Closing Bell: ಹೊಸ ವರ್ಷ ಆರಂಭದಿಂದಲೂ ಷೇರುಪೇಟೆಯಲ್ಲಿ ಓಡದ ಗೂಳಿ; ಇಂದೂ ಕುಸಿದ ಸೆನ್ಸೆಕ್ಸ್, ನಿಫ್ಟಿ
Sensex-Nifty: ಇಂದು ನೀರಸ ಆರಂಭ ಕಂಡಿದ್ದ ಷೇರುಪೇಟೆ ಮುಕ್ತಾಯದ ವೇಳೆಗೆ, ಎನ್ಎಸ್ಇ ಸೆನ್ಸೆಕ್ಸ್ 509 ಅಂಕ ಅಥವಾ ಶೇ 0.71 ರಷ್ಟು ಇಳಿಕೆಯಾಗಿದ್ದು, 71,383ಕ್ಕೆ ಕುಸಿದಿದೆ. ಬಿಎಸ್ಸಿ ನಿಫ್ಟಿ 144 ಅಂಕ ಅಥವಾ ಶೇ 0.67ರಷ್ಟು ಇಳಿಕೆಯಾಗಿ 21,521ಕ್ಕೆ ಕುಸಿಯುವ ಮೂಲಕ ವಹಿವಾಟು ಮುಗಿಸಿದೆ.
ಬಡ್ಡಿದರ ಕಡಿತದ ಕುರಿತ ಅಮೆರಿಕ ಕೇಂದ್ರೀಯ ಬ್ಯಾಂಕ್ ನೀತಿ ನಿಯಮ ಕೆಲ ದಿನಗಳಿಂದ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದು ಭಾರೀ ಪ್ರಮಾಣದಲ್ಲಿ ಇಳಿಮುಖ ಕಂಡಿದ್ದು, ಮುಂಬೈ ಷೇರು ಮಾರುಕಟ್ಟೆ ನಷ್ಟ ಅನುಭವಿಸಿದೆ.
ಇಂದು ನೀರಸ ಆರಂಭ ಕಂಡಿದ್ದ ಷೇರುಪೇಟೆ ಮುಕ್ತಾಯದ ವೇಳೆಗೆ, ಎನ್ಎಸ್ಇ ಸೆನ್ಸೆಕ್ಸ್ 509 ಅಂಕ ಅಥವಾ ಶೇ 0.71 ರಷ್ಟು ಇಳಿಕೆಯಾಗಿದ್ದು, 71,383ಕ್ಕೆ ಕುಸಿದಿದೆ. ಬಿಎಸ್ಸಿ ನಿಫ್ಟಿ 144 ಅಂಕ ಅಥವಾ ಶೇ 0.67ರಷ್ಟು ಇಳಿಕೆಯಾಗಿ 21,521ಕ್ಕೆ ಕುಸಿಯುವ ಮೂಲಕ ವಹಿವಾಟು ಮುಗಿಸಿದೆ. ಈ ಮೂಲಕ ಭಾರತೀಯ ಷೇರು ಮಾರುಕಟ್ಟೆ ಇಂದು ರೆಡ್ ಮಾರ್ಕ್ನಲ್ಲಿದೆ. ಹೊಸ ವರ್ಷ ಆರಂಭವಾದಾಗಿನಿಂದಲೂ ಮುಂಬೈ ಷೇರು ಪೇಟೆ ಗ್ರೀನ್ ಮಾರ್ಕ್ಗೆ ಬಂದಿಲ್ಲ.
ವಲಯಗಳ ಪೈಕಿ ಐಟಿ ಹಾಗೂ ಲೋಹದ ಷೇರುಗಳಲ್ಲಿ ಭಾರಿ ನಷ್ಟ ಉಂಟಾಗಿದೆ. ಐಟಿ ಸೆಕ್ಟರ್ ಇಂದು ಅತಿಹೆಚ್ಚು ನಷ್ಟ ಕಂಡ ವಲಯವಾಗಿದೆ. ನಿಫ್ಟಿ ಪಿಎಸ್ಯು ಬ್ಯಾಂಕ್, ತೈಲ ಮತ್ತು ಅನಿಲ, ಎಫ್ಎಂಸಿಗಿ, ಫಾರ್ಮಾ ಮತ್ತು ಮೀಡಿಯಾ ಸ್ಟಾಕ್ಸ್ ಲಾಭ ಕಂಡ ವಲಯಗಳಾಗಿವೆ. ಅದಾನಿ-ಹಿಂಡೆನ್ ಬರ್ಗ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ವರದಿಗೂ ಮುನ್ನ ಹಾಗೂ ನಂತರವೂ ಅದಾನಿ ಷೇರುಗಳು ಲಾಭ ಕಂಡಿದೆ.
ಟಾಟಾ ಸ್ಟೀಲ್, ಎನ್ಎಲ್ಸಿ ಇಂಡಿಯಾ, ಅತಿಹೆಚ್ಚು ನಷ್ಟ ಅನುಭವಿಸಿದ ಷೇರಾಗಿದೆ. ಬಜಾಜ್ ಆಟೋ ಶೇ.5 ರಷ್ಟು ಹೆಚ್ಚಿನ ಲಾಭ ಪಡೆದಿದೆ. ಬಜಾಜ್ ಆಟೋ, ಸನ್ ಫಾರ್ಮಾ, ಅದಾನಿ ಎನರ್ಜಿ, ಸೋಭಾ ಲಿಮಿಟೆಡ್, ಅದಾನಿ ಟೋಟಲ್ ಗ್ಯಾಸ್, ಲಾಭ ಗಳಿಸಿದ ಷೇರುಗಳಾಗಿವೆ.
ಬುಧವಾರ ಮುಕ್ತಾಯದ ವೇಳೆಗೆ ನಿಫ್ಟಿ ವಹಿವಾಟು ಹೀಗಿದೆ
ಎನ್ಎಸ್ಇ ನಿಫ್ಟಿ - 21,521 (144 ಅಂಕ ಇಳಿಕೆ)
ನಿಫ್ಟಿ ಬ್ಯಾಂಕ್ - 47,600 (160 ಅಂಕ ಇಳಿಕೆ)
ನಿಫ್ಟಿ ಮಿಡ್ಕ್ಯಾಪ್- 46,469 (80 ಅಂಕ ಏರಿಕೆ)