Opening Bell: ಭಾರತದ ಷೇರು ಮಾರುಕಟ್ಟೆಗಿಂದು ಧನಾತ್ಮಕ ಆರಂಭ; ಹೂಡಿಕೆದಾರರು ಗಮನಿಸಬಹುದಾದ ಷೇರುಗಳಿವು
ಭಾರತೀಯ ಷೇರು ಮಾರುಕಟ್ಟೆಯು ಇಂದು (ಆಗಸ್ಟ್ 19) ಧನಾತ್ಮಕ ಆರಂಭ ಕಾಣುವ ಸೂಚನೆ ಸಿಕ್ಕಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ಉತ್ತಮ ಆರಂಭ ಕಾಣುವ ಲಕ್ಷಣ ಗೋಚರವಾಗಿದೆ. ಇಂದು ಗಮನಿಸಬಹುದಾದ ಷೇರುಗಳ ವಿವರ ಇಲ್ಲಿದೆ.
ಆಗಸ್ಟ್ 19ರ ಸೋಮವಾರ ಷೇರು ಮಾರುಕಟ್ಟೆಯು ಧನಾತ್ಮಕ ಆರಂಭ ಪಡೆದಿದೆ. ಭಾರತೀಯ ಷೇರುಗಳು ಏರಿಕೆಯೊಂದಿಗೆ ಪ್ರಾರಂಭವಾಗಿವೆ. ವಿಶ್ವದ ಅತಿದೊಡ್ಡ ಆರ್ಥಿಕತೆಯಲ್ಲಿ ಆರ್ಥಿಕ ಹಿಂಜರಿತದ ಭೀತಿವನ್ನು ಶಮನಗೊಳಿಸಲು ಯುಎಸ್ ಡೇಟಾ ಸಹಾಯ ಮಾಡಿದ ನಂತರ, ಏಷ್ಯಾದ ಮಾರುಕಟ್ಟೆಗಳನ್ನು ವ್ಯಾಪಾರಿಗಳು ಟ್ರ್ಯಾಕ್ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ಭಾರತೀಯ ಷೇರುಗಳು ಸೋಮವಾರ ಅಲ್ಪ ಏರಿಕೆ ಕಾಣಲಿವೆ.
ಬೆಳಗ್ಗೆ 08:00ರ ಹೊತ್ತಿಗೆ ಗಿಫ್ಟ್ ನಿಫ್ಟಿ 24,670.5ರಲ್ಲಿ ವಹಿವಾಟು ನಡೆಸುತ್ತಿದೆ. ಎನ್ಎಸ್ಇ ನಿಫ್ಟಿ 50 ಶುಕ್ರವಾರದ ದಿನ ಮಾರುಕಟ್ಟೆ ಮುಕ್ತಾಯ ಅವಧಿಯ ವೇಳೆಗೆ 24,541.15ರಲ್ಲಿ ವಹಿವಾಟು ಮುಗಿಸಿತ್ತು. ಹೀಗಾಗಿ ಇಂದು ಪಾಸಿಟಿವ್ ಆರಂಭ ಸಿಕ್ಕಿದೆ.
ವಾಲ್ ಸ್ಟ್ರೀಟ್ ಷೇರುಗಳು ರಾತ್ರೋರಾತ್ರಿ ಏರಿಕೆ ಕಂಡವು. ಐಟಿ ವಲಯದ ಉತ್ಸಾಹದಿಂದಾಗಿ ಭಾರತೀಯ ಷೇರುಗಳು ಶುಕ್ರವಾರ ಸಾಪ್ತಾಹಿಕ ಲಾಭವನ್ನು ಗಳಿಸಿದವು. "ದೇಶೀಯ ಮಾರುಕಟ್ಟೆಗಳಿಗೆ ಈ ಹಂತದಲ್ಲಿ ಆತಂಕಕಾರಿ ಅಂಶಗಳು ಏನೂ ಇಲ್ಲ" ಎಂದು ಕ್ಯಾಪಿಟಲ್ಮೈಂಡ್ ರಿಸರ್ಚ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಕೃಷ್ಣ ಅಪ್ಪಾಲ ಹೇಳಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ (ಆಗಸ್ಟ್ 16) ದಂದು 7.67 ಶತಕೋಟಿ ರೂಪಾಯಿಗಳ ($91.5 ಮಿಲಿಯನ್) ಮೌಲ್ಯದ ಷೇರುಗಳನ್ನು ಖರೀದಿಸುವ ಮೂಲಕ ಮೂರು-ಸೆಶನ್ ಮಾರಾಟದ ಸರಣಿಯನ್ನು ಮುರಿದರು. ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ನ ತಾತ್ಕಾಲಿಕ ಮಾಹಿತಿಯ ಪ್ರಕಾರ ದೇಶೀಯ ಸಾಂಸ್ಥಿಕ ಹೂಡಿಕೆದಾರರು 26.06 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು 10 ನೇ ನೇರ ಅವಧಿಗೆ ಖರೀದಿಸಿದ್ದಾರೆ.
ಇಂದು ಗಮನಿಸಬೇಕಾದ ಸ್ಟಾಕ್‌ಗಳು
ಷೇರು ಮಾರುಕಟ್ಟೆಯಲ್ಲಿ ನೀವು ಇಂದು ಹೂಡಿಕೆ ಮಾಡಬಹುದಾದ ಷೇರುಗಳ ವಿವರ ಇಲ್ಲಿದೆ ನೋಡಿ.
- ಹೀರೋ ಮೋಟೋಕಾರ್ಪ್ ಲಿ
- ಎಸ್ಕಾರ್ಟ್ಸ್ ಕುಬೋಟಾ
- ಜಿಎಂಆರ್ ಏರ್ಪೋರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
- ಡಿಇಇ ಡೆವಲಪ್ಮೆಂಟ್ ಎಂಜಿನಿಯರ್ಸ್ ಲಿಮಿಟೆಡ್
- ಸ್ಪೈಸ್ ಜೆಟ್
- ಅದಾನಿ ಎಂಟರ್ಪ್ರೈಸಸ್
- ಹಿಂದುಸ್ತಾನ್ ಜಿಂಕ್
- ಸಂವರ್ಧನ ಮದರ್ಸನ್ ಇಂಟರ್ನ್ಯಾಷನಲ್
- ಕ್ಯಾಪ್ಲಿನ್ ಪಾಯಿಂಟ್
ಇದನ್ನೂ ಓದಿ | Gold-Silver Rate Today: ವಾರಾಂತ್ಯದಲ್ಲೂ ಇಳಿಯದ ಬೆಳ್ಳಿ-ಬಂಗಾರ, ಆಭರಣ ಪ್ರಿಯರಿಗೆ ನಿರಾಸೆ; ಇಂದಿನ ಬೆಲೆ ತಿಳಿಯಿರಿ