ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಂದಿನಿಂದ ಹಣಕಾಸು ವರ್ಷದ 2ನೇ ತ್ರೈಮಾಸಿಕ ಶುರು; ಸುಕನ್ಯಾ ಸಮೃದ್ಧಿ ಸೇರಿ ವಿವಿಧ ಸಣ್ಣ ಉಳಿತಾಯಗಳ ಬಡ್ಡಿದರ ಹೀಗಿದೆ ಗಮನಿಸಿ

ಇಂದಿನಿಂದ ಹಣಕಾಸು ವರ್ಷದ 2ನೇ ತ್ರೈಮಾಸಿಕ ಶುರು; ಸುಕನ್ಯಾ ಸಮೃದ್ಧಿ ಸೇರಿ ವಿವಿಧ ಸಣ್ಣ ಉಳಿತಾಯಗಳ ಬಡ್ಡಿದರ ಹೀಗಿದೆ ಗಮನಿಸಿ

ಇಂದಿನಿಂದ ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕ ಶುರುವಾಗಿದೆ. ಸರ್ಕಾರ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ವಿವರ ಪ್ರಕಟಿಸಿದೆ. ಇದರಂತೆ, ಸುಕನ್ಯಾ ಸಮೃದ್ಧಿ ಸೇರಿ ವಿವಿಧ ಸಣ್ಣ ಉಳಿತಾಯಗಳ ಬಡ್ಡಿದರ ಹೀಗಿದೆ ಗಮನಿಸಿ.

ಇಂದಿನಿಂದ ಹಣಕಾಸು ವರ್ಷದ 2ನೇ ತ್ರೈಮಾಸಿಕ ಶುರು; ಸುಕನ್ಯಾ ಸಮೃದ್ಧಿ ಸೇರಿ ವಿವಿಧ ಸಣ್ಣ ಉಳಿತಾಯಗಳ ಬಡ್ಡಿದರ ವಿವರ. (ಸಾಂಕೇತಿಕ ಚಿತ್ರ)
ಇಂದಿನಿಂದ ಹಣಕಾಸು ವರ್ಷದ 2ನೇ ತ್ರೈಮಾಸಿಕ ಶುರು; ಸುಕನ್ಯಾ ಸಮೃದ್ಧಿ ಸೇರಿ ವಿವಿಧ ಸಣ್ಣ ಉಳಿತಾಯಗಳ ಬಡ್ಡಿದರ ವಿವರ. (ಸಾಂಕೇತಿಕ ಚಿತ್ರ) (India Post/ Canva)

ನವದೆಹಲಿ: ಪ್ರಸಕ್ತ ಹಣಕಾಸು ವರ್ಷ (2024-25) ದ ಎರಡನೇ ತ್ರೈಮಾಸಿಕ ಇಂದಿನಿಂದ ಶುರುವಾಗಿದ್ದು, ಸೆಪ್ಟೆಂಬರ್ 30ಕ್ಕೆ ಕೊನೆಯಾಗುತ್ತದೆ. ಈ ತ್ರೈಮಾಸಿಕ ಅವಧಿಗೆ ಅನ್ವಯವಾಗುವಂತೆ ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ವಿವಿದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದ ಕುರಿತು ಕುತೂಹಲ ಸಹಜ.

ಕೇಂದ್ರ ಸರ್ಕಾರ ಪ್ರತಿ ತ್ರೈಮಾಸಿಕ ಹಣಕಾಸು ಅವಧಿಗೆ ಸಣ್ಣ ಉಳಿತಾಯಗಳ ಬಡ್ಡಿದರವನ್ನು ಪರಿಷ್ಕರಿಸುತ್ತಿದ್ದು, ತ್ರೈಮಾಸಿಕ ಅವಧಿಗೆ ಮೊದಲು ಇದನ್ನು ಪ್ರಕಟಿಸುವುದು ವಾಡಿಕೆ. ಅಂತೆಯೇ ಈ ತ್ರೈಮಾಸಿಕ ಅವಧಿಯ ಸಣ್ಣ ಉಳಿತಾಯಗಳ ಬಡ್ಡಿದರ ಪ್ರಕಟವಾಗಿದೆ.

ಜುಲೈ 1 ರಿಂದ ಸೆಪ್ಟೆಂಬರ್ 30ರ ತ್ರೈಮಾಸಿಕ ಅವಧಿಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ

ಟ್ರೆಂಡಿಂಗ್​ ಸುದ್ದಿ

ಅಂಚೆ ಕಚೇರಿ ಉಳಿತಾಯ ಖಾತೆ - ಶೇಕಡ 4

ಅಂಚೆ ಕಚೇರಿ ಆರ್‌ಡಿ ಶೇಕಡ 6.7

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಶೇಕಡ 7.4

ಅಂಚೆ ಕಚೇರಿ ಟೈಮ್ ಡೆಪಾಸಿಟ್ (1 ವರ್ಷ) ಶೇಕಡ 6.9

ಅಂಚೆ ಕಚೇರಿ ಟೈಮ್ ಡೆಪಾಸಿಟ್ (2 ವರ್ಷ) ಶೇಕಡ 7

ಅಂಚೆ ಕಚೇರಿ ಟೈಮ್ ಡೆಪಾಸಿಟ್ (3 ವರ್ಷ) ಶೇಕಡ 7.1

ಅಂಚೆ ಕಚೇರಿ ಟೈಮ್ ಡೆಪಾಸಿಟ್ ( 5 ವರ್ಷ) ಶೇಕಡ 7.5

ಕಿಸಾನ್ ವಿಕಾಸ ಪತ್ರ (ಕೆವಿಪಿ) ಶೇಕಡ 7.5

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್‌) ಶೇಕಡ 7.1

ಸುಕನ್ಯಾ ಸಮೃದ್ಧಿ ಯೋಜನಾ ಶೇಕಡ 8.2

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಶೇಕಡ 7.7

ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌) ಶೇಕಡ 8.2

ಹಣಕಾಸು ಸಚಿವಾಲಯದ ಅಧಿಸೂಚನೆ - ಮೊದಲ ತ್ರೈಮಾಸಿಕ ಅವಧಿಯದ್ದೇ ಬಡ್ಡಿದರ ಮುಂದುವರಿಕೆ

ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ, “ 2024ರ ಜುಲೈ 1 ರಿಂದ ಶುರುವಾಗಿ 2024ರ ಸೆಪ್ಟೆಂಬರ್ 30ರಂದು ಕೊನೆಗೊಳ್ಳುವ 2024-25ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳು ಮೊದಲ ತ್ರೈಮಾಸಿಕಕ್ಕೆ (2024ರ ಏಪ್ರಿಲ್ 1 ರಿಂದ ಜೂನ್ 30ರ ) ಸೂಚಿಸಲಾದ ದರಗಳೇ ಮುಂದುವರಿಯಲಿವೆ”.

ಈ ಅಧಿಸೂಚನೆಯ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆಯಡಿ ಠೇವಣಿಗಳಿಗೆ ಶೇಕಡಾ 8.2 ರ ಬಡ್ಡಿದರ ಇರಲಿದೆ. ಆದರೆ, ಮೂರು ವರ್ಷಗಳ ಅವಧಿಯ ಠೇವಣಿ ಮೇಲಿನ ದರವು ಶೇಕಡಾ 7.1 ಮಾತ್ರ ಇದೆ. ಜನಪ್ರಿಯ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮತ್ತು ಪೋಸ್ಟ್ ಆಫೀಸ್ ಉಳಿತಾಯ ಠೇವಣಿ ಯೋಜನೆಗಳ ಬಡ್ಡಿದರಗಳನ್ನು ಕ್ರಮವಾಗಿ 7.1 ಪ್ರತಿಶತ ಮತ್ತು 4 ಪ್ರತಿಶತ ಇರಲಿದೆ.

ಮುಖ್ಯವಾಗಿ ಅಂಚೆ ಕಚೇರಿಗಳು ಮತ್ತು ಬ್ಯಾಂಕುಗಳಿಂದ ನಿರ್ವಹಿಸಲ್ಪಡುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಸರ್ಕಾರವು ತಿಳಿಸುತ್ತದೆ. ಈ ಹಿಂದಿನ ಅಧಿಸೂಚನೆಯಲ್ಲಿಯೂ ಸರ್ಕಾರವು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಬಡ್ಡಿದರಗಳನ್ನು ಸ್ಥಿರವಾಗಿ ಇರಿಸಿದೆ. ಅಂದರೆ 2024ರ ಜನವರಿ 1 ರಿಂದ ಮಾರ್ಚ್‌ 31ರ ತನಕ ಇದ್ದ ಬಡ್ಡಿದರವನ್ನೇ ಉಳಿಸಿಕೊಂಡಿದೆ. ಪಿಪಿಎಫ್‌ ಬಡ್ಡಿ ದರ 2020ರ ಏಪ್ರಿಲ್-ಜೂನ್ ನಿಂದ ಬದಲಾಗಿಲ್ಲ. ಅಂದು ಶೇಕಡ 7.9 ಶೇಕಡಾದಿಂದ 7.1 ಶೇಕಡಾಕ್ಕೆ ಕಡಿತಗೊಳಿಸಲಾಯಿತು. ಅದಕ್ಕೂ ಮೊದಲು, ಇದನ್ನು 2019ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕಡಿತಗೊಳಿಸಲಾಯಿತು. ಪಿಪಿಎಫ್‌ ಬಡ್ಡಿದರ ಕೊನೆಯದಾಗಿ 2018ರ ಅಕ್ಟೋಬರ್-ಡಿಸೆಂಬರ್ ಅವಧಿಗೆ ಅನ್ವಯವಾಗುವಂತೆ 7.6 ಪ್ರತಿಶತದಿಂದ 8 ಪ್ರತಿಶತಕ್ಕೆ ಹೆಚ್ಚಿಸಲಾಗಿತ್ತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.