Nucleus Software: ಅಂದು 248 ರೂ, ಇಂದು 1025 ರೂಪಾಯಿ, ಷೇರು ಖರೀದಿದಾರರಿಗೆ 3 ವರ್ಷದಲ್ಲಿ 313 ಪರ್ಸೆಂಟ್‌ ಲಾಭ ತಂದುಕೊಟ್ಟ ನ್ಯೂಕ್ಲಿಯಸ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nucleus Software: ಅಂದು 248 ರೂ, ಇಂದು 1025 ರೂಪಾಯಿ, ಷೇರು ಖರೀದಿದಾರರಿಗೆ 3 ವರ್ಷದಲ್ಲಿ 313 ಪರ್ಸೆಂಟ್‌ ಲಾಭ ತಂದುಕೊಟ್ಟ ನ್ಯೂಕ್ಲಿಯಸ್‌

Nucleus Software: ಅಂದು 248 ರೂ, ಇಂದು 1025 ರೂಪಾಯಿ, ಷೇರು ಖರೀದಿದಾರರಿಗೆ 3 ವರ್ಷದಲ್ಲಿ 313 ಪರ್ಸೆಂಟ್‌ ಲಾಭ ತಂದುಕೊಟ್ಟ ನ್ಯೂಕ್ಲಿಯಸ್‌

Nucleus Software Exports Ltdನ ಷೇರು ಖರೀದಿಸಿದವರು ಈಗ ಖುಷಿಯಲ್ಲಿದ್ದಾರೆ. ಮೂರು ವರ್ಷದ ಹಿಂದೆ ಈ ಕಂಪನಿಯ ಷೇರು ದರ 248 ರೂಪಾಯಿ ಇತ್ತು. ಇದೀಗ ಇದರ ದರ 1025 ರೂಪಾಯಿಗೆ ತಲುಪಿದೆ. ಬನ್ನಿ ಈ ಷೇರು ಮತ್ತು ಕಂಪನಿಯ ಬಗ್ಗೆ ತಿಳಿದುಕೊಳ್ಳೋಣ.

ನ್ಯೂಕ್ಲಿಯಸ್‌ ಸಾಫ್ಟ್‌ವೇರ್‌ ಎಕ್ಸ್‌ಪೋರ್ಟ್‌ ಲಿಮಿಟೆಡ್‌
ನ್ಯೂಕ್ಲಿಯಸ್‌ ಸಾಫ್ಟ್‌ವೇರ್‌ ಎಕ್ಸ್‌ಪೋರ್ಟ್‌ ಲಿಮಿಟೆಡ್‌

ಬೆಂಗಳೂರು: ಷೇರುಪೇಟೆಯಲ್ಲಿ ಕೆಲವೊಂದು ಷೇರುಗಳು ಹೂಡಿಕೆದಾರರಿಗೆ ಬೊಂಬಾಟ್‌ ಲಾಭ ತಂದುಕೊಡುತ್ತವೆ. ಇನ್ನು ಕೆಲವು ಷೇರುಗಳು ಆಮೆಯಂತೆ ಮೆಲ್ಲಗೆ ಸಾಗುತ್ತಿರುತ್ತದೆ. Nucleus Software Exports Ltdನ ಷೇರು ಖರೀದಿಸಿದವರು ಈಗ ಖುಷಿಯಲ್ಲಿದ್ದಾರೆ. ಮೂರು ವರ್ಷದ ಹಿಂದೆ ಈ ಕಂಪನಿಯ ಷೇರು ದರ 248 ರೂಪಾಯಿ ಇತ್ತು. ಇದೀಗ ಇದರ ದರ 1025 ರೂಪಾಯಿಗೆ ತಲುಪಿದೆ. ಅಂದರೆ, ಜೂನ್‌ 2020 ರಂದು 248.2 ರೂಪಾಯಿ ದರವಿದ್ದ ಈ ಷೇರಿನ ದರ ಇದೀಗ (ಜೂನ್‌ 23, 2023) 1025 ರೂಗೆ ತಲುಪಿ ಶೇಕಡ 313ರಷ್ಟು ಲಾಭವನ್ನು ಷೇರು ಹೂಡಿಕೆದಾರರಿಗೆ ತಂದುಕೊಟ್ಟಿದೆ.

ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕದಲ್ಲಿ ನ್ಯೂಕ್ಲಿಯಸ್‌ ಸಾಫ್ಟ್‌ವೇರ್‌ ಎಕ್ಸ್‌ಪೋರ್ಟ್‌ ಲಿಮಿಟೆಡ್‌ನ ಷೇರುಗಳು ಮೂರು ವರ್ಷದಲ್ಲಿ ಶೇಕಡ 77.76ರಷ್ಟು ಏರಿಕೆ ಕಂಡಿದೆ. ಬಿಎಸ್‌ಇ ಷೇರುಪೇಟೆಯಲ್ಲಿ ಈ ಹಿಂದಿನ ಸೆಸನ್‌ನಲ್ಲಿ ನ್ಯೂಕ್ಲಿಯಷ್‌ ಷೇರು ದರ ಶೇಕಡ 1.82ರಷ್ಟು ಇಳಿಕೆ ಕಂಡು 1025.75 ರೂಪಾಯಿಗೆ ತಲುಪಿದೆ. ಈ ಷೇರು ಬಿಎಸ್‌ಇಯಲ್ಲಿ ಹಿಂದಿನ ದಿನದ 1044.80 ದರದ ಮುಕ್ತಾಯಕ್ಕೆ ಹೋಲಿಸಿದರೆ ಇಂದು 1064.95 ರೂಪಾಯಿಗೆ ಆರಂಭ ಕಂಡಿದೆ.

ಐಟಿ ಉದ್ಯಮಕ್ಕೆ ಸಂಬಂಧಪಟ್ಟ ಈ ಷೇರು ಒಂದು ವರ್ಷದಲ್ಲಿ ಶೇಕಡ 173ರಷ್ಟು ಏರಿಕೆ ಕಂಡಿದೆ. ಈ ವರ್ಷ ಇಲ್ಲಿಯವರೆಗೆ ಶೇಕಡ 162ರಷ್ಟು ಏರಿಕೆ ಕಂಡಿದೆ. ಈ ಹಿಂದಿನ ಸೆಸನ್‌ಗಳಲ್ಲಿ ಕಂಪನಿಯ ಒಟ್ಟು 0.21 ಲಕ್ಷ ಷೇರುಗಳು ಅಂದರೆ 2.16 ಕೋಟಿ ರೂ. ಮೌಲ್ಯದ ಷೇರುಗಳು ಜನರ ಕೈಬದಲಾಯಿಸಿದೆ. ಜೂನ್‌ 23, 2022ರಂದು ಈ ಷೇರು 52 ವಾರಗಳ ಕೆಳಮಟ್ಟ 358.95 ರೂ.ಗೆ ತಲುಪಿತ್ತು. ಜೂನ್‌ 6, 2023ರಂದು 52 ವಾರಗಳ ಹೊಸ ಎತ್ತರ 1256 ರೂಪಾಯಿಗೆ ತಲುಪಿತ್ತು.

ಕಳೆದ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ನ್ಯೂಕ್ಲಿಯಸ್‌ ಸಾಫ್ಟ್‌ವೇರ್‌ ಎಕ್ಸ್‌ಪೋರ್ಟ್‌ 67.65 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೂ ಹಿಂದಿನ ಆರ್ಥಿಕ ವರ್ಷ ಅಂದರೆ ಮಾರ್ಚ್‌ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 18.29 ಕೋಟಿ ರೂಪಾಯಿ ಲಾಭಗಳಿಸಿತ್ತು. ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಮಾರಾಟವು ಈ ಹಿಂದಿನ ತ್ರೈಮಾಸಿಕ (ಡಿಸೆಂಬರ್‌ 2022)ದ 153.04 ಕೋಟಿ ರೂಪಾಯಿಗೆ ಹೋಲಿಸಿದರೆ ಏರಿಕೆ ಕಂಡಿತ್ತು. ನಾಲ್ಕನೇ ತ್ರೈಮಾಸಿಕದಲ್ಲಿ 206.2 ಕೋಟಿ ರೂ.ಗೆ(ಸೇಲ್ಸ್‌) ತಲುಪಿತ್ತು.

ಏನಿದು ನ್ಯೂಕ್ಲಿಯಸ್‌ ಸಾಫ್ಟ್‌ವೇರ್‌ ಎಕ್ಸ್‌ಪೋರ್ಟ್ಸ್‌: ಇದು ಯಾವ ಕಂಪನಿ, ಎಲ್ಲಿಯ ಕಂಪನಿ ಇತ್ಯಾದಿ ಸಂದೇಹಗಳು ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಿಗೆ ಇರಬಹುದು. ಇದು ಹಣಕಾಸು ಸೇವಾ ಉದ್ಯಮಕ್ಕೆ ಲೆಂಡಿಂಗ್‌ ಮತ್ತು ಟ್ರಾನ್ಸಕ್ಷನ್‌ ಬ್ಯಾಂಕಿಂಗ್‌ ಉತ್ಪನ್ನಗಳನ್ನು ನೀಡುವ ಕಂಪನಿಯಾಗಿದೆ. ಸಾಫ್ಟ್‌ವೇರ್‌, ಪ್ರಾಡಕ್ಟ್‌, ಸಾಫ್ಟ್‌ವೇರ್‌ ಸೇವೆಗಳನ್ನು ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವಾ ವಲಯಕ್ಕೆ ಒದಗಿಸುತ್ತದೆ. ಇದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. (ಪೂರಕ ಮಾಹಿತಿ: ಬಿಸ್ನೆಸ್‌ಟುಡೇ)

ಸ್ವಂತ ಏನಾದರೂ ಉದ್ಯಮ ಆರಂಭಿಸಲು ಬಯಸುವವರಿಗೆ ಸರಕಾರದಿಂದ ಯಾವೆಲ್ಲ ಸಾಲ ದೊರಕುತ್ತದೆ ಎಂದು ತಿಳಿದಿದೆಯೇ? ಕೇಂದ್ರ ಸರಕಾರದ ಎಂಎಸ್‌ಎಂಇ ಸಾಲ (MSME Loan Scheme), ಕ್ರೆಡಿಟ್‌ ಗ್ಯಾರಂಟಿ ಫಂಡ್‌ ಸ್ಕೀಮ್‌ (Credit Guarantee Fund Scheme), ಮುದ್ರಾ ಸಾಲ (MUDRA Loan), ಕ್ರೆಡಿಟ್‌ ಲಿಂಕ್‌ ಕ್ಯಾಪಿಟಲ್‌ ಸಬ್ಸಿಡಿ ಸ್ಕೀಮ್‌ (Credit Link Capital Subsidy Scheme), ನ್ಯಾಷನಲ್‌ ಸ್ಮಾಲ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌ ಸಬ್ಸಿಡಿ, ಎಸ್‌ಐಡಿಬಿಐ ಸಾಲ ಇತ್ಯಾದಿ ಮಾಹಿತಿಯನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ನೀಡಿದೆ. ಈ ಕುರಿತ ಲೇಖನ ಇಲ್ಲಿದೆ ಓದಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.