Stock market today: ಜೀವಮಾನದಲ್ಲೇ ಹೊಸ ಎತ್ತರಕ್ಕೆ ನೆಗೆದ ನಿಫ್ಟಿ 50, ಸೆನ್ಸೆಕ್ಸ್; ಈ ಹಸಿರಿನ ಜಿಗಿತಕ್ಕೆ ಇದೆ 5 ಕಾರಣ
Stock market today: ಭಾರತದ ಷೇರುಪೇಟೆ ಇಂದು ವಹಿವಾಟಿನ ಕೊನೆಯ ಗಂಟೆಯಲ್ಲಿ ದೊಡ್ಡಮಟ್ಟದಲ್ಲಿ ಏರಿಕೆ ದಾಖಲಿಸಿತ್ತು. ಎಸ್‌ಆಂಡ್‌ಪಿ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕವು ಇದೇ ಮೊದಲ ಬಾರಿಗೆ ಮೊದಲ ಅವಧಿಯಲ್ಲಿ 82,750 ಅಂಕಕ್ಕೆ ತಲುಪಿತ್ತು. ಅಂತಿಮವಾಗಿ 82,791 ಅಂಕಗಳಿಗೆ ತಲುಪಿತ್ತು. ನಿಫ್ಟಿಯು ಕೂಡ 25,433 ಅಂಕಕ್ಕೆ ತಲುಪಿ ಹೊಸ ದಾಖಲೆ ಬರೆಯಿತು.
Stock market today: ಭಾರತದ ಷೇರುಪೇಟೆಯು ಇಂದಿನ ವಹಿವಾಟಿನ ಕೊನೆಯ ಗಂಟೆಯಲ್ಲಿ ಐತಿಹಾಸಿಕ ಹೊಸ ಎತ್ತರಕ್ಕೆ ನೆಗೆಯಿತು. ಎಸ್‌ಆಂಡ್‌ಪಿ ಬಿಎಸ್‌ಇ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 83 ಸಾವಿರದ ಗಡಿ ದಾಟಿತ್ತು. . ಅಂತಿಮವಾಗಿ 82,791 ಅಂಕಗಳಿಗೆ ತಲುಪಿತ್ತು. ನಿಫ್ಟಿಯು ಕೂಡ 25,433 ಅಂಕಕ್ಕೆ ತಲುಪಿ ಹೊಸ ದಾಖಲೆ ಬರೆಯಿತು. ಬ್ಯಾಂಕಿಂಗ್ ಮತ್ತು ಐಟಿ ವಲಯಗಳ ಬೆಂಬಲದಿಂದ ಈ ರಾಲಿ ನಡೆಯಿತು. ಇದರೊಂದಿಗೆ ವಾಹನ ವಲಯವೂ ಸಾಥ್ ನೀಡಿದೆ. ರಿಲಯೆನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್‌ನಂತಹ ಹೆವಿ ತೂಕದ ಷೇರುಗಳು ಒಟ್ಟಾಗಿ ನಿಫ್ಟಿ ಫಿಫ್ಟಿಗೆ 171 ಅಂಕಗಳನ್ನು ಸೇರಿಸಿದವು. 50 ಇಂಡೆಕ್ಸ್‌ಗಳಲ್ಲಿ 49 ಇಂಡೆಕ್ಸ್‌ಗಳು ಹಸಿರಾಗಿ ವಹಿವಾಟು ಮುಗಿಸಿದವು. ಇವುಗಳಲ್ಲಿ ಹೀಮಡಾಲ್ಕೊ ಕಂಪನಿಯು ಶೇಕಡ 4.5ರಷ್ಟು ಏರಿಕೆ ಕಂಡು ಮೊದಲ ಸ್ಥಾನದಲ್ಲಿತ್ತು. ಭಾರತಿ ಏರ್‌ಟೆಲ್, ಎನ್‌ಟಿಪಿಸಿ, ಶ್ರೀರಾಮ್ ಫೈನಾನ್ಸ್, ಮಹೀಂದ್ರ ಆಂಡ್ ಮಹೀಂದ್ರ, ಜೆಎಸ್‌ಡಬ್ಲ್ಯು ಸ್ಟೀಲ್, ಈಚರ್ ಮೋಟಾರ್ಸ್, ಒಎನ್‌ಜಿಸಿ, ಅದಾನಿ ಪೋರ್ಟ್ಸ್, ಆಂಡ್ ಎಸ್‌ಇಝಡ್, ವಿಪ್ರೋ, ಗ್ರಾಸಿಮ್ ಇಂಡಸ್ಟ್ರೀಸ್‌ಗಳೂ ಉತ್ತಮ ಏರಿಕೆ ದಾಖಲಿಸಿದವು.
ಷೇರುಪೇಟೆ ನೆಗೆತಕ್ಕೆ ಕಾರಣಗಳು: ಅಮೆರಿಕದ ಸಿಪಿಐ ಡೇಟಾ
ಅಮೆರಿಕದ ಗ್ರಾಹಕ ದರ ಸೂಚ್ಯಂಕವು ಶೇಕಡ 0.2ರಷ್ಟು ಆಗಸ್ಟ್ ತಿಂಗಳಲ್ಲಿ ಏರಿಕೆ ಕಂಡಿದೆ. ಜುಲೈನ ಏರಿಕೆ ಬಳಿಕ ಸ್ಥಿರವಾಗಿದೆ. ಆಹಾರ ಮತ್ತು ಎನರ್ಜಿ ವಲಯಗಳ ಚಂಚಲ ಸ್ಥಿತಿಯಲ್ಲೂ ಒಟ್ಟಾರೆ ಸಿಪಿಐಯು ಶೇಕಡ 0.2ರಷ್ಟು ಏರಿಕೆ ಕಂಡಿದೆ. ಇದು ಮಾರುಕಟ್ಟೆಯ ಭಾವನೆ ಮೇಲೆ ಪರಿಣಾಮ ಬೀರಿದೆ. ಸೆಪ್ಟೆಂಬರ್ 18ರಂದು ಇನ್ನಷ್ಟು ದರ ಕಡಿತದ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ.
ಚೀನಾ ಅಂಶಗಳು
"ಮಾರುಕಟ್ಟೆಯು ಚೀನಾದ ದರ ಕಡಿತಕ್ಕೆ ದೃಢವಾದ ಪ್ರತಿಕ್ರಿಯೆ ನೀಡಿದೆ. ದರ ಕಡಿತದಿಂದ ರಿಯಲ್ ಎಸ್ಟೆಟ್ ಮತ್ತು ಕಮಾಡಿಟಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ" ಎಂದು ಕೇಜ್ರಿವಾಲ್ ರಿಸರ್ಚ್‌ನ ಸ್ಥಾಪಕ ಅರುಣ್ ಕೇಜ್ರಿವಾಲ್ ದಿ ಮಿಂಟ್‌ಗೆ ಹೇಳಿದ್ದಾರೆ. "ಏಷ್ಯಾ ಮಾರುಕಟ್ಟೆಯ ಕುರಿತು ಸಕಾರಾತ್ಮಕ ಭಾವನೆಯಿಂದ ಭಾರತದ ಷೇರುಪೇಟೆ ಹಸಿರಾಗಿ ಆರಂಭವಾಯಿತು. ವಾಲ್ ಸ್ಟ್ರೀಟ್‌ನ ರಾಲಿಯೂ ಭಾರತದ ಷೇರುಪೇಟೆಗೆ ಇಂಧನ ಸುರಿಯಿತು" ಎಂದು ಆನಂದ್ ರಾಥಿ ಷೇರ್ಸ್‌ನ ಫಂಡಮೆಂಟಲ್ ರಿಸರ್ಚ್ ಸೇವಾ ವಿಭಾಗದ ಮುಖ್ಯಸ್ಥ ನರೇಂದ್ರ ಸೊಲಾಂಕಿ ಅಭಿಪ್ರಾಯಪಟ್ಟಿದ್ದಾರೆ.
ಸ್ಥಿರ ಖರೀದಿ
ಕಳೆದ ಮೂರು ವಹಿವಾಟು ಅವಧಿಯಲ್ಲಿ ವಿದೇಶಿ ಪೋರ್ಟ್‌ಪೋಲಿಯೊ ಹೂಡಿಕೆದಾರರು (ಎಫ್‌ಪಿಐ) ನಿವ್ವಳ ಖರೀದಿದಾರರಾಗಿ ಮುಂದುವರೆದಿದ್ದಾರೆ. ಈ ತಿಂಗಳ ಮೊದಲ ವಾರದಲ್ಲಿ ಎಫ್‌ಪಿಐ ಹೂಡಿಕೆ 11,000 ಕೋಟಿ ಇತ್ತು. ಅಮೆರಿಕದಲ್ಲಿ ಬಡ್ಡಿದರ ಕಡಿತ ನಿರೀಕ್ಷೆ ಮತ್ತು ಭಾರತದ ಷೇರುಪೇಟೆಯ ಚೇತರಿಕೆಯೂ ಎಫ್‌ಪಿಐ ಹೂಡಿಕೆ ಹೆಚ್ಚಿಸಿತ್ತು. ಕಳೆದ ಮೂರು ಸೆಸನ್ ಮಾತ್ರ ನೋಡುವುದಾದರೆ ವಿದೇಶಿ ಹೂಡಿಕೆಯು 5319 ಕೋಟಿ ರೂಪಾಯಿ ಇದೆ.
ಇಸಿಬಿ ಬಡ್ಡಿದರ ಕಡಿತ ನಿರೀಕ್ಷೆ
ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ (ಇಸಿಬಿ)ಯು ತನ್ನ ಬಡ್ಡಿದರವನ್ನು 25 ಮೂಲಾಂಶದಷ್ಟು ಕಡಿತ ಮಾಡುವ ಸೂಚನೆಯೂ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಸದ್ಯ ಇಸಿಬಿಯ ಮುಖ್ಯ ಬಡ್ಡಿದರವು ಶೇಕಡ 3.75 ಇದೆ.
ನಿಫ್ಟಿ 50: ತಾಂತ್ರಿಕಾ ಕಾರಣಗಳು
ನಿಫ್ಟಿಯ ದೈನಂದಿನ ಚಾರ್ಟ್ ಗಮನಿಸಿದರೆ ತನ್ನ ಇತ್ತೀಚಿನ ಏಕೀಕರಣದಿಂದ ಹೊರಬಂದಿದೆ. ಇದು ಆಶಾವಾದದ ಏರಿಕೆಯ ಸೂಚನೆ. ದೈನಂದಿನ ಚಾರ್ಟ್‌ನಲ್ಲಿ ಆರ್‌ಎಸ್‌ಐ ಒಂದು ನಿರ್ಣಾಯಕ ಅಂಶವಾಗಿದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಹಿರಿಯ ತಾಂತ್ರಿಕ ವಿಶ್ಲೇಷಕರಾದ ರೂಪಕ್ ದೇ ವಿಶ್ಲೇಷಿಸಿದ್ದಾರೆ. ವರದಿ ಮೂಲ: ದಿ ಮಿಂಟ್