್ಟೋಬರ್ 2007ರ ನಂತರ ತನ್ನ ಸುದೀರ್ಘ ಗೆಲುವಿನ ಪಥವನ್ನು ದಾಖಲಿಸಲು ಸುಮಾರು 4 ಶೇಕಡ ಏರಿಕೆಯನ್ನು ದಾಖಲಿಸಿದೆ.
ನಿಫ್ಟಿ 50ಯ ಎರಡನೇ ಪ್ರಮುಖ ಷೇರು ರಿಲಯನ್ಸ್ ಇಂಡಸ್ಟ್ರೀಸ್, ಸೆಪ್ಟೆಂಬರ್ 5ರಂದು ನಡೆಯಲಿರುವ ಮಂಡಳಿಯ ಸಭೆಯಲ್ಲಿ ಬೋನಸ್ ಷೇರು ವಿತರಣೆಯನ್ನು ಪರಿಗಣಿಸುವುದಾಗಿ ಹೇಳಿದ ನಂತರ ಈ ಷೇರುಗಳಲ್ಲಿ ಶೇಕಡಾ 1.51ರಷ್ಟು ಏರಿಕೆಯಾಗಿದೆ.
ಇಂದು ಗಳಿಕೆ ಕಂಡ ಷೇರುಗಳು (ಸೆನ್ಸೆಕ್ಸ್)
ಟಾಟಾ ಮೋಟರ್ಸ್, ಬಜಾಜ್ ಫಿನಾನ್ಸ್ ಲಿ, ಬಜಾಜ್ ಫಿನ್‌ಸರ್ವ್ ಲಿ, ಎಚ್‌ಸಿಎಲ್ ಟೆಕ್ನಾಲಜೀಸ್ ಲಿ, ಐಟಿಸಿ ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿ, ಟೆಕ್ ಮಹೀಂದ್ರಾ ಲಿ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್.
ನಷ್ಟ ಅನುಭವಿಸಿದ ಷೇರುಗಳು (ಸೆನ್ಸೆಕ್ಸ್)
ಮಹೀಂದ್ರ & ಮಹೀಂದ್ರಾ ಲಿ, ಜೆಎಸ್‌ಡಬ್ಲ್ಯು ಸ್ಟೀಲ್ಸ್ ಲಿ, ಕೋಟಕ್ ಮಹೀಂದ್ರ ಬ್ಯಾಂಕ್, ಟಾಟಾ ಸ್ಟೀಲ್, ಇನ್ಫೋಸಿಸ್.
ಇಂದು ಗಳಿಕೆ ಕಂಡ ಷೇರುಗಳು (ನಿಫ್ಟಿ)
ಟಾಟಾ ಮೋಟರ್ಸ್, ಬಜಾಜ್ ಫಿನ್‌ಸರ್ವ್ ಲಿ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ, ಬಜಾಜ್ ಫಿನಾನ್ಸ್ ಲಿ,ಬ್ರಿಟಾನಿಯಾ ಇಂಡಸ್ಟ್ರೀಸ್ ಲಿ.
ನಷ್ಟ ಅನುಭವಿಸಿದ ಷೇರುಗಳು (ನಿಫ್ಟಿ)
ಗ್ರಾಸಿಮ್ ಇಂಡಸ್ಟ್ರೀಸ್ ಲಿ, ಮಹೀಂದ್ರ & ಮಹೀಂದ್ರಾ ಲಿ,ಜೆಎಸ್‌ಡಬ್ಲ್ಯು ಸ್ಟೀಲ್ಸ್ ಲಿ, ಕೋಟಕ್ ಮಹೀಂದ್ರ ಬ್ಯಾಂಕ್.
ಷೇರು ಮಾರುಕಟ್ಟೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | SIM Port To BSNL: ಜಿಯೋ, ಏರ್ಟೆಲ್, ವಿಐನಿಂದ ಬಿಎಸ್ಎನ್ಎಲ್ಗೆ ಪೋರ್ಟ್ ಆಗ್ಬೇಕಾ? ಇಲ್ಲಿದೆ ಸರಳ ಮಾರ್ಗ