Closing Bell Today: ಹಣದುಬ್ಬರ ವರದಿಯಿಂದ ಏರಿಕೆ ಕಂಡ ಭಾರತೀಯ ಷೇರುಪೇಟೆ, ನಿಫ್ಟಿ, ಸೆನ್ಸೆಕ್ಸ್ ಇಂದಿನ ವಹಿವಾಟು ಹೀಗಿತ್ತು
ಬ್ಲೂ ಚಿಪ್ ನಿಫ್ಟಿ 50 ಸೂಚ್ಯಂಕವು ಇಂದು ಶೇಕಡ 0.62ರಷ್ಟು ಏರಿಕೆ ಕಂಡು 18,716.15ಕ್ಕೆ ಸ್ಥಿರವಾಯಿತು. ಇದೇ ರೀತಿ ಮುಂಬಯಿ ಷೇರುಪೇಟೆ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕವು ಶೇಕಡ 0.67 ಏರಿಕೆ ಕಂಡು 63,143.16ಕ್ಕೆ ಸ್ಥಿರವಾಗಿದೆ.
ಬೆಂಗಳೂರು: ಎಲ್ಲಾ ವಲಯದ ಷೇರುಗಳ ನೆರವಿನಿಂದ, ಭಾರತದ ಹಣದುಬ್ಬರ ಇಳಿಕೆ ಕಂಡ ವರದಿಯ ಬೆಂಬಲದಿಂದ ಮತ್ತು ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರ ನಿರ್ಧಾರ ಸ್ಥಗಿತಗೊಳಿಸಬಹುದೆಂಬ ನಿರೀಕ್ಷೆಯಿಂದ ಭಾರತೀಯ ಷೇರುಪೇಟೆಯು ಇಂದು ನಿನ್ನೆಗಿಂತ ಏರಿಕೆ ಕಂಡು ವಹಿವಾಟು ಮುಗಿಸಿದೆ.
ಬ್ಲೂ ಚಿಪ್ ನಿಫ್ಟಿ 50 ಸೂಚ್ಯಂಕವು ಇಂದು ಶೇಕಡ 0.62ರಷ್ಟು ಏರಿಕೆ ಕಂಡು 18,716.15ಕ್ಕೆ ಸ್ಥಿರವಾಯಿತು. ಇದೇ ರೀತಿ ಮುಂಬಯಿ ಷೇರುಪೇಟೆ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕವು ಶೇಕಡ 0.67 ಏರಿಕೆ ಕಂಡು 63,143.16ಕ್ಕೆ ಸ್ಥಿರವಾಗಿದೆ.
13 ಪ್ರಮುಖ ವಲಯವಾರು ಷೇರು ಸೂಚ್ಯಂಕಗಳಲ್ಲಿ 12 ಸೂಚ್ಯಂಕಗಳು ಇಂದು ಏರಿಕೆ ದಾಖಲಿಸಿರುವುದು ವಿಶೇಷವಾಗಿದೆ. ಇವುಗಳಲ್ಲಿ ಎಫ್‌ಎಂಸಿಜಿಯು ಶೇಕಡ 1.38ರಷ್ಟು ಏರಿಕೆ ಕಂಡಿದೆ. ರಿಯಾಲ್ಟಿ ಷೇರುಗಳು ಶೇಕಡ 3ರಷ್ಟು ನೆಗೆತ ಕಂಡಿವೆ. ಇದು ಐದು ತಿಂಗಳಲ್ಲಿಯೇ ಹೊಸ ಎತ್ತರವಾಗಿದೆ. ರಿಯಲ್ ಎಸ್ಟೇಟ್ ವಲಯದಲ್ಲಿ ಅತ್ಯುತ್ತಮ ವ್ಯವಹಾರ ನಡೆದಿರುವುದು ರಿಯಾಲ್ಟಿ ಚೇತರಿಕೆಗೆ ಕಾರಣವಾಗಿದೆ. ಇದೇ ಸಮಯದಲ್ಲಿ ಆರ್‌ಬಿಐ ಇತ್ತೀಚೆಗೆ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರುವುದು ಕೂಡ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.
ಇಂದು ದೊಡ್ಡ ಷೇರುಗಳಿಗಿಂತ ಮಧ್ಯಮ ಗಾತ್ರದ (ಮಿಡ್‌ಕ್ಯಾಪ್) ಷೇರುಗಳು ಉತ್ತಮವಾಗಿ ವಹಿವಾಟು ನಡೆಸಿವೆ. ಇವು ಶೇಕಡ 1.2ರಷ್ಟು ಏರಿಕೆ ಕಂಡು ಹೊಸ ದಾಖಲೆ ನಿರ್ಮಿಸಿವೆ. ಇದೇ ಸಮಯದಲ್ಲಿ ಸ್ಮಾಲ್‌ಕ್ಯಾಪ್ ಷೇರುಗಳು ಶೇಕಡ 0.7ರಷ್ಟು ಏರಿಕೆ ಕಂಡು 52 ವಾರಗಳ ಹೊಸ ಎತ್ತರಕ್ಕೆ ನೆಗೆದಿದೆ.
ದೇಶದ ಹಣದುಬ್ಬರವು ಮೇ ತಿಂಗಳಿನಲ್ಲಿ ಎರಡು ವರ್ಷಗಳಲ್ಲಿಯೇ ಕಡಿಮೆ ಶೇಕಡ 4.25ಕ್ಕೆ ತಲುಪಿದೆ. ಕೈಗಾರಿಕಾ ಉತ್ಪಾದನೆಯೂ ವರ್ಷದಿಂದ ವರ್ಷಕ್ಕೆ ಶೇಕಡ 4.2ರಷ್ಟು ಏರಿಕೆ ಕಂಡಿದೆ.
"ಮೈಕ್ರೊ ಆರ್ಥಿಕವಲಯದ ಇಷ್ಟವಾಗುವಂತಹ ಅಂಕಿಅಂಶಗಳು, ಫೆಡ್ ರೇಟ್ ಸ್ಥಗಿತದ ನಿರೀಕ್ಷೆಯು ಭಾರತದ ಷೇರುಪೇಟೆ ಮೇಲೆ ಪರಿಣಾಮ ಬೀರಿದೆ" ಎಂದು ಈಸ್ಕ್ವಯರ್ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ ಸಲಹೆಗಾರರಾದ ಸಮರ್ಥ್ ದೇಶ್‌ಗುಪ್ತಾ ಹೇಳಿದ್ದಾರೆ.
ವೈಯಕ್ತಿಕವಾಗಿ ಭಾರತದ ನಿಫ್ಟಿ 50ಯಲ್ಲಿದ್ದ ರಿಲಯೆನ್ಸ್ ಇಂಡಸ್ಟ್ರೀಸ್ ಷೇರುಗಳು ಇಂದು ಶೇಕಡ 1.5ರಷ್ಟು ಏರಿಕೆ ಕಂಡಿದೆ. ಮ್ಯಾನ್‌ಕೈಂಡ್ ಫಾರ್ಮಾವು ಶೇಕಡ 3ರಷ್ಟು ಏರಿಕೆ ಕಂಡಿದೆ.
ಭಾರರತದ ಕರೆನ್ಸಿ ಮೌಲ್ಯ
1 ಡಾಲರ್= 82.3853 ಭಾರತೀಯ ರೂಪಾಯಿಗಳು
(ಮೂಲ ವರದಿ: ರಾಯಿಟರ್ಸ್, ಕನ್ನಡಕ್ಕೆ ಹಿಂದೂಸ್ತಾನ್ ಟೈಮ್ಸ್ ಕನ್ನಡ).