Closing Bell: ಷೇರುಪೇಟೆಗೆ ಬಲ ತುಂಬಿದ ಐಟಿ, ಹೆಲ್ತ್‌ಕೇರ್; ನಿಫ್ಟಿಯಲ್ಲಿ ಇಂದು ಲಾಭ-ನಷ್ಟ ಕಂಡ ಷೇರುಗಳ ವಿವರ ಇಲ್ಲಿದೆ
Closing Bell today: ಹಿಂಡಾಲ್ಕೋ ಇಂಡಸ್ಟ್ರೀಸ್, ಬಿಪಿಸಿಎಲ್, ಶ್ರೀರಾಮ್ ಫೈನಾನ್ಸ್, ಟಾಟಾ ಸ್ಟೀಲ್ ಮತ್ತು ಎಲ್‌ಟಿಐಮಿಂಡ್‌ಟ್ರೀ ಷೇರುಗಳು ಲಾಭ ಗಳಿಸಿದರೆ, ಎಂ ಆಂಡ್ ಎಂ, ಬಜಾಜ್ ಆಟೋ, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ನಷ್ಟ ಅನುಭವಿಸಬೇಕಾಯ್ತು.
ಬೆಂಗಳೂರು: ಭಾರತದ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50, ಆಗಸ್ಟ್ 18ರ ಸೋಮವಾರದ ಮಾರುಕಟ್ಟೆ ಅವಧಿಯ ಅಂತ್ಯಕ್ಕೆ ಅಲ್ಪ ಬದಲಾವಣೆ ಕಂಡಿವೆ. ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಅಲ್ಪ ಕುಸಿತ ಕಂಡಿದೆ. ಅತ್ತ ನಿಫ್ಟಿ 50ಯು 0.13 ಶೇಕಡ ಏರಿಕೆಯೊಂದಿಗೆ ದಿನದ ವಹಿವಾಟು ಮುಗಿಸಿದೆ. ದಿನದ ಅಂತ್ಯಕ್ಕೆ ಸುಮಾರು 2462 ಷೇರುಗಳು ಲಾಭ ಗಳಿಸಿದರೆ, 1089 ಷೇರುಗಳು ಕುಸಿತ ಕಂಡವು. ಉಳಿದಂತೆ 101 ಷೇರುಗಳ ಮೌಲ್ಯ ಬದಲಾಗಿಲ್ಲ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 12.16 ಪಾಯಿಂಟ್ (ಶೇ 0.02) ಕುಸಿತದೊಂದಿಗೆ ದಿನದ ಅಂತ್ಯಕ್ಕೆ 80,424.68 ಅಂಕಗಳಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿ 50ಯು 31.50 ಅಂಕಗಳ (ಶೇ 0.13) ಏರಿಕೆಯೊಂದಿಗೆ 24,572.65ರಲ್ಲಿ ದಿನದ ವಹಿವಾಟು ಮುಗಿಸಿದೆ. ವಿಸ್ತೃತ ಮಾರುಕಟ್ಟೆ ನೋಡುವುದಾದರೆ, ನಿಫ್ಟಿ ಮಿಡ್‌ಕ್ಯಾಪ್ 100, ಶೇ 0.29 ಏರಿಕೆಯೊಂದಿಗೆ ವಹಿವಾಟು ಮುಗಿಸಿದೆ. ಅತ್ತ ನಿಫ್ಟಿ ಸ್ಮಾಲ್‌ಕ್ಯಾಪ್ 100, ಶೇ 1.74 ಏರಿಕೆ ಕಂಡಿದೆ. ಇವೆರಡೂ ಷೇರುಗಳು ಇಂದು ಮಾರುಕಟ್ಟೆಯಲ್ಲಿ ಮಿಂಚಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ನಿಫ್ಟಿಯಲ್ಲಿ ಹಿಂಡಾಲ್ಕೋ ಇಂಡಸ್ಟ್ರೀಸ್, ಬಿಪಿಸಿಎಲ್, ಶ್ರೀರಾಮ್ ಫೈನಾನ್ಸ್, ಟಾಟಾ ಸ್ಟೀಲ್ ಮತ್ತು ಎಲ್‌ಟಿಐಮಿಂಡ್‌ಟ್ರೀ ಷೇರುಗಳು ಲಾಭ ಗಳಿಸಿದರೆ, ಎಂ & ಎಂ, ಬಜಾಜ್ ಆಟೋ, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ನಷ್ಟ ಅನುಭವಿಸಿದವು.
ಆಟೋ ಮತ್ತು ಬ್ಯಾಂಕ್ ವಲಯ ಹೊರತುಪಡಿಸಿ, ಇತರ ಎಲ್ಲಾ ಸೂಚ್ಯಂಕಗಳು ಆರೋಗ್ಯ, ಐಟಿ, ಲೋಹ, ತೈಲ ಮತ್ತು ಅನಿಲ, ವಿದ್ಯುತ್, ಟೆಲಿಕಾಂ ಶೇ 0.5ರಿಂದ 2ರಷ್ಟು ಏರಿಕೆಯೊಂದಿಗೆ ವಹಿವಾಟು ಮುಗಿಸಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ 0.6ರಷ್ಟು ಏರಿಕೆಯಾಗಿದ್ದು, ಸ್ಮಾಲ್‌ಕ್ಯಾಪ್ ಸೂಚ್ಯಂಕ ಕೂಡಾ ಶೇ 1 ಏರಿಕೆ ಕಂಡಿದೆ.
ಸೋಮವಾರದ ಜಾಗತಿಕ ಸ್ಟಾಕ್ ಮಾರುಕಟ್ಟೆಯು ಚಂಚಲತೆಯನ್ನು ಕಂಡಿತು. ಹೂಡಿಕೆದಾರರ ಗಮನವು ಫೆಡರಲ್ ರಿಸರ್ವ್ ಮೀಟಿಂಗ್‌ನತ್ತ ಇದ್ದ ಕಾರಣ ಈ ಚಂಚಲತೆ ಸೃಷ್ಟಿಯಾಯ್ತು.
ಷೇರು ಮಾರುಕಟ್ಟೆ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Opening Bell: ಭಾರತದ ಷೇರು ಮಾರುಕಟ್ಟೆಗಿಂದು ಧನಾತ್ಮಕ ಆರಂಭ; ಹೂಡಿಕೆದಾರರು ಗಮನಿಸಬಹುದಾದ ಷೇರುಗಳಿವು